ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ► ಸರಸ್ವತಿ ವಿದ್ಯಾಲಯದ ಚಿನ್ಮಯಿ ಬಿ. ರಾಜ್ಯ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.15, ಉಪ್ಪಿನಂಗಡಿಯ ಇಂದ್ರಪ್ರಸ್ತ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಚಿನ್ಮಯಿ ಬಿ ಸಂಸ್ಕೃತ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈಕೆ ಕಡಬ ಸಮೀಪದ ಹಳೆಕೋಡಿಬೈಲು ನಿವಾಸಿ ಬಾಲಚಂದ್ರ ರಾವ್, ಮತ್ತು ಉಮಾಶಂಕರಿ ದಂಪತಿ ಪುತ್ರಿಯಾಗಿದ್ದಾಳೆ.

Scroll to Top