karnataka

ಪುತ್ತೂರು: ಎಮ್ಮೆ ತಿವಿದು ಯುವಕನೋರ್ವ ಮೃತ್ಯು !

(ನ್ಯೂಸ್ ಕಡಬ)newskadaba.com  ಪುತ್ತೂರು, ಮಾ.10. ಎಮ್ಮೆ ತಿವಿದು ಯುವಕನೋರ್ವ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.  ಚಿತ್ರದುರ್ಗದ ನಿವಾಸಿ ಸಾದಿಕ್ (22) ಮೃತ ಯುವಕ. ಹಗ್ಗದಿಂದ ತಪ್ಪಿಸಿ ಓಡಿಹೋದ ಎಮ್ಮೆಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ ತಿವಿದಿದೆ. ಪುತ್ತೂರಿನಲ್ಲಿ ಕಸಾಯಿಖಾನೆಗೆ ತಂದ ಎಮ್ಮೆಯನ್ನು ಇಳಿಸುತ್ತಿದ್ದಾಗ ಅದು ಹಗ್ಗ ಮುರಿದು ಓಡಿ ಹೋಗಿದೆ. ಎಮ್ಮೆಯನ್ನು ಹಿಡಿಯಲು ಹೋದ ಸಾದಿಕ್​ಗೆ ಕೊಂಬಿನಿಂದ ತಿವಿದಿದೆ. ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್​ ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ […]

ಪುತ್ತೂರು: ಎಮ್ಮೆ ತಿವಿದು ಯುವಕನೋರ್ವ ಮೃತ್ಯು ! Read More »

ಕರಾವಳಿ, ಕ್ರೈಮ್ ನ್ಯೂಸ್

ನವವಧುವನ್ನು ಟ್ರಾಫಿಕ್ ನಲ್ಲೇ ಬಿಟ್ಟು ವರ ಪರಾರಿ..!   

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ವಧುವನ್ನು ಭಾರೀ ಟ್ರಾಫಿಕ್‌ ಮಧ್ಯೆ ಬಿಟ್ಟು ವರ ಪರಾರಿಯಾದ ಘಟನೆ ಮಹದೇವಪುರ ಟೆಕ್‌ ಕಾರಿಡಾರ್‌ ಸಮೀಪ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಜಾರ್ಜ್ ಎಂಬಾತ ವಿವಾಹವಾದ ಮರು ದಿನವೇ ಕಾರಿನಲ್ಲಿ ಪತ್ನಿ ಜೊತೆ ಚರ್ಚ್‌ಗೆ ತೆರಳುತ್ತಿದ್ದ. ದಂಪತಿಗಳಿಬ್ಬರು ಟ್ರಾಫಿಕ್‌ ಮಧ್ಯೆ ಇರುವಾಗ ವರ ವಧುವನ್ನು ಟ್ರಾಫಿಕ್ ನಲ್ಲಿ ಬಿಟ್ಟು ಪರಾರಿಯಾಗಿದ್ದ. ಕಾರಿನಲ್ಲಿ ಹೋಗುತ್ತಿದ್ದಂತೆ ವರನ ಮೊಬೈಲ್‌ಗೆ ಅನೈತಿಕ ಸಂಬಂಧ ಹೊಂದಿದ ಯುವತಿಯ ಮೆಸೆಜ್‌ ಬಂದಿದ್ದು, ಆಕೆ ಸಂದೇಶದಲ್ಲಿ ಪೋಟೋವನ್ನು ಕೂಡ

ನವವಧುವನ್ನು ಟ್ರಾಫಿಕ್ ನಲ್ಲೇ ಬಿಟ್ಟು ವರ ಪರಾರಿ..!    Read More »

ಕರ್ನಾಟಕ

ರೈಸ್ ಪುಲ್ಲರ್ ಹಗರಣ ➤ 8 ಮಂದಿ ಬಂಧನ​       

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಸಾರ್ವಜನಿಕರಿಗೆ ರೈಸ್ ಪುಲ್ಲರ್ ಲೋಹದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ 8 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಲೋಹದ ಪಾತ್ರೆಯಲ್ಲಿ ಏರೋಸ್ಪೇಸ್ ಸಂಸ್ಥೆಗಳು ಬಳಕೆ ಮಾಡುವ ತಾಮ್ರದ ಇರಿಡಿಯಮ್ ಲೋಹ ಇದೆ. ಇಂತಹ ಪಾತ್ರೆಗೆ ವಿಶೇಷವಾದ ಶಕ್ತಿ ಇದೆ. ಇದನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಕೋಟ್ಯಾಂತರ ರೂಪಾಯಿ ದುಡ್ಡು ಮಾಡಬಹುದು, ಕಡಿಮೆ ಬೆಲೆ ನಿಮಗೆ ಮಾರಾಟ ಮಾಡುತ್ತೇವೆ ಎಂದು ಒಂದಷ್ಟು ಖದೀಮರ ತಂಡ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುತ್ತಿತ್ತು.

ರೈಸ್ ಪುಲ್ಲರ್ ಹಗರಣ ➤ 8 ಮಂದಿ ಬಂಧನ​        Read More »

ಕರ್ನಾಟಕ

ಕಬ್ಬನ್ ಪಾರ್ಕ್ ನಲ್ಲಿ ಮಾ. 11 ರಿಂದ ಎರಡು ದಿನ ಮಹಿಳಾ ಕ್ರೀಡಾಹಬ್ಬ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 11 ಮತ್ತು 12 ಮಹಿಳಾ ಕ್ರೀಡಾ ಹಬ್ಬ ಆಯೋಜಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ  ತಿಳಿಸಿದ್ದಾರೆ‌. ಮಹಿಳೆಯರಲ್ಲಿ ಕ್ರೀಡಾ ಉತ್ಸಾಹ  ಹುರಿದುಂಬಿಸಲು ಹಾಗೂ ಕ್ರೀಡಾ ಮನೊಭಾವನೆ  ಮೂಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ “ಮಹಿಳಾ ಕ್ರೀಡಾ ಹಬ್ಬ” ವನ್ನು ಆಯೋಜಿಸಲಾಗುತ್ತಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉದ್ಘಾಟಿಸಲಿದ್ದಾರೆ.  

ಕಬ್ಬನ್ ಪಾರ್ಕ್ ನಲ್ಲಿ ಮಾ. 11 ರಿಂದ ಎರಡು ದಿನ ಮಹಿಳಾ ಕ್ರೀಡಾಹಬ್ಬ Read More »

ಕರ್ನಾಟಕ

ಜ್ಯೋತಿಷ್ಯ ಕೇಳಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ  ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ವೀರಾಜಪೇಟೆ, ಮಾ. 09. ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ ಜ್ಯೋತಿಷ್ಯರೋರ್ವರು ಜ್ಯೋತಿಷ್ಯ ಕೇಳಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ಕುರಿತು ನೊಂದ ಮಹಿಳೆಯು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. . ಆರೋಪಿಯನ್ನು ಕದನೂರು ಗ್ರಾಮದಲ್ಲಿ ಶ್ರೀ ಮಂಜುನಾಥ ಜ್ಯೋತಿಷ್ಯಾಲಯವನ್ನು ನಡೆಸುತ್ತಿರುವ ಹೆಚ್‌.ಎಂ. ಪ್ರಕಾಶ್ (53) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ್ಯೋತಿಷ್ಯ ಕೇಳಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ  ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಸೊಪ್ಪು ತಿಂದು ನಾಲ್ಕು ಜಾನುವಾರು ಅಸ್ವಸ್ತ- ಒಂದು ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ಮಾ. 09. ಸೊಪ್ಪು ತಿಂದ ಎರಡು ಹಸು ಹಾಗೂ ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ. ಕೃಷಿಕ ಸಂಜೀವ ಪೂಜಾರಿ ಎಂಬವರು ಮಾ. 08ರಂದು ಮಧ್ಯಾಹ್ನ ಕರಿ ಬಸ್ರಿ ತಳಿಯ ಸೊಪ್ಪನ್ನು ಜಾನುವಾರುಗಳಿಗೆ ಮಲಗಲು ಬೆಡ್ಡಿಂಗ್ ಗೆಂದು ಹಾಕಲಾಗಿತ್ತು. ಆದರೆ ಅದನ್ನೆಲ್ಲ ತಿಂದ ಹಸುಗಳು ನಂತರ ಅಸ್ವಸ್ಥಗೊಂಡಿದೆ. ಸಂಜೆ ನಂತರ ಹಸುಗಳು ಕೆಲವು

ಉಳ್ಳಾಲ: ಸೊಪ್ಪು ತಿಂದು ನಾಲ್ಕು ಜಾನುವಾರು ಅಸ್ವಸ್ತ- ಒಂದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಾ. 12ರಂದು ಮಂಡ್ಯದಲ್ಲಿ 1.8 ಕಿ.ಮೀ. ರೋಡ್‌ ಶೋ ನಡೆಸಲಿರುವ ಪ್ರಧಾನಿ       

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಮಾರ್ಚ್‌ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಅಲ್ಲದೇ ಪ್ರವಾಸಿ ಮಂದಿರ ವೃತ್ತದಿಂದ ಮೈ ಶುಗರ್ ಫ್ಯಾಕ್ಟರಿ ಸರ್ಕಲ್‌ವರೆಗೆ ರೋಡ್ ಶೋ ಕೂಡಾ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಳಿಕ ಮದ್ದೂರು ತಾಲೂಕು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೇದಿಕೆಗೆ ಹೋಗುವ ಮುನ್ನ ನಿಗದಿತ ಸ್ಥಳದಲ್ಲಿ ದಶಪಥ ಹೆದ್ದಾರಿಯನ್ನು ಉದ್ಘಾಟಿಸಲಿದ್ದಾರೆ.    

ಮಾ. 12ರಂದು ಮಂಡ್ಯದಲ್ಲಿ 1.8 ಕಿ.ಮೀ. ರೋಡ್‌ ಶೋ ನಡೆಸಲಿರುವ ಪ್ರಧಾನಿ        Read More »

ಕರ್ನಾಟಕ

ಚೂರಿಯಿಂದ ಇರಿದು ಯುವಕನ ಕೊಲೆ  

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಮಾ. 09. ಹೋಳಿ ಹಬ್ಬದ ಹಿನ್ನೆಲೆ ಹಲಗೆ ಬಾರಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚೂರಿಯಂದ ಇರಿದು ಕೊಲೆ ಮಾಡಿರುವ ಘಟನೆ ಮುಧೋಳ ನಗರದ ಟೀಚರ್ಸ್​​ ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದವರನ್ನು ಮುಧೋಳ ನಗರದ ಟೀಚರ್ಸ್ ಕಾಲೊನಿಯ ಗಿರೀಶ್ ಪಾಲೋಜಿ(22) ಎಂದು ಗುರುತಿಸಲಾಗಿದೆ. ಕಾರ್ತಿಕ ಕಾಂಬಳೆ, ಹನುಮಂತ ಕಾಂಬಳೆ, ಅನಿಲ ಕಾಂಬಳೆ, ರಾಘವೇಂದ್ರ ಕಾಂಬಳೆ, ಕಾರ್ತಿಕ್ ಮಳಗಾವಿ, ಸುಚಿತ್ ಬಂಡಿವಡ್ಡರ್ ಕೊಲೆ ಆರೋಪಿಗಳು.  

ಚೂರಿಯಿಂದ ಇರಿದು ಯುವಕನ ಕೊಲೆ   Read More »

ಕರ್ನಾಟಕ

ಮಂಗಳೂರು: ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಘಡ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 09. ಅಲ್ಪ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದ ಘಟನೆ ನಗರದ ಅತ್ತಾವರದ ಅಪಾರ್ಟ್ಮೆಂಟ್ ವೊಂದರಲ್ಲಿ ಸಂಭವಿಸಿದೆ. ಮೂರು ಅಂತಸ್ತಿನ ಅಪಾರ್ಟ್ ಮೆಂಟ್ ನ ಎರಡನೇ ಮಹಡಿಯಲ್ಲಿರುವ ಫ್ಲ್ಯಾಟ್ ನಿಂದ ರಾತ್ರಿ ಸುಮಾರು 7:30ರ ವೇಳೆಗೆ ಹೊಗೆ ಬರುತ್ತಿದ್ದುದನ್ನು ಗಮನಿಸಿದ ಇತರ ಫ್ಲ್ಯಾಟ್ ನಿವಾಸಿಗಳು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ, ದೊಡ್ಡ ಅನಾಹುತವನ್ನು ತಪ್ಪಿಸಿದಂತಾಗಿದೆ.

ಮಂಗಳೂರು: ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅವಘಡ Read More »

ಕರಾವಳಿ, ಕ್ರೈಮ್ ನ್ಯೂಸ್

ಯುವತಿಯರಿಬ್ಬರ ನಡುವೆ ಬೀದಿ ರಂಪಾಟ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಧಾರವಾಡ, ಮಾ. 09. ಯುವತಿಯರಿಬ್ಬರ ಮಧ್ಯೆ ಬೀದಿ ರಂಪಾಟ ನಡೆದ ಘಟನೆ ಧಾರವಾಡದ ಓಲ್ಡ್ ಡಿಎಸ್ಪಿ ಸರ್ಕಲ್ ಬಳಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯರಿಬ್ಬರು ಒಂದೇ ಕಾರಿನಲ್ಲಿ ಜೊತೆಯಾಗಿ ಬಂದಿದ್ದರು. ಮೊದಲು ಕಾರಿನಲ್ಲಿ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಬಳಿಕ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ಕಾರಿನ ಒಳಗೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಇದಾದ ನಂತರ ಕಾರಿನಿಂದ ಕೆಳಗೆ ಇಳಿದು, ಪರಸ್ಪರ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಅಲ್ಲದೆ,

ಯುವತಿಯರಿಬ್ಬರ ನಡುವೆ ಬೀದಿ ರಂಪಾಟ ➤ ವಿಡಿಯೋ ವೈರಲ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top