News Kadaba

➤ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತ ಪಿಯುಸಿ ವಿದ್ಯಾರ್ಥಿನಿ ಮೃತ್ಯು..!

(ನ್ಯೂಸ್ ಕಡಬ) newskadaba.com. ಬೆಂಗಳೂರು.ಫೆ.9.  ಕಬಡ್ಡಿ ಆಡುತ್ತಿದ್ದ ವೇಳೆಯೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಗೊಂಡು ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದುರಂತ ಸಾವಿಗೆ ಒಳಗಾಗಿದ್ದು, ಮೃತ ವಿದ್ಯಾರ್ಥಿನಿಯನ್ನು ಸಂಗೀತಾ (17) ಎಂದು ಗುರುತಿಸಲಾಗಿದೆ. ಕಾಲೇಜಿನಲ್ಲಿ ಕ್ರೀಡಾ ಉತ್ಸವದ ಹಿನ್ನೆಲೆ ಮಹಿಳೆಯರ ತಂಡದ ಕಬಡ್ಡಿ ಕೂಡ ಇತ್ತು, ಹೀಗಾಗಿ ಸಂಗೀತಾ ತನ್ನ ತಂಡದ ಪರವಾಗಿ ರೈಡಿಂಗ್ ಹೋಗಿದ್ದಳು. ಆಗ ಎದುರಾಳಿ ತಂಡದವರು ಆಕೆಯನ್ನು ಹಿಡಿಯಲು ಮುಂದಾಗಿದ್ದರು. ಆಗ […]

➤ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತ ಪಿಯುಸಿ ವಿದ್ಯಾರ್ಥಿನಿ ಮೃತ್ಯು..! Read More »

ಕರಾವಳಿ

    ಪೊಲೀಸ್ ಫೈರಿಂಗ್ ನಲ್ಲಿ ಯುಎಲ್ಎಫ್-ಐ ನಾಯಕ ಮೃತ್ಯು

(ನ್ಯೂಸ್ ಕಡಬ)newskadaba.com ಅಸ್ಸಾಂ, ಫೆ.09. ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಯುಎಲ್ಎಫ್ಎ-ಐ) ನ ನಾಯಕನೊಬ್ಬ ಅಸ್ಸಾಂ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.. ತಿನ್ಸುಕಿಯಾ ಜಿಲ್ಲೆಯಲ್ಲಿ  ಈ ಘಟನೆ ನಡೆದಿದ್ದು,  ಇದೇ ಪ್ರದೇಶದಲ್ಲಿ ಯುಎಲ್ಎಫ್ಎ-ಐ ನ ನಾಯಕ ಉದಯ್ ಆಕ್ಸೋಮ್ ಹಾಗೂ ಆತನ ಸಹಚರರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಿನ್ಸುಕಿಯಾದಲ್ಲಿನ ಭದ್ರತಾ ತಂಡ, ನಿಷೇಧಿತ ಉಗ್ರ ಸಂಘಟನೆಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿವೆ. ಟಿಕಕ್ ಮುಲುಂಗ್ ಪರ್ಬತ್ ಪ್ರದೇಶದಲ್ಲಿನ ಅಡಗುದಾಣಗಳಿಗೆ ತಲುಪುತ್ತಿದ್ದಂತೆಯೇ ಯುಎಲ್ಎಫ್ಎ ಐ

    ಪೊಲೀಸ್ ಫೈರಿಂಗ್ ನಲ್ಲಿ ಯುಎಲ್ಎಫ್-ಐ ನಾಯಕ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ರಾಜ್ಯಮಟ್ಟಕ್ಕೆ ಆಯ್ಕೆಯಾದ ಅದ್ಬುತಕುಮಾರಿ

(ನ್ಯೂಸ್ ಕಡಬ)newskadaba.com ರಾಯಚೂರು, ಫೆ.09.  ನಗರದ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ-ಬಾಲಕಿಯರ ಕ್ರೀಡಾಕೂಟ 2022-23 ರಲ್ಲಿ ತಾಲೂಕಿನ ಸಿಂಗನೋಡಿ ಗ್ರಾಮದ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕು. ಅದ್ಭುತ ಕುಮಾರಿ ಎಂಬ ಬಾಲಕಿಯು, ೧೦೦ ಮೀಟರ್ ರನ್ನಿಂಗ್ ರೇಸ್ ಮತ್ತು ಗುಂಡು ಎಸೆತದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ. ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿಯನ್ನು ತಂದಿದ್ದಾಳೆ ಎಂದು ಶಿಕ್ಷಕರು

ರಾಜ್ಯಮಟ್ಟಕ್ಕೆ ಆಯ್ಕೆಯಾದ ಅದ್ಬುತಕುಮಾರಿ Read More »

ಕರ್ನಾಟಕ

ಕಾರ್ಖಾನೆಯಲ್ಲಿ ಆಯಿಲ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಕಿನಾಡ, ಫೆ.09.  ಇಲ್ಲಿಯ  ಸಮೀಪದ ಹಳ್ಳಿಯೊಂದರ ಖಾದ್ಯ ತೈಲ ಕಾರ್ಖಾನೆಯ ಏಳು ಮಂದಿ ಕಾರ್ಮಿಕರು ತೈಲ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇಳಿದಾಗ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿರಾಗಂಪೇಟೆಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಮೃತರು ಪೆದ್ದಾಪುರಂ ಮಂಡಲದ ಪಾಡೇರು ಮತ್ತು ಪುಲಿಮೇರು ಮೂಲದವರು ಎಂದು ವರದಿಯಾಗಿದೆ.     

ಕಾರ್ಖಾನೆಯಲ್ಲಿ ಆಯಿಲ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ 7 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ..!

(ನ್ಯೂಸ್ ಕಡಬ)newskadaba.com ನಾಗ್ಪುರ,ಫೆ.09. ಭಾರತ ಹಾಗೂ ಆಸ್ಟ್ರೇಲಿಯಾ  ಈ ಎರಡು ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿದೆ. ಮೊದಲು ಬ್ಯಾಟಿಂಗ್ ಮಾಡಲಿಳಿದ ಪ್ರವಾಸಿ ಆಸೀಸ್‌ ತಂಡಕ್ಕೆ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು  ಎಂದು ವರದಿಯಾಗಿದೆ. 2 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಸ್ಟೀವ್ ಸ್ಮಿತ್

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ..! Read More »

ರಾಷ್ಟ್ರೀಯ ನ್ಯೂಸ್

  ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್ ➤ ಬಾಲಕ ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಕಲಬುರಗಿ, ಫೆ.09. ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ  ರಾತ್ರಿ ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದ ಟಿಪ್ಪರ್ ಮರಳನ್ನ ಅನಲೋಡ್ ಮಾಡುವಾಗ ಚರಂಡಿಯಲ್ಲಿ ಪಲ್ಟಿಯಾಗಿ ಟಿಪ್ಪರ್ ನಡಿ ಸಿಲುಕಿ ಬಾಲಕ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು, ಮುಕಂದ್ (12) ಹಾಗೂ ಮಹಮ್ಮದ್ ಸಲೀಂ(66) ಮೃತಪಟ್ಟಿದ್ದಾರೆ .  

  ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್ ➤ ಬಾಲಕ ಸೇರಿ ಇಬ್ಬರು ಮೃತ್ಯು Read More »

ಕರ್ನಾಟಕ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.09. ಭೀಕರವಾದ ಭೂಕಂಪದಿಂದ ನಡುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಮೃತಪಟ್ಟ ಸಂಖ್ಯೆ 15,000ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 2,992  ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟರ್ಕಿ-ಸಿರಿಯಾ ಭೂಕಂಪದಿಂದ ಸಾವಿನ ಸಂಖ್ಯೆ 15,000 ದಾಟಿದ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ದೃಢಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿಗಳು ಭೂಕಂಪದಿಂದ ಉಂಟಾದ ವಿನಾಶದ ಪ್ರಮಾಣವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ. ಈ ನಡುವೆ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.09. ದಂಡ ಪಾವತಿ ವೇಳೆ ಬಯಲಾಗಿರುವ ‘ನಕಲಿ ನಂಬರ್‌ ಪ್ಲೇಟ್‌’ದಾರರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಸಲೀಂ ಸೂಚಿಸಿದ್ದಾರೆ. ಈ ಸಂಬಂಧವಾಗಿ ಮಾತನಾಡಿದ ಸಲೀಂ ಅವರು, ನಕಲಿ ನಂಬರ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುತ್ತದೆ. ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿ ವೇಳೆ ತಮ್ಮ ವಾಹನಗಳ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ಬೇರೊಬ್ಬರು ಬಳಸಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದುವರೆಗೆ

ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ Read More »

ಕರ್ನಾಟಕ

  ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.08. ಮೆಟ್ರೋ ಪಿಲ್ಲರ್ ಕುಸಿದು ತಾಯಿ‌ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದು ಒಂದು ತಿಂಗಳಾಗುತ್ತಾ ಬಂದರೂ ಇನ್ನು ಕಂಟ್ರಾಕ್ಟರ್ ಮೇಲೇ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೊಂದು ಕಡೆ ಸಿಎಂ ಕಡೆಯಿಂದ ಘೋಷಣೆಯಾದ 10 ಲಕ್ಷ ಪರಿಹಾರ ಕೂಡ ಕುಟುಂಬಸ್ಥರಿಗೆ ದಕ್ಕಿಲ್ಲ. ಇನ್ನು ಬಿಎಂಆರ್​ಸಿಎಲ್ 20 ಲಕ್ಷ ಪರಿಹಾರವನ್ನು ನೀಡುತ್ತಿದ್ದು ಅದನ್ನು ತಿರಸ್ಕರಿಸಿರುವ ಕುಟುಂಬಸ್ಥರು, ಮೊದಲು ಕಂಟ್ರಾಕ್ಟರ್ ಲೈಸೆನ್ಸ್ ರದ್ದು‌ಮಾಡಿ, ಇದುವರೆಗೆ ಕಂಟ್ರಾಕ್ಟರ್ ಹಾಗೂ ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ಧ ಸೂಕ್ತ

  ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಬಲಿ!

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.08.   ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆನಗೋಡು ಬಳಿ‌ ನಡೆದಿದೆ. ಚಿರತೆಯೊಂದು ರಸ್ತೆ ದಾಟುವಾಗ ಈ ಅವಘಡ‌ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದೆ. ವಾಹನ ಡಿಕ್ಕಿಯಾದ ರಭಸಕ್ಕೆ ಚಿರತೆ  ತಲೆ ದೇಹದ ಭಾಗಕ್ಕೆ ತೀವ್ರ  ಗಾಯಗಳಾಗಿವೆ. ಆನಗೋಡು ಸುತ್ತಮುತ್ತ ಚಿರತೆ ಓಡಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು.

ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಬಲಿ! Read More »

ಕರ್ನಾಟಕ
Scroll to Top