News Kadaba

ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ

(ನ್ಯೂಸ್ ಕಡಬ)newskadaba.com ತುಮಕೂರು, ಮೇ.22. ಯುವಕನನ್ನು ಚೂರಿಯಿಂದ ಇರಿದು ಭೀಕರವಾಗಿ ಕೊಲೆ ಮಾಡಿದ ಘಟನೆ ತುಮಕೂರು ಹೊರವಲಯದಲ್ಲಿರುವ ಯಲ್ಲಾಪುರದ ಅಂಗಡಿಯೊಂದರಲ್ಲಿ ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಎಂಬವರು ಕೊಲೆಯಾಗಿದ್ದಾರೆ. ಜಾಕೀರ್ ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಿದ್ದರು.2 ತಿಂಗಳ ಹಿಂದೆ ನೂತನ ಟೈಲ್ಸ್‌ನ ಅಂಗಡಿಯನ್ನು ಯಲ್ಲಾಪುರದಲ್ಲಿ ತೆರೆದಿದ್ದನು. ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ.

ಯುವಕನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗುಡುಗು, ಮಿಂಚಿನಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಾನಿ.!➤ರೈಲು ಸಂಚಾರ ರದ್ದು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.22 ಗುಡುಗು ಮತ್ತು ಮಿಂಚಿನಿಂದಾಗಿ ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ಗೆ ಹಾನಿಯಾಗಿದ್ದು ರೈಲು ಸಂಚಾರ ರದ್ದುಗೊಂಡಿದೆ. ಇದರಿಂದಾಗಿ ಹೌರಾ-ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಲಾಗಿದೆ. ಗುಡುಗು ಮತ್ತು ಮಿಂಚಿನಿಂದಾಗಿ ಓವರ್ಹೆಡ್ ತಂತಿಗಳು ಹಾನಿಗೊಳಗಾಗಿದ್ದು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರೀ ಮಳೆ ಗಾಳಿಗೆ ಒಂದೇ ಭಾರತ ರೈಲಿಗೆ ಹಾನಿಯುಂಟಾಗಿದೆ. ರೈಲಿನ ಮೇಲೆ ಮರಗಳು ಬಿದ್ದಿವೆ. ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಇಲ್ಲ.  

ಗುಡುಗು, ಮಿಂಚಿನಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಾನಿ.!➤ರೈಲು ಸಂಚಾರ ರದ್ದು Read More »

ಕರ್ನಾಟಕ

ಒಂದೇ  ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ.!

(ನ್ಯೂಸ್ ಕಡಬ)newskadaba.com ತುಮಕೂರು,ಮೇ.22ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ  ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.ಮಂಜುಳಾ (13), ಮಧು ಕುಮಾರ್ (13), ಮಹಾಲಕ್ಷ್ಮಿ (15) ಹಾಗೂ ಭಾನು (14) ಎಂಬ ಹೆಸರಿನ ಮಕ್ಕಳು ಕಣ್ಮರೆಯಾಗಿದ್ದಾರೆ. ಚಿಕ್ಕಬಾಣಗೆರೆ ಗ್ರಾಮದ ಮಲ್ಲಿಕಾರ್ಜುನ ಅವರ ಮಕ್ಕಳಾದ ಮಂಜುಳಾ ಹಾಗೂ ಮಧುಕುಮಾರ್, ಹಾಗೂ ಅದೇ ಗ್ರಾಮದ ಕೃಷ್ಣಪ್ಪನ ಮಕ್ಕಳಾದ ಮಹಾಲಕ್ಷ್ಮಿ ಹಾಗೂ ಭಾನು ಮನೆಯಿಂದ ಹೋದವರು ಕಣ್ಮರೆಯಾಗಿದ್ದಾರೆ.ಪೋಷಕರಲ್ಲಿ ಆತಂಕ ಹೆಚ್ಚಾಗಿದ್ದು ತಮ್ಮ ಮಕ್ಕಳನ್ನ ಹುಡುಕಿಕೊಂಡುವಂತೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಗೆ

ಒಂದೇ  ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ.! Read More »

ಕರ್ನಾಟಕ

ವರುಣಾರ್ಭಟಕ್ಕೆ ನಟ ಜಗ್ಗೇಶ್ ಕಾರು ಮುಳುಗಡೆ.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.22  ರಾಜಧಾನಿ ಬೆಂಗಳೂರಿನಲ್ಲಿ ಸುರಿದ ರಣಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ.ಜಗ್ಗೇಶ್ ಅವರ ಬಿಎಂಡಬ್ಲ್ಯೂ ಕಾರು ನೀರಿನಲ್ಲಿ ಮುಳುಗಿದೆ. ರಿಪೇರಿ ಕಾರ್ಯ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಕಾರನ್ನು ನಿಲ್ಲಿಸಿದ್ದರು. ಸ್ನೇಹಿತ ಮುರುಳಿಯವರ ಮಲ್ಲೇಶ್ವರಂ ಮನೆಯ ಸೆಲ್ ನಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಆದರೆ ಭಾರಿ ಮಳೆಯಿಂದಾಗಿ ಕಾರು ಮುಳುಗಡೆಯಾಗಿದೆ.    

ವರುಣಾರ್ಭಟಕ್ಕೆ ನಟ ಜಗ್ಗೇಶ್ ಕಾರು ಮುಳುಗಡೆ.! Read More »

ಕರ್ನಾಟಕ

ಕೆ.ಆರ್.ಸರ್ಕಲ್‌ನ ಅಂಡರ್ ಪಾಸ್‌ ನೀರಿನಲ್ಲಿ ಸಿಲುಕಿ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.22. ಭಾರಿ ಮಳೆ ಸುರಿದಿದ್ದರಿಂದ ಕೆ.ಆರ್.ಸರ್ಕಲ್ ನ ಅಂಡರ್ ಪಾಸ್ ನಲ್ಲಿ ನೀರಿನಲ್ಲಿ ಸಿಲುಕಿ ಕಾರಿನಲ್ಲಿದ್ದ ಯುವತಿಯೊಬ್ಬಳು ದಾರುಣವಾಗಿ ಸಾವ್ನಪ್ಪಿದ್ದಾಳೆ. ಆಂಧ್ರದ ವಿಜಯವಾಡದ ಮೂಲದ ಭಾನುರೇಖಾ(22)  ಮೃತಪಟ್ಟವರು. ಇವರು ಇನ್ಫೋಸಿಸ್ ಉದ್ಯೋಗಿಯಾಗಿದ್ದರು. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದು, ಅಂಡರ್ ಪಾಸ್ ನಲ್ಲಿ ಏಕಾಏಕಿ  ಭಾರಿ ಮಳೆಯ ಪ್ರಮಾಣದಲ್ಲಿ  ನೀರು ಸಂಗ್ರಹವಾಗಿತ್ತು. ಈ ವೇಳೆಯಲ್ಲಿ ಕಾರು ಮುಳುಗಡೆಯಾಗಿದ್ದು ಸ್ಥಳೀಯರು ಸೇರಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಾರು ಮುಳುಗಡೆಯಾಗಿದ್ದ ವೇಳೆಯಲ್ಲಿ  ಭಾನುರೇಖಾ ಹೆಚ್ಚಿನ ಪ್ರಮಾಣದಲ್ಲಿ ನೀರುಕುಡಿದರಿಂದ ಅಸ್ವಸ್ಥಗೊಂಡ

ಕೆ.ಆರ್.ಸರ್ಕಲ್‌ನ ಅಂಡರ್ ಪಾಸ್‌ ನೀರಿನಲ್ಲಿ ಸಿಲುಕಿ ಯುವತಿ ಮೃತ್ಯು Read More »

ಕರ್ನಾಟಕ

ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಹಿಮ್ಮುಖವಾಗಿ ಚಲಿಸಿದ ರೈಲು.!

(ನ್ಯೂಸ್ ಕಡಬ)newskadaba.com ಕೊಚ್ಚಿ,ಮೇ.22  ನಿಗದಿತ ನಿಲ್ದಾಣದಲ್ಲಿ ನಿಲುಗಡೆ ನೀಡದೇ ಮುಂದಕ್ಕೆ ಚಲಿಸಿದ ರೈಲು, ಕೊನೆಗೆ ಪ್ರಯಾಣಿಕರು ಮತ್ತು ರೈಲು ಅಧಿಕಾರಿಗಳನ್ನು ಹತ್ತಿಸಿಕೊಳ್ಳುವ ಸಲುವಾಗಿ ಒಂದು ಕಿಲೋಮೀಟರ್ ಹಿಮ್ಮುಖವಾಗಿ ಚಲಿಸಿದ ವಿಚಿತ್ರ ಪ್ರಕರಣ ವರದಿಯಾಗಿದೆ.ಮಾವೇಲಿಕ್ಕರ ಮತ್ತು ಚೆಂಗನ್ನೂರು ನಿಲ್ದಾಣ ನಡುವಿನ ಡಿ ದರ್ಜೆ ನಿಲ್ದಾಣವಾದ ಚೆರಿಯನಾಡ್‌ನಲ್ಲಿ ಈ ಘಟನೆ ಸಂಭವಿಸಿದೆ. ಶೋರನೂರಿಗೆ ಹೊರಟಿದ್ದ ವೇನಾಡ್ ಎಕ್ಸ್‌ಪ್ರೆಸ್ ರೈಲು ಆಲಪ್ಪುಝದ ಚೆರಿಯನಾಡ್ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕಿತ್ತು. ಈ ಘಟನೆಯಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ ಸುಮಾರು ಎಂಟು ನಿಮಿಷ ವ್ಯತ್ಯಯವಾಯಿತು. ಆದರೆ ಲೋಕೊ

ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಹಿಮ್ಮುಖವಾಗಿ ಚಲಿಸಿದ ರೈಲು.! Read More »

ರಾಷ್ಟ್ರೀಯ ನ್ಯೂಸ್

ಮೇ.22-05-2023 ರಿಂದ 24-05-2023ರವರೆಗೆ ವಿಧಾನಸೌಧದಲ್ಲಿ ವಿಶೇಷ ಅಧಿವೇಷನ➤144 ಸೆಕ್ಷನ್ ಜಾರಿ.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.22 ದಿನಾಂಕ 22-05-2023 ರಿಂದ 24-05-2023ರವರೆಗೆ ವಿಧಾನಸೌಧದಲ್ಲಿ ವಿಶೇಷ ಅಧಿವೇಷನ ನಡೆಯಲಿದೆ. ಈ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಾಮುತ್ತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದು, ಇಂದಿನಿಂದ ಮೇ.24ರವರೆಗೆ ವಿಧಾನಸೌಧದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ಈ ಸಮಯದ್ಲಲಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಮೆರವಣಿಗೆ, ಪ್ರತಿಭಟನೆ, ಧರಣಿ, ಸತ್ಯಾಗ್ರಹ, ವಿಧಾನಸೌಧಕ್ಕೆ ಮುತ್ತಿಗೆ ಸೇರಿದಂತೆ ವಿವಿಧ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ

ಮೇ.22-05-2023 ರಿಂದ 24-05-2023ರವರೆಗೆ ವಿಧಾನಸೌಧದಲ್ಲಿ ವಿಶೇಷ ಅಧಿವೇಷನ➤144 ಸೆಕ್ಷನ್ ಜಾರಿ.! Read More »

ಕರ್ನಾಟಕ

ಬೆಳ್ತಂಗಡಿ: ಸೂಪರ್‌ ಮಾರ್ಕೆಟ್‌ನಲ್ಲಿ ಆಕಸ್ಮಿಕ ಬೆಂಕಿ    ➤ ಲಕ್ಷಾಂತರ ಮೌಲ್ಯದ ವಸ್ತು ನಾಶ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.22. ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪದ ಸೋಮಂತಡ್ಕದ ದಿಡುಪೆ ರಸ್ತೆಯ ಬಿ ಎಂ ಹಂಝ ಎಂಬವರ ಮಾಲಕತ್ವದ ಸೂಪರ್ ಮಾರ್ಕೆಟ್‌‌ನಲ್ಲಿ ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಂದಾಜು ಸುಮಾರು 50 ಲಕ್ಷದಷ್ಟು ನಷ್ಟ ಉಂಟಾಗಿರುವ ಘಟನೆ ನಡೆದಿದೆ. ಪತ್ರಿಕಾ ವಿತರಣೆ ಮಾಡುವವರು ಘಟನೆ ಗಮನಕ್ಕೆ ಬಂದು ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳೀಯರು ಹಾಗೂ ಅಗ್ನಿಶಾಮಕದ ಸಿಬ್ಬಂದಿಗಳು ಬೆಂಕಿ ನಂದಿಸಲು ಸಹಕರಿಸಿದ್ದಾರೆ. ಬೆಂಕಿ ಸಂಪೂರ್ಣ ತಗುಲಿದ್ದರಿಂದ ಮಾಲಕರು ಸಂಪೂರ್ಣ

ಬೆಳ್ತಂಗಡಿ: ಸೂಪರ್‌ ಮಾರ್ಕೆಟ್‌ನಲ್ಲಿ ಆಕಸ್ಮಿಕ ಬೆಂಕಿ    ➤ ಲಕ್ಷಾಂತರ ಮೌಲ್ಯದ ವಸ್ತು ನಾಶ Read More »

ಕರಾವಳಿ

ಪುತ್ತೂರು: ಕಾರುಗಳ ನಡುವೆ ಅಪಘಾತ   ➤ ಆರು ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.22. ಕಾಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿ ಆರು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಬೆಳ್ತಂಗಡಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಎದುರುಗಡೆಯಿಂದ ಬರುತ್ತಿದ್ದ ಮಾರುತಿ 800 ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇನ್ನು ಸ್ವಿಫ್ಟ್ ಕಾರಿನ ಚಾಲಕ ಮಹಾಬಲ ಶೆಟ್ಟಿ ಹಾಗೂ ಕಾರಿನಲ್ಲಿದ್ದ ಅನ್ವಿತಾ, ಮಾನ್ವಿತಾ, ಮಮತಾ, ಆಶಾ, ಮಾರುತಿ ಕಾರಿನಲ್ಲಿದ್ದ ಅಣ್ಣಿಗೌಡ ಎಂಬುವವರಿಗೆ ಗಾಯಗಳಾಗಿವೆ. ಇವರೆಲ್ಲರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪುತ್ತೂರು

ಪುತ್ತೂರು: ಕಾರುಗಳ ನಡುವೆ ಅಪಘಾತ   ➤ ಆರು ಮಂದಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಖಾತೆ ಹಂಚಿಕೆಗೂ ಮುನ್ನವೇ ಪೊಲೀಸರಿಗೆ ಖಡಕ್ ನಿರ್ದೇಶನಗಳನ್ನು ನೀಡಿದ ಪ್ರಿಯಾಂಕ್ ಖರ್ಗೆ.!

(ನ್ಯೂಸ್ ಕಡಬ)newskadaba.com ಕಲಬುರಗಿ,ಮೇ.22 ಸಚಿವ ಪ್ರಿಯಾಂಕ ಖರ್ಗೆ ಕಲಬುರಗಿ ಪೊಲೀಸ್ ಕಮಿಷನರ್ ಹಾಗೂ ಎಸ್ಪಿಗೆ ಟಾಸ್ಕ್ ನೀಡಿದ್ದು ಖಾತೆ ಹಂಚಿಕೆಗೂ ಮುನ್ನವೇ ಕೆಲಸಕ್ಕಿಳಿದಿದ್ದಾರೆ.ಪೊಲೀಸ್ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಟಾಸ್ಕ್ ನೀಡಲಾಗಿದ್ದು ಅಕ್ರಮ ಜೂಜು ಮತ್ತು ಬೆಟ್ಟಿಂಗ್ ದಂಧೆಗೆ ಬ್ರೇಕ್ ಹಾಕಲು ಸೂಚನೆ ನೀಡಿದ್ದಾರೆ. ಪ್ರಿಯಾಂಕ್​ ಖರ್ಗೆ ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆ ಮತ್ತು ಅಕ್ರಮ ಗಣಿಗಾರಿಕೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದು ಕಲಬುರಗಿ ಜಿಲ್ಲೆಯಲ್ಲಿನ ಮಾದಕ ದಂಧೆಗಳಾದ ಡ್ರಗ್, ಗಾಂಜಾ, ಅಫೀಮ್ ದಂಧೆ ನಿಲ್ಲಿಸುವಂತೆ ಖಡಕ್ ಆಗಿ

ಖಾತೆ ಹಂಚಿಕೆಗೂ ಮುನ್ನವೇ ಪೊಲೀಸರಿಗೆ ಖಡಕ್ ನಿರ್ದೇಶನಗಳನ್ನು ನೀಡಿದ ಪ್ರಿಯಾಂಕ್ ಖರ್ಗೆ.! Read More »

ಕರ್ನಾಟಕ
Scroll to Top