News Kadaba

ಮೈಸೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ  ➤   ಟೆಸ್ಟ್‌ ಹೆಚ್ಚಳ

(ನ್ಯೂಸ್ ಕಡಬ)newskadaba.com ಮೈಸೂರು, ಫೆ.08.  ವರ್ಷದ ಆರಂಭದಲ್ಲಿಯೇ ಮಲೇರಿಯಾ, ಪ್ರಕರಣಗಳು ಹೆಚ್ಚಾಗಿರುವುದರಿಂದ ರೋಗ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಈ ಸಾಲಿನಲ್ಲಿ ಹತ್ತು ಸಾವಿರ ಡೆಂಗ್ಯೂ ಪರೀಕ್ಷೆ ಮಾಡುವ ಗುರಿ ಹಾಕಿಕೊಂಡಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣ ದಾಖಲಾಗುತ್ತವೆ. ಆದರೆ, ಪ್ರಸಕ್ತ ಸಾಲಿನಲ್ಲಿ ವರ್ಷದ ಆರಂಭದಲ್ಲೇ ಹೆಚ್ಚು ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯಾದ್ಯಂತ ಜನವರಿಯಲ್ಲಿ 427 ಮಂದಿ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಂಡಿದ್ದು, 43 ಜನರಲ್ಲಿ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಡೆಂಗ್ಯೂ ಉಲ್ಬಣಗೊಂಡಿರುವುದು […]

ಮೈಸೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ  ➤   ಟೆಸ್ಟ್‌ ಹೆಚ್ಚಳ Read More »

ಕರ್ನಾಟಕ

   ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

(ನ್ಯೂಸ್ ಕಡಬ)newskadaba.com ಕೊಪ್ಪಳ,ಫೆ.07.  ಸರ್ಕಾರದ ಸುತ್ತೋಲೆಯಂತೆ ಶಾಲಾ ಸಮವಸ್ತ್ರಗಳನ್ನು ಸಿದ್ಧ(ಹೊಲಿಸಿ) ಉಡುಪು ಕೊಡಬೇಕೆಂಬ ನಿಯಮವಿದ್ದರೂ ಬಟ್ಟೆನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ ಎಂದು ವರದಿಯಾಗಿದೆ. ತಾಲೂಕಿನ ಕಿನ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ಪೂಜಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ. ನಿಯಮಾನುಸಾರ ಸಮವಸ್ತ್ರಗಳನ್ನು ಸಿದ್ಧ ಮಾಡಿ ಕೊಡಬೇಕು. ಆದರೂ ಕೊಡುತ್ತಿಲ್ಲ. ಹೀಗಾಗಿ ಬಟ್ಟೆಯನ್ನು ಮರಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಲಿಖಿತವಾಗಿ ಮುಖ್ಯಶಿಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾನೆ

   ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು! Read More »

ಕರ್ನಾಟಕ

➤ಪತ್ನಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಪಾಪಿ ಪತಿ

(ನ್ಯೂಸ್ ಕಡಬ) newskadaba.com. ಗದಗ,  ಫೆ.7. ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಗಜೇಂದ್ರಗಡ ತಾಲೂಕಿನ ಬೇವಿನಕಟ್ಟೆ ಗ್ರಾಮದಲ್ಲಿ ನಡೆದಿದೆ.ವಿದ್ಯಾಮೌನೇಶ್ ಆಡಿನ(24) ಕೊಲೆಯಾದ ಮಹಿಳೆ. ಮೃತ ಮಹಿಳೆಯ ಗಂಡ ಆಗಾಗ ತನ್ನ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದು, ಈ ವಿಚಾರವಾಗಿ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು, ಜಗಳ ವಿಕೋಪಕ್ಕೆ ತಿರುಗಿ ಪತಿ ಮೌನೇಶ್(29) ಕೊಡಲಿಯಿಂದ ಪತ್ನಿಯನ್ನು ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ

➤ಪತ್ನಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಪಾಪಿ ಪತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಾಲ  ಭಾದೆ     ➤  ಪೊಲೀಸ್ ಸಿಬ್ಬಂದಿ  ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉತ್ತರ ಕನ್ನಡ, ಫೆ.07. ಹೊನ್ನಾವರ ತಾಲೂಕಿನ ಕಾಸರಕೋಡ ಸಮೀಪ ಇಕೋ ಬೀಚ್ ಬಳಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಮೃತ ಪೊಲೀಸ್ ಸಿಬ್ಬಂದಿಯನ್ನು ರಾಮ ನಾಗೇಶ ಗೌಡ(32) ಎಂದು ಗುರುತಿಸಲಾಗಿದೆ. ಮೃತರು ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದವರಾಗಿದ್ದು, 2017ರ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಪ್ರಾರಂಭಿಸಿದ್ದರು ಎಂದು  ವರದಿ ತಿಳಿಸಿದೆ.    

ಸಾಲ  ಭಾದೆ     ➤  ಪೊಲೀಸ್ ಸಿಬ್ಬಂದಿ  ಆತ್ಮಹತ್ಯೆ Read More »

ಕರ್ನಾಟಕ

➤ಗಗನಕ್ಕೇರಿದ ವೀಳ್ಯದೆಲೆ ಬೆಲೆ

(ನ್ಯೂಸ್ ಕಡಬ) newskadaba.com. ಹಾವೇರಿ,  ಫೆ.7. ಧಾರ್ಮಿಕ ಕಾರ್ಯಕ್ರಮಗಳು, ಪೂಜೆ, ಮದುವೆ, ಮತ್ತಿತರ ಶುಭ ಸಮಾರಂಭಗಳಲ್ಲಿ ಅಗ್ರಸ್ಥಾನ ಪಡೆದಿರುವ ವೀಳ್ಯದೆಲೆ, ಎಲೆ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೌದು, ಕಳೆದ 15 ದಿನದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳ ಕಂಡಿದ್ದು, ಬಲೆ ಏರಿಕೆಯ ತಾಪ ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಒಂದು ಕಟ್ಟಿನ ವೀಳ್ಯದೆಲೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 40-50 ರೂ.ಗೆ ಮಾರಾಟವಾಗುತ್ತದೆ. ಬೇಸಿಗೆ ಬಂದರೆ ಅಬ್ಟಾಬ್ಟಾ ಅಂದರೂ 60-80ರೂ. ಒಳಗೆ ಮಾರಾಟ ಆಗಿರುವುದನ್ನು

➤ಗಗನಕ್ಕೇರಿದ ವೀಳ್ಯದೆಲೆ ಬೆಲೆ Read More »

ಕರ್ನಾಟಕ

ಹುಚ್ಚು ನಾಯಿ ದಾಳಿ    ➤ ಹಲವರಿಗೆ ಗಾಯ

(ನ್ಯೂಸ್ ಕಡಬ)newskadaba.com ಬಳ್ಳಾರಿ,ಫೆ.07. ಹುಚ್ಚು ನಾಯಿ ದಾಳಿ ನಡೆಸಿದ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ವಟ್ಟಪ್ಪಗೇರಿ ಎಂಬಲ್ಲಿ ನಡೆದಿದೆ.   ಮನೆಯ ಹೊರಗೆ ಮಲಗಿದ್ದ ಮಹಿಳೆಯರು, ಮಕ್ಕಳು ಹಾಗೂ ಯುವಕರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು ತೀವ್ರ ಗಾಯಗೊಂಡಿರುವ 8 ಜನರನ್ನು ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.      

ಹುಚ್ಚು ನಾಯಿ ದಾಳಿ    ➤ ಹಲವರಿಗೆ ಗಾಯ Read More »

ಕರ್ನಾಟಕ

ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 07. ಚಲನಚಿತ್ರ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಆ ಕ್ಷೇತ್ರದಲ್ಲಿ ಹಲವು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಮಂಗಳೂರು ಮೂಲದ ಖ್ಯಾತ ಪತ್ರಕರ್ತ, ಲೇಖಕ, ರೌಫ್ ಅಹ್ಮದ್ ಮುಂಬೈನಲ್ಲಿ ನಿಧನರಾಗಿದ್ದಾರೆ. 70ರ ದಶಕದ ಮದ್ಯಭಾಗದಿಂದ ಸಂಪಾದಕರಾಗಿ, ನಿಯತಕಾಲಿಕೆಗಳ ಮೂಲಕ ಚಲನಚಿತ್ರ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ ರೌಫ್ ಅಹ್ಮದ್ ಅವರದ್ದು. ಮೃತರು ಪತ್ನಿ, ಪುತ್ರ, ಪುತ್ರಿ,ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದೆನ್ನಲಾಗಿದೆ.

ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ Read More »

ರಾಷ್ಟ್ರೀಯ ನ್ಯೂಸ್

➤ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

(ನ್ಯೂಸ್ ಕಡಬ) newskadaba.com. ಚೆನ್ನೈ,  ಫೆ.7 ಮದ್ರಾಸ್ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮದ್ರಾಸ್ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಅವರಿಂದ ಬೆಳಗ್ಗೆ 10:30ಕ್ಕೆ ವಿಕ್ಟೋರಿಯಾ ಗೌರಿ ಸೇರಿದಂತೆ ಐದು ಮಂದಿಗೆ ಪ್ರಮಾಣ ವಚನ ಬೋಧಿಸಲಾಗಿತ್ತು ಎಂದು ನ್ಯಾಯಾಲಯದ ಸುತ್ತೋಲೆ ಹೊರಡಿಸಿದೆ. ಇದೇ ವೇಳೆ, ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ಈಗ ನಡೆಯುತ್ತಿದೆ.

➤ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ Read More »

ರಾಷ್ಟ್ರೀಯ ನ್ಯೂಸ್

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಧಾರವಾಡ, ಫೆ.07. ನಗ್ನ  ಸ್ಥಿತಿಯಲ್ಲಿ ವಿದ್ಯಾರ್ಥಿಯೋರ್ವನ ಮೃತದೇಹ ಪತ್ತೆಯಾಗಿರೋ ಘಟನೆ ಕೃಷಿ  ವಿವಿ ಹಾಸ್ಟೇಲ್ ನಲ್ಲಿ ವರದಿಯಾಗಿದೆ. ಮೃತ ಯುವಕನನ್ನು ರೋಹಿತ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರೋ ವಿದ್ಯಾರ್ಥಿಯನ್ನು ವಿಜಯನಗರ ನಿವಾಸಿ ಎಂದು ತಿಳಿದುಬಂದಿದೆ. ವಿದ್ಯಾರ್ಥಿ ರೋಹಿತ್ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೋರ್ವನ ಮೃತದೇಹ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಫೆ.21ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳ್ಳಾರಿ ಭೇಟಿ ➤ ಸಚಿವ ಶ್ರೀರಾಮುಲು

(ನ್ಯೂಸ್ ಕಡಬ) newskadaba.com ಬಳ್ಳಾರಿ, ಫೆ. 07. ಶೀಘ್ರದಲ್ಲೇ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ. 21ರಂದು ಬಳ್ಳಾರಿಗೆ ಆಗಮಿಸಲಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಿರಂತರವಾಗಿ ರಾಜ್ಯಕ್ಕೆ ಭೇಟಿ ನೀಡಿ, ಪಕ್ಷವನ್ನು ಸಂಘಟಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ

ಫೆ.21ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳ್ಳಾರಿ ಭೇಟಿ ➤ ಸಚಿವ ಶ್ರೀರಾಮುಲು Read More »

ಕರ್ನಾಟಕ
Scroll to Top