karnataka

ಮತ ಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು

(ನ್ಯೂಸ್ ಕಡಬ)newskadaba.com ವಿಜಯಪುರ, ಮೇ.10. ವಿಜಯಪುರ ಜಿಲ್ಲೆಯಲ್ಲಿ ತಪ್ಪು ಮಾಹಿತಿಯಿಂದಾಗಿ ಗ್ರಾಮಸ್ಥರೇ ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ (EVM), ವಿವಿಪ್ಯಾಟ್ ಮಶೀನ್ಗಲಳಾಗಿದ್ದವು. ಅವುಗಳನ್ನು ಸಿಬ್ಬಂದಿಯು ವಾಪಸ್ ತರೋದನ್ನು ಗಮನಿಸಿ ಜನರು ಪ್ರಶ್ನಿಸಿದ್ದಾರೆ. ಈ ವೇಳೆ ಸಿಬ್ಬಂದಿ ಸರಿಯಾಗಿ ಉತ್ತರಿಸದೇ ಇದ್ದಾಗ ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ.

ಮತ ಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು Read More »

ಕರ್ನಾಟಕ

ಹಿರಿಯೂರು ಜೆಡಿಎಸ್ ಅಭ್ಯರ್ಥಿಯ ಪತ್ನಿ ಹಾಗೂ ಸೊಸೆ ಐಟಿ ವಶಕ್ಕೆ…!

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ,ಮೇ.10 ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಧರ್ಮಪುರ ಹೋಬಳಿಯ ಮುಂಗುಸುವಳ್ಳಿಯ ಮನೆಯ ಮೇಲೆ ಆರು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ವೇಳೆ ರವೀಂದ್ರಪ್ಪ ಹಾಗೂ ಅವರ ಪುತ್ರ ಡಾ.ಸತ್ಯನಾರಾಯಣ ಮತಯಾಚನೆಗೆ ಹೊರ ಹೋಗಿದ್ದರು. ಮನೆ ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಲತಾ ಮತ್ತು ಶ್ವೇತಾರನ್ನು ಬೆಂಗಳೂರಿಗೆ

ಹಿರಿಯೂರು ಜೆಡಿಎಸ್ ಅಭ್ಯರ್ಥಿಯ ಪತ್ನಿ ಹಾಗೂ ಸೊಸೆ ಐಟಿ ವಶಕ್ಕೆ…! Read More »

ಕರ್ನಾಟಕ

ಮತಗಟ್ಟೆಯಲ್ಲೇ ಕುಸಿದು ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಬೆಳಗಾವಿ, ಮೇ.10. ಮತ ಚಲಾಯಿಸಲು ಬಂದಿದ್ದ ವೃದ್ಧೆ ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸವದತ್ತಿ ತಾಲೂಕಿನ ಯರಝರ್ವಿ ಎಂಬಲ್ಲಿ ನಡೆದಿದೆ. 68 ವರ್ಷದ ಪಾರವ್ವ ಈಶ್ವರ ಸಿದ್ನಾಳ ಮೃತ ದುರ್ದೈವಿ ಮಹಿಳೆಯಾಗಿದ್ದಾರೆ. ಪಾರವ್ವ ಮತದಾನ ಮಾಡಲೆಂದು ಮತಗಟ್ಟೆಗೆ ಬಂದಿದ್ದರು. ಆದರೆ ಅದಕ್ಕೂ ಮುನ್ನವೇ ಬೂತ್ ನ ಅವರಣದಲ್ಲಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಮತಗಟ್ಟೆಯಲ್ಲೇ ಕುಸಿದು ಬಿದ್ದು ಮಹಿಳೆ ಮೃತ್ಯು Read More »

ಕರ್ನಾಟಕ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.10. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೇವಲ ಮಕ್ಕಳಿಗೆ ವಿರುದ್ಧ ಮಾತ್ರವಲ್ಲದೇ ಇಡೀ ಸಮಾಜದ ವಿರುದ್ಧದ ಕೃತ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 28 ವರ್ಷದ ವ್ಯಕ್ತಿಯೊಬ್ಬರನ್ನು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಪ್ರಕರಣದಲ್ಲಿ ನಿರಪರಾಧಿ ಎಂಬುದಾಗಿ ಪ್ರಕಟಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿ ಹೈಕೋರ್ಟ್​ ಆದೇಶಿಸಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಮಾಜದ ಮೇಲೆ ನಡೆಯುವ ಅಪರಾಧ ಕೃತ್ಯ Read More »

ಕರ್ನಾಟಕ

ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ  ಮಾತಿನ ಚಕಮಕಿ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯ ಮತಗಟ್ಟೆ ಬಳಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿದೆ.ಮತಗಟ್ಟೆ ಮುಂದೆ ನಿಂತ ಮತದಾರರ ಬಳಿ ಜೆಡಿಎಸ್​ಗೆ ಬೆಂಬಲ ನೀಡುವಂತೆ ಜೆಡಿಎಸ್​ ಅಭ್ಯರ್ಥಿಯ ಬೆಂಬಲಿಗರೊಬ್ಬರು ಮನವಿ ಮಾಡಿದ್ದಾರೆ. ಜೆಡಿಎಸ್​ ಬೆಂಬಲಿಗ ಜನರಲ್ಲಿ ಮನವಿ ಮಾಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ರೊಚ್ಚಿಗೆದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್, ‘ನಿಮಗೆ ವೋಟು ಇಲ್ಲದಿದ್ರೂ ಮತಗಟ್ಟೆಗೆ ಪ್ರವೇಶಿಸಿದ್ದೀರಾ. ಅದರ ಜತೆಗೆ ಇಲ್ಲಿ ಮತ ಕೇಳಿ ಕಾನುನು

ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ  ಮಾತಿನ ಚಕಮಕಿ.! Read More »

ಕರ್ನಾಟಕ

ಮತದಾರರಿಗೆ ಹಣ ಹಂಚುತ್ತಿದ್ದ 13 ಮಂದಿ ಯುವಕರು  ಪೊಲೀಸರ ವಶಕ್ಕೆ…!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10  ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯ ಮರವೊಂದರ ಬುಡದಲ್ಲಿ ಬಿಸಾಕಿದ್ದ ₹ 4.95 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಮತದಾರರಿಗೆ ಆಮಿಷವೊಡ್ಡುತ್ತಿದ್ದ ಆರೋಪದಡಿ 13 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ‘ತಮಿಳುನಾಡಿನಿಂದ ನಗರಕ್ಕೆ ಬಂದಿದ್ದ ಕೆಲ ಯುವಕರು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೆಲ ಮನೆಗಳಿಗೆ ತೆರಳಿ ಹಣ ಹಂಚುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಚುನಾವಣಾಧಿಕಾರಿ ತಂಡದ ಜೊತೆ ಜಂಟಿ ಕಾರ್ಯಾಚರಣೆ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.’ಹಣ ಹಂಚುತ್ತಿದ್ದ 13 ಮಂದಿ ಕೈಗೆ ಸಿಕ್ಕಿಬಿದ್ದಿದ್ದು, ಕೆಲವರು

ಮತದಾರರಿಗೆ ಹಣ ಹಂಚುತ್ತಿದ್ದ 13 ಮಂದಿ ಯುವಕರು  ಪೊಲೀಸರ ವಶಕ್ಕೆ…! Read More »

ಕರ್ನಾಟಕ

ಗಡಿಭಾಗಗಳಲ್ಲಿ ಪೊಲೀಸರಿಂದ ಕಟ್ಟೆಚ್ಚರ ➤ ನಕಲಿ ಮತದಾನಕ್ಕೆ ಅವಕಾಶವಿಲ್ಲ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.10. ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ. ಇಂದು ರಾಜ್ಯದ ಗಡಿ ಭಾಗಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಚುನಾವಣಾ ಭದ್ರತೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಭಾರಿ ಭದ್ರತೆ ಇರಲಿದ್ದು ಎಲ್ಲ ಎಸ್‌ಪಿ, ಕಮಿಷನರ್ಗಳು ರಾತ್ರಿ ಗಸ್ತು ತಿರುಗಲಿದ್ದಾರೆ. ಹೊರ ರಾಜ್ಯಗಳಿಂದ ರಾಜ್ಯ ಪ್ರವೇಶಿಸುವವರನ್ನು ಪರಿಶೀಲನೆ ನಡೆಸಿ ಪ್ರವೇಶಕ್ಕೆ ಅನುಮತಿ ನೀಡಲಾಗುವುದು. ವಿನಾಕಾರಣ ಬೇರೆ

ಗಡಿಭಾಗಗಳಲ್ಲಿ ಪೊಲೀಸರಿಂದ ಕಟ್ಟೆಚ್ಚರ ➤ ನಕಲಿ ಮತದಾನಕ್ಕೆ ಅವಕಾಶವಿಲ್ಲ Read More »

ಕರ್ನಾಟಕ

ವಿಕಲಚೇತನ ಸಹೋದರನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ಮತ ಹಾಕಿಸಿದ ಅಣ್ಣ

(ನ್ಯೂಸ್ ಕಡಬ)newskadaba.com ವಿಜಯಪುರ, ಮೇ.10. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು, ಮಹಿಳೆಯರು, ಪುರುಷರು, ಇಳಿ ವಯಸ್ಕರು ಸರದಿ ಸಾಲಿನಲ್ಲಿ ನಿಂತು‌ ಮತ ಚಲಾವಣೆ ಮಾಡುತ್ತಿದ್ದಾರೆ. ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಕುಟುಂಬ ಸಮೇತರಾಗಿ ನಗರದ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಮತಗಟ್ಟೆ 61ರಲ್ಲಿ ಸಾಮಾನ್ಯರಂತೆ ಸರದಿಯಲ್ಲಿ ನಿಂತು ತಮ್ಕ ಹಕ್ಕು ಚಲಾಯಿಸಿದರು ಎಂದು ತಿಳಿದುಬಂದಿದೆ.

ವಿಕಲಚೇತನ ಸಹೋದರನನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದು ಮತ ಹಾಕಿಸಿದ ಅಣ್ಣ Read More »

ಕರ್ನಾಟಕ

ಚುನಾವಣಾ ಕರ್ತವ್ಯ ಲೋಪ ಹಿನ್ನಲೆ➤ ಶೃಂಗೇರಿ ತಾಲೂಕು ಪಂಚಾಯತ್ ಇಒ ಅಮಾನತು..!  

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಮೇ.10  ಕರ್ನಾಟಕ ವಿಧಾನಸಭೆ ಚುನಾವಣೆ -2023ಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಪುಟ್ಟೇಗೌಡ ಅವರಿಗೆ ನಿಯೋಜಿಸಿದ್ದ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡದೇ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಮಾಡಿದ್ದಾರೆ. ಮಹಿಳಾ ಸಿಬ್ಬಂದಿ ಮುಂದೆ ಅವಾಚ್ಯ ಮತ್ತು ತೀರಾ ಆಶ್ಲೀಲ ಪದಗಳನ್ನು ಬಳಸಿ ಸಿಬ್ಬಂದಿಗೆ ಮುಜುಗರವಾಗುವಂತೆ ಮನಬಂದಂತೆ ಮಾತನಾಡಿದ್ದು, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದರಿಂದ ಪ್ರಜಾಪ್ರಾತಿನಿಧ್ಯ ಕಾಯ್ದೆ 1951ರ ಕಲಂ 28 (ಎ) ಮತ್ತು 136ರಡಿಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ

ಚುನಾವಣಾ ಕರ್ತವ್ಯ ಲೋಪ ಹಿನ್ನಲೆ➤ ಶೃಂಗೇರಿ ತಾಲೂಕು ಪಂಚಾಯತ್ ಇಒ ಅಮಾನತು..!   Read More »

ಕರ್ನಾಟಕ

ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಐಟಿ ದಾಳಿ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.10 ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರದುರ್ಗ ನಗರದ ಹೊರವಲಯದ ಬೆಂಗಳೂರು ಮಾರ್ಗದ ಎನ್.ಹೆಚ್. 4 ಬಳಿಯ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಪ್ಯಾಕ್ ಮಾಡಿ ಇಟ್ಟಿದ್ದ 50 ಲಕ್ಷ ರೂ.ಗಳು ಹಾಗೂ 8.83 ಲಕ್ಷ ಮೌಲ್ಯದ ಬಿಡಿಬಿಡಿ ನೋಟುಗಳು ಸೇರಿದಂತೆ ಒಟ್ಟು 58,83,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. 239 ಲೀಟರ್ ನಷ್ಟು ಮದ್ಯದ ಬಾಟಲ್

ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಐಟಿ ದಾಳಿ..! Read More »

ಕರ್ನಾಟಕ
Scroll to Top