karnataka

ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಕಾರು  !!!!!                  

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 24. ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಘಟನೆ ಇಲ್ಲಿನ ಹಳೇ ಡಯಾನ ವೃತ್ತ ಬಳಿಯ ಕಲ್ಯಾಣ್ ಜುವೆಲ್ಲರ್ಸ್ ಬಳಿ ನಡೆದಿದೆ. ಯಾರಿಗೂ ಅಪಾಯ ಇಲ್ಲವೆಂದು ತಿಳಿದುಬಂದಿದೆ.      

ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ಒಳಗೆ ನುಗ್ಗಿದ ಕಾರು  !!!!!                   Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಶಿಗ್ಗಾವಿ , ಡಿ 24 : ‘ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಹಣಕಾಸು ಇಲಾಖೆ ಜೊತೆ ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಎಲ್ಲಾ ಇಲಾಖೆಯವರ ಜೊತೆಗೂ ಚರ್ಚೆ ಮಾಡಲಿದ್ದೇನೆ. ಬಜೆಟ್ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಮುಂದಿನ ಜನವರಿ ತಿಂಗಳಿಂದಲೇ ಶುರು ಮಾಡಲಿದ್ದೇನೆ. ಎಂದು ತಿಳಿಸಿದರು.

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಚೆಕ್‌ಪೋಸ್ಟ್‌ಗಳಲ್ಲಿ ಲಂಚಾವತಾರ ➤ ಕ್ರಿಮಿನಲ್‌ ಕೇಸ್‌ ತನಿಖೆಗೆ ಲೋಕಾಯುಕ್ತರ ಆದೇಶ       

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 24. ರಾಜ್ಯದ ಚೆಕ್‌ ಪೋಸ್ಟ್‌ಗಳಲ್ಲಿ ಸಾರಿಗೆ ಇಲಾಖೆ (ಆರ್‌ಟಿಒ) ಅಧಿಕಾರಿಗಳ ಲಂಚಾವತಾರ, ಕರ್ತವ್ಯಲೋಪ ಬಯಲು ಮಾಡಿರುವ ಲೋಕಾಯುಕ್ತ ಪೊಲೀಸರು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆ, ವಿಜಯಪುರದ ಝಳಕಿ ಸೇರಿದಂತೆ ರಾಜ್ಯದ ಎಂಟು ಚೆಕ್‌ಪೋಸ್ಟ್‌ಗಳಲ್ಲಿ ಪತ್ತೆಯಾದ 11 ಲಕ್ಷ ರೂ.ಗಳಿಗೂ ಅಧಿಕ ಅನಧಿಕೃತ ಹಣ, ಆರ್‌ಟಿಓ ಅಧಿಕಾರಿಗಳ ನಿಯಮ ಉಲ್ಲಂಘನೆ, ಕರ್ತವ್ಯ ಲೋಪವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ್‌

ಚೆಕ್‌ಪೋಸ್ಟ್‌ಗಳಲ್ಲಿ ಲಂಚಾವತಾರ ➤ ಕ್ರಿಮಿನಲ್‌ ಕೇಸ್‌ ತನಿಖೆಗೆ ಲೋಕಾಯುಕ್ತರ ಆದೇಶ        Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಾಳೆ (ಡಿ. 25) ಸಿಎಂ ಬೊಮ್ಮಾಯಿ ದ.ಕ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 24. ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಾಳೆ (ಡಿ.25) ಭಾನುವಾರ ದ.ಕ. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಡಿ.25ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಪ್ರಯಾಣಿಸಿ ಸಂಜೆ 4 ಗಂಟೆಗೆ ಮಂಗಳೂರು ತಲುಪುವರು. ಸಂಜೆ 4.10ಕ್ಕೆ ಮಂಗಳೂರಿನಿಂದ ಹೊರಟು 5 ಗಂಟೆಗೆ ಮೂಡಬಿದಿರೆ ಆಳ್ವಾಸ್ ಕ್ಯಾಂಪಸ್‍ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಿರುವ ಅಂತರಾಷ್ಟ್ರೀಯ ಜಾಂಬೂರಿ ಹಾಗೂ ಏಕ್ ಭಾರತ್-ಶ್ರೇಷ್ಠ ಭಾರತ್, ನಮ್ಮ

ನಾಳೆ (ಡಿ. 25) ಸಿಎಂ ಬೊಮ್ಮಾಯಿ ದ.ಕ ಜಿಲ್ಲಾ ಪ್ರವಾಸ Read More »

ಕರಾವಳಿ, ಕರ್ನಾಟಕ

ಅಕ್ರಮ ಕಸಾಯಿ ಖಾನೆಗೆ ಹಿಂಜಾವೇ ಕಾರ್ಯಕರ್ತರಿಂದ ದಾಳಿ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 24. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಹಿಂಜಾವೇ ಕಾರ್ಯಕರ್ತರು, ಇಬ್ಬರು ಆರೋಪಿಗಳ ಸಹಿತ 4 ಗೋವು ಹಾಗೂ ಹೆಚ್ಚಿನ ಪ್ರಮಾಣದ ಮಾಂಸ ವಶಪಡಿಸಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಆಲಂಗಾರು ಎಂಬಲ್ಲಿ ನಡೆದಿದೆ. ಬಂಧಿತರನ್ನು ಗಿಲ್ಬರ್ಟ್ ಮಿರಾಂದ ಹಾಗೂ ಕ್ಲಾರಿನ್ ಆಲ್ವಿನ್ ಎಂದು ಗುರುತಿಸಲಾಗಿದೆ. ಆಲಂಗಾರಿನ ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವರ ಅಕ್ರಮ ಕಸಾಯಿ ಖಾನೆಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹಿಂಜಾವೇ ಕಾರ್ಯಕರ್ತರು ಆರೋಪಿಗಳನ್ನು ಹಿಡಿದು ಮೂಡಬಿದ್ರೆ

ಅಕ್ರಮ ಕಸಾಯಿ ಖಾನೆಗೆ ಹಿಂಜಾವೇ ಕಾರ್ಯಕರ್ತರಿಂದ ದಾಳಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ

(ನ್ಯೂಸ್ ಕಡಬ) newskadaba.com ಅಂಕೋಲಾ, ಡಿ. 24. ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಾರಿ ಸಂಪೂರ್ಣ ಸುಟ್ಟ ಭಸ್ಮವಾದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಹುಬ್ಬಳ್ಳಿಯಿಂದ ಆಂಕೋಲಾ ಮಾರ್ಗವಾಗಿ ಮಂಗಳೂರಿಗೆ ಹೆದ್ದಾರಿ ಮೂಲಕ ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಲಾರಿಯಲ್ಲಿ ರಾಸಾಯನಿಕ ವಸ್ತುವನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ತಿಳಿದಿಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ

ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ Read More »

ಕರ್ನಾಟಕ

ಉಳ್ಳಾಲ: ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಚಾಲಕ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 24. ವಿದೇಶಿ ವಿದ್ಯಾರ್ಥಿಗಳಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಕಾರಿನಲ್ಲಿ ಪರಾರಿಯಾಗಲೆತ್ನಿಸಿದ ಚಾಲಕನನ್ನು ತಡೆದ ಸ್ಥಳೀಯರು, ಪೊಲೀಸರಿಗೆ ಒಪ್ಪಿಸಿದ ಘಟನೆ ತಲಪಾಡಿ ದೇವಿನಗರ ಎಂಬಲ್ಲಿ ವರದಿಯಾಗಿದೆ. ಬಂಧಿತರನ್ನು ಕೇರಳದ ಅಹಮ್ಮದ್ ಮುಬಾರಿಷ್ ಎ.ಕೆ ಎಂದು ಗುರುತಿಸಲಾಗಿದೆ. ಗಾಯಾಗೊಂಡವರನ್ನು ಸವಾರ ಸೆಟಿದ್ ಬಾಷಾಂಗ್(30) ಹಾಗೂ ಸಹ ಸವಾರ ಅಲಿ ಸಾಗರ್(30) ಎಂದು ಗುರುತಿಸಲಾಗಿದೆ. ಅಹಮ್ಮದ್ ಮುಬಾರಿಷ್ ಕಾರಿನಲ್ಲಿ ಮಂಗಳೂರಿನಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸಿ ರಾ.ಹೆ. 66 ರ ಕೋಟೆಕಾರು

ಉಳ್ಳಾಲ: ಸ್ಕೂಟರಿಗೆ ಢಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಕಾರು ಚಾಲಕ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಡಾ.ಸುಪ್ರೀತ್ ಲೋಬೋರವರಿಗೆ ಆಯುರ್ವೇದದಲ್ಲಿ ಪಿಎಚ್‌.ಡಿ ಪದವಿ                                                                                                                                        

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 24. ಇಲ್ಲಿನ ಡಾ.ಕೆ.ಜಿ.ಭಟ್ ಬಿಲ್ಡಿಂಗ್‌ ನಲ್ಲಿ ಜೊಸ್ಸೀಸ್ ಆಯುರ್ವೇದ ಆಸ್ಪತ್ರೆ ಮತ್ತು ನೆಕ್ಕಿಲಾಡಿಯಲ್ಲಿ ಬಳ್ಳಿ ಆಯುರ್ಗ್ರಾಮ ಆಯುರ್ವೇದ ಆಸ್ಪತ್ರೆ ಹೊಂದಿರುವ ಡಾ. ಸುಪ್ರೀತ್ ಲೋಬೋ ಅವರು ಭುವನೇಶ್ವರದ ಉತ್ಕಲ ವಿಶ್ವವಿದ್ಯಾನಿಲಯದಿಂದ ಆಯುರ್ವೇದದಲ್ಲಿ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಡಾ. ಚತುರ್ಭುಜ ಭುಯಾನ್ A COMPARATIVE CLINICAL STUDY OF AGNIKARMA WITH SUVARN SHALAKA AND PANCHADHATU SHALAKA IN JANUSANDHIGATA VATA W.S.R. TO OSTEOARTHRITIS OF KNEE JOINT

ಉಪ್ಪಿನಂಗಡಿ: ಡಾ.ಸುಪ್ರೀತ್ ಲೋಬೋರವರಿಗೆ ಆಯುರ್ವೇದದಲ್ಲಿ ಪಿಎಚ್‌.ಡಿ ಪದವಿ                                                                                                                                         Read More »

ಕರಾವಳಿ, ಕರ್ನಾಟಕ

ಚಿರತೆ ದಾಳಿ ➤ 10 ಕುರಿಗಳು ಮೃತ್ಯು.!

 (ನ್ಯೂಸ್ ಕಡಬ) newskadaba.com ಗುಬ್ಬಿ, ಡಿ. 24. ಚಿರತೆಯೊಂದು ದಾಳಿ ನಡೆಸಿ, 10 ಕುರಿಗಳನ್ನು ಕೊಂದುಹಾಕಿರುವ ಘಟನೆ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಹಳ್ಳಿಯಲ್ಲಿ ವರದಿಯಾಗಿದೆ. ರೈತರಾದ ಲಕ್ಷ್ಮಮ್ಮ ಹಾಗೂ ಗಂಗಣ್ಣ ಎಂಬವರಿಗೆ ಸೇರಿದ ಕುರಿಗಳ ಮೇಲೆ ಚಿರತೆ ದಾಳಿ ನಡೆಸಿವೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳ ಬಳಿ ಚಿರತೆಯನ್ನು ಶೀಘ್ರವಾಗಿ ಹಿಡಿಯುವಂತೆ ಮುದ್ದನಹಳ್ಳಿಯ ಗ್ರಾಮಸ್ಥರು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.

ಚಿರತೆ ದಾಳಿ ➤ 10 ಕುರಿಗಳು ಮೃತ್ಯು.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..!

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 24. ಲಾರಿ ಹರಿದು ಬೈಕ್ ನ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಮಸ್ಕಿ ತಾಲ್ಲೂಕಿನ ಬೇಡರ ಕಾರಲಕುಂಟಿ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಲಿಂಗಸುಗೂರು ತಾಲ್ಲೂಕಿನ ಯರಗಂಟಿ ಗ್ರಾಮದ ಶಿವಗ್ಯಾನಪ್ಪ ತಳವಾರ (38) ಎಂದು ಗುರುತಿಸಲಾಗಿದೆ. ಬೈಕ್ ಸವಾರನಿಗೆ ಯಾವುದೇ ಗಾಯಗಳಾಗಿಲ್ಲ. ಮಸ್ಕಿಯಿಂದ ಲಿಂಗಸುಗೂರಿಗೆ ಬೈಕ್ ನಲ್ಲಿ ತೆರಳುವಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಲಾರಿ ಹರಿದು ಬೈಕ್ ಸಹಸವಾರ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top