News Kadaba

ಗೂಗಲ್ ಇಂಡಿಯಾದ ಉದ್ಯೋಗಿಗಳಿಗೆ ಬಿಗ್ ಶಾಕ್ !       ➤453 ನೌಕರರು ವಜಾ

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.17. ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ. ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್‌ ವಜಾ ಮಾಡಿದೆ. ಉದ್ಯೋಗಿಗಳಿಗೆ ತಮ್ಮನ್ನು ವಜಾಗೊಳಿಸುವ ಬಗ್ಗೆ ಅಂಚೆ ಮೂಲಕ ತಿಳಿಸಲಾಗಿದೆ.    ಗೂಗಲ್ ಇಂಡಿಯಾದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ, ಉದ್ಯೋಗಿಗಳಿಗೆ ಮೇಲ್ ರವಾನಿಸಿದ್ದಾರಂತೆ. ಈ ಬೆಳವಣಿಗೆ ಕುರಿತಂತೆ ಗೂಗಲ್‌ ಇಂಡಿಯಾ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಗೂಗಲ್ ಇಂಡಿಯಾದ ಉದ್ಯೋಗಿಗಳಿಗೆ ಬಿಗ್ ಶಾಕ್ !       ➤453 ನೌಕರರು ವಜಾ Read More »

ರಾಷ್ಟ್ರೀಯ ನ್ಯೂಸ್

ಯೂಟ್ಯೂಬ್‌‌ನ ನೂತನ ಸಿಇಓ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ!

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಫೆ.17. ಯೂಟ್ಯೂಬ್‌‌ನ ಹೊಸ ಸಿಇಓ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರ ನೇಮಕವಾಗಿದ್ದಾರೆ. ಯೂಟ್ಯೂಬ್ ಸಿಇಓ ಮತ್ತು ಮೊದಲ ಗೂಗಲ್ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ ಅವರು 25 ವರ್ಷಗಳ ಹಿಂದೆ ತನ್ನ ಗ್ಯಾರೇಜ್‌ ನಲ್ಲಿ ಪ್ರಾರಂಭವಾದ ಯೂಟ್ಯೂಬ್ ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದು, ಇದೀಗ ಭಾರತೀಯ ಮೂಲದ ನೀಲ್ ಮೋಹನ್ ನೇಮಕವಾಗಿದ್ದಾರೆ.

ಯೂಟ್ಯೂಬ್‌‌ನ ನೂತನ ಸಿಇಓ ಆಗಿ ಭಾರತೀಯ ಮೂಲದ ನೀಲ್ ಮೋಹನ್ ನೇಮಕ! Read More »

ರಾಷ್ಟ್ರೀಯ ನ್ಯೂಸ್

➤ 2023 ಗ್ರಾಮ ಸಹಾಯಕ, ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಫೆ.17.  ಬೆಂಗಳೂರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಎರಡನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.  ಗ್ರಾಮ ಸಹಾಯಕ  ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ. ಗ್ರಾಮ ಸಹಾಯಕರ ಹುದ್ದೆಯನ್ನು ಜನಸೇವಕ ಎಂದು ಮರುನಾಮಕರಣ ಮಾಡಲಾಗಿದೆ. ಗ್ರಾಮ ಸಹಾಯಕರ ಮಾಸಿಕ ಗೌರವಧನ 13000 ರೂ ಗಳಿಂದ 14000 ರೂ ಗೆ ಹೆಚ್ಚಳ ಮಾಡಲಾಗುವುದು ಎಂದು ಘೋಷಿಸಿದರು.

➤ 2023 ಗ್ರಾಮ ಸಹಾಯಕ, ಅಂಗನವಾಡಿ ಆಶಾ ಕಾರ್ಯಕರ್ತೆಯರ ಸಹಾಯಧನ ಹೆಚ್ಚಳ Read More »

ಕರ್ನಾಟಕ

2023-2024 ಬಜೆಟ್ ಮಂಡನೆ !      ➤ ಬಜೆಟ್’ನ ಮುಖ್ಯಾಂಶಗಳು..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.17.  2023-24 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, ಸಿಎಂ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಬಜೆಟ್ ಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತು. ಬೆಂಗಳೂರಿನ ಆರ್ ಟಿ ನಗರದ ಮುತ್ತಪ್ಪ ಬ್ಲಾಕ್’ನ ಶ್ರೀ ಕಂಠೇಶ್ವರ ದೇವಸ್ಥಾನ ಹಾಗೂ ಬಾಲಬ್ರುಯಿ ಬಳಿಯ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೇರವಾಗಿ ವಿಧಾನಸೌಧಕ್ಕೆ ಆಗಮಿಸಿದರು. ಬಜೆಟ್ ನ ಮುಖ್ಯಾಂಶಗಳು… -ಶೂನ್ಯ ಬಡ್ಡಿದರದಲ್ಲಿ ಸಾಲ

2023-2024 ಬಜೆಟ್ ಮಂಡನೆ !      ➤ ಬಜೆಟ್’ನ ಮುಖ್ಯಾಂಶಗಳು..! Read More »

ಕರ್ನಾಟಕ

ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ!

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.17. ಭಾರತೀಯ ಕ್ರಿಕೆಟ್ ತಂಡದ ಒಳ ಸಂಗತಿಗಳನ್ನು ಖಾಸಗಿ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಬಾಯಿಬಿಟ್ಟಿದ್ದ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ. ಚೇತನ್ ಶರ್ಮಾ ಅವರು ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಜಯ್ ಶಾ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.

ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ! Read More »

ರಾಷ್ಟ್ರೀಯ ನ್ಯೂಸ್

ಮಲ್ಪೆ: ರಿಕ್ಷಾದಲ್ಲಿ ಶವ ತಂದು ರಸ್ತೆ ಬದಿ ಎಸೆದ ವ್ಯಾಪಾರಿಗಳು!

(ನ್ಯೂಸ್ ಕಡಬ)newskadaba.com ಮಲ್ಪೆ, ಫೆ.17. ಇಬ್ಬರು ವ್ಯಕ್ತಿಗಳು ಗೂಡ್ಸ್‌ ರಿಕ್ಷಾವೊಂದರಲ್ಲಿ ವ್ಯಕ್ತಿಯೊಬ್ಬರ ಶವವನ್ನು ತಂದು ರಸ್ತೆ ಪಕ್ಕ ಎಸೆದು ಹೋದ ಘಟನೆ ಇಲ್ಲಿನ ಕೆಮ್ಮಣ್ಣು ಗ್ರಾಮದಲ್ಲಿ ಹಾಡುಹಗಲೇ ನಡೆದಿದೆ. ಈ ಘಟನೆ ಪಕ್ಕದ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮಲ್ಪೆ ಠಾಣೆಯ ಪೊಲೀಸರು ತನಿಖೆ ನಡೆಸುತಿದ್ದಾರೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ರಸ್ತೆ ಪಕ್ಕ ಬಂದು ನಿಂತ ಗೂಡ್ಸ್‌ ರಿಕ್ಷಾದಿಂದ ಚಾಲಕ ಇಳಿದು ಸ್ವಲ್ಪ ದೂರ ಹೋಗಿ ನಿಲ್ಲುತ್ತಾನೆ.  ಇನ್ನೊಬ್ಬ ಗೂಡ್ಸ್‌ ರಿಕ್ಷಾದ ಹಿಂಭಾಗದಿಂದ ವ್ಯಕ್ತಿಯ ಶವವನ್ನು

ಮಲ್ಪೆ: ರಿಕ್ಷಾದಲ್ಲಿ ಶವ ತಂದು ರಸ್ತೆ ಬದಿ ಎಸೆದ ವ್ಯಾಪಾರಿಗಳು! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಡಬ, ಫೆ.17. ಕಡಬ ತಾಲೂಕು ಕಳಾರದ ಅಂಗಡಿಯೊಂದರ ಬಳಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ  ಮಿರ್ಷಾದ್ (35) ಬಂಧಿತ ಅರೋಪಿ ಎಂದು ಗುರುತಿಸಲಾಗಿದೆ. ಫೆ.15 ರಂದು ಠಾಣಾ ಎಸ್.ಐ  ಸಿಬ್ಬಂದಿಗಳ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕಳಾರ ಎಂಬಲ್ಲಿ ಕುಲ್ಕಿ ಜ್ಯೂಸ್‌ ಅಂಗಡಿ ಎದುರು ವ್ಯಕ್ತಿಯೋರ್ವ ರಸ್ತೆಯಲ್ಲಿ ತೂರಾಡುತ್ತಿದ್ದ ವೇಳೆ ವಿಚಾರಿಸಿದಾಗ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.    

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ನೀರಿನ ಸೋರಿಕೆ ತಡೆಗಟ್ಟಲು ಶೀಘ್ರದಲ್ಲೇ ಜಾಗೃತದಳ ರಚನೆ     ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.17. ನಗರದಲ್ಲಿ ನೀರಿನ ಕಳ್ಳತನ, ಅಕ್ರಮ ಸಂಪರ್ಕ ಮತ್ತು ಸೋರಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಶೀಘ್ರದಲ್ಲೇ ಜಾಗೃತ ದಳ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ನೀರು ನಿರ್ವಹಣೆಯಲ್ಲಿ ಸುಧಾರಣೆ ತರುವ ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ಅನಧಿಕೃತ ನೀರಿನ ಸಂಪರ್ಕ ಮತ್ತು ಕಳ್ಳತನವನ್ನು ಪರಿಶೀಲಿಸಲು ಜಾಗೃತ ದಳವನ್ನು ರಚಿಸಲಾಗುವುದು ಮತ್ತು ಸೋರಿಕೆಯನ್ನು

ನೀರಿನ ಸೋರಿಕೆ ತಡೆಗಟ್ಟಲು ಶೀಘ್ರದಲ್ಲೇ ಜಾಗೃತದಳ ರಚನೆ     ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಪ್ರಿಯಕರನ ಜೊತೆ ಅನುಚಿತ ಭಂಗಿಯಲ್ಲಿದ್ದ ಅಕ್ಕ!!     ➤ ಪೋಷಕರಿಗೆ ಹೇಳುತ್ತಾನೆಂದು ತಮ್ಮನನ್ನೇ ಕೊಂದ ಸೋದರಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.17. ತನ್ನ ಬಾಯ್ ಫ್ರೆಂಡ್ ನೊಂದಿಗಿದ್ದ ಅಕ್ಕನನ್ನು ನೋಡಿದ ಬಾಲಕ ವಿಷಯವನ್ನು ಪೋಷಕರಿಗೆ ತಿಳಿಸುತ್ತೇನೆಂದು ಹೇಳಿದ್ದಕ್ಕೆ ಆತನನ್ನು ಅಕ್ಕ ಮತ್ತು ಆಕೆಯ ಗೆಳೆಯ ಸೇರಿ ಹತ್ಯೆ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೋಲೀಸರ ಪ್ರಕಾರ, 18 ವರ್ಷದ ಯುವತಿ ಮತ್ತು ಆಕೆಯ ಗೆಳೆಯನನ್ನು ಯುವತಿಯ ಕಿರಿಯ ಸಹೋದರನ ಕೊಲೆ ಪ್ರಕರಣ ಸಂಬಂಧ ಬಂಧಿಸಲಾಯಿತು. ಇದರಿಂದ ಕೋಪಗೊಂಡ ಇಬ್ಬರೂ ಕುಡುಗೋಲಿನಿಂದ ಬಾಲಕನ ಕತ್ತು ಕೊಯ್ದಿದ್ದಾರೆ.

ಪ್ರಿಯಕರನ ಜೊತೆ ಅನುಚಿತ ಭಂಗಿಯಲ್ಲಿದ್ದ ಅಕ್ಕ!!     ➤ ಪೋಷಕರಿಗೆ ಹೇಳುತ್ತಾನೆಂದು ತಮ್ಮನನ್ನೇ ಕೊಂದ ಸೋದರಿ Read More »

ಕ್ರೈಮ್ ನ್ಯೂಸ್

ಭಾಗವತ ಭೀಷ್ಮ ಬಲಿಪ ನಾರಾಯಣ ನಿಧನಕ್ಕೆ ಸಿಎಂ ಸಂತಾಪ !!

(ನ್ಯೂಸ್ ಕಡಬ)newskadaba.com ತೆಂಕು ತಿಟ್ಟಿನ ಯಕ್ಷಗಾನದ ಮೇರು ಭಾಗವತ ಹಾಗೂ ಭಾಗವತಿಕೆ ಭೀಷ್ಮ ಎಂದೇ ಖ್ಯಾತರಾದ ಭಾಗವತ ಬಲಿಪ ನಾರಾಯಣ ಭಾಗವತ (85) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ. ಬಲಿಪ ನಾರಾಯಣ ನಿಧನ ಸಂಬಂಧ ಟ್ವೀಟ್‌ ಮಾಡಿರುವ ಬೊಮ್ಮಾಯಿ, ‘ತೆಂಕು ತಿಟ್ಟು ಯಕ್ಷರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಬಲಿಪ ನಾರಾಯಣ ಭಾಗವತರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ತಮ್ಮ ಕಂಚಿನ ಕಂಠದ ಬಲಿಪ ಶೈಲಿಯ ಹಾಡುಗಾರಿಕೆಗೆ ಪ್ರಸಿದ್ಧರಾಗಿದ್ದ ಭಾಗವತರ ನಿಧನದಿಂದ

ಭಾಗವತ ಭೀಷ್ಮ ಬಲಿಪ ನಾರಾಯಣ ನಿಧನಕ್ಕೆ ಸಿಎಂ ಸಂತಾಪ !! Read More »

ಕರ್ನಾಟಕ
Scroll to Top