karnataka

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಟೈಲರ್ ಅಂಗಡಿ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜ. 05. ವಿದ್ಯುತ್ ಸರ್ಕ್ಯೂಟ್ ನಿಂದಾಗಿ ಟೈಲರ್ ಅಂಗಡಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು  ಕರಕಲಾದ ಘಟನೆ ಚಾಮರಾಜನಗರ ಪಟ್ಟಣದ ಸಂತೇಮರಳ್ಳಿ ವೃತ್ತದ ಸಮೀಪವಿರುವ ಜಾಮಿಯಾ ಮಸೀದಿ ಬಳಿ ನಡೆದಿದೆ. ಅಂಗಡಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಿಂದಾಗಿ ಅಂಗಡಿಯಲ್ಲಿದ್ದ ಬಟ್ಟೆಗಳು, ಟೈಲರ್ ಮೆಷಿನ್ ಹಾಗೂ ಇತರೆ ವಸ್ತುಗಳು ಸುಟ್ಟು ಕರಕಲಾಗಿರುವುದಾಗಿ ತಿಳಿದುಬಂದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ➤ ಟೈಲರ್ ಅಂಗಡಿ ಸಂಪೂರ್ಣ ಭಸ್ಮ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹಳೆ ವೈಷಮ್ಯ- ಯುವಕನ ಕೊಲೆಯಲ್ಲಿ ಅಂತ್ಯ…!

(ನ್ಯೂಸ್ ಕಡಬ) newskadaba.com ಕಲಬುರಗಿ, ಜ. 05. ಹಳೆ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿಯ ಭವಾನಿ ನಗರದಲ್ಲಿ ವರದಿಯಾಗಿದೆ. ಕೊಲೆಯಾಗಿರುವ ಯುವಕನನ್ನು ಪ್ರಶಾಂತ್ ಕುಂಬಾರ (30) ಎಂದು ಗುರುತಿಸಲಾಗಿದೆ. ಹಲ್ಲೆ ಆರೋಪಿಯನ್ನು  ಮಂಜುನಾಥ ಸ್ವಾಮಿ ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದ್ದು, ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆ ವೈಷಮ್ಯ- ಯುವಕನ ಕೊಲೆಯಲ್ಲಿ ಅಂತ್ಯ…! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಹನ ಪಲ್ಟಿ ➤ ನಾಲ್ವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸವಣೂರು, ಜ. 05. ಶವಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದ ಕಾರಡಗಿ ರಸ್ತೆಯ ತಿರುವಿನಲ್ಲಿ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಚಾಲಕ ಮುಸ್ತಾಕ್ ಅಹಮದ್ ಚೀಲಪಟೇದ (27), ಲಾಲ್ ಸಾಬ್ ಬುಡ್ಡಿಮನಿ (62), ಮೆಹಬೂಸಾದ್ ಕುಂದಗೋಳ (52), ರಹಬ್ಬಾನಿ ಹವಾಲ್ದಾರ್ (52) ಎಂದು ಗುರುತಿಸಲಾಗಿದೆ. ಇವರು ಕುಂದಗೋಳ ತಾಲೂಕಿನ ಕಮಡೊಳ್ಳಿ ಸವಣೂರು ಮಾರ್ಗವಾಗಿ ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮಕ್ಕೆ

ವಾಹನ ಪಲ್ಟಿ ➤ ನಾಲ್ವರಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ  ➤ ಓರ್ವನ ಬಂಧನ..!!!                                  

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05. ವಿಧಾನಸೌಧದಲ್ಲಿ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಸುಮಾರು 10.50 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ  ಬೆಂಗಳೂರಿನಲ್ಲಿ ವರದಿಯಾಗಿದೆ. ವಿಧಾ‌ಸೌಧದ ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದ ಸಂದರ್ಭ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಓರ್ವ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದ. ಈತನ ಬಳಿ ಹಣದ ಮೂಲದ ಕುರಿತು ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ನೀಡದೇ ಇದ್ದ ಹಿನ್ನೆಲೆ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು,

ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ  ➤ ಓರ್ವನ ಬಂಧನ..!!!                                   Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಿರತೆ ದಾಳಿ ➤ ವ್ಯಕ್ತಿ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಭಟ್ಕಳ, ಜ. 05. ಚಿರತೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೋರ್ವ  ಗಾಯಗೊಂಡ ಘಟನೆ ಭಟ್ಕಳ ತಾಲೂಕಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಭಟ್ಕಳ ತಾಲೂಕಿನ ನೂಜ್ ಕೆಕ್ಕೋಡ ನಿವಾಸಿ ದುರ್ಗು ಮರಾಠಿ (37) ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯ ಜಗುಲಿಯಲ್ಲಿ ಮಲಗಿದ್ದ ವೇಳೆ ದಾಳಿ ನಡೆಸಿದ ಚಿರತೆಯು ಅವರ ಕೈಗೆ ಕಚ್ಚಿ ಗಾಯಗೊಳಿಸಿದೆ. ಇದರಿಂದ ವ್ಯಕ್ತ ಕಿರುಚಿಕೊಂಡಿದ್ದು, ಜನರು ಬರುತ್ತಿದ್ದಂತೆಯೇ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಆರ್‌ಎಫ್‌ಒ ಶರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ

ಚಿರತೆ ದಾಳಿ ➤ ವ್ಯಕ್ತಿ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಆರಂಭ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಜ.05.  ನಮ್ಮ ಮೆಟ್ರೋ ದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ನಗರದ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆಗಳನ್ನು ಆರಂಭಿಸಿಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ನಗರ ಪೊಲೀಸರ ಸಹಕಾರ ಪಡೆದಿರುವ ಬಿಎಂಆರ್‌ಸಿಎಲ್, ಪ್ರಾಯೋಗಿಕವಾಗಿ ನಾಲ್ಕು ಮೆಟ್ರೋ ನಿಲ್ದಾಣಗಳ ಪೈಕಿ ಮಹಾತ್ಮ ಗಾಂಧಿ (ಎಂ.ಜಿ) ರಸ್ತೆ ಹಾಗೂ ಕಬ್ಬನ್ ಪಾರ್ಕ್‌ ಮೆಟ್ರೋ ನಿಲ್ದಾಣಗಳಲ್ಲಿ ಕೌಂಟರ್ ಸ್ಥಾಪಿಸಿದೆ. ಈ ಕೌಂಟರ್‌ಗಳನ್ನು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಉದ್ಘಾಟಿಸಿದರು. ಈ ವೇಳೆ

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಆರಂಭ Read More »

ಕರ್ನಾಟಕ

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ  ➤ ಇಬ್ಬರ ಬಂಧನ, ಓರ್ವ ಪರಾರಿ…!!!                         

(ನ್ಯೂಸ್ ಕಡಬ) newskadaba.com ಉಡುಪಿ, ಜ. 05. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್ ವೊಂದಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಜಯಂತ್ ಸಾಲಿಯಾನ್ (46) ಹಾಗೂ ಹೆಬ್ರಿಯ ದಿನೇಶ್ ಎಸ್ (42) ಎಂದು ಗುರುತಿಸಲಾಗಿದೆ. ಈ ವೇಳೆ ಶೇಖರ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆ ಉಡುಪಿ ಉಪವಿಭಾಗದ ಪೊಲೀಸ್

ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ಆರೋಪ  ➤ ಇಬ್ಬರ ಬಂಧನ, ಓರ್ವ ಪರಾರಿ…!!!                          Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

250 ಪ್ರಕರಣದ ಬೇಧಿಸಿದ್ದ ಶ್ವಾನ ದಳದ ‘ರಾಮ್‌’ ಹೃದಯಾಘಾತದಿಂದ ಮೃತ್ಯು ➤ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

(ನ್ಯೂಸ್ ಕಡಬ) newskadaba.com ರಾಮನಗರ, ಜ. 05. ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಹೃದಯಾಘಾತದಿಂದ ಮೃತಪಟ್ಟ ಘಟನೆ ರಾಮನಗರದಲ್ಲಿ ವರದಿಯಾಗಿದೆ. ಫೆಬ್ರವರಿ 8, 2017 ರಂದು ಜನಿಸಿದ ರಾಮ್, ಸುಮಾರು 250 ಪ್ರಕರಣಗಳಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಡಾಬರ್ಮನ್ ಪಿನ್ಷರ್ ಆಗಿದ್ದ, ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು. ಇದರಿಂದಾಗಿಯೇ ಜಿಲ್ಲಾ ಪೊಲೀಸ್‌ ಘಟಕದಲ್ಲಿ

250 ಪ್ರಕರಣದ ಬೇಧಿಸಿದ್ದ ಶ್ವಾನ ದಳದ ‘ರಾಮ್‌’ ಹೃದಯಾಘಾತದಿಂದ ಮೃತ್ಯು ➤ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05.   ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನತೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಈ ನಡುವೆ ರಾಜ್ಯದಲ್ಲಿ ಕೋವಿಶೀಲಡ್ ಮತ್ತು ಕಾರ್ಬೆವ್ಯಾಕ್ಸ್‌ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ 6.87 ಲಕ್ಷ ಡೋಸ್ ಕೋವಾಕ್ಸಿನ್ ಲಭ್ಯವಿತ್ತು. ರಾಜ್ಯದ ಬಹುಪಾಲು ಜನರು ಕೋವಿಶೀಲ್ಡ್ ಅನ್ನು ತೆಗೆದುಕೊಂಡಿದ್ದರು. ಬೂಸ್ಟರ್ ಡೋಸ್ ಲಸಿಕೆ ಕುರಿತು ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ.

ಬೆಂಗಳೂರು: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ Read More »

ಕರಾವಳಿ

ಕಡಬ: ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ, ಸರಕಾರ ಹಣ ಕೊಡಬೇಕು ➤ ಸಚಿವ ಎಸ್.ಅಂಗಾರ…!!!                                        

(ನ್ಯೂಸ್ ಕಡಬ) newskadaba.com ಕಡಬ, ಡಿ. 05. ಕಾಮಗಾರಿಗಳ ಶಿಲಾನ್ಯಾಸಕ್ಕೆ ಆಗಮಿಸಿದ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಗ್ರಾಮಸ್ಥರು ಮನವಿ ಕೊಟ್ಟಾಗ ಸಚಿವರ ಪ್ರತಿಕ್ರಿಯೆ ಕಂಡು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಬಲ್ಯ ಗ್ರಾಮದಲ್ಲಿ ಸಂಭವಿಸಿದೆ. ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ. ಸರಕಾರ ಹಣ ಕೊಡಬೇಕು. ನೀವು ಮನವಿ ಕೊಡಿ, ಬಿಡಿ ಎಂದು ಶಾಸಕ ಅಂಗಾರ ಹೇಳಿದ್ದಾರೆ. ಇದರಿಂದ ಜನರು ಕೋಪಗೊಂಡು ಸ್ಥಳದಿಂದ ತೆರಳಿ ಸಚಿವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ಬಲ್ಯ ಗ್ರಾಮದ

ಕಡಬ: ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ, ಸರಕಾರ ಹಣ ಕೊಡಬೇಕು ➤ ಸಚಿವ ಎಸ್.ಅಂಗಾರ…!!!                                         Read More »

ಕರಾವಳಿ, ಕರ್ನಾಟಕ
Scroll to Top