News Kadaba

ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ವಿಧಿವಶ ► ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಶರತ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.07. ಇತ್ತೀಚೆಗೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ನಗರದ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ  ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಜುಲೈ 4 ರಂದು ರಾತ್ರಿ ಶರತ್ ಬಿ.ಸಿ.ರೋಡ್‌ನ ತನ್ನ ತಂದೆಯ ಲಾಂಡ್ರಿಯಲ್ಲಿದ್ದ ಸಂದರ್ಭ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳ ತಂಡವೊಂದು ಅಂಗಡಿಗೆ ನುಗ್ಗಿ ಶರತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಮಂಗಳೂರಿಗೆ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ […]

ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ವಿಧಿವಶ ► ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಶರತ್ Read More »

ಕರಾವಳಿ

ಅಡ್ಯಾರ್ ಪದವು: ಸಹಾಯ ಕೇಳುವ ನೆಪದಲ್ಲಿ ಚೂರಿ ಇರಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.7. ಪೆಟ್ರೋಲ್ ಕೇಳುವ ನೆಪದಲ್ಲಿ ದುಷ್ಕರ್ಮಿಗಳ ತಂಡವೊಂದು ವಿದ್ಯಾರ್ಥಿಗಳಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಅಡ್ಯಾರ್ ಪದವಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮಂಗಳೂರಿನ ಖಾಸಗಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಕೇರಳದ ಮಲಪ್ಪುರಂ ನಿವಾಸಿ ಸಾಜಿದ್ (23) ಹಾಗೂ ಆತನ ಸ್ನೇಹಿತ ನೌಫಲ್ ನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಅಡ್ಯಾರ್ ಪದವಿನಲ್ಲಿ ಬೈಕ್ ನಲ್ಲಿದ್ದ ಮೂವರ ತಂಡ “ಪೆಟ್ರೋಲ್ ಖಾಲಿಯಾಗಿದ್ದು, ಪೆಟ್ರೋಲ್ ಇದ್ದರೆ ನೀಡಿ” ಎಂದು

ಅಡ್ಯಾರ್ ಪದವು: ಸಹಾಯ ಕೇಳುವ ನೆಪದಲ್ಲಿ ಚೂರಿ ಇರಿತ Read More »

ಕರಾವಳಿ

ಬಿ.ಸಿ.ರೋಡ್: ನಿಷೇಧಾಜ್ಞೆ ನಡುವೆ ಪ್ರತಿಭಟನೆ ► ಸಂಸದರು, ಶಾಸಕರು ಸೇರಿದಂತೆ ಸಂಘಟನೆಯ ಮುಖಂಡರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.7. ಆರೆಸ್ಸೆಸ್ ಕಾರ್ಯಕರ್ತ ಶರತ್ ಮೇಲಿನ ಹಲ್ಲೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ‘ಬಿ.ಸಿ.ರೋಡ್ ಚಲೋ’ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಸೇರಿದಂತೆ ಹಲವು ಸಂಘ ಪರಿವಾರದ ಮುಖಂಡರನ್ನು ಪೊಲೀಸರು ಬಂಧಿಸಿದರು. ಇಂದು ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದ ಕಾರಣ ಬಿ.ಸಿ.ರೋಡಿನಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ಬಿ.ಸಿ.ರೋಡ್: ನಿಷೇಧಾಜ್ಞೆ ನಡುವೆ ಪ್ರತಿಭಟನೆ ► ಸಂಸದರು, ಶಾಸಕರು ಸೇರಿದಂತೆ ಸಂಘಟನೆಯ ಮುಖಂಡರ ಬಂಧನ Read More »

ಕರಾವಳಿ

ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಮೊಬೈಲ್ ಒತ್ತುತ್ತಾ ಸುಮ್ಮನೆ ಕಾಲಹರಣ ಮಾಡುವ ಬದಲು ತಮ್ಮ ಆಲೋಚನಾ ಶಕ್ತಿಯನ್ನು ಬದಲಿಸಿ ವಾಟ್ಸಾಪ್ ಗ್ರೂಪೊಂದರ ಸದಸ್ಯರು ಗೋಗ್ರೀನ್ ಅಭಿಯಾನದ ಅಂಗವಾಗಿ ಸಸಿ ವಿತರಣೆ, ವನಮಹೋತ್ಸವ ಆಚರಿಸಿದರು. ಪುಣ್ಚತ್ತಾರು ಉಷಾ ಡಿಜೆ ಮತ್ತು ಲೈಟಿಂಗ್ಸ್‌ ವಾಟ್ಸಪ್ ಗ್ರೂಪಿನ ಅಡ್ಮಿನ್ ದಿನೇಶ್ ಪೈಕ ನೇತೃತ್ವದಲ್ಲಿ ಕಾಣಿಯೂರು ಗ್ರಾಮದ ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸಿನಲ್ಲಿ ಸಸ್ಯನಾಟಿ, ಸಸಿ ವಿತರಣೆ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಅನಂತ ಬೈಲಂಗಡಿ, ಮಾಧವ ಕಲ್ಪಡ,

ನಾವೂರು: ವಾಟ್ಸಾಪ್ ಬಳಗದಿಂದ ಸಸಿ ವಿತರಣೆ, ವನಮಹೋತ್ಸವ Read More »

ಕರಾವಳಿ

ಬಿದ್ದು ಸಿಕ್ಕಿದ 41 ಸಾವಿರ ರೂ.ಗಳು ಪೊಲೀಸರಿಗೆ ಹಸ್ತಾಂತರ ► ಪರರ ಸ್ವತ್ತು ತನಗೆ ಬೇಡವೆನ್ನುವ ಇವರ ಬಗ್ಗೆ ತಿಳಿಯಬೇಕೇ…?

(ನ್ಯೂಸ್ ಕಡಬ) newskadaba.com ಪುತ್ತೂರು, ಜು.06. ರಸ್ತೆಯಲ್ಲಿ ತನಗೆ ಬಿದ್ದು ಸಿಕ್ಕಿದ 40900 ರೂಪಾಯಿ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಘಟನೆ ಪುತ್ತೂರಿನಲ್ಲಿ ಗುರುವಾರದಂದು ನಡೆದಿದೆ. ಪುತ್ತೂರು ತಾಲೂಕಿನ ಕಾವು ನಿವಾಸಿಗಳಾದ ಆನಂದ ಮೂಲ್ಯ ಹಾಗೂ ಕೋಟಿ ಮೂಲ್ಯ ಎಂಬವರಿಗೆ ಬಿದ್ದು ಸಿಕ್ಕಿತೆನ್ನಲಾದ ಹಣವನ್ನು ಇನ್ನೊಬ್ಬರಿಗೆ ಸೇರಬೇಕಾದ ವಸ್ತು ತನಗೆ ಬೇಡವೆನ್ನುವ ಇರಾದೆಯೊಂದಿಗೆ ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆನಂದ ಮೂಲ್ಯರು ಕಾವು ಮಾಡ್ನೂರು ಗ್ರಾಮದ ಮದ್ಲ ನಿವಾಸಿಯಾಗಿದ್ದು, ಮದ್ಲದಲ್ಲಿ ಗೂಡಂಗಡಿಯಲ್ಲಿ ಜಿನಸು ವ್ಯಾಪಾರ ಮಾಡುತ್ತಿದ್ದಾರೆ. ಸಮಾಜ ಸೇವೆಯಲ್ಲೂ ಸಕ್ರಿಯರಾಗಿರುವ ಆನಂದ

ಬಿದ್ದು ಸಿಕ್ಕಿದ 41 ಸಾವಿರ ರೂ.ಗಳು ಪೊಲೀಸರಿಗೆ ಹಸ್ತಾಂತರ ► ಪರರ ಸ್ವತ್ತು ತನಗೆ ಬೇಡವೆನ್ನುವ ಇವರ ಬಗ್ಗೆ ತಿಳಿಯಬೇಕೇ…? Read More »

ಕರಾವಳಿ

ಜು.8ರಂದು ಸವಣೂರು ವಿದ್ಯಾರಶ್ಮಿಯಲ್ಲಿ ಸಹಸ್ರ ವೃಕ್ಷ ಅಭಿಯಾನ

(ನ್ಯೂಸ್ ಕಡಬ) newskadaba.com ಸವಣೂರು, ಜು.06. ಇಲ್ಲಿನ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸಂಸ್ಥೆಯಲ್ಲಿ ವನಮಹೋತ್ಸವ ಸಹಸ್ರವೃಕ್ಷ ಅಭಿಯಾನ ಕಾರ್ಯಕ್ರಮ ಜುಲೈ 8 ರಂದು ನಡೆಯಲಿದೆ. ಪುತ್ತೂರು ವಲಯ ಸಹಾಯಕ ಅರಣ್ಯ ಸಂರಕ್ಷಣಾ„ಕಾರಿ ಎನ್.ಸುಬ್ರಹ್ಮಣ್ಯ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ. ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಸಭೆಯ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಉಪಸ್ಥಿತರಿರುವರು

ಜು.8ರಂದು ಸವಣೂರು ವಿದ್ಯಾರಶ್ಮಿಯಲ್ಲಿ ಸಹಸ್ರ ವೃಕ್ಷ ಅಭಿಯಾನ Read More »

ಕರಾವಳಿ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು

(ನ್ಯೂಸ್ ಕಡಬ) newskadaba.com ಬಿಹಾರ, ಜು.06. ಊರಿನ ಮುಸ್ಲಿಮರು ಇಸ್ಲಾಂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಅರೋಪಿಸಿ ಮುಸ್ಲಿಂ ವಕೀಲರೋರ್ವರು ತನ್ನ ಇಬ್ಬರು ಪುತ್ರರೊಂದಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ಬಿಹಾರದ ಬೆಗುಸರಾಯ್ ಜಿಲ್ಲೆಯ ಪೊಖಾರಿಯ ಎಂಬ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಮುಹಮ್ಮದ್ ಅನ್ವರ್(46) ತನ್ನ ಪುತ್ರರಾದ ಮುಹಮ್ಮದ್ ಅಮೀರ್(11) ಹಾಗೂ ಮುಹಮ್ಮದ್ ಶಬೀರ್‌(9) ರೊಂದಿಗೆ ಮತಾಂತರಗೊಂಡಿದ್ದಾರೆ. ಇವರು ತಮ್ಮ ಹೆಸರನ್ನು ಆನಂದ್ ಭಾರ್ತಿ, ಅಮನ್ ಭಾರ್ತಿ ಹಾಗೂ ಸುಮನ್ ಭಾರ್ತಿ ಎಂದು ಮರು ನಾಮಕರಣ ಮಾಡಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವಕೀಲ, ಇಬ್ಬರು ಪುತ್ರರು Read More »

ರಾಷ್ಟ್ರೀಯ ನ್ಯೂಸ್

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.06. ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ ಎಂಬುದನ್ನು ಬಿ.ಸಿ. ರೋಡಿನ ಯುವಕನೊಬ್ಬ ತನ್ನ ಮಹತ್ಕಾರ್ಯದ ಮೂಲಕ ಸಾದರಪಡಿಸಿದ್ದಾನೆ. ಕೋಮು ಸಂಘರ್ಷದಿಂದ ಕರಾವಳಿ ಜಿಲ್ಲೆ ಉರಿಯುತ್ತಿದ್ದರೆ ಜಾತಿ, ಧರ್ಮದ ಹಂಗು ತೊರೆದು ಗೆಳೆಯನ ರಕ್ಷಣೆಗೆ ಧಾವಿಸಿ ಬಂದಿದ್ದಾರೆ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್. ಹೌದು, ಕಳೆದ ಮಂಗಳವಾರ ರಾತ್ರಿ ಸುಮಾರು ಹತ್ತು ಗಂಟೆಗೆ ಬಿ.ಸಿ.ರೋಡಿನ ಉದಯ ಲಾಂಡ್ರಿ ಮಾಲೀಕ, RSS ಕಾರ್ಯಕರ್ತ ಶರತ್‍ನಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣವೇ ಅಕ್ಕಪಕ್ಕದವರು

RSS ಕಾರ್ಯಕರ್ತನಿಗೆ ಚೂರಿ ಇರಿದಾಗ ಆಸ್ಪತ್ರೆಗೆ ಸೇರಿಸಿದ ಮುಸ್ಲಿಂ ಯುವಕ ►ಮಾನವೀಯತೆಯ ಮೂಲಕ ಹೀರೋ ಆದ ಬಂಟ್ವಾಳದ ಯುವಕ Read More »

ಕರಾವಳಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಕಡಬ, ಜು.06. ಇಲ್ಲಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹಾದ್ವಾರದ ಬಳಿಯ ಮೂರ್ತಿಯ ಮೇಲೆ ಪೊಲೀಸ್ ಬೀಟ್ ಗೆ ಸಹಿ ಹಾಕುವ ಪುಸ್ತಕವನ್ನು ನೇತಾಡಿಸಲಾಗಿದ್ದು, ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರದಂದು ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಪೊಲೀಸ್ ಬೀಟ್ ಪುಸ್ತಕವನ್ನು ಕಂಡು ಪೊಲೀಸರು ಈ ರೀತಿ ಬೇಜವಾಬ್ದಾರಿಯಿಂದ ಇಟ್ಟಿದ್ದಾರೋ ಅಥವಾ ಕಿಡಿಗೇಡಿಗಳು ಗಲಭೆ ಸೃಷ್ಟಿಸುವ ಉದ್ದೇಶದಿಂದ ಇಟ್ಟಿದ್ದಾರೋ ಎಂದು ಆಕ್ರೋಶಗೊಂಡಿದ್ದಾರೆ. ಭಕ್ತರಲ್ಲೊಬ್ಬರು ಫೊಟೊ ತೆಗೆದು ವಾಟ್ಸಾಪ್ ನಲ್ಲಿ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ

ಬಿಳಿನೆಲೆ ದೇವಸ್ಥಾನದ ಮೂರ್ತಿಗೆ ಪುಸ್ತಕ ತೂಗುಹಾಕಿದ ಕಿರಾತಕರು ► ಭಕ್ತ ವೃಂದದಿಂದ ತೀವ್ರ ಆಕ್ರೋಶ Read More »

ಕರಾವಳಿ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ

(ನ್ಯೂಸ್ ಕಡಬ) newskadaba.com ಕಡಬ, ಜು.06. ಗಣೇಶೋತ್ಸವ ಸಮಿತಿಗೆ ಕಡಬದಲ್ಲಿರುವ ಸ್ವಾತಿ ಇಲೆಕ್ಟ್ರಿಕಲ್ಸ್‌ ಮತ್ತು ಇಲೆಕ್ಟ್ರಾನಿಕ್ಸ್‌ನ ಮಾಲಕರಾದ ಮೈನಾ ಮತ್ತು ರಾಜೇಶ್ ಕಂಡೂರುರವರು ಸುಮಾರು 10ಸಾವಿರ ರೂ. ವೆಚ್ಚದಲ್ಲಿ ಗಣಪತಿ ಪೀಠ ನಿರ್ಮಿಸಿ ಕಡಬ ವಿದ್ಯಾನಗರದಲ್ಲಿರುವ ಸ್ವಾತಿ ನಿಲಯದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ, 44ನೇ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಿ, ಜೊತೆಕಾರ್ಯದರ್ಶಿ ಯತೀಶ್ ಹೊಸಮನೆ, ಕೋಶಾಧಿಕಾರಿ ಜಯರಾಮ ಆರ್ತಿಲ, ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ

ಕಡಬ ಗಣೇಶೋತ್ಸವ ಸಮಿತಿಗೆ ಗಣಪತಿ ಪೀಠ ಸಮರ್ಪಣೆ Read More »

ಕರಾವಳಿ
Scroll to Top