ಹಿರಿಯೂರು ಜೆಡಿಎಸ್ ಅಭ್ಯರ್ಥಿಯ ಪತ್ನಿ ಹಾಗೂ ಸೊಸೆ ಐಟಿ ವಶಕ್ಕೆ…!

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ,ಮೇ.10 ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಪತ್ನಿ ಜಿ.ಪಿ.ಲತಾ ಹಾಗೂ ಅವರ ಸೊಸೆ ಶ್ವೇತಾ ಅವರನ್ನು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ.

ಧರ್ಮಪುರ ಹೋಬಳಿಯ ಮುಂಗುಸುವಳ್ಳಿಯ ಮನೆಯ ಮೇಲೆ ಆರು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ವೇಳೆ ರವೀಂದ್ರಪ್ಪ ಹಾಗೂ ಅವರ ಪುತ್ರ ಡಾ.ಸತ್ಯನಾರಾಯಣ ಮತಯಾಚನೆಗೆ ಹೊರ ಹೋಗಿದ್ದರು. ಮನೆ ಪರಿಶೀಲಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಲತಾ ಮತ್ತು ಶ್ವೇತಾರನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ.

 

 

Scroll to Top