(ನ್ಯೂಸ್ ಕಡಬ)newskadaba.com ಬೀದರ್, ಫೆ.28. ಬ್ರಿಮ್ಸ್ ಹಾಸ್ಟೆಲ್ ಮೇಲಿಂದ ಹಾರಿ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಶ್ರೀರಾಮ್(22) ಎಂದು ಗುರುತಿಸಲಾಗಿದೆ.

ಎಂಬಿಬಿಎಸ್ ಪ್ರಾಕ್ಟಿಕಲ್ ಎಕ್ಸಾಂ ಭಯದಲ್ಲಿ ಶ್ರೀರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳಲಾಗುತ್ತಿದೆ. ಆದರೆ, ಮತ್ತೊಂದೆಡೆ ತಂದೆ ಸಾವಿನಿಂದ ಶ್ರೀರಾಮ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು ಎಂದು ಹೇಳಲಾಗುತ್ತಿದೆ. ಶ್ರೀರಾಮ್ ಸಾವಿಗೆ ಪೊಲೀಸರ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ ಎಂದು ವರದಿ ಪ್ರಕಟಣೆ ತಿಳಿಸಿದೆ.









