Kadaba

ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಇಂಟರ್‍ನೆಟ್ ಸೌಲಭ್ಯ…!!!

(ನ್ಯೂಸ್ ಕಡಬ) newskadaba.com ಕಡಬ,ಸೆ.15, ನವೆಂಬರ್ ತಿಂಗಳ ಅಂತ್ಯಕ್ಕೆ ರಾಜ್ಯದ ಸುಮಾರು 6092 ಗ್ರಾಮ ಪಂಚಾಯ್ತಿಗಳಿಗೆ ಇಂಟರ್‍ನೆಟ್ ಸೌಲಭ್ಯ ಕಲ್ಪಿಸಲು ಈಗಾಗಲೇ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೆ 643 ಗ್ರಾಪಂಗಳಿಗೆ ವೈಫೈ ಸೌಲಭ್ಯ ನೀಡಲಾಗಿದೆ. ಉಳಿದಿರುವ ಗ್ರಾಮ ಪಂಚಾಯ್ತಿಗಳಿಗೆ ನವೆಂಬರ್ ಅಂತ್ಯದೊಳಗೆ ಇಂಟರ್‍ನೆಟ್ ಸೇವೆ ನೀಡಲಾಗುವುದು ಎಂದು ಕೇಂದ್ರ ದೂರ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣ ಸುಂದರರಾಜನ್ ಹೇಳಿದ್ದಾರೆ. ಒಂದು ವೇಳೆ ಎಲ್ಲ ಗ್ರಾಮ ಪಂಚಾಯ್ತಿಗಳಿಗೂ ಇಂಟರ್‍ನೆಟ್ ಸೌಲಭ್ಯ ಲಭ್ಯವಾದರೆ ದೇಶದಲ್ಲೇ ಈ ಸೌಲಭ್ಯ ಪಡೆದ ಮೊಟ್ಟ ಮೊದಲ […]

ನವೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಇಂಟರ್‍ನೆಟ್ ಸೌಲಭ್ಯ…!!! Read More »

ಕರಾವಳಿ

ಕಡಬ ಸಿಎ ಬ್ಯಾಂಕ್ ನಿವ್ವಳ 1.89ಕೋಟಿ ಲಾಭ ► ಗ್ರಾಹಕರ ಅನುಕೂಲಕ್ಕೆ ಸೇಫ್ ಲಾಕರ್ ಸೌಲಭ್ಯ ಶೀಘ್ರದಲ್ಲಿ ಆರಂಭ

(ನ್ಯೂಸ್ ಕಡಬ) newskadaba.com ಕಡಬ,ಸೆ.15, ಕಡಬ ಪ್ರಾ.ಕೃ.ಪ.ಸ.ಸಂಘವು ಪ್ರಸಕ್ತ ಸಾಲಿನ 371.11 ಕೋಟಿ ರೂ.ವ್ಯವಹಾರ ನಡೆಸಿ ಒಟ್ಟು ರೂ.1.89 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಂದರ ಗೌಡ ಮಂಡೆಕರ ಹೇಳಿದರು. ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಚಾರ ತಿಳಿಸಿದ ಅವರು ಸಂಘವು ಸರದಿ ಸಾಲಿನಲ್ಲಿ 5987 ಸದಸ್ಯರೊಂದಿಗೆ ಒಟ್ಟು ವ್ಯವಹಾರದಲ್ಲಿ ಎ ಗ್ರೇಡ್ ಹೊಂದಿದೆ. ಸಂಘದಲ್ಲಿ ಒಟ್ಟು 6.65ಕೋಟಿ ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ರೂ. 17.46ಕೋಟಿ ಠೇವಣಿ ಸಂಗ್ರಹವಾಗಿದೆ. ರೂ.67.75 ಕೋಟಿ ಸದಸ್ಯರ ಹೊರಬಾಕಿ

ಕಡಬ ಸಿಎ ಬ್ಯಾಂಕ್ ನಿವ್ವಳ 1.89ಕೋಟಿ ಲಾಭ ► ಗ್ರಾಹಕರ ಅನುಕೂಲಕ್ಕೆ ಸೇಫ್ ಲಾಕರ್ ಸೌಲಭ್ಯ ಶೀಘ್ರದಲ್ಲಿ ಆರಂಭ Read More »

ಕರಾವಳಿ

ಅಮೆರಿಕದಲ್ಲಿ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಮನೋವೈದ್ಯ ► ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್,ಸೆ.15, ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಟ್ಟಾಡಿಸಿ ಚೂರಿಯಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆಯೊಂದು ಅಮೆರಿಕದಲ್ಲಿ ಬುಧವಾರ ನಡೆದಿದೆ. ಮೃತ ವೈದ್ಯರನ್ನು ತೆಲಂಗಾಣದ ಅಚ್ಚುತ್ ರೆಡ್ಡಿ (57 ವರ್ಷ) ಎಂಬುವುದಾಗಿ ಗುರುತಿಸಲಾಗಿದ್ದು. ಇವರು ಕಳೆದ 7 ತಿಂಗಳುಗಳಿಂದ ಅಮೆರಿಕಾದ  ಕೆನ್ಸಾಸ್ ನಗರದಲ್ಲಿರೋ ತನ್ನ ಕ್ಲಿನಿಕ್ ನಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿಯನ್ನು 21 ವರ್ಷದ ಉಮರ್ ರಷೀದ್ ದತ್ ಎಂದು ಗುರುತಿಸಲಾಗಿದೆ ಅಂತ ಅಮೆರಿಕಾದ

ಅಮೆರಿಕದಲ್ಲಿ ಭೀಕರವಾಗಿ ಹತ್ಯೆಯಾದ ಭಾರತೀಯ ಮೂಲದ ಮನೋವೈದ್ಯ ► ಆರೋಪಿಯ ಸೆರೆ Read More »

ಕರಾವಳಿ

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.15, ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡದಲ್ಲಿ ಕೀರ್ತಿಕಾ, ಶಮಾ, ಅಕ್ಷತಾ ಪಿ ಸಿ, ಧನುಶ್ರೀ, , ಲತಾ, ಚೇತನಾ, ಪವಿತ್ರಾ, ಕಾವ್ಯಶ್ರೀ, ವೇದಾವತಿ, ಚೇತನಾ ಎಸ್, ಯಶ, ದೀಕ್ಷಾ, ಪ್ರನಿತಾ, ಆಶಿತಾ, ಕೀರ್ತನಾ, ಭಾಗವಹಿಸಿದ್ದರು. ಈ ಪೈಕಿ ಅಕ್ಷತಾ ಪಿ ಸಿ, ಚೇತನಾ

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ ► ಶ್ರೀ ರಾಮಕುಂಜೇಶ್ವರ ಕಾಲೇಜಿನ ಬಾಲಕಿಯರು ರಾಜ್ಯಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ► ಸರಸ್ವತಿ ವಿದ್ಯಾಲಯದ ಚಿನ್ಮಯಿ ಬಿ. ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.15, ಉಪ್ಪಿನಂಗಡಿಯ ಇಂದ್ರಪ್ರಸ್ತ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಚಿನ್ಮಯಿ ಬಿ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ಕಡಬ ಸಮೀಪದ ಹಳೆಕೋಡಿಬೈಲು ನಿವಾಸಿ ಬಾಲಚಂದ್ರ ರಾವ್, ಮತ್ತು ಉಮಾಶಂಕರಿ ದಂಪತಿ ಪುತ್ರಿಯಾಗಿದ್ದಾಳೆ.

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ► ಸರಸ್ವತಿ ವಿದ್ಯಾಲಯದ ಚಿನ್ಮಯಿ ಬಿ. ರಾಜ್ಯ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಮದುವೆಯಾದ 6 ತಿಂಗಳಲ್ಲೆ ಪತ್ನಿಗೆ ಬೆಂಕಿಯಿಟ್ಟು ಕೊಲ್ಲಲು ಯತ್ನಿಸಿದ ಪತಿ ► ಘಟನೆ ಬಳಿಕ ಕುಟುಂಬ ನಾಪತ್ತೆ..!!!

(ನ್ಯೂಸ್ ಕಡಬ) newskadaba.com ಬಳ್ಳಾರಿ,ಸೆ.15, ವರದಕ್ಷಿಣೆ ಹಣದ ಆಸೆಗಾಗಿ ಗೃಹಿಣಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ ದಾರುಣ ಘಟನೆ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಪ್ಪಿಹಾಳ ತಾಂಡದಲ್ಲಿ ಗುರುವಾರ ನಡೆದಿದೆ. ಶೇ.80 ರಷ್ಟು ಸುಟ್ಟ ಗಾಯಳಿಂದ ಬಳಲುತ್ತಿರುವ ಸಂಗೀತಾರವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆನೇಕಲ್ ತಂಡದ ಸಂಗೀತಾ ಎಂಬ ಯುವತಿಯನ್ನು, ಮರಬ್ಬಿಪಾಳ್ ತಾಂಡದ ಪ್ರಕಾಶ್ ಎಂಬವರಿಗೆ ಕಳೆದ ಆರು ತಿಂಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಐವತ್ತು ಸಾವಿರ ನಗದು, ಮೂರು

ಮದುವೆಯಾದ 6 ತಿಂಗಳಲ್ಲೆ ಪತ್ನಿಗೆ ಬೆಂಕಿಯಿಟ್ಟು ಕೊಲ್ಲಲು ಯತ್ನಿಸಿದ ಪತಿ ► ಘಟನೆ ಬಳಿಕ ಕುಟುಂಬ ನಾಪತ್ತೆ..!!! Read More »

ಕರಾವಳಿ

ಮರ್ಧಾಳ: ಗುಡುಗು ಬರುವಾಗ ಪ್ಲಗ್ ತಪ್ಪಿಸಿದ ಮಹಿಳೆ ► ವಿದ್ಯುತ್ ಶಾಕ್ ಗೆ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಇಲ್ಲಿಗೆ ಸಮೀಪದ ಐತ್ತೂರು ಗ್ರಾಮದ ಕರ್ಮಾಯಿ ಸಮೀಪದ ತುಂಬ್ಯ ಎಂಬಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ತುಂಬ್ಯ ನಿವಾಸಿ ಮೋನ್ಸಿ ಅಬ್ರಹಾಂ ಎಂಬವರ ಪತ್ನಿ ಶೀಬಾ(36) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಲ್ಲಿ ಗುಡುಗು ಬರುತ್ತಿದೆಯೆಂದು ಮಿಕ್ಸಿಯ ಕನೆಕ್ಷನ್ ತಪ್ಪಿಸುವಾಗ ವಿದ್ಯುತ್ ಶಾಕ್ ಉಂಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

ಮರ್ಧಾಳ: ಗುಡುಗು ಬರುವಾಗ ಪ್ಲಗ್ ತಪ್ಪಿಸಿದ ಮಹಿಳೆ ► ವಿದ್ಯುತ್ ಶಾಕ್ ಗೆ ಮಹಿಳೆ ಮೃತ್ಯು Read More »

ಕರಾವಳಿ

ಅಂಗಡಿಯನ್ನು ತೆರವು ವಿಚಾರಕ್ಕೆ ಮನಃನೊಂದ ವ್ಯಾಪಾರಿ ► ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಕಾರವಾರ,ಸೆ.14, ಅಂಗಡಿ ತೆರವು ಮಾಡುವ ವಿಚಾರವಾಗಿ ವ್ಯಾಪಾರಿಯೊಬ್ಬರು ಮನಃನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಪುರಸಭೆ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಾಪಾರಿಯನ್ನು ರಾಮಚಂದ್ರ ನಾಗಪ್ಪ ನಾಯ್ಕ್ ಎಂದು ಗುರುತಿಸಲಾಗಿದೆ. ರಾಮಚಂದ್ರ ನಾಯ್ಕ್ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಪುರಸಭೆ ವ್ಯಾಪ್ತಿಯ ಕಟ್ಟಡವೊಂದರಲ್ಲಿ ಅಂಗಡಿಯನ್ನು ಹೊಂದಿದ್ದರು. ಈ ಅಂಗಡಿಯನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಂದ ಆಡಳಿತ ಮಂಡಳಿಗೆ ಆದೇಶವನ್ನು ನೀಡಲಾಗಿತ್ತು. ಈ ಆದೇಶದಂತೆ ಅಂಗಡಿಯನ್ನು ತೆರವುಗೊಳಿಸಲು ಮುಂದಾಗಿದ್ದ ವೇಳೆ ರಾಮಚಂದ್ರ

ಅಂಗಡಿಯನ್ನು ತೆರವು ವಿಚಾರಕ್ಕೆ ಮನಃನೊಂದ ವ್ಯಾಪಾರಿ ► ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನ Read More »

ಕರಾವಳಿ

60 ಜನರಿದ್ದ ದೋಣಿ ಮಗುಚಿ ಬಿದ್ದು ದುರಂತ ► 19 ಮಂದಿ ನೀರು ಪಾಲು ►ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ..!!!

(ನ್ಯೂಸ್ ಕಡಬ) newskadaba.com ಲಕ್ನೋ,ಸೆ. 60 ಜನರನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದ ಪರಿಣಾಮ 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರಪ್ರದೇಶದ ಭಾಗ್ಪತ್ ಬಳಿಯ ಯಮುನಾ ನದಿಯಲ್ಲಿ ಸಂಭವಿಸಿದೆ. ಈ ದುರಂತದಲ್ಲಿ ಸುಮಾರು 19 ಜನ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇನ್ನಷ್ಟು ಮಂದಿ ಮುಳುಗಿರುವ ಆತಂಕ ವ್ಯಕ್ತವಾಗಿದೆ. ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಕೊಂಡೊಯ್ಯುತ್ತಿದ್ದುದ್ದರಿಂದ ಈ ಅವಘಡ ಸಂಭವಿಸಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ, 12 ಮಂದಿಯನ್ನ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ

60 ಜನರಿದ್ದ ದೋಣಿ ಮಗುಚಿ ಬಿದ್ದು ದುರಂತ ► 19 ಮಂದಿ ನೀರು ಪಾಲು ►ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ..!!! Read More »

ಕರಾವಳಿ

ಖಾಸಗಿ ಬಸ್- ಲಾರಿ ಢಿಕ್ಕಿ ► ಇಬ್ಬರ ಮೃತ್ಯು

(ನ್ಯೂಸ್ ಕಡಬ) newskadaba.com. ಚಿತ್ರದುರ್ಗ, ಸೆ.14, ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ನಿಂತಿದ್ದ ಲಾ ರಿಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ಗುರುವಾರ ಮುಂಜಾನೆ ನಡೆದಿದೆ. ಸೂರತ್ ಮೂಲದ 30 ವರ್ಷದ ಅರುಣ್ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಣೇಕಲ್ ಗ್ರಾಮದ ನಿವಾಸಿ 30 ವರ್ಷದ ಪ್ರಶಾಂತ ಮೃತಪಟ್ಟ ದುರ್ದೈವಿಗಳು. ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಸಮೀಪ

ಖಾಸಗಿ ಬಸ್- ಲಾರಿ ಢಿಕ್ಕಿ ► ಇಬ್ಬರ ಮೃತ್ಯು Read More »

ಕರ್ನಾಟಕ
Scroll to Top