ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.30. ಇಲ್ಲಿಗೆ ಸಮೀಪದ ಕರಾಯದ ಕಲ್ಲೇರಿ ಎಂಬಲ್ಲಿ ಕಾರು ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಕಡಬದ ವ್ಯಕ್ತಿ ಓರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ.

ಗಾಯಾಳುವನ್ನು ಕಡಬದ ಕಳಾರ ನಿವಾಸಿ ಸಾಯಿಪ್ರಸಾದ್ ಪೈ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

Scroll to Top