News Kadaba

ಮಂಗಳೂರು: ಆನ್‌ಲೈನ್ ವಂಚನೆ ➤ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.22. ಸಾಮಾಜಿಕ‌‌ ಜಾಲತಾಣದಲ್ಲಿ ದಿನಕ್ಕೆ ಒಂದೂವರೆ ಸಾವಿರದಿಂದ ಮೂರುವರೆ ಸಾವಿರ ಹಣ ಗಳಿಸುವ ಪೋಸ್ಟ್ ವೀಕ್ಷಿಸಿದ ವ್ಯಕ್ತಿ ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ‌‌ ನಡೆದಿದೆ. ದಿನಕ್ಕೆ 1,500 ರೂಪಾಯಿಂದ 3,000 ಸಾವಿರದವರೆಗೆ ಹಣ ಗಳಿಸಬಹುದೆಂಬ ಪೋಸ್ಟ್‌ ಅನ್ನು ಇನ್‌ಸ್ಟಾ ಗ್ರಾಂನಲ್ಲಿ ವೀಕ್ಷಿಸಿದ್ದಾರೆ. ಈ ವ್ಯಕ್ತಿಯನ್ನು ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿದ ವಂಚಕರು, ಟಾಸ್ಕ್‌ ಪೂರ್ಣಗೊಳಿಸುವಂತೆ ಸೂಚಿಸಿ, ಟಾಸ್ಕ್ ಮುಗಿದ ಮೇಲೆ ಅವರ ಖಾತೆಯಿಂದ ₹1.81 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ . ತನಗೆ […]

ಮಂಗಳೂರು: ಆನ್‌ಲೈನ್ ವಂಚನೆ ➤ ಲಕ್ಷಾಂತರ ರೂ. ಹಣ ಕಳೆದುಕೊಂಡ ವ್ಯಕ್ತಿ Read More »

ಕರಾವಳಿ

ಮತದಾರರಿಗೆ ಹಣ ಹಂಚದೆ ಮೋಸ ಮಾಡಿದ ಆಪ್ತರು.!➤ ಸತ್ಯ ಬಾಯ್ಬಿಟ್ಟ ಕೆ.ಆರ್.ಪೇಟೆ ಅಭ್ಯರ್ಥಿ

(ನ್ಯೂಸ್ ಕಡಬ)newskadaba.com ಮಂಡ್ಯ,ಮೇ.22 ಚುನಾವಣೆಯಲ್ಲಿ ಬೆಂಬಲಿಗರಿಗೆ ಹಣ ಕೊಟ್ಟು ಮಾಜಿ‌ ಸಚಿವರೊಬ್ಬರು ಮೋಸ ಹೋಗಿದ್ದಾರಾ ಎಂಬ ವಿಚಾರ ಅವರ ಮಾತಿನಿಂದಲೇ ಹೊರಬಿದ್ದಿದೆ. ಈ ಮಾಜಿ ಸಚಿವರಿಂದ ಮತದಾರರಿಗೆ ಹಂಚಲು ಪಡೆದಿದ್ದ ಹಣವನ್ನು ಹಂಚದ ಆಪ್ತರೇ ಮೋಸ ಮಾಡಿದ್ದಾರೆ! ಕೃತಜ್ಞತಾ ಸಭೆಯಲ್ಲಿ ಕೆ.ಆರ್.ಪೇಟೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಸತ್ಯ ಬಾಯ್ಬಿಟ್ಟಿದ್ದಾರೆ. ಸೋಲಿನ ಬಳಿಕ ಹಣ ವಾಪಾಸ್ ನೀಡುವಂತೆ ನಾರಾಯಣಗೌಡ ಮನವಿ ಮಾಡಿದ್ದು ‘ಮತದಾರರಿಗೆ ಹಂಚಿಕೆ ಮಾಡದೆ ಇಟ್ಟುಕೊಂಡಿರುವ ಹಣ ವಾಪಸ್ ಕೊಟ್ಟುಬಿಡಿ ಎಂದು ಸಭೆಯಲ್ಲಿ ಅಂಗಲಾಚಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಮತದಾರರಿಗೆ ಹಣ ಹಂಚದೆ ಮೋಸ ಮಾಡಿದ ಆಪ್ತರು.!➤ ಸತ್ಯ ಬಾಯ್ಬಿಟ್ಟ ಕೆ.ಆರ್.ಪೇಟೆ ಅಭ್ಯರ್ಥಿ Read More »

ಕರ್ನಾಟಕ

ಉಡುಪಿ: ಮಾಜಿ ಶಾಸಕ ಯು.ಆರ್. ಸಭಾಪತಿ‌ ನಿಧನ

(ನ್ಯೂಸ್ ಕಡಬ)newskadaba.com ಉಡುಪಿ, ಮೇ.22. ಮಾಜಿ ಶಾಸಕ, ಹಿರಿಯ ರಾಜಕಾರಣಿ ಯು.ಆರ್. ಸಭಾಪತಿ‌(71) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ. ಉಡುಪಿ ಬಡಗುಪೇಟೆ ನಿವಾಸಿಯಾಗಿದ್ದ ಸಭಾಪತಿ ಅವರು ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು. 1952 ರಲ್ಲಿ ಹುಟ್ಟಿದ ಅವರು, 1994 ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ(ಕೆಸಿಪಿ) ಚುನಾಯಿತರಾಗಿ ವಿಧಾನಸಭೆ ಪ್ರವೇಶಿಸಿದ್ದರು. ಆ ಬಳಿಕ ಕೆಸಿಪಿ ಕಾಂಗ್ರೆಸ್ ನೊಂದಿಗೆ ವಿಲೀನಗೊಂಡಿತ್ತು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕ ಆಗಿ ಮರು ಆಯ್ಕೆಯಾಗಿದ್ದರು. ಅನಂತರ ಜಿಲ್ಲೆಯ ರಾಜಕಾರಣದಲ್ಲಿ ಸಕ್ರಿಯರಾಗಿ

ಉಡುಪಿ: ಮಾಜಿ ಶಾಸಕ ಯು.ಆರ್. ಸಭಾಪತಿ‌ ನಿಧನ Read More »

ಕರಾವಳಿ

ಮಂಗಳೂರು: 21ನೇ ವಯಸ್ಸಿಗೆ ಪೈಲೆಟ್ ಆದ ಕರಾವಳಿಯ ಯುವತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.22. ಮಂಗಳೂರಿನ ಯುವತಿಯೊಬ್ಬಳು ತನ್ನ 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಕರಾವಳಿ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಮಂಗಳೂರಿನ ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತಿಯಾದ ಹನಿಯಾ ಹನೀಫ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ.  

ಮಂಗಳೂರು: 21ನೇ ವಯಸ್ಸಿಗೆ ಪೈಲೆಟ್ ಆದ ಕರಾವಳಿಯ ಯುವತಿ Read More »

ಕರಾವಳಿ

ಬಂಟ್ವಾಳ: ಮದುವೆ ವಿಚಾರದ ದ್ವೇಷದಿಂದ ಕೊಲೆ ಯತ್ನ ➤ ಆರೋಪಿ ಪರಾರಿ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮೇ.22. ಮದುವೆ ವಿಚಾರದಲ್ಲಿ ದ್ವೇಷವಾಗಿ ಇಟ್ಟುಕೊಂಡು ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿ, ಬಳಿಕ ಕೈಯನ್ನು ಕಡಿದು ತುಂಡು ಮಾಡಿದ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ನಡೆದಿದೆ. ಆರೋಪಿ ಎಂದು ಹೇಳಲಾಗಿರುವ ಸಂತೋಷ್ ಆತನ ಸ್ನೇಹಿತ ಶಿವರಾಜ್ ಕುಲಾಲ್ ಎಂಬಾತನನ್ನು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಬಂಟ್ವಾಳ: ಮದುವೆ ವಿಚಾರದ ದ್ವೇಷದಿಂದ ಕೊಲೆ ಯತ್ನ ➤ ಆರೋಪಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

4 ರಾಜ್ಯಗಳ ಚುನಾವಣೆ; ಕಾಂಗ್ರೆಸ್‌ ಮಹತ್ವದ ಸಭೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.20. ಕರ್ನಾಟಕವನ್ನು ಗೆದ್ದ ಜೋಶ್‌ ನಲ್ಲಿರುವ ಕಾಂಗ್ರೆಸ್‌ ಇದೀಗ ಮಧ್ಯಪ್ರವೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಯತ್ತ ಗಮನಹರಿಸಿದೆ. ಈ ನಾಲ್ಕು ರಾಜ್ಯಗಳಲ್ಲಿ ಪ್ರಾಬಲ್ಯ ಮೆರೆದರೆ ಆ ಬಳಿಕ ಎದುರಾಗುವ ಲೋಕಸಭಾ ಚುನಾವಣೆಗೆ ಪ್ರಬಲ ವೇದಿಕೆ ಈ ಮೂಲಕ ಸಜ್ಜಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಈ ರಾಜ್ಯಗಳ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮೇ 24ರಂದು ಈ ರಾಜ್ಯದ ನಾಯಕರ ಸಭೆ ಕರೆದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ

4 ರಾಜ್ಯಗಳ ಚುನಾವಣೆ; ಕಾಂಗ್ರೆಸ್‌ ಮಹತ್ವದ ಸಭೆ Read More »

ಕರ್ನಾಟಕ

ಜೀರೋ ಟ್ರಾಫಿಕ್ ಸೌಲಭ್ಯ ಬೇಡ.! ➤ ಸಿಎಂ ಸಿದ್ಧರಾಮಯ್ಯ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.22 ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿಎಂ ಸಿದ್ಧರಾಮಯ್ಯ ಅವರು ಸಾರ್ವಜನಿಕರಿಗೆ ಇಷ್ಟವಾಗುವಂತ ತೀರ್ಮಾನವನ್ನು ಕೈಗೊಂಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುವಂತ ಜೀರೋ ಟ್ರಾಫಿಕ್ ಸೌಲಭ್ಯ ಬೇಡ.ಅದನ್ನು ವಾಪಾಸ್ಸು ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಜೀರೊ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು

ಜೀರೋ ಟ್ರಾಫಿಕ್ ಸೌಲಭ್ಯ ಬೇಡ.! ➤ ಸಿಎಂ ಸಿದ್ಧರಾಮಯ್ಯ Read More »

ಕರ್ನಾಟಕ

ಮಂಗಳೂರು ಭೀಕರ ವಿಮಾನ ದುರಂತಕ್ಕೆ 13 ವರ್ಷ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.22. ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 13 ವರ್ಷವಾಗುತ್ತಿದೆ. 2010ರ ಮೇ22ರ ಬೆಳಗ್ಗೆ 6.20ಕ್ಕೆ ದುಬೈ ಯಿಂದ ಬಂದ ಏರ್‌ ಇಂಡಿಯಾ ವಿಮಾನ ಲ್ಯಾಂಡಿಂಗ್‌ ವೇಳೆ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ ಮಡಿದವರ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ. 8 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದರು. ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು,

ಮಂಗಳೂರು ಭೀಕರ ವಿಮಾನ ದುರಂತಕ್ಕೆ 13 ವರ್ಷ Read More »

ಕರಾವಳಿ

ಹುಟ್ಟುಹಬ್ಬದ ದಿನದಂದೇ ಹೃದಯಘಾತದಿಂದ ಬಾಲಕ ಮೃತ್ಯು.!

(ನ್ಯೂಸ್ ಕಡಬ)newskadaba.com ತೆಲಂಗಾಣ,ಮೇ.22 ಹುಟ್ಟುಹಬ್ಬದ ದಿನದಂದೇ ಹದಿನಾರು ವರ್ಷದ ಬಾಲಕನೊಬ್ಬ ಹೃದಯಘಾತದಿಂದ ಮೃತಪಟ್ಟಿದ್ದು, ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮಿಸಬೇಕಿದ್ದ ಕುಟುಂಬ ಸದಸ್ಯರು ಶೋಕದ ಮಡುವಿನಲ್ಲಿ ಮೃತದೇಹದ ಪಕ್ಕ ಕೇಕ್ ಕತ್ತರಿಸಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆಸೀಫಾಬಾದ್ ಜಿಲ್ಲೆಯ ಬಾಬಾಪುರದ ಸಚಿನ್ ಎಂಬ ಬಾಲಕ ಶುಕ್ರವಾರದಂದು ಹದಿನಾರನೇ ವಸಂತಕ್ಕೆ ಕಾಲಿಟ್ಟಿದ್ದು, ಇದರ ಅದ್ದೂರಿ ಆಚರಣೆಗಾಗಿ ಕುಟುಂಬ ಸದಸ್ಯರು ದೊಡ್ಡ ಕೇಕ್ ತಂದು ಸಕಲ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.ಇದರ ಮಧ್ಯೆ ಮನೆಯಿಂದ ಹೊರ ಹೋಗಿದ್ದ ಸಚಿನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದು,

ಹುಟ್ಟುಹಬ್ಬದ ದಿನದಂದೇ ಹೃದಯಘಾತದಿಂದ ಬಾಲಕ ಮೃತ್ಯು.! Read More »

ರಾಷ್ಟ್ರೀಯ ನ್ಯೂಸ್

ಮೇ.24ರಂದು ಕಾಂಗ್ರೆಸ್‌ ನಾಯಕರ ವಿಶೇಷ ಸಭೆ     

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ,ಮೇ.22 ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತು ಚರ್ಚಿಸಲು ಮೇ 24ರಂದು ಕಾಂಗ್ರೆಸ್‌ ವಿಶೇಷ ಸಭೆಯನ್ನು ಕರೆದಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಗಳು ನಡೆಯಲಿವೆ.ಈ ಹಿನ್ನೆಲೆಯಲ್ಲಿ ಚುನಾವಣೆ ರೂಪುರೇಷೆ ಕುರಿತು ಚರ್ಚಿಸಲು ಕಾಂಗ್ರೆಸ್‌ ವಿಶೇಷ ಸಭೆ ಕರೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು

ಮೇ.24ರಂದು ಕಾಂಗ್ರೆಸ್‌ ನಾಯಕರ ವಿಶೇಷ ಸಭೆ      Read More »

ರಾಷ್ಟ್ರೀಯ ನ್ಯೂಸ್
Scroll to Top