News Kadaba

ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ !!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.17. ನನ್ನ ಅಮ್ಮನ ‘ಹೊಟ್ಟೆಯಲ್ಲಿ ಗಡ್ಡೆ ಕ್ಯಾನ್ಸರ್‌ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಅಮ್ಮನ ಪ್ರಾಣ ಉಳಿಸಲು ನೆರವಾಗಿ’ ಎಂದು ಎಳೆಯ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡಿರುವ 11ರ ಹರೆಯದ ಬಾಲಕಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ಬೆಳ್ತಂಗಡಿ ತಾಲ್ಲೂಕಿನ ಕಣಿಯೂರು ಗ್ರಾಮದ ಕೊರಜಂಡ ಮನೆ ನಿವಾಸಿ‌ ದಿ.ವಾಸಪ್ಪ ಎಂಬುವರ ಪುತ್ರಿ ವಿತೀತಾ ಈ ರೀತಿ ಪತ್ರ ಬರೆದು, ಸಹಾಯಯಾಚಿಸಿದ್ದಾಳೆ.  

ಅಮ್ಮನ ಕ್ಯಾನ್ಸರ್ ಚಿಕಿತ್ಸೆಗಾಗಿ ಸಂಘಟನೆಗೆ ಪತ್ರ ಬರೆದ 11ರ ಬಾಲಕಿ !! Read More »

ಕರಾವಳಿ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಯಕ್ಷಗಾನದ ಹೆಸರಾಂತ ಭಾಗವತ, ಕಂಚಿನ ಕಂಠದ ‘ಬಲಿಪ ಶೈಲಿ’ಯ ಹಾಡುಗಾರಿಕೆಗೆ ಖ್ಯಾತವಾಗಿರುವ ಬಲಿಪ ನಾರಾಯಣ ಭಾಗವತ ಅವರು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರರಾದ ಅವರು, ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದು, 13ನೇ ವಯಸ್ಸಿಗೆ ಯಕ್ಷಗಾನ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !! Read More »

ಕರಾವಳಿ

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com. ಹಾವೇರಿ, ಫೆ.17. ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ,  ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು ಯಾನೆ ಸೂರಿ ಬಂಧಿತ ಆರೋಪಿಯಾಗಿದ್ದಾನೆ. ಈ ಅಕ್ರಮ ಮರಳು ಸಾಗಾಟದ ಪ್ರಮುಖ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಾರೆಂಟ್ ಜಾರಿಯಾಗಿತ್ತು. ಇದೀಗ ಆರೋಪಿಯನ್ನು ವಿಟ್ಲ ಠಾಣೆ ಎಸ್ಸೈ ಜಯರಾಮ್ ಕೇರಳದ ಕೊಯಿಲಾಂಡಿಯ ವಾರಾಂಗೀಲ್ ಎಂಬಲ್ಲಿ ಬಂಧಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !!

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.17. ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿಯೋರ್ವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸಿದ್ದೀಖ್ ಅಲ್ ಮದೀನಿ ಎಂದು ಗುರುತಿಸಲಾಗಿದೆ. ಸಂಸ್ಥೆಯ ಸ್ನೇಹಿತರ ಜತೆ ಮೊನ್ನೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾಗಿ ಎನ್ನಲಾಗಿದೆ.  

ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ತಾಯಿಗೆ ಕೊಲೆ ಬೆದರಿಕೆ !     ➤ ಹಲ್ಲೆ ಮಾಡಿ ಮೂಳೆ ಮುರಿದ ಪಾಪಿ ಮಗ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಮಗನೋರ್ವ ಹೆತ್ತ ತಾಯಿಗೆ ಅವ್ಯಾಚ ಶಬ್ದಗಳಿಂದ ಬೈದು ದೂಡಿ ಹಾಕಿ ತುಳಿದ ತೊಡೆಯ ಮೂಳೆ ಮುರಿದು ಹಾಕಿದ ಘಟನೆ ಬೋಳಾರ ಬತ್ತೇರಿ ಗಾರ್ಡನ್‌ನ ಫೆಲಿಕ್ಸ್‌ ಕಂಪೌಂಡ್‌ನ‌ಲ್ಲಿ ಫೆ. 15ರ ಬುಧವಾರ ತಡರಾತ್ರಿ ಸಂಭವಿಸಿದೆ. ಆರೋಪಿ ಪುತ್ರ ರೋಹಿತ್‌ ವಿರುದ್ಧ ಗಾಯಾಳು ಆಗಿರುವ ಶಾಂತಾ ರೈ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  

ಮಂಗಳೂರು: ತಾಯಿಗೆ ಕೊಲೆ ಬೆದರಿಕೆ !     ➤ ಹಲ್ಲೆ ಮಾಡಿ ಮೂಳೆ ಮುರಿದ ಪಾಪಿ ಮಗ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ್ ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆ !

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕು ಕಚೇರಿಯಲ್ಲಿ ಆಹಾರ ನಿರೀಕ್ಷಕರಾಗಿದ್ದ ಚಂದ್ರ ನಾಯ್ಕ ಎನ್. ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ದಾವಣಗೆರೆ ನಿವಾಸಿಯಾದ ಚಂದ್ರ ನಾಯ್ಕ ಕಳೆದ 13 ವರ್ಷಗಳಿಂದ ಕೊಡಿಂಬಾಡಿ, ಉಪ್ಪಿನಂಗಡಿ, ಸವಣೂರು, ಪುಣಚ್ಚಾಡಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ. ಕಡಬ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದ ಇವರು ಇದೀಗ ಕಂದಾಯ ನಿರೀಕ್ಷಕರಾಗಿ ಪದೊನ್ನತಿ ಪಡೆದು ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಕಡಬದ ಆಹಾರ ನಿರೀಕ್ಷಕ ಚಂದ್ರ ನಾಯ್ಕ್ ಕಂದಾಯ ನಿರೀಕ್ಷಕರಾಗಿ ಪಂಜಕ್ಕೆ ವರ್ಗಾವಣೆ ! Read More »

ಕರಾವಳಿ

ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ ರಜನಿಕಾಂತ್‌ ಜೈಲರ್‌‌ ಸಿನಿಮಾದ ಶೂಟಿಂಗ್‌

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು ಜೈಲರ್‌‌ ಸಿನಿಮಾದ ಶೂಟಿಂಗ್‌ಗಾಗಿ ಮಂಗಳೂರಿಗೆ ಆಗಮಿಸಿದ್ದು, ಪಿಲಿಕುಳದ ಗುತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಪಿಲಿಕುಳದ ಗುತ್ತಿನ ಮನೆಯಲ್ಲಿ ಜೈಲರ್‌ ಚಿತ್ರದ ಚಿತ್ರೀಕರಣಕ್ಕಾಗಿ ವಿಶೇಷ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗುತ್ತಿದ್ದು, ಭದ್ರತೆ ಮತ್ತು ಗೌಪ್ಯತೆ ದೃಷ್ಟಿಯಿಂದ ಅಭಿಮಾನಿಗಳು ಹಾಗೂ‌ ಸಾರ್ವಜನಿಕರಿಗೆ ಗುತ್ತಿನ ಮನೆಗೆ ಪ್ರವೇಶ ನಿಷೇಧಿಸಲಾಗಿದೆ.  

ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ ರಜನಿಕಾಂತ್‌ ಜೈಲರ್‌‌ ಸಿನಿಮಾದ ಶೂಟಿಂಗ್‌ Read More »

ಕರಾವಳಿ

ಟ್ರಕ್ ಮತ್ತು ಜೀಪ್ ನಡುವೆ ರಸ್ತೆ ಅಪಘಾತ ➤ಏಳು ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಪಟಾನ್, ಫೆ.16. ಗುಜರಾತ್‌ನ ಪಟಾನ್ ಜಿಲ್ಲೆಯ ವರಾಹಿ ಬಳಿ ನಿಂತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಅಪಘಾತ ಸಂಭವಿಸಿದೆ, ರಾತ್ರಿಯಿಡಿ ತನಿಖೆ ನಡೆಸಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೀಪ್ ಸುಮಾರು 18 ಜನರನ್ನು ಹೊತ್ತೊಯ್ದಿತ್ತು, ಅದರಲ್ಲಿ 11 ಮಂದಿ ಗಾಯಗೊಂಡಿದ್ದರು, ಐವರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇಬ್ಬರು ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ ಎಂದು ಎಫ್ ಐ

ಟ್ರಕ್ ಮತ್ತು ಜೀಪ್ ನಡುವೆ ರಸ್ತೆ ಅಪಘಾತ ➤ಏಳು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಹೊಟೇಲ್ ಆರಂಭಿಸಿದ ತೃತೀಯ ಲಿಂಗಿ ಗೆಳತಿಯರು

(ನ್ಯೂಸ್ ಕಡಬ)newskadaba.com ಉಡುಪಿ, ಫೆ.16. ಬಸ್​ ನಿಲ್ದಾಣದ ಪಕ್ಕದಲ್ಲಿ ಮೂವರು ತೃತೀಯ ಲಿಂಗಿಯರು ಸೇರಿ ಹೊಟೇಲ್​ ಪ್ರಾರಂಭಿಸುವ ಮೂಲಕ ದುಡಿಮೆಗೆ ಇಳಿದಿದ್ದು ಮಾದರಿ ಕೆಲಸ‌ ಮಾಡಿದ್ದಾರೆ. ಪೂರ್ವಿ, ವೈಷ್ಣವಿ ಮತ್ತು ಚಂದನಾ ಎಂಬ ಹೆಸರಿನ ಮೂವರು ತೃತೀಯ ಲಿಂಗಿಗಳು ಉಡುಪಿ ಬಸ್​ ನಿಲ್ದಾಣದ ಪಕ್ಕದಲ್ಲಿ ಹೊಸದಾಗಿ ಹೋಟೆಲ್​ ತೆರೆದಿದ್ದಾರೆ. ಈ ಹೋಟೆಲ್ ರಾತ್ರಿ ಮಾತ್ರ ತೆರೆದಿರುತ್ತದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೆ, ರಾತ್ರಿ ಆಹಾರ ಸಿಗದೆ ಪರದಾಡುತ್ತಿರುತ್ತಾರೆ. ಹೀಗಾಗಿ ಇವರಿಗೆ ಅನುಕೂಲವಾಗಲೆಂದು ಮಧ್ಯರಾತ್ರಿ 1 ಗಂಟೆಯಿಂದ ಬೆಳಿಗ್ಗೆ

ಹೊಟೇಲ್ ಆರಂಭಿಸಿದ ತೃತೀಯ ಲಿಂಗಿ ಗೆಳತಿಯರು Read More »

ಕರಾವಳಿ

ಸುಳ್ಳು ದೂರು ಕೊಟ್ಟಅಮೀರ್ ಖಾನ್ಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.16. ಆನ್ಲೈನ್ ಗೇಮ್ನಲ್ಲಿ ಹಣ ಸೋತು ಮನೆಯಲ್ಲಿ ಬೈಯ್ಯುತ್ತಾರೆಂದು ಯಾರೋ ಮೂವರು ಚಾಕು ತೋರಿಸಿ, ತನ್ನನ್ನು ಅಪಹರಿಸಿ, ಮೊಬೈಲ್ ಕಸಿದುಕೊಂಡು, 35 ಸಾವಿರ ರು. ಪೋನ್ ಪೇ ಮೂಲಕ ಕಳಿಸಿಕೊಂಡಿದ್ದಾರೆಂದು ಸುಳ್ಳು ದೂರು ದಾಖಲಿಸಿದ್ದ ಆರೋಪಿಯನ್ನು ಇಲ್ಲಿನ ಆಜಾದ್ ನಗರ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ನಗರದ ಎಸ್ಎಸ್ಎಂ ನಗರಎ ಬ್ಲಾಕ್ ವಾಸಿ ಅಮೀರ್ ಖಾನ್ (21 ವರ್ಷ) ಬಂಧಿತ ಆರೋಪಿ. ಬಂಧಿತ ಆರೋಪಿಯು ತನ್ನ ಖಾತೆಯಲ್ಲಿದ್ದ ಹಣವನ್ನು ಮೊಬೈಲ್ ಆನ್ಲೈನ್ ಗೇಮ್ನಲ್ಲಿ ಹಾಕಿ,

ಸುಳ್ಳು ದೂರು ಕೊಟ್ಟಅಮೀರ್ ಖಾನ್ಗೆ ನ್ಯಾಯಾಂಗ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top