karnataka

ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ಬಿಎಂಟಿಸಿ ಯಲಹಂಕ ಡಿಪೊ- 30ರಲ್ಲಿ ಎಲೆಕ್ಟ್ರಿಕ್ ಬಸ್ ಗೋಡೆಗೆ ಡಿಕ್ಕಿ ಹೊಡೆದಿದ್ದು, ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಸೋಮಶೇಖರಯ್ಯ (59) ಮೃತಪಟ್ಟಿದ್ದಾರೆ. ಕರ್ತವ್ಯ ಮುಗಿಸಿ ಡಿಪೊಗೆ ಬಂದಿದ್ದ ಅವರು, ಕಚೇರಿಯಲ್ಲಿ ಟಿಕೆಟ್ ಹಣ ಜಮೆ ಮಾಡಿ ವಾಪಸು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸೋಮಶೇಖರಯ್ಯ ಅವರಿಗೆ ಗುದ್ದಿಕೊಂಡು ಮುಂದಕ್ಕೆ ಹೋಗಿದ್ದ ಬಸ್‌, ಗೋಡೆಗೆ ಡಿಕ್ಕಿ ಹೊಡೆದಿತ್ತು. ಬಸ್‌ ಹಾಗೂ ಗೋಡೆ ನಡುವೆ ಸಿಲುಕಿ ಸೋಮಶೇಖರಯ್ ದೇಹ ಜಜ್ಜಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು […]

ಬಸ್ಸು ಮತ್ತು ಗೋಡೆ ಮಧ್ಯೆ ಸಿಲುಕಿ ನಿರ್ವಾಹಕ ಮೃತ್ಯು..! Read More »

ಕರ್ನಾಟಕ

ವಿಧಾನಸಭೆ ಚುನಾವಣೆ ಹಿನ್ನೆಲೆ➤ಮತದಾನ ಮಾಡದಿದ್ದರೆ ವೇತನ ಕಡಿತ..!

(ನ್ಯೂಸ್ ಕಡಬ)Newskadaba.com ತುಮಕೂರು, ಮೇ.10ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಚುನಾವಣಾ ಆಯೋಗ ಗರಿಷ್ಠ ಮತದಾನಕ್ಕೆ ಕ್ರಮ ಕೈಗೊಂಡಿದ್ದು, ಇದನ್ನು ಸಾಕಾರಗೊಳಿಸಲು ಕೈಗಾರಿಕೋದ್ಯಮಿಗಳು ವೇತನ ಸೂತ್ರ ಕೈಗೊಂಡಿದ್ದಾರೆ. ಮತದಾನ ಮಾಡದಿದ್ದರೆ ವೇತನ ಕಡಿತಗೊಳಿಸಲು ಕೈಗಾರಿಕಾ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಗಳು ತೀರ್ಮಾನ ಕೈಗೊಂಡಿವೆ. ಕೆಲಸಕ್ಕೆ ರಜೆ ಎಂದು ಊರು, ಪ್ರವಾಸಕ್ಕೆ ಹೊರಟರೆ ಅಂದಿನ ವೇತನ ನೀಡುವುದಿಲ್ಲ ಎಂದು ಉದ್ಯಮಿಗಳು ತಿಳಿಸಿದ್ದಾರೆ.        

ವಿಧಾನಸಭೆ ಚುನಾವಣೆ ಹಿನ್ನೆಲೆ➤ಮತದಾನ ಮಾಡದಿದ್ದರೆ ವೇತನ ಕಡಿತ..! Read More »

ಕರ್ನಾಟಕ

ನೀತಿ ಸಂಹಿತೆ ಜಾರಿಯಾದ ಬಳಿಕ ₹ 147.46 ಕೋಟಿ ನಗದು ವಶ‍ಪಡಿಸಿಕೊಂಡ ಚುನಾವಣಾ ಆಯೋಗ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.09. ಮಾರ್ಚ್‌.29 ರಂದು ಜಾರಿಯಾದ ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ ₹ 147.46 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. 2018ರ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಶೇ 100 ರಷ್ಟು ಹೆಚ್ಚು. ಸುಮಾರು ₹ 100 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, ₹ 24.22 ಕೋಟಿ ಮೌಲ್ಯದಷ್ಟು ಮತದಾರರಿಗೆ ವಿತರಿಸಲು ಸೀರೆ, ಕುಕ್ಕರ್‌ ಹಾಗೂ ಇನ್ನಿತರ ವಸ್ತುಗಳನ್ನು ಮಾಡಲಾಗಿದೆ.

ನೀತಿ ಸಂಹಿತೆ ಜಾರಿಯಾದ ಬಳಿಕ ₹ 147.46 ಕೋಟಿ ನಗದು ವಶ‍ಪಡಿಸಿಕೊಂಡ ಚುನಾವಣಾ ಆಯೋಗ Read More »

ಕರ್ನಾಟಕ

ರಾಜ್ಯ ವಿಧಾನ ಸಭೆಯ ಚುನಾವಣೆಯ ಹಿನ್ನಲೆ ➤ಪ್ರಸಿದ್ಧ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.09 ರಾಜ್ಯ ವಿಧಾನ ಸಭೆಯ ಚುನಾವಣೆಯ ಹಿನ್ನಲೆಯಲ್ಲಿ ಮೇ 10ರಂದು ಮತದಾನ ಇರುವುದರಿಂದ ಕೆಲ ಪ್ರಮುಖ ಪ್ರವಾಸಿ ತಾಣಗಳಿಗೆ ಮತದಾನದ ದಿನದಂದು ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣ ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ.ಮತದಾನದಿಂದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರದೆ ಇದ್ದರೆ ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ.

ರಾಜ್ಯ ವಿಧಾನ ಸಭೆಯ ಚುನಾವಣೆಯ ಹಿನ್ನಲೆ ➤ಪ್ರಸಿದ್ಧ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ..! Read More »

ಕರ್ನಾಟಕ

ಬೆಳ್ತಂಗಡಿ: ಹರೀಶ್ ಪೂಂಜ ವಿರುದ್ದ ಹಣ ಹಂಚಲು ಹೋದ ಆರೋಪ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಮೇ.09. ಮನೆ ಮನೆ ಪ್ರಚಾರದ ವೇಳೆ ಹಣ ಹಂಚಲು ಹೋಗಿರುವ ಆರೋಪ ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ವಿರುದ್ದ ಕೇಳಿಬಂದಿದೆ. ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ನಿನ್ನೆ ಸಂಜೆಗೆ ಅಂತ್ಯವಾಗಿದ್ದು, ಈ ಹಿನ್ನಲೆಯಲ್ಲಿ ರಾತ್ರಿ ವೇಳೆ ಪೂಂಜ ಮತ್ತು ತಂಡದವರು ಮನೆ ಮನೆ ಪ್ರಚಾರ ಆರಂಭಿಸಿದ್ದರು. ಬೆಳ್ತಂಗಡಿಯಲ್ಲಿರುವ ಅಶೋಕ ನಗರದ ದಲಿತ ಕಾಲೋನಿಯೊಂದಕ್ಕೆ ಮತಯಾಚನೆಗೆ ಹೋದ ಸಂದರ್ಭ ಐದು ಲಕ್ಷ ರೂ. ಕೊಡುತ್ತೇನೆ ಎಂದು ಆಮಿಷವೊಡ್ಡಿರುವ ಬಗ್ಗೆಆರೋಪ ಕೇಳಿಬಂದಿದೆ.

ಬೆಳ್ತಂಗಡಿ: ಹರೀಶ್ ಪೂಂಜ ವಿರುದ್ದ ಹಣ ಹಂಚಲು ಹೋದ ಆರೋಪ Read More »

ಕರಾವಳಿ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ➤ ನಾಳೆ ರೇಷ್ಮೆಗೂಡು ಮಾರುಕಟ್ಟೆ ವಹಿವಾಟು ಸ್ಥಗಿತ..!*  

(ನ್ಯೂಸ್ ಕಡಬ)Newskadaba.com ದೇವನಹಳ್ಳಿ,ಮೇ.09 ರಾಜ್ಯ ವಿಧಾನಸಭೆ ಚುನಾವಣೆಗೆ ಮೇ10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಲ್ಲಿಯ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಇರುವುದಿಲ್ಲ.’ಮೇ 9 ರಂದು ಸಂಜೆಯಿಂದಲೇ ಯಾರೂ ಮಾರುಕಟ್ಟೆಗೆ ರೇಷ್ಮೆಗೂಡು ತರಬಾರದು. ಮೇ 10 ರಂದು ಸಂಜೆ ಗೂಡು ತರಬಹುದು. ಮೇ11 ರಂದು ಬೆಳಿಗ್ಗೆ ಎಂದಿನಂತೆ ಹರಾಜು ಪ್ರಕ್ರಿಯೆ ಮತ್ತು ವಹಿವಾಟು ನಡೆಯಲಿದೆ’ ಎಂದು ಮಾರುಕಟ್ಟೆಯ ಉಪ ನಿರ್ದೆಶಕ ಡಾ. ಎಸ್.ಸುಂದರ್ ರಾಜ್ ತಿಳಿಸಿದ್ದಾರೆ.          

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ➤ ನಾಳೆ ರೇಷ್ಮೆಗೂಡು ಮಾರುಕಟ್ಟೆ ವಹಿವಾಟು ಸ್ಥಗಿತ..!*   Read More »

ಕರ್ನಾಟಕ

ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..!

(ನ್ಯೂಸ್ ಕಡಬ)Newskadaba.com ದಾವಣಗೆರೆ,ಮೇ.09 ಚನ್ನಗಿರಿ ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ನಡೆದಿದೆ. ಗಣೇಶ್ (16), ಹೇಮಂತ್ (15) ಮೃತ ಮಕ್ಕಳು ಎಂದು ಗುರುತಿಸಲಾಗಿದೆ. ಎಸ್ಸೆಸ್ಸೆಲ್ಸಿ ಓದುತ್ತಿದ್ದ ಗಣೇಶ್‌ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದ. ದೋಣಿಹಳ್ಳಿ ಶಾಲೆಗೆ ಈತನೇ ಪ್ರಥಮ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದ. ಹೇಮಂತ್ 9ನೇ ತರಗತಿ ತೇರ್ಗಡೆಗೊಂಡು‌ ಎಸ್ಸೆಸ್ಸೆಲ್ಸಿಗೆ ದಾಖಲಾಗಬೇಕಿತ್ತು. ಗ್ರಾಮದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.        

ಇಬ್ಬರು ಮಕ್ಕಳು ಕೃಷಿ‌ ಹೊಂಡದಲ್ಲಿ ಈಜಲು ಹೋಗಿ ನೀರುಪಾಲು..! Read More »

ಕರ್ನಾಟಕ

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ➤ ‘ಮೆಟ್ರೋ ಸಂಚಾರ’ದ ಅವಧಿ ವಿಸ್ತರಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.09. ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Assembly Election 2023) ಮತದಾನ ನಡೆಯಲಿದೆ. ಅದು ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಮೆಟ್ರೋ ಸಂಚಾರವನ್ನು(Metro Service) ವಿಸ್ತರಣೆ ಮಾಡಿದೆ. ಈ ಕುರಿತಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMTC)ವು ದಿನಾಂಕ 10-05-2023ರ ನಡೆಯಲಿರುವ ಕರ್ನಾಟಕ ವಿಧಾನಸಭಾ ಚನಾವಣೆಯ ಪ್ರಯುಕ್ತ ನಿಗಮವು ಮೆಟ್ರೋ ರೈಲು ಸೇವೆಗಳನ್ನು (Namma METRO Service) ಮಧ್ಯರಾತ್ರಿಯವರೆಗೆ ವಿಸ್ತರಿಸಲಾಗಿದೆ ಎಂದಿದೆ.  

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ➤ ‘ಮೆಟ್ರೋ ಸಂಚಾರ’ದ ಅವಧಿ ವಿಸ್ತರಣೆ Read More »

ಕರ್ನಾಟಕ

ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಂದ 36 ಕೆಜಿ ಗಾಂಜಾ ವಶಕ್ಕೆ..!➤ ಪ್ರಕರಣ ದಾಖಲು

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.09 ಕೆಎಸ್ಆರ್ ರೈಲು ನಿಲ್ದಾಣದಲ್ಲಿದ್ದ ಪ್ರಯಾಣಿಕರಿಂದ ರೂ.36,30,000 ಮೌಲ್ಯದ 36 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಇಬ್ಬರು ಪ್ರಯಾಣಿಕರಿಂದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಸೆಕ್ಷನ್ 20(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಿಯಮ ಉಲ್ಲಂಘನೆಯಾಗದಂತೆ ಖಚಿತಪಡಿಸಿಕೊಳ್ಳಲು ರೈಲ್ವೇ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಇದರಂತೆ ರೈಲುಗಳು ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ಪ್ರತೀನಿತ್ಯ ತೀವ್ರ ತಪಾಸಣೆ

ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಂದ 36 ಕೆಜಿ ಗಾಂಜಾ ವಶಕ್ಕೆ..!➤ ಪ್ರಕರಣ ದಾಖಲು Read More »

ಕರ್ನಾಟಕ

ಊರಿಗೆ ಹೋಗಲು ಬಸ್ ಇಲ್ಲದೇ ಪ್ರಯಾನಿಕರ ಪರದಾಟ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.09 ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ. 10 ರ ನಾಳೆ ಮತದಾನ ನಡೆಯುತ್ತಿದ್ದು ಮತದಾನಕ್ಕೆ ಊರಿಗೆ ಹೋಗುವವರಿಗೆ ಬಸ್ ಇಲ್ಲದೇ ಪರದಾಡುವಂತಾಗಿದೆ.ಕರ್ನಾಟಕ ವಿಧಾನಸಭೆ ಚುನಾವಣೆ ಕಾರ್ಯಕ್ಕೆ ಸಾವಿರಾರು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳನ್ನು ಪಡೆದುಕೊಳ್ಳಲಾಗಿದೆ. ಮತದಾನ ಮಾಡಲು ನಾಳೆ ಸಾರ್ವತ್ರಿಕ ರಜಾ ದಿನ ಘೋಷಿಸಿರುವುದರಿಂದ ಮತದಾರರು ಇಂದೇ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಊರಿಗೆ ಹೋಗುವ ಪ್ರಯಾಣಿಕರು ಬೆಂಗಳೂರಿನಲ್ಲಿ ಬಸ್ ಇಲ್ಲದೇ ಪರದಾಡುವಂತಾಗಿದೆ.      

ಊರಿಗೆ ಹೋಗಲು ಬಸ್ ಇಲ್ಲದೇ ಪ್ರಯಾನಿಕರ ಪರದಾಟ..! Read More »

ಕರ್ನಾಟಕ
Scroll to Top