News Kadaba

ಭಾರತ-ಪಾಕ್‌ ಗಡಿಯಲ್ಲಿ ನಿರ್ಮಾಣವಾಗಲಿದೆ ಛತ್ರಪತಿ ಶಿವಾಜಿ ಪ್ರತಿಮೆ !

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.16. ಭಾರತ ಹಾಗೂ ಪಾಕಿಸ್ತಾನದ ನಡುವಿನ ಎಲ್‌ಓಸಿಯಲ್ಲಿ ಛತ್ರಪತಿ ಶಿವಾಜಿಯ ಭವ್ಯ ಪ್ರತಿಮೆಯನ್ನು ಸ್ಥಾಪನೆ ಮಾಡುವುದಾಗಿ ‘ಅಮೀ ಪುಣೇಕರ್‌’ ಎನ್‌ಜಿಓ ಘೋಷಣೆ ಮಾಡಿದೆ. 2023ರ ಫೆಬ್ರವರಿ 14 ರಂದು ಎನ್‌ಜಿಓ ಈ ಪ್ರಕಟಣೆಯನ್ನು ನೀಡಿದ್ದು ಎಲ್‌ಓಸಿಯ ಎರಡು ಕಡೆ ಶಿವಾಜಿಯ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ಹೇಳಿದೆ. ಶತ್ರುಗಳ ವಿರುದ್ಧ ಹೋರಾಡುವ ಸೈನಿಕರು ಪ್ರತಿನಿತ್ಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನೋಡುವ ಮೂಲಕ ಅವರ ಆದರ್ಶ ಮತ್ತು ನೈತಿಕ ಮೌಲ್ಯಗಳಿಂದ ಪ್ರೇರಣೆ ಪಡೆಯುತ್ತಾರೆ ಮತ್ತು […]

ಭಾರತ-ಪಾಕ್‌ ಗಡಿಯಲ್ಲಿ ನಿರ್ಮಾಣವಾಗಲಿದೆ ಛತ್ರಪತಿ ಶಿವಾಜಿ ಪ್ರತಿಮೆ ! Read More »

ರಾಷ್ಟ್ರೀಯ ನ್ಯೂಸ್

200 ಬಡ ಹೆಣ್ಣುಮಕ್ಕಳ ಖಾತೆ ತೆರೆದು ಮಾದರಿಯಾದ ಅಂಚೆಪಾಲಕ.!

(ನ್ಯೂಸ್ ಕಡಬ)newskadaba.com ಕೊಪ್ಪಳ, ಫೆ.16. ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ವೇಳೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿ 200 ಬಡ ಹೆಣ್ಣುಮಕ್ಕಳ ಖಾತೆ ತೆರೆಯುವ ಮೂಲಕ ಮಾದರಿಯಾಗಿದ್ದಾರೆ. ಅಂಚೆ ಇಲಾಖೆಯಿಂದ ಮಾರ್ಚ್‌ನಲ್ಲಿ ನಿವೃತ್ತರಾಗಲಿರುವ ಉಪ ಅಂಚೆಪಾಲಕ ಯಲ್ಲಪ್ಪ ಕೋಳೂರು ಅವರು ತಮ್ಮ ನಿವೃತ್ತಿಯ ಸಮಾರಂಭವನ್ನು ವಿಶೇಷವಾಗಿ ಆಚರಿಸಿಕೊಳ್ಳಲಿದ್ದಾರೆ. ನಿವೃತ್ತಿಯ ಹಣದಿಂದ 200 ಬಡ ಹೆಣ್ಣುಮಕ್ಕಳಿಗೆ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಹಾಕುವ ಮೂಲಕ ಔದಾರ್ಯ ಮೆರೆದಿದ್ದಾರೆ. .50000 ಸಾವಿರ ದೇಣಿಗೆ ನೀಡುವ ಮೂಲಕ ಕೊಪ್ಪಳದ 200

200 ಬಡ ಹೆಣ್ಣುಮಕ್ಕಳ ಖಾತೆ ತೆರೆದು ಮಾದರಿಯಾದ ಅಂಚೆಪಾಲಕ.! Read More »

ಕರ್ನಾಟಕ

ಜಾಫರ್ ಎಕ್ಸ್ ಪ್ರೆಸ್ ನಲ್ಲಿ ಸ್ಪೋಟ.!     ➤ ಪ್ರಯಾಣಿಕರಿಬ್ಬರು ಸ್ಥಳದಲ್ಲಿಯೇ ಮೃತ್ಯು

(ನ್ಯೂಸ್ ಕಡಬ)newskadaba.com ಪಂಜಾಬ್, ಫೆ.16. ಪಂಜಾಬ್‌ನ ಚಿಚಾವಟ್ನಿಯಲ್ಲಿ ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ಚಿಚಾವಟ್ನಿ ರೈಲು ನಿಲ್ದಾಣದಿಂದ ಹಾದು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ರೈಲು ಪೇಶಾವರದಿಂದ ಬರುತ್ತಿತ್ತು ಎನ್ನಲಾಗಿದೆ. ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ಚಿಚಾವಟ್ನಿ ರೈಲು ನಿಲ್ದಾಣದಿಂದ ಹಾದು ಹೋಗುತ್ತಿದ್ದಾಗ ನಾಲ್ಕನೇ ಬೋಗಿಯಲ್ಲಿ ಸಿಲಿಂಡರ್

ಜಾಫರ್ ಎಕ್ಸ್ ಪ್ರೆಸ್ ನಲ್ಲಿ ಸ್ಪೋಟ.!     ➤ ಪ್ರಯಾಣಿಕರಿಬ್ಬರು ಸ್ಥಳದಲ್ಲಿಯೇ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರು ಮತ್ತು ಬೈಕ್ ನಡುವೆ ಅಪಘಾತ.!    ➤  ಇಬ್ಬರು ಸ್ಥಳದಲ್ಲಿಯೇ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳಗಾವಿ, ಫೆ.16. ಕಾರೊಂದು ಬೈಕ್ ‘ಗೆ ಢಿಕ್ಕಿಯಾದ ಪರಿಣಾಮ ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ಸಂಭವಿಸಿದೆ. ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದ ಶಿವಕುಮಾರ ರಾಜು ಘೋಷೆ (25), ಸಹೋದರ ಅಶ್ವಿನ್ ಕುಮಾರ್ ರಾಜು ಘೋಷೆ (23) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸ್ವಗ್ರಾಮದಿಂದ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಎಂಬ ಗ್ರಾಮದ ಕಡೆಗೆ ಹೊರಟ್ಟಿದ್ದರು. ಕಾರು ಕಬ್ಬೂರು ಗ್ರಾಮದ ಕಡೆಯಿಂದ ಬರುತ್ತಿತ್ತು. ಬೆಳಕೂಡ ಗೇಟ್ ಬಳಿ ಕಾರು

ಕಾರು ಮತ್ತು ಬೈಕ್ ನಡುವೆ ಅಪಘಾತ.!    ➤  ಇಬ್ಬರು ಸ್ಥಳದಲ್ಲಿಯೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ.!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.16. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಪ್ರವೇಶ ಪತ್ರಗಳನ್ನು ಮಂಡಳಿಯ ವೆಬ್‌ಸೈಟ್‌ http://kseab.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಇದನ್ನು ಪಿಯು ಪರೀಕ್ಷೆ ಪೋರ್ಟಲ್‌ನಲ್ಲಿ ಲಾಗಿನ್‌ ಆಗಿ ಎಲ್ಲ ಕಾಲೇಜಿನ ಪ್ರಾಂಶುಪಾಲರು ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.  

ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ.! Read More »

ಕರ್ನಾಟಕ

ಚಾರ್ಮಾಡಿ: ಸಾವಿರಾರು ಪಾದಯಾತ್ರಿಗಳ ದಾಹ.!        ➤  ದಣಿವು ತಣಿಸುತ್ತಿದೆ ಅರಣ್ಯ ಇಲಾಖೆ

(ನ್ಯೂಸ್ ಕಡಬ)newskadaba.com ಚಾರ್ಮಾಡಿ, ಫೆ.16. ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಹುದೊಡ್ಡ ಸಂಖ್ಯೆಯ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳುವುದು ಸಂಪ್ರದಾಯ. ಅದೇ ರೀತಿ ಈ ವರ್ಷವೂ ಸಾವಿರಾರು ಭಕ್ತರು ಧರ್ಮಸ್ಥಳಕ್ಕೆ ನೂರಾರು ಕಿ.ಮೀ. ದೂರ ನಡೆದುಕೊಂಡೇ ಪಾದಯಾತ್ರೆ ಮೂಲಕ ಸಾಗಿ ಬರುತ್ತಿದ್ದಾರೆ. ಇವರ ದಣಿವು ನಿವಾರಿಸುವ ಜೊತೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ ಎನ್ನಲಾಗಿದೆ.  

ಚಾರ್ಮಾಡಿ: ಸಾವಿರಾರು ಪಾದಯಾತ್ರಿಗಳ ದಾಹ.!        ➤  ದಣಿವು ತಣಿಸುತ್ತಿದೆ ಅರಣ್ಯ ಇಲಾಖೆ Read More »

ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಲಾರಿ !       ➤  ಅದೃಷ್ಟವಶಾತ್ ಅಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕಡಬ, ಫೆ.16. ಕಡಬ ತಾಲೂಕಿನ ಆಲಂಕಾರು ಶರವೂರು ದೇವಾಲಯದ ಬಳಿ ಮೊಟ್ಟೆ ಸಾಗಾಟ ಲಾರಿಯೊಂದು ಚಾಲನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಘಟನೆ ಗುರುವಾರದಂದು ಸಂಭವಿಸಿದೆ. ಚರಂಡಿಗೆ ಉರುಳಿ ಬಿದ್ಬ ಪರಿಣಾಮ ಲಾರಿಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮೈಸೂರಿನಿಂದ ನೆಟ್ಟಣಕ್ಕೆ ಮೊಟ್ಟೆ ತಲುಪಿಸಿ ಉಳಿದ ಮೊಟ್ಟೆಗಳನ್ನು ಪುತ್ತೂರಿಗೆ ಕೊಂಡೊಯ್ಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿ ಬಿದ್ದ ಲಾರಿ !       ➤  ಅದೃಷ್ಟವಶಾತ್ ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಕಲುಷಿತ ನೀರು ಸೇವನೆ  ➤ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ತೆಲಂಗಾಣ, ಫೆ. 16. ಕಲುಷಿತ ನೀರು ಸೇವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (35) ಮೃತರು ಎಂದು ಗುರುತಿಸಲಾಗಿದೆ. ಇವರು ತೆಲಂಗಾಣದ ನಾರಾಯಣಪೇಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಗ್ರಾಮಕ್ಕೆ ನೀರು ಪೂರೈಸುವ ಪೈಪ್ ನಲ್ಲಿ ಚರಂಡಿ ನೀರು ಸೇರ್ಪಡೆಯಾಗಿ ನೀರು ಕಲುಷಿತವಾಗಿದ್ದು, ಇದನ್ನು ಸೇವಿಸಿದ 30 ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು.ಇವರಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಅಸ್ವಸ್ಥಗೊಂಡ ಎಲ್ಲಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ

ಕಲುಷಿತ ನೀರು ಸೇವನೆ  ➤ ಮಹಿಳೆ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಕಡಲಬ್ಬರ ಸಾಧ್ಯತೆ      ➤ ಸಮುದ್ರ ತೀರದ ನಿವಾಸಿಗಳಿಗೆ; ಮೀನುಗಾರರಿಗೆ ಎಚ್ಚರಿಕೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.16. ಕರಾವಳಿಯಲ್ಲಿ ಕಡಲಬ್ಬರ ಹೆಚ್ಚಾಗಲಿದೆ ಎಂದು ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಸಂಶೋಧನಾ ಕೇಂದ್ರ (ಐನ್ ಸಿಓಐಎಸ್)ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ, ಲಕ್ಷದೀಪ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಸಮುದ್ರದಲ್ಲಿ ಕಡಲು ಅಬ್ಬರದಿಂದ ಕೂಡಿರುವ ಸಾಧ್ಯತೆ ಇದೆ .ಆದುದರಿಂದ ಮೀನುಗಾರರು ಮತ್ತು ಕಿನಾರೆಯ ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.  

ಮಂಗಳೂರು: ಕಡಲಬ್ಬರ ಸಾಧ್ಯತೆ      ➤ ಸಮುದ್ರ ತೀರದ ನಿವಾಸಿಗಳಿಗೆ; ಮೀನುಗಾರರಿಗೆ ಎಚ್ಚರಿಕೆ Read More »

ಕರಾವಳಿ

ವೈಯಕ್ತಿಕ ಕಾರಣಕ್ಕೆ ಮನನೊಂದು ಓರ್ವ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.16. ವೈಯಕ್ತಿಕ ಕಾರಣದಿಂದ ಮನನೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ಘಟನೆ ವರದಿಯಾಗಿದೆ. ಕೆಲಸ ಮಾಡುವ ಮನೆಯ ಮೇಲಿನ ಟೇರಸ್‌ನ ಕಬ್ಬಣದ ಕೊಂಡಿಗೆ ನೈಲನ್‌ ಸೀರೆ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ಅನಂತರ ಸೀರೆ ತುಂಡಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈಯಕ್ತಿಕ ಕಾರಣಕ್ಕೆ ಮನನೊಂದು ಓರ್ವ ಮಹಿಳೆ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top