ಪುತ್ತೂರು: ಎಮ್ಮೆ ತಿವಿದು ಯುವಕನೋರ್ವ ಮೃತ್ಯು !

(ನ್ಯೂಸ್ ಕಡಬ)newskadaba.com  ಪುತ್ತೂರು, ಮಾ.10. ಎಮ್ಮೆ ತಿವಿದು ಯುವಕನೋರ್ವ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.  ಚಿತ್ರದುರ್ಗದ ನಿವಾಸಿ ಸಾದಿಕ್ (22) ಮೃತ ಯುವಕ. ಹಗ್ಗದಿಂದ ತಪ್ಪಿಸಿ ಓಡಿಹೋದ ಎಮ್ಮೆಯನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಸಾದಿಕ್ ಗೆ ಎಮ್ಮೆ ತಿವಿದಿದೆ.

ಪುತ್ತೂರಿನಲ್ಲಿ ಕಸಾಯಿಖಾನೆಗೆ ತಂದ ಎಮ್ಮೆಯನ್ನು ಇಳಿಸುತ್ತಿದ್ದಾಗ ಅದು ಹಗ್ಗ ಮುರಿದು ಓಡಿ ಹೋಗಿದೆ. ಎಮ್ಮೆಯನ್ನು ಹಿಡಿಯಲು ಹೋದ ಸಾದಿಕ್​ಗೆ ಕೊಂಬಿನಿಂದ ತಿವಿದಿದೆ. ಹೊಟ್ಟೆಗೆ ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್​ ನನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 

Scroll to Top