ಮನೆ ದಾರಿ ತಿಳಿಯದೆ ಅಳುತ್ತಾ ನಿಂತಿದ್ದ ಬಾಲಕನ ರಕ್ಷಿಸಿದ ಪೇದೆ..!

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.08. ತನ್ನ ಮನೆ ದಾರಿ  ಕಾಣದೆ ಮೆಜೆಸ್ಟಿಕ್‌ ಸಮೀಪ ದಿಕ್ಕು ತಪ್ಪಿ   ಕಂಗಲಾಗಿದ್ದ 13 ವರ್ಷದ ಬಾಲಕನನ್ನು ರಕ್ಷಿಸಿ ಸುರಕ್ಷಿತವಾಗಿ ಆತನ ಪೋಷಕರ ಮಡಿಲಿಗೆ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರು ಸೇರಿಸಿ ಮಾನವೀಯತೆ ಮೆರೆದಿದ್ದಾರೆ.

ಹೊಸೂರು ರಸ್ತೆಯ ಹೊಂಗಸಂದ್ರದ ನಿವಾಸಿಯಾದ  ಗೌರಿಶಂಕರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಜ್ಞಾನೇಶ್‌ ರಕ್ಷಣೆಗೊಳಗಾದ ಬಾಲಕನಾಗಿದ್ದು, ಆತನನ್ನು ರಕ್ಷಿಸಿದ ಚಿಕ್ಕಪೇಟೆ ಸಂಚಾರ ಠಾಣೆ ಶ್ರೀಕಾಂತ್‌ ಅವರನ್ನು ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಕುಲದೀಪ್‌ ಕುಮಾರ್‌.ಆರ್‌.ಜೈನ್‌ ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

.

 

 

Scroll to Top