ರೈಲಿನಲ್ಲಿ ಕಳೆದುಹೋಗಿದ್ದ 8.57 ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್ ಕೊನೆಗೂ ಪತ್ತೆ
(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.01. ಮುಂಬೈಯಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಕಳೆದುಹೋಗಿದ್ದ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್ ನಗರದ ಕುಲಶೇಖರದಲ್ಲಿ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ರವೀಂದ್ರ ಎಂ.ಶೆಟ್ಟಿ (74) ಮತ್ತು ಅವರ ಪತ್ನಿ ಶಶಿಕಲಾ ಶೆಟ್ಟಿ ಅವರು ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದಾಗ ಸುರತ್ಕಲ್‌ನಿಂದ ಮಂಗಳೂರು ನಡುವೆ ಅವರ ಟ್ರಾಲಿ ಬ್ಯಾಗ್ ಕಳೆದು ಹೋಗಿತ್ತು. ಕಳವಾಗಿರುವ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.
ರೈಲಿನಲ್ಲಿ ಕಳೆದುಹೋಗಿದ್ದ 8.57 ಲಕ್ಷ ಮೌಲ್ಯದ ಚಿನ್ನವಿದ್ದ ಬ್ಯಾಗ್ ಕೊನೆಗೂ ಪತ್ತೆ Read More »
ಕರಾವಳಿ
