karnataka

ಹೊಟ್ಟೆ ನೋವೆಂದು ಆಸ್ಪತ್ರೆಯಲ್ಲಿ ದಾಖಲಾದ ಕಂದಮ್ಮ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಹೊಟ್ಟೆ ನೋವು ಅಂತ ಕರೆದುಕೊಂಡು ಬಂದಿದ್ದ ಮಗು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿದ ಪೋಷಕರು, 6 ತಿಂಗಳ ಮಗುವಿಗೆ ಒವರ್ ಡೋಸ್ ಮಾಡಿ ವೈದ್ಯರು ಸಾಯಿಸಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ. ವೇಣುಗೋಪಾಲ್ ಪ್ರಿಯಾಂಕ ಎಂಬವರ ಮಗುವಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಒವಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕಳೆದ 15 ದಿನಗಳಿಂದ ಹೊಟ್ಟೆ ನೋವಿಗೆ ಚಿಕಿತ್ಸೆ ವೈದ್ಯರು ನೀಡುತ್ತಿದ್ದರು.

ಹೊಟ್ಟೆ ನೋವೆಂದು ಆಸ್ಪತ್ರೆಯಲ್ಲಿ ದಾಖಲಾದ ಕಂದಮ್ಮ ಮೃತ್ಯು Read More »

ಕರ್ನಾಟಕ

ಚುನಾವಣಾ ಹೊಸ್ತಿಲಲ್ಲೇ ‘ದಲಿತರ’ ರೇಷನ್ ಕಾರ್ಡ್ ಮಾಹಿತಿ ಸಂಗ್ರಹಿಸಿದ ಸರಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಚುನಾವಣಾ ಹೊಸ್ತಿಲಲ್ಲೇ ಅನ್ನಭಾಗ್ಯ ಯೋಜನೆಯಡಿ ರಾಜ್ಯಾದ್ಯಂತ ಪಡಿತರ ಪಡೆಯುತ್ತಿರುವ SC ಮತ್ತು ST ಫಲಾನುಭವಿಗಳು ಹೊಂದಿರುವ ಪಡಿತರ ಚೀಟಿ ಬಗ್ಗೆ ರಾಜ್ಯ ಸರಕಾರ ಮಾಹಿತಿ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯಡಿ ನಿಗದಿತ ಬಜೆಟ್ ಅನುದಾನ ಹಂಚಿಕೆ ಹೆಸರಿನಲ್ಲಿ ರಾಜ್ಯ ಸರಕಾರ ಈ ರೀತಿ ಮೊದಲ ಬಾರಿಗೆ ರೇಷನ್ ಕಾರ್ಡ್‍ಗಳ ಬಗ್ಗೆ ಮಾಹಿತಿ ಕೇಳಿದೆ. ಅಲ್ಲದೆ, ಹಿಂದೊಮ್ಮೆ ರೇಷನ್ ಕಾರ್ಡ್‍ಗೆ ಆಧಾರ್

ಚುನಾವಣಾ ಹೊಸ್ತಿಲಲ್ಲೇ ‘ದಲಿತರ’ ರೇಷನ್ ಕಾರ್ಡ್ ಮಾಹಿತಿ ಸಂಗ್ರಹಿಸಿದ ಸರಕಾರ Read More »

ಕರ್ನಾಟಕ

ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಮಾ. 09. ಯುವಕನೋರ್ವನಿಗೆ ಪೋನ್ ನಲ್ಲಿ ಮಾತನಾಡುವಾಗ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮೊಹಮ್ಮದ್ ಅನ್ವರ್ ಎಂಬವರು ಕೇಸ್ ದಾಖಲಿಸಿದ್ದಾರೆ. ಕಂಬಳಬೆಟ್ಟು ದರ್ಗಾದ ಬಳಿ ಅನ್ವರ್ ಫೋನ್ ನಲ್ಲಿ ಮಾತನಾಡುವಾಗ ದ್ವಿಚಕ್ರವಾಹನದಲ್ಲಿ ಬಂದ ಸಿನಾನ್, ಸಿಯಾಬ್, ರಾಬಿ ಎಂಬವರು ಅನ್ವರ್ ಗೆ ಅವಾಚ್ಯವಾಗಿ‌ ನಿಂದಿಸಿದ್ದಲ್ಲದೇ ಬಳಿಕ ಅಲ್ಲೆ ಇದ್ದ ಕಬ್ಬಿಣದ ರಾಡ್ ನಿಂದ ಕತ್ತು ಹಾಗೂ ಮೊಣಕೈಗೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದೆನ್ನಲಾಗಿದೆ.

ವಿಟ್ಲ: ಕಂಬಳಬೆಟ್ಟು ಬಳಿ ಯುವಕನಿಗೆ ಹಲ್ಲೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಚೆಕ್‌ ಅಮಾನ್ಯ     ➤ ಆರೋಪಿಗೆ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com  ಉಡುಪಿ, ಮಾ.09. ಡಾ| ವಾದಿರಾಜ್‌ ಪುರಾಣಿಕ್‌ 8 ಲಕ್ಷ ರೂ. ಹಣವನ್ನು ಉದ್ಯಾವರದ ರೋಹಿತ್‌ ಎಸ್‌. ಹೆಗ್ಡೆ ಅವರಿಂದ ಸಾಲವಾಗಿ ಪಡೆದು ಅದಕ್ಕೆ ನೀಡಿದ್ದ ಚೆಕ್‌ಗಳು ಅಮಾನ್ಯಗೊಂಡ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ. ಸಾಲದ ಬಗ್ಗೆ ಆರೋಪಿಯು ದೂರುದಾರರಿಗೆ ನೀಡಿದ ಚೆಕ್‌ಗಳು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ದೂರುದಾರರು ಉಡುಪಿಯ 2ನೇ ಅವರ ಸಿವಿಲ್‌ ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ವಿನಾಯಕ ವಾಂಕಂಡ ಅವರು ಆರೋಪಿಗೆ ಜೈಲು ಶಿಕ್ಷೆ ಹಾಗೂ 10

ಉಡುಪಿ: ಚೆಕ್‌ ಅಮಾನ್ಯ     ➤ ಆರೋಪಿಗೆ ಜೈಲು ಶಿಕ್ಷೆ Read More »

ಕರಾವಳಿ, ಕರ್ನಾಟಕ

‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.09. ಆಧಾರ್ ಕಾರ್ಡ್ ನಮ್ಮಲ್ಲಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಅದಿಲ್ಲದೇ ಬಹಳಷ್ಟು ಕೆಲಸ ನಡೆಯೋದೇ ಇಲ್ಲ. ಅಲ್ಲದೇ, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳು ಸಹ ಪ್ರತಿಯೊಬ್ಬರಿಗೂ ಆಧಾರ್ ಜೊತೆಗೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದ ಜನತೆಗೆ ಶುಭ ಸುದ್ದಿ ನೀಡಲು ಹೊರಟಿದ್ದು, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!! Read More »

ಕರ್ನಾಟಕ

ಇಂದಿನಿಂದ ದ್ವಿತೀಯ ಪರೀಕ್ಷೆ ➤ ಕಟ್ಟುನಿಟ್ಟಿನ ಕಣ್ಗಾವಲು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಆರಂಭವಾಗುತ್ತಿದ್ದು, ಮಾ.29ರವರೆಗೆ ಮುಂದುವರಿಯಲಿದೆ. ರಾಜ್ಯದಲ್ಲಿ ಈ ಬಾರಿ 7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,109 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದೆ. 7,26,195 ವಿದ್ಯಾರ್ಥಿಗಳಲ್ಲಿ 3,63,698 ಬಾಲಕರು ಮತ್ತು 3,62,497 ಬಾಲಕಿಯರು ಸೇರಿದ್ದಾರೆ. ಒಟ್ಟು 5,716 ಕಾಲೇಜುಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರವಹಿಸಲು 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ,

ಇಂದಿನಿಂದ ದ್ವಿತೀಯ ಪರೀಕ್ಷೆ ➤ ಕಟ್ಟುನಿಟ್ಟಿನ ಕಣ್ಗಾವಲು Read More »

ಕರಾವಳಿ, ಕರ್ನಾಟಕ

ಉಳ್ಳಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ    ➤ ಕಿಂಗ್ ಪಿನ್ ಮಹಿಳೆಯ ಬಂಧನ

(ನ್ಯೂಸ್ ಕಡಬ)newskadaba.com  ಉಳ್ಳಾಲ, ಮಾ.09. ಉಳ್ಳಾಲ ತಾಲೂಕಿನ ಪಂಡಿತ್  ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ಮಾ. 07 ರ ರಾತ್ರಿ ದಾಳಿ ನಡೆಸಿ ಕಿಂಗ್ ಪಿನ್ ಮಹಿಳೆಯನ್ನ ಬಂಧಿಸಿದ್ದು ,ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾನೆ. ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ, ಪಿಂಪ್ ರುಕಿಯಾ (50)ಬಂಧಿತ ಆರೋಪಿ. ಮತ್ತೋರ್ವ ಪ್ರಮುಖ ಆರೋಪಿ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ.  

ಉಳ್ಳಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ    ➤ ಕಿಂಗ್ ಪಿನ್ ಮಹಿಳೆಯ ಬಂಧನ Read More »

ಕರಾವಳಿ

ಮಂಗಳೂರು ವಿವಿ MBA ಪರೀಕ್ಷೆ    ➤ ಅವಿಷ್ಮಾ ಆಳ್ವಾರಿಗೆ ಪ್ರಥಮ ರ್ಯಾಂಕ್

(ನ್ಯೂಸ್ ಕಡಬ)newskadaba.com   ಮಂಗಳೂರು, ಮಾ.09. ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಪರೀಕ್ಷೆಯಲ್ಲಿ ಮಂಗಳೂರು ಮನೇಲ್ ಶ್ರೀನಿವಾಸ್ ನಾಯಕ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ವಿದ್ಯಾರ್ಥಿನಿಯಾಗಿರುವ ಆವಿಷ್ಮಾ ಆಳ್ವಾ ಬಿ. ಅವರು ಪ್ರಥಮ ರ್ಯಾಂಕ್  ಪಡೆದುಕೊಂಡಿದ್ದಾರೆ. ಆವಿಷ್ಮಾ ಆಳ್ವಾ ಬಿ. ಅವರು ಶಾಲಾ ಮತ್ತು ಪಿಯುಸಿ ವಿದ್ಯಾಭ್ಯಾಸವನ್ನು ಪುತ್ತೂರಿನ ವಿವೇಕಾನಂದ ಸಂಸ್ಥೆಯಲ್ಲಿ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.97% ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.

ಮಂಗಳೂರು ವಿವಿ MBA ಪರೀಕ್ಷೆ    ➤ ಅವಿಷ್ಮಾ ಆಳ್ವಾರಿಗೆ ಪ್ರಥಮ ರ್ಯಾಂಕ್ Read More »

ಕರಾವಳಿ
Theft, crime, Robbery

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮಾ. 09. ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. ಒಟ್ಟು 3,11,550 ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದ್ದು, ಸಣ್ಣ ಪ್ಲಾಸಿಕ್ ಬಾಕ್ಸ್ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ,

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬಾಲಿವುಡ್ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್  ವಿಧಿವಶ

(ನ್ಯೂಸ್ ಕಡಬ)newskadaba.com  ನವದೆಹಲಿ, ಮಾ.09. ಬಾಲಿವುಡ್‌ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್(66) ಮುಂಬೈನಲ್ಲಿ ನಿಧನರಾದರು ಎಂದು ವರದಿ ತಿಳಿಸಿದೆ. ಸತೀಶ್ ಕೌಶಿಕ್ ನಿಧನವನ್ನು ಹಿರಿಯ ನಟ ಅನುಪಮ್ ಖೇರ್ ಟ್ವಿಟರ್‌ನಲ್ಲಿ ಖಚಿತಪಡಿಸಿದ್ದಾರೆ. ನಟ, ಹಾಸ್ಯನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಖ್ಯಾತಿಗಳಿಸಿದ್ದ ಅವರು ಗುರುಗ್ರಾಮ್‌ ನಲ್ಲಿ ಆಪ್ತರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.  

ಬಾಲಿವುಡ್ ಹಿರಿಯ ನಟ ಮತ್ತು ನಿರ್ದೇಶಕ ಸತೀಶ್ ಕೌಶಿಕ್  ವಿಧಿವಶ Read More »

ರಾಷ್ಟ್ರೀಯ ನ್ಯೂಸ್
Scroll to Top