ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿ ಪುಣೆಯಲ್ಲಿ ಮೃತ್ಯು !!

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.17. ಅಜ್ಮೀರ್‌ ಪ್ರವಾಸಕ್ಕೆಂದು ಹೋಗಿದ್ದ ಸುಳ್ಯದ ವಿದ್ಯಾರ್ಥಿಯೋರ್ವರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಪುಣೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಸಿದ್ದೀಖ್ ಅಲ್ ಮದೀನಿ ಎಂದು ಗುರುತಿಸಲಾಗಿದೆ.

ಸಂಸ್ಥೆಯ ಸ್ನೇಹಿತರ ಜತೆ ಮೊನ್ನೆ ಅಜ್ಮೀರ್ ಪ್ರವಾಸಕ್ಕೆಂದು ಹೋಗಿದ್ದ ಅವರಿಗೆ ಪುಣೆಯಲ್ಲಿ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾಗಿ ಎನ್ನಲಾಗಿದೆ.

 

Scroll to Top