News Kadaba

ಇವಿ ಉತ್ಪಾದನೆಯಲ್ಲಿ ರಾಜ್ಯವನ್ನು ನಂ. 1 ಮಾಡುವ ಗುರಿ ಇದೆ  ➤ ಸಿಎಂ ಬೊಮ್ಮಾಯಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 07. ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂ.1 ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ‘ಇಂಡಿಯನ್‌ ಎನರ್ಜಿ ವೀಕ್‌- 2023’ ಇದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಇ- ವಾಹನ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ರಾಜ್ಯದಲ್ಲಿ ಹೆಚ್ಚಿದ್ದು, ಇವಿ ಉತ್ಪಾದನೆಯಲ್ಲಿ ಕರ್ನಾಟಕವನ್ನು ನಂ.1 ಮಾಡುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಹೂಡಿಕೆದಾರ ಸ್ನೇಹಿ ಇವಿ ನೀತಿ ಜಾರಿಗೆ ತರಲಾಗಿದೆ” ಎಂದರು.

ಇವಿ ಉತ್ಪಾದನೆಯಲ್ಲಿ ರಾಜ್ಯವನ್ನು ನಂ. 1 ಮಾಡುವ ಗುರಿ ಇದೆ  ➤ ಸಿಎಂ ಬೊಮ್ಮಾಯಿ..! Read More »

ಕರ್ನಾಟಕ

‘ತುಳು ಭಾಷೆ’ ಅಧ್ಯಯನಕ್ಕೆ ಸರ್ಕಾರ ಸಮಿತಿ ರಚಿಸುತ್ತಿರುವುದೇಕೆ ?  ➤  ಯುಟಿ ಖಾದರ್ ಪ್ರಶ್ನೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ,07. ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕುರಿತು ಸರ್ಕಾರ ಸಮಿತಿ ರಚನೆಗೆ ಮುಂದಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಅವರು ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಅಧ್ಯಯನಕ್ಕೆ ಸಮಿತಿ ರಚಿಸುವ ಅಗತ್ಯ ಏನಿತ್ತು ? ಸಮಿತಿ ರಚಿಸುವ ಬದಲು ರಾಜ್ಯದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಗ್ಗೆ ಸರ್ಕಾರ

‘ತುಳು ಭಾಷೆ’ ಅಧ್ಯಯನಕ್ಕೆ ಸರ್ಕಾರ ಸಮಿತಿ ರಚಿಸುತ್ತಿರುವುದೇಕೆ ?  ➤  ಯುಟಿ ಖಾದರ್ ಪ್ರಶ್ನೆ..! Read More »

ಕರಾವಳಿ

ಅಧಿಕಾರಿಯನ್ನು ಪರೀಕ್ಷಿಸಲು ಲೋಕಾಯುಕ್ತ ಪೊಲೀಸರು ವಿಫಲ ➤ ಕರ್ನಾಟಕ ಹೈಕೋರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.07. ಉದ್ಯೋಗ ಮತ್ತು ತರಬೇತಿ ವಿಭಾಗದ ಮಾಜಿ ಜಂಟಿ ನಿರ್ದೇಶಕ ಶಿವಲಿಂಗಮೂರ್ತಿ ಅವರನ್ನು ಭ್ರಷ್ಟಾಚಾರ ಆರೋಪದಿಂದ ಖುಲಾಸೆಗೊಳಿಸಿದ ಕರ್ನಾಟಕ ಹೈಕೋರ್ಟ್, 2003ರಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡ 12.15 ಲಕ್ಷ ರೂಪಾಯಿ ನಗದು ಬಿಡುಗಡೆ ಮಾಡುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ ಎಂದು ವರದಿಯಾಗಿದೆ. ದಾಳಿ ತಂಡದ ನೇತೃತ್ವ ವಹಿಸಿದ್ದ ತನಿಖಾಧಿಕಾರಿ ಮಹೇಶ್, ಪ್ರಾಸಿಕ್ಯೂಶನ್ ಲೋಕಾಯುಕ್ತ ಪೊಲೀಸರು ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿದೆ ಎಂದು ವರದಿ ತಿಳಿಸುತ್ತದೆ.

ಅಧಿಕಾರಿಯನ್ನು ಪರೀಕ್ಷಿಸಲು ಲೋಕಾಯುಕ್ತ ಪೊಲೀಸರು ವಿಫಲ ➤ ಕರ್ನಾಟಕ ಹೈಕೋರ್ಟ್ Read More »

ಕರ್ನಾಟಕ

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ

(ನ್ಯೂಸ್ ಕಡಬ) newskadaba.com ಚೆನ್ನೈ, ಫೆ. 07. ಇಂದು ಮದ್ರಾಸ್ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೇ ವೇಳೆ, ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕ ಮಾಡಿರುವ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ನಡೆಯುತ್ತಿದೆ.  

ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ವಿಕ್ಟೋರಿಯಾ ಗೌರಿ ಪ್ರಮಾಣವಚನ Read More »

ರಾಷ್ಟ್ರೀಯ ನ್ಯೂಸ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ  ➤ ಸ್ವಯಂಪ್ರೇರಿತ ಪ್ರಕರಣ ದಾಖಲು..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 07. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಸಹಾಯಕರು ತಂಗಲು ವ್ಯವಸ್ಥೆ ಕಲ್ಪಿಸದೇ ಇರುವುದು ಸೇರಿದಂತೆ ಅಲ್ಲಿನ ಅವ್ಯವಸ್ಥೆಗಳ ಕುರಿತು ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದುಬಂದಿದೆ. ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್‌. ಫಣೀಂದ್ರ ಅವರು, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ವಿಚಾರಣೆ ಆರಂಭಿಸಿದ್ದಾರೆಂದು ವರದಿ ತಿಳಿಸಿವೆ. ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಮಾಧ್ಯಮದಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಉಪಲೋಕಾಯುಕ್ತರು, 4 ವಾರಗಳೊಳಗೆ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವ್ಯವಸ್ಥೆ  ➤ ಸ್ವಯಂಪ್ರೇರಿತ ಪ್ರಕರಣ ದಾಖಲು..! Read More »

ಕರ್ನಾಟಕ

ಕಾಸರಗೋಡು: ಮನೆಯ ಬೀಗ ಮುರಿದು ನಗ ನಗದು ಕಳವು

(ನ್ಯೂಸ್ ಕಡಬ)newskadaba.com ಮಂಜೇಶ್ವರ, ಫೆ.07. ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು ಮತ್ತು 11 ಸಾವಿರ ರೂ. ಮೌಲ್ಯದ ಬೆಲೆ ಬಾಳುವ ವಾಚ್ ಕಳವುಗೈದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಬ್ದುಲ್ ಹಮೀದ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಹಮೀದ್ ಮತ್ತು ಕುಟುಂಬಸ್ಥರು ಮನೆಗೆ ಬೀಗ ಹಾಕಿ ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಈ ನಡುವೆ ಕಳವು ನಡೆದಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು: ಮನೆಯ ಬೀಗ ಮುರಿದು ನಗ ನಗದು ಕಳವು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಅಕ್ರಮ ಗಾಂಜಾ ಮಾರಾಟ  ➤  ಆರೋಪಿ ಬಂಧನ..!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.07. ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಆರೋಪಿಯೋರ್ವನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೋಪಿಯನ್ನು ಫಾರೂಕ್ ಎಂದು ಗುರುತಿಸಲಾಗಿದೆ. ಪಾಂಡೇಶ್ವರ ಪೊಲೀಸರು ಗಸ್ತಿನಲ್ಲಿದ್ದಾಗ ಸೆಂಟ್ರಲ್ ರೈಲ್ವೇ ನಿಲ್ದಾಣದ ಮುತ್ತಪ್ಪ ಗುಡಿಯ ಜಂಕ್ಷನ್ ಬಳಿ ಫಾರೂಕ್ ಸುಮಾರು 1 ಕೆ.ಜಿ. ಗಿಂತಲೂ ಅಧಿಕ ಪ್ರಮಾಣದ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಮಂಗಳೂರು: ಅಕ್ರಮ ಗಾಂಜಾ ಮಾರಾಟ  ➤  ಆರೋಪಿ ಬಂಧನ..! Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಉಜಿರೆಯ ಲಾಡ್ಜ್ ಗಳ ಮೇಲೆ ವಿಶೇಷ ಪೊಲೀಸ ತಂಡ ದಾಳಿ..!

(ನ್ಯೂಸ್ ಕಡಬ)newskadaba.com ಉಜಿರೆ, ಫೆ.07. ಉಜಿರೆಯ ಕೆಲವು ಲಾಡ್ಜ್ ಗಳಲ್ಲಿ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ( ಎಸ್.ಪಿ.)ವಿಕ್ರಮ್ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ, ವಿಶೇಷ ತಂಡ ರಚಿಸಿ, ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು ಮತ್ತು ಸಿಬಂದಿಗಳ ತಂಡಗಳು ಏಕಕಾಲದಲ್ಲಿ ಉಜಿರೆಯಲ್ಲಿರುವ ಲಾಡ್ಜ್ ಗಳ ಮೇಲೆ ದಾಳಿ

ಬೆಳ್ತಂಗಡಿ: ಉಜಿರೆಯ ಲಾಡ್ಜ್ ಗಳ ಮೇಲೆ ವಿಶೇಷ ಪೊಲೀಸ ತಂಡ ದಾಳಿ..! Read More »

ಕರಾವಳಿ

ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾದ  ಪುಟಾಣಿ.

(ನ್ಯೂಸ್ ಕಡಬ)newskadaba.com ಮೈಸೂರು,ಫೆ.07.  ಜನವರಿ, ಫೆಬ್ರವರಿ… ಭಾನುವಾರ, ಸೋಮವಾರ… ಇಂಗ್ಲಿಷ್‌, ಕನ್ನಡ ವರ್ಣಮಾಲೆ, ಸಂಖ್ಯೆಗಳು, ಹತ್ತಾರು ವಿಧದ ಹಣ್ಣುಗಳು, ಪ್ರಾಣಿ, ವಸ್ತು, ವಾಹನ, ತರಕಾರಿ ಸೇರಿದಂತೆ ನಾನಾ ಆಕಾರಗಳನ್ನು ಕ್ಷಣ ಮಾತ್ರದಲ್ಲಿ ಗುರುತಿಸಿ ಅಷ್ಟೇ ಸರಾಗವಾಗಿ ಹೇಳಬಲ್ಲಳು ಈ ಪುಟಾಣಿ ! ತನ್ನ ಅಸಾಧಾರಣ ಬುದ್ಧಿವಂತಿಕೆಯಿಂದ ಕೇವಲ ಒಂದೂವರೆ ವರ್ಷ ವಯಸ್ಸಿನಲ್ಲೇ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್ ‘ಸೂಪರ್‌ ಟ್ಯಾಲೆಂಟೆಡ್‌ ಕಿಡ್‌’ ನಲ್ಲಿ ಈ ಪುಟಾಣಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ ಎಂದು ವರದಿ ತಿಳಿಸಿದೆ.    

ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರವಾದ  ಪುಟಾಣಿ. Read More »

ಕರ್ನಾಟಕ

ಶೀಘ್ರದಲ್ಲಿ ಹೈಕಮಾಂಡ್ ಸೇರಲಿದೆ ಅಭ್ಯರ್ಥಿಗಳ ಪಟ್ಟಿ..! 

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.07. ಮುಂಬರುವ ವಿಧಾನಸಭೆ ಚುನಾವಣಾ ಅಖಾಡ ಜೋರಾಗಿದ್ದು, ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇದಕ್ಕಾಗಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಟ್ಟಿಯನ್ನು ಅಂತಿಮಗೊಳಿಸುವ ಕುರಿತಂತೆ ಕೆಲವು ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಹುತೇಕ ಪೂರ್ಣಗೊಂಡಿದ್ದು ಈ ಪಟ್ಟಿಯು ಶೀಘ್ರದಲ್ಲಿ ವರಿಷ್ಠರ ಸೇರುವುದಷ್ಟೇ ಬಾಕಿಯಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಹತ್ವದ ಸಭೆಯನ್ನ ಇತ್ತೀಚೆಗಷ್ಟೇ ನಡೆದಿತ್ತು ಎನ್ನಲಾಗಿದೆ.

ಶೀಘ್ರದಲ್ಲಿ ಹೈಕಮಾಂಡ್ ಸೇರಲಿದೆ ಅಭ್ಯರ್ಥಿಗಳ ಪಟ್ಟಿ..!  Read More »

ಕರ್ನಾಟಕ
Scroll to Top