karnataka

ವಿದ್ಯುತ್ ತಗುಲಿ ತಾಯಿ-ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ವಿದ್ಯುತ್ ತಗುಲಿ ತಾಯಿ ಮತ್ತು ಆಕೆಯ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಹೊರವಲಯ ಹೊಸ ಕೋಟೆಯಲ್ಲಿ ನಡೆದಿದೆ. ಮೃತರನ್ನು ಜ್ಯೋತಿ (25) ಮತ್ತು ಆಕೆಯ ಮಗ ಜಯಾನಂದ್ ಎಂದು ಗುರುತಿಸಲಾಗಿದೆ. ಗಾರೆ ಕೆಲಸಕ್ಕೆಂದು ಕುಟುಂಬ ಸಮೇತರಾಗಿ ಬಂದಿದ್ದ ಜ್ಯೋತಿ ಹೊಸಕೋಟೆ ತಾಲೂಕಿನ ಕನಕ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಜ್ಯೋತಿ ಅವರು ಭಾನುವಾರ ಮಧ್ಯಾಹ್ನ ಶೌಚಾಲಯದಲ್ಲಿ ನೀರು ಕಾಯಿಸಲು ಬಕೆಟ್ ನಲ್ಲಿ ಹೀಟರ್ ಹಾಕಿದ್ದಾಗ ಶೌಚಾಲಯಕ್ಕೆ ಬಾಲಕ […]

ವಿದ್ಯುತ್ ತಗುಲಿ ತಾಯಿ-ಮಗು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆ ➤ ಕಡಬ ಸರಕಾರಿ ಪ್ರೌಢಶಾಲೆಯ ಚರಿಶ್ಮಾ ರಾಷ್ಟ್ರಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 27. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಫೆ. 20ರಂದು ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 17 ರ ವಯೋಮಾನದ ಬಾಲಕಿಯರ ವಿಭಾಗದ1500 ಮೀ. ಓಟದ ಸ್ಪರ್ಧೆಯಲ್ಲಿ ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಚರಿಶ್ಮಾ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ. ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಲೋಕೇಶ್ ತಂಟೆಪ್ಪಾಡಿ ಅವರು ತರಬೇತಿಯನ್ನು ನೀಡಿರುತ್ತಾರೆ. ಇವರು ಮರ್ಧಾಳ ಗ್ರಾಮದ

ರಾಜ್ಯಮಟ್ಟದ ಅಥ್ಲೆಟಿಕ್ ಸ್ಪರ್ಧೆ ➤ ಕಡಬ ಸರಕಾರಿ ಪ್ರೌಢಶಾಲೆಯ ಚರಿಶ್ಮಾ ರಾಷ್ಟ್ರಮಟ್ಟಕ್ಕೆ ಆಯ್ಕೆ Read More »

ಕರಾವಳಿ, ಕರ್ನಾಟಕ

ಕೇರಳದ ‘ಕೊಂಬನ್ ಟ್ರಾವೆಲ್ಸ್’ ಆಟ ಇನ್ಮುಂದೆ ಕರ್ನಾಟಕದಲ್ಲಿ ಶುರು

(ನ್ಯೂಸ್ ಕಡಬ) newskadaba.com ಕೇರಳ, ಫೆ.25. ಬಸ್ ಕ್ಷೇತ್ರದಲ್ಲಿ ಯುವ ಜನತೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ಕೇರಳದ ‘ಕೊಂಬನ್’ ಟ್ರಾವೆಲ್ಸ್ ಇನ್ಮುಂದೆ ಕರ್ನಾಟಕದಲ್ಲಿ ತನ್ನ ಸೇವೆಯನ್ನು ಮುಂದುವರಿಸಲಿದ್ದು, ಇದು ಕರ್ನಾಟಕದ ಬಸ್ ಪ್ರೇಮಿಗಳಲ್ಲಿ ಸಂತಸವನ್ನು ಉಂಟುಮಾಡಿದೆ. ಬಸ್ಸಿನ ಮೂಲ ದರಕ್ಕಿಂತಲೂ ಹೆಚ್ಚಿನ ಹಣ ವ್ಯಯಿಸಿ ಸೌಂಡ್ಸ್ & ಲೈಟಿಂಗ್ಸ್ ನೊಂದಿಗೆ ತನ್ನದೇ ವಿಶಿಷ್ಟ ಶೈಲಿಯ ಪೈಂಟಿಂಗ್ ಮೂಲಕ ಯುವ ಜನತೆಯಲ್ಲಿ ಬಸ್ ಬಗ್ಗೆ ಹೊಸ ಕಲ್ಪನೆಯನ್ನು ಮೂಡಿಸಿದ್ದ ಕೊಂಬನ್ ಟ್ರಾವೆಲ್ಸ್ ಹುಟ್ಟಿಕೊಂಡಿರುವುದೇ ಒಂದು ರೋಚಕ ಕಥೆ. ಆನೆಯನ್ನು ಖರೀದಿಸಲೆಂದು

ಕೇರಳದ ‘ಕೊಂಬನ್ ಟ್ರಾವೆಲ್ಸ್’ ಆಟ ಇನ್ಮುಂದೆ ಕರ್ನಾಟಕದಲ್ಲಿ ಶುರು Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬೈಕ್ ಸವಾರನ ಅಡ್ಡಗಟ್ಟಿ ಕತ್ತು ಕೊಯ್ದು ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.23. ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಪೆಂಟರ್ ಅಡ್ಡ ಗಟ್ಟಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಬಳಿ ನಡೆದಿದೆ. ಮಂಗನಹಳ್ಳಿ ನಿವಾಸಿ ದಿನೇಶ್(46) ಹತ್ಯೆಯಾದವರು ಎಂದು ಹೇಳಲಾಗಿದೆ. ನಿರ್ಜನ ಪ್ರದೇಶದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಿನೇಶ್ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಖಾಲಿ ಜಾಗದಲ್ಲಿ ಲಾಂಗ್ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರನ ಅಡ್ಡಗಟ್ಟಿ ಕತ್ತು ಕೊಯ್ದು ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ      ➤  ಗ್ಲೇಡಿಸ್ ಪಾಯ್ಸ್ ಗೆ ಪ್ರಥಮ ಸ್ಥಾನ

(ನ್ಯೂಸ್ ಕಡಬ)newskadaba.com  ಬಂಟ್ವಾಳ, ಫೆ.22. ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಗ್ಲೇಡಿಸ್ ಪಾಯ್ಸ್ ಅವರು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ನಡೆದ 43ನೇ ರಾಷ್ಟೀಯ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. 65+ ವಿಭಾಗದ ತ್ರಿವಿಧ ಜಿಗಿತ, 800 ಮೀ. ಓಟ, 80ಮೀ. ಅಡೆತಡೆ ಓಟ, ಹಾಗೂ 4*100 ಮೀ. ರಿಲೇಯಲ್ಲಿ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.  

ಬಂಟ್ವಾಳ: ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ      ➤  ಗ್ಲೇಡಿಸ್ ಪಾಯ್ಸ್ ಗೆ ಪ್ರಥಮ ಸ್ಥಾನ Read More »

ಕರಾವಳಿ, ಕ್ರೀಡಾ ನ್ಯೂಸ್

ಮಂಗಳೂರು: ವಿವಿಧೆಡೆ ಮದ್ಯ ಮಾರಾಟ ನಿಷೇಧ !

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.22. ವಿವಿಧ ತಾಲೂಕುಗಳ ಗ್ರಾಮ ಪಂಚಾಯತ್‍ಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ, ಮತದಾನದ ದಿನದಂದು ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುದು-1ರಿಂದ 10 ಕ್ಷೇತ್ರಗಳು, ಬಂಟ್ವಾಳ ತಾಲೂಕಿನ 43-ಅನಂತಾಡಿಯ ಗ್ರಾಮ ಪಂಚಾಯತ್‍ನ 2-ಅನಂತಾಡಿ, ಕಡಬ ತಾಲೂಕಿನ ಕಟ್ರುಪಾಡಿ ಗ್ರಾಮ ಪಂಚಾಯತ್‍ನ 1-ಬಲ್ಯ ಹಾಗೂ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ 4-ಆರ್ಯಾಪುವಿನಲ್ಲಿ ಫೆಬ್ರವರಿ 24 ಮತ್ತು ಫೆಬ್ರವರಿ 25ರವರೆಗೆ

ಮಂಗಳೂರು: ವಿವಿಧೆಡೆ ಮದ್ಯ ಮಾರಾಟ ನಿಷೇಧ ! Read More »

ಕರಾವಳಿ, ಕರ್ನಾಟಕ

ಆಸ್ಪತ್ರೆಗಳಲ್ಲಿ ಸರದಿ ಸಾಲು, ಅನಗತ್ಯ ಕಾಯುವಿಕೆಗೆ ಬ್ರೇಕ್ !     ➤ ಸಚಿವ ಡಾ.ಕೆ. ಸುಧಾಕರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.21. ಆಸ್ಪತ್ರೆಗಳಲ್ಲಿ ಸರದಿ ಸಾಲು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅನಗತ್ಯ ಕಾಯುವಿಕೆ ತಪ್ಪಿಸಲು ಕ್ಯೂಆರ್ ಕೋಡ್ ಮತ್ತು ಸ್ಕಿಪ್ ದಿ ಕ್ಯೂ ಪರಿಚಯಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ಯೂಆರ್ ಕೋಡ್ ಮತ್ತು ಸ್ಕಿಪ್ ದಿ ಕ್ಯೂ ಪರಿಚಯಿಸಿರುವುದರಿಂದ ರೋಗಿಗಳು ಸಾಲಿನಲ್ಲಿ ನಿಲ್ಲಬೇಕಿಲ್ಲ. ಆಸ್ಪತ್ರೆಗೆ ಭೇಟಿ ನೀಡಿದ ಕೂಡಲೇ ನೆರವು ನೀಡಲು ಈಗಾಗಲೇ 18 ಜಿಲ್ಲಾ ಆಸ್ಪತ್ರೆಗಳಲ್ಲಿ ಹೆಲ್ತ್ ಡೆಸ್ಕ್

ಆಸ್ಪತ್ರೆಗಳಲ್ಲಿ ಸರದಿ ಸಾಲು, ಅನಗತ್ಯ ಕಾಯುವಿಕೆಗೆ ಬ್ರೇಕ್ !     ➤ ಸಚಿವ ಡಾ.ಕೆ. ಸುಧಾಕರ್ Read More »

ಕರ್ನಾಟಕ

ಬೆಳ್ಳಂಬೆಳಗ್ಗೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಯಾದಗಿರಿ, ಫೆ.18. ಯಾದಗಿರಿ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಬೆಳ್ಳಂಬೆಳಗ್ಗೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ವಿಷ ಸೇವಿಸಿ ಸುವರ್ಣ (20) ಹಾಗೂ ಈಶಪ್ಪ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುವರ್ಣ ಹಾಗೂ ಈಶಪ್ಪ ಕಳೆದ 5-6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಸುವರ್ಣಳನ್ನು ಬೇರೆ ಯುವಕನ ಜೊತೆಗೆ ವಿವಾಹ ಮಾಡಿದ್ದರು. ಬಳಿಕ

ಬೆಳ್ಳಂಬೆಳಗ್ಗೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ Read More »

ಕರ್ನಾಟಕ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಯಕ್ಷಗಾನದ ಹೆಸರಾಂತ ಭಾಗವತ, ಕಂಚಿನ ಕಂಠದ ‘ಬಲಿಪ ಶೈಲಿ’ಯ ಹಾಡುಗಾರಿಕೆಗೆ ಖ್ಯಾತವಾಗಿರುವ ಬಲಿಪ ನಾರಾಯಣ ಭಾಗವತ ಅವರು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರೂರು ನೂಯಿಯಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ ದಂಪತಿಯ ಪುತ್ರರಾದ ಅವರು, ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ್ದು, 13ನೇ ವಯಸ್ಸಿಗೆ ಯಕ್ಷಗಾನ

ಯಕ್ಷಗಾನದ ಹೆಸರಾಂತ ಭಾಗವತ ಬಲಿಪ ನಾರಾಯಣ ನಿಧನ !! Read More »

ಕರಾವಳಿ

   ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

(ನ್ಯೂಸ್ ಕಡಬ)newskadaba.com ಕೊಪ್ಪಳ,ಫೆ.07.  ಸರ್ಕಾರದ ಸುತ್ತೋಲೆಯಂತೆ ಶಾಲಾ ಸಮವಸ್ತ್ರಗಳನ್ನು ಸಿದ್ಧ(ಹೊಲಿಸಿ) ಉಡುಪು ಕೊಡಬೇಕೆಂಬ ನಿಯಮವಿದ್ದರೂ ಬಟ್ಟೆನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ ಎಂದು ವರದಿಯಾಗಿದೆ. ತಾಲೂಕಿನ ಕಿನ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ಪೂಜಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ. ನಿಯಮಾನುಸಾರ ಸಮವಸ್ತ್ರಗಳನ್ನು ಸಿದ್ಧ ಮಾಡಿ ಕೊಡಬೇಕು. ಆದರೂ ಕೊಡುತ್ತಿಲ್ಲ. ಹೀಗಾಗಿ ಬಟ್ಟೆಯನ್ನು ಮರಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಲಿಖಿತವಾಗಿ ಮುಖ್ಯಶಿಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾನೆ

   ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು! Read More »

ಕರ್ನಾಟಕ
Scroll to Top