ಹಳೆ ವೈಷಮ್ಯ- ಯುವಕನ ಕೊಲೆಯಲ್ಲಿ ಅಂತ್ಯ…!

(ನ್ಯೂಸ್ ಕಡಬ) newskadaba.com ಕಲಬುರಗಿ, ಜ. 05. ಹಳೆ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಕಲಬುರಗಿಯ ಭವಾನಿ ನಗರದಲ್ಲಿ ವರದಿಯಾಗಿದೆ.

ಕೊಲೆಯಾಗಿರುವ ಯುವಕನನ್ನು ಪ್ರಶಾಂತ್ ಕುಂಬಾರ (30) ಎಂದು ಗುರುತಿಸಲಾಗಿದೆ. ಹಲ್ಲೆ ಆರೋಪಿಯನ್ನು  ಮಂಜುನಾಥ ಸ್ವಾಮಿ ಎಂದು ಗುರುತಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದ್ದು, ಈ ಬಗ್ಗೆ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top