Kadaba

ಅಶ್ರಫ್ ಕಲಾಯಿ ಕೊಲೆ ಪ್ರಕರಣ ►ಪ್ರಮುಖ ಆರೋಪಿ ಭರತ್ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.01. SDPI ಮುಖಂಡ ಅಶ್ರಫ್ ಕಲಾಯಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ, ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಎಂಬಾತನನ್ನು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ. ಜೂನ್ 21ರಂದು ಬೆಂಜನಪದವು ಬಳಿ ಅಶ್ರಫ್ ರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಕೊಲೆಗೆ ಸಂಚು ನಡೆಸಿದ ಇಬ್ಬರಲ್ಲಿ ಒಬ್ಬನಾದ ದಿವ್ಯರಾಜ್ ಶೆಟ್ಟಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ, ಹತ್ಯೆಗೆ ಸಂಚು ರೂಪಿಸಿದ್ದ ಮುಖಂಡ ಭರತ್ ಕುಮ್ಡೇಲುವನ್ನು ಇಂದು […]

ಅಶ್ರಫ್ ಕಲಾಯಿ ಕೊಲೆ ಪ್ರಕರಣ ►ಪ್ರಮುಖ ಆರೋಪಿ ಭರತ್ ಬಂಧನ Read More »

ಕರಾವಳಿ

ಕಡಬದ MSIL ಮದ್ಯದಂಗಡಿ ಫುಲ್‌ ರಶ್

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಹೆದ್ದಾರಿ ಬದಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆನ್ನುವ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕಡಬದಲ್ಲಿನ ಎರಡು ಖಾಸಗಿ ಬಾರ್‌ಗಳು, ನೆಟ್ಟಣ, ಆಲಂಕಾರು, ಪಂಜ ಸೇರಿದಂತೆ ಪರಿಸರದ ಎಲ್ಲಾ ಬಾರ್‌ಗಳನ್ನು ಮುಚ್ಚಲ್ಪಟ್ಟ ಕಾರಣದಿಂದ ಕಡಬ ಸರಕಾರಿ ಪ್ರಾಯೋಜಿತ ಎಂಎಸ್ಐಎಲ್ ಬಾರ್ ನಲ್ಲಿ ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಮದ್ಯಕ್ಕಾಗಿ ಕಾಯುತ್ತಿದ್ದ ದೃಶ್ಯ ಶನಿವಾರ ಸಂಜೆ ಕಂಡುಬಂದಿತು.

ಕಡಬದ MSIL ಮದ್ಯದಂಗಡಿ ಫುಲ್‌ ರಶ್ Read More »

ಕರಾವಳಿ

GST ಜಾರಿ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.01. ಶನಿವಾರದಿಂದ GST ಜಾರಿಯಾದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42 ರು, ಮತ್ತು ಡೀಸೆಲ್ ದರ 3.57 ರು ಕಡಿತವಾಗಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಬೆಂಗಳೂರಿನಲ್ಲಿ 57.80 ರು. ಇದ್ದ ಡೀಸೆಲ್ ದರ, ಶನಿವಾರ ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರು.ಗೆ ಇಳಿಕೆಯಾಗಿದೆ. 67.66 ರು. ಇದ್ದ ಪೆಟ್ರೋಲ್ ದರ 64.24 ರು.ಗಳಿಗೆ ಇಳಿಕೆಯಾಗಿದೆ. ಅಂದರೆ ಡೀಸೆಲ್‍ಗೆ 3.57 ರೂ.

GST ಜಾರಿ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ Read More »

ಕರ್ನಾಟಕ

ಜುಲೈ 02.ರಿಂದ ಕಡಬದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್

(ನ್ಯೂಸ್ ಕಡಬ) newskadaba.com ಕಡಬ, ಜು.01. ಇಲ್ಲಿನ ಮುಖ್ಯಪೇಟೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿನ ಎಲ್ಲಾ ತರದ ಸಿದ್ಧ ಉಡುಪುಗಳನ್ನು ಖಾಲಿ ಮಾಡುವ ಸಲುವಾಗಿ ಜುಲೈ 02, 2017ನೇ ಭಾನುವಾರದಿಂದ ‘ಸ್ಟಾಕ್ ಕ್ಲಿಯರೆನ್ಸ್ ಸೇಲ್’ ನಡೆಯಲಿದೆ. ಅದರಂತೆ ಮಕ್ಕಳ ಸಿದ್ಧ ಉಡುಪಗಳು, ಲೇಡೀಸ್ ಟಾಪ್, ನೈಟಿ, ಲೆಗ್ಗಿಂಗ್ಸ್, ಸ್ಕೂಲ್ ಬ್ಯಾಗ್, ಟೀ-ಶರ್ಟ್, ವ್ಯಾನಿಟಿ ಬ್ಯಾಗ್, ಕೊಡೆ, ಸಾರಿಗಳು ಸೇರಿದಂತೆ ಮಳಿಗೆಯಲ್ಲಿರುವ ಎಲ್ಲಾ ವಿಧದ ಉಡುಪುಗಳನ್ನು ವಿಶೇಷ ಡಿಸ್ಕೌಂಟ್‍ಗಳೊಂದಿಗೆ ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಜುಲೈ 02.ರಿಂದ ಕಡಬದ ಸಾಹಿರಾ ಡ್ರೆಸ್ ಪ್ಯಾಲೇಸ್ ನಲ್ಲಿ ಸ್ಟಾಕ್ ಕ್ಲಿಯರೆನ್ಸ್ ಸೇಲ್ Read More »

ಕರಾವಳಿ

ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ಸಲಾಂ ►ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಜು.01. ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ಸಲಾಮು ಜುಲೈ 1 ರಂದು ಪ್ರತಿ ವರುಷ ದೇಶಾದ್ಯಂತ ವೈದ್ಯರ ದಿನ ಎಂದು ಆಚರಿಸಲಾಗುತ್ತಿದೆ. ಇದು ಭಾರತದ ಮಹಾನ್ ಸುಪುತ್ರ. ಭಾರತರತ್ನ ಡಾ| ಬಿಷನ್ ಚಂದ್ರ ರಾಯ್ ಅವರು ಜನ್ಮವೆತ್ತ ದಿನ. ಡಾ| ಬಿ.ಸಿ. ರಾಯ್ ಅವರೊಬ್ಬರು ಮಾನವೀಯ ಕಳಕಳಿಯುಳ್ಳ ವೈದ್ಯರಾಗಿದ್ದರಲ್ಲದೆ ಅಪ್ರತಿಮ ರಾಜಕಾರಣಿ ದೇಶಭಕ್ತ ಮತ್ತು ಭಾರತ ಕಂಡ ಅತ್ಯುತ್ತಮ ವೈದ್ಯರೆಂದರೂ ತಪ್ಪಲ್ಲ. ಕಲ್ಕತ್ತಾ ವಿಶ್ವ ವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ  ವಿದೇಶಕ್ಕೆ

ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ಸಲಾಂ ►ಡಾ| ಮುರಲೀ ಮೋಹನ್ ಚೂಂತಾರುರವರ ಲೇಖನ Read More »

ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು

ಪೇಜಾವರ ಶ್ರೀಯವರ ಇಫ್ತಾರ್ ವಿವಾದ ► ಪ್ರವೀಣ್ ವಾಲ್ಕೆಯವರ ಆಕ್ರೋಶಿತ ಮಾತು

(ನ್ಯೂಸ್ ಕಡಬ) newskadaba.com ಮಂಗಳೂರು, ಜು.01. ನಾವು ಸೌಹಾರ್ದತೆಯಲ್ಲಿರಬೇಕೆಂದು 50 ವರ್ಷಗಳ ಮೊದಲು ಗೊತ್ತಾಗಿರುತ್ತಿದ್ದರೆ ಇವತ್ತಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇಷ್ಟೊಂದು ಗೊಂದಲಗಳಾಗುತ್ತಿರಲಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ನಾವು ಪೇಜಾವರ ಶ್ರೀ ಯವರ ಮಾರ್ಗದರ್ಶನದಲ್ಲಿ ಮುಂದುವರಿದಿದ್ದೆವು. ಅಂದೇ ನಾವೆಲ್ಲ ಮುಸ್ಲಿಮರೊಂದಿಗೆ ಸೌಹರ್ದಯುತವಾಗಿ ಇರೋಣ ಎಂದು ಸ್ವಾಮೀಜಿ ಹೇಳಿದ್ದರೆ, ನಾವೂ ಅನ್ಯೋನ್ಯವಾಗಿ ಇರುತ್ತಿದ್ದೆವು. ಆದರೆ, ನಮ್ಮ ಮನಸ್ಸಿನಲ್ಲಿ ವಿಷಬೀಜ ಬಿತ್ತಿ, ತಾವು ಗುಟ್ಟಾಗಿ ಮುಸ್ಲಿಮರ ಪ್ರೀತಿಗಳಿಸಲು ಮುಂದಾಗಿರುವುದು ಎಷ್ಟು ಸರಿ. ನಮಗೆ ಮುಸ್ಲಿಮರು ವಿರೋಧಿಗಳಲ್ಲ. ಈ

ಪೇಜಾವರ ಶ್ರೀಯವರ ಇಫ್ತಾರ್ ವಿವಾದ ► ಪ್ರವೀಣ್ ವಾಲ್ಕೆಯವರ ಆಕ್ರೋಶಿತ ಮಾತು Read More »

ಕರಾವಳಿ

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಜು.01. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದುದರ ಪರಿಣಾಮ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕಾರು ಢಿಕ್ಕಿ ಹೊಡೆದು ಚರಂಡಿಗೆ ಇಳಿದರೂ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.bi

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ Read More »

ಕರಾವಳಿ

ಜಿಎಸ್‌ಟಿ ಗೆ ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,ಜು.01. ಸ್ವಾತಂತ್ರದ ನಂತರ ಭಾರತದ ‘ಅತಿ ದೊಡ್ಡ ತೆರಿಗೆ ಸುಧಾರಣೆ’ ಎಂದು ಬಣ್ಣಿಸಲಾದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ. ಹೊಸದಿಲ್ಲಿಯ ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಭವನದಲ್ಲಿ ರಾತ್ರಿ 11:00 ಗಂಟೆಗೆ ಆರಂಭ ಗೊಂಡ ವಿಶೇಷ ಅಧಿವೇಶನದಲ್ಲಿ ಮಧ್ಯರಾತ್ರಿಯ ಬಳಿಕ ರಾಷ್ಟ್ರ ಪತಿ ಪ್ರಣವ್ ಮುಖರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಬೆಲ್ ಹೊಡೆಯುವ ಮೂಲಕ ಜಿಎಸ್‌ಟಿಗೆ ಅಧಿಕೃತ ಚಾಲನೆ ನೀಡಿದರು.   ಲೋಕಸಭಾ ಸ್ಪೀಕರ್

ಜಿಎಸ್‌ಟಿ ಗೆ ಪ್ರಧಾನಿ ಮೋದಿಯಿಂದ ಅಧಿಕೃತ ಚಾಲನೆ Read More »

ರಾಷ್ಟ್ರೀಯ ನ್ಯೂಸ್

ನಾಳೆಯಿಂದ ಹೆದ್ದಾರಿ ಬದಿಯಲ್ಲಿನ ಬಾರ್ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಜೂ.30. ಹೆದ್ದಾರಿ ಬದಿಗಳಲ್ಲಿ ಕಾರ್ಯಾಚರಿಸುತ್ತಿದ್ದ ಬಾರ್ ಗಳನ್ನು 220 ಮೀಟರ್ ದೂರಕ್ಕೆ ಸ್ಥಳಾಂತರಿಸಬೇಕೆನ್ನುವ ಸುಪ್ರೀಂ ಕೋರ್ಟ್ ಆದೇಶವು ನಾಳೆಯಿಂದ ಜಾರಿಗೆ ಬರಲಿದೆ‌. ಮೊದಲು ಹೆದ್ದಾರಿಯಿಂದ 500 ಮೀ. ಅಂತರ ಇರಬೇಕೆಂದು ನೀಡಲಾಗಿದ್ದ ಆದೇಶವನ್ನು ತಿದ್ದುಪಡಿ ಮಾಡಿರುವ ಸುಪ್ರೀಂಕೋರ್ಟ್ 220 ಮೀ. ಅಂತರವನ್ನು ನಿಗದಿಪಡಿಸಿತ್ತು. ಈ ಆದೇಶದನ್ವಯ ದೇಶದಾದ್ಯಂತ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಬದಿಗಳಲ್ಲಿನ ಬಾರ್ ಗಳಿಗೆ ಕುತ್ತು ಬಂದಿದ್ದು, ನಾಳೆಯಿಂದ ಮುಚ್ಚಬೇಕಾಗಿದೆ. ಕಡಬದಲ್ಲಿನ ಬಾರ್ ಗಳೂ ಈ ಆದೇಶದ ಹೊರತಾಗಿಲ್ಲ.

ನಾಳೆಯಿಂದ ಹೆದ್ದಾರಿ ಬದಿಯಲ್ಲಿನ ಬಾರ್ ಬಂದ್ Read More »

ರಾಷ್ಟ್ರೀಯ ನ್ಯೂಸ್

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.30. ಇಲ್ಲಿಗೆ ಸಮೀಪದ ಕರಾಯದ ಕಲ್ಲೇರಿ ಎಂಬಲ್ಲಿ ಕಾರು ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಕಡಬದ ವ್ಯಕ್ತಿ ಓರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ. ಗಾಯಾಳುವನ್ನು ಕಡಬದ ಕಳಾರ ನಿವಾಸಿ ಸಾಯಿಪ್ರಸಾದ್ ಪೈ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ Read More »

ಕರಾವಳಿ
Scroll to Top