ಬೆಂಗಳೂರು: 30 ಲಕ್ಷ ಬೂಸ್ಟರ್‌ ಡೋಸ್‌ಗಾಗಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 05.   ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಜನತೆಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ. ಆದರೆ, ಈ ನಡುವೆ ರಾಜ್ಯದಲ್ಲಿ ಕೋವಿಶೀಲಡ್ ಮತ್ತು ಕಾರ್ಬೆವ್ಯಾಕ್ಸ್‌ ಕೊರತೆ ಎದುರಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ 6.87 ಲಕ್ಷ ಡೋಸ್ ಕೋವಾಕ್ಸಿನ್ ಲಭ್ಯವಿತ್ತು. ರಾಜ್ಯದ ಬಹುಪಾಲು ಜನರು ಕೋವಿಶೀಲ್ಡ್ ಅನ್ನು ತೆಗೆದುಕೊಂಡಿದ್ದರು. ಬೂಸ್ಟರ್ ಡೋಸ್ ಲಸಿಕೆ ಕುರಿತು ಜನರಲ್ಲಿ ಮಿಶ್ರ ಪ್ರತಿಕ್ರಿಯೆ ಇದೆ. ಕೆಲವರು ಬೂಸ್ಟರ್ ಡೋಸ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ಕೋವಿಶೀಲ್ಟ್ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳಲು ಕೆಲವರು ಕಾಯುತ್ತಿದ್ದರೆ, ಇನ್ನೂ ಕೆಲವರು ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಧಾವಿಸುತ್ತಿದ್ದಾರೆ. ಕೋವಿಶೀಲ್ಡ್ ಅನ್ನು ಆಯ್ಕೆ ಮಾಡಿದವರಿಗೆ ಅದೇ ಲಸಿಕೆ ಅಥವಾ ಹೆಟೆರೊಲಾಜಸ್ ಕಾರ್ಬೆವಾಕ್ಸ್ ನೀಡಲಾಗುತ್ತದೆ. ಆದಾಗ್ಯೂ, ಹೆಚ್ಚಿನ ಆರೋಗ್ಯ ಕೇಂದ್ರಗಳಲ್ಲಿ ಕೋವಿಶೀಲ್ಡ್ ಮತ್ತು ಕಾರ್ಬೆವ್ಯಾಕ್ಸ್‌ ಎರಡೂ ಲಭ್ಯವಿಲ್ಲದಂತಾಗಿದೆ. ನಾವು 25 ಲಕ್ಷ ಕೋವಿಶೀಲ್ಡ್ ಮತ್ತು 5 ಲಕ್ಷ ಕಾರ್ಬೆವಾಕ್ಸ್ ಡೋಸ್‌ಗಳಿಗಾಗಿ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ. ಈ ವಾರಾಂತ್ಯದಲ್ಲಿ ವಿತರಣೆ ಮಾಡುವ ನಿರೀಕ್ಷೆಗಳಿವೆ. ನಮ್ಮಲ್ಲಿ 6.87 ಲಕ್ಷ ಕೋವಾಕ್ಸಿನ್ ಲಸಿಕೆಯಿದೆ ಎಂದು ತಿಳಿಸಿದ್ದಾರೆ.

Also Read  ದೀಪಕ್ ರಾವ್ ಹತ್ಯೆಗೆ ಬಿಜೆಪಿ ಕಾರ್ಪೋರೇಟರ್ ಸುಪಾರಿ ► ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ

.

error: Content is protected !!
Scroll to Top