Kadaba

ನಾಳೆ (ಅ.05 ರಂದು) ಆಲಂಕಾರಿನಲ್ಲಿ ► ಎಸ್ಸಿ ಮೋರ್ಚಾದ “ಸಮರ್ಥನಾ ಸಮಾವೇಶ”

(ನ್ಯೂಸ್ ಕಡಬ) newskadaba.com ಕಡಬ,ಅ.3.  ಸುಳ್ಯ ಮಂಡಲ ಎಸ್ಸಿ ಮೋರ್ಚಾದ ವತಿಯಿಂದ ಅ.05 ರಂದು(ಗುರುವಾರ) ಆಲಂಕಾರಿನಲ್ಲಿ ನಡೆಯಲಿರುವ ಸಮರ್ಥನಾ ಸಮಾವೇಶದ ಹಿನ್ನೆಲೆಯಲ್ಲಿ ಸಮಲೋಚನ ಸಭೆಯು ಕಡಬ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಮರ್ದಾಳ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಯಿತು. ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಪ್ರದಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಯೋಜನೆಗಳ ಮಾಹಿತಿ ಹಾಗೂ ಈ ಹಿಂದೆ ರಾಜ್ಯವನ್ನಾಳಿದ ಬಿಜೆಪಿ ಸರಕಾರದ ಅವಧಿಯಲ್ಲಿನ ಜನಪರ ಯೋಜನೆಗಳನ್ನು ಜನರ ಮುಂದಿಡುವ ಮೂಲಕ […]

ನಾಳೆ (ಅ.05 ರಂದು) ಆಲಂಕಾರಿನಲ್ಲಿ ► ಎಸ್ಸಿ ಮೋರ್ಚಾದ “ಸಮರ್ಥನಾ ಸಮಾವೇಶ” Read More »

ಕರಾವಳಿ

ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ► ನವರಾತ್ರಿ ಉತ್ಸವ, ಅಕ್ಷರಭ್ಯಾಸ

(ನ್ಯೂಸ್ ಕಡಬ) newskadaba.com ಕಡಬ,ಅ.3. ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ  ಪ್ರತಿ ದಿನ ವೈದಿಕ ಕಾರ್ಯಕ್ರಮ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆಗಳು ನಡೆಯಿತು. ವಿಶೇಷವಾಗಿ ಆಯುಧ ಪೂಜೆಯ ದಿನದಂದು ವಾಹನ ಪೂಜೆ ಹಾಗೂ ವಿಜಯದಶಮಿಯಂದು ನವನ್ನಾ ಭೋಜನ, ಅಕ್ಷರಾಭ್ಯಸ, ಅನ್ನಪ್ರಸಾನ ಮೊದಲಾದ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಚಿತ್ತರಂಜನ್ ರೈ ಮಾಣಿಗ, ಕಾರ್ಯದರ್ಶಿ ನಾರಾಯಣ ಬಲ್ಯ, ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ರೈ ಮೊದಲಾದವರು

ಬಲ್ಯ ಶ್ರೀ ಉಮಾಮಹೇಶ್ವರಿ ದೇವಸ್ಥಾನ ► ನವರಾತ್ರಿ ಉತ್ಸವ, ಅಕ್ಷರಭ್ಯಾಸ Read More »

ಕರಾವಳಿ

ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಅ.3. ಗಾಂಧಿ ಜಯಂತಿ ಪ್ರಯುಕ್ತ ಪಿಜಕ್ಕಳ ಕುಮಾರಧಾರ ಯುವಕ ಮಂಡಲ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಿಜಕ್ಕಳ  ರಸ್ತೆ ಬದಿಯನ್ನು ಸ್ವಚ್ಚಗೊಳಿಸಲಾಯಿತು.  ಕುಮಾರಧಾರ ಯುವಕ ಮಂಡಲದ ಗೌರವಾಧ್ಯಕ್ಷ ಶ್ಯಾಮ್ ತೋಮಸ್, ಸ್ಥಾಪಕಾಧ್ಯಕ್ಷ ಸುಂದರ ಗೌಡ, ಅಧ್ಯಕ್ಷ ರಂಜೀವ್, ಕಾರ್ಯದರ್ಶಿ ಅಶ್ವತ್ ಪಿ.ಕೆ. ಸದಸ್ಯರಾದ ಕಾರ್ತಿಕ್ ಎಸ್. ಯೋಗೀಶ್, ಸುರೇಶ್, ಸಚಿನ್ ಪಿ.ಆರ್., ಕಿರಣ್ ಕುಮಾರ್ ಕೋಡಿ, ನವನಿತ್ ಪಿ.ಯಸ್., ಯತೀಂದ್ರ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಕುಮಾರಧಾರ ಯುವಕ ಮಂಡಲ ► ಪಿಜಕ್ಕಳ ರಸ್ತೆಯ ಸ್ವಚ್ಛತಾ ಕಾರ್ಯಕ್ರಮ Read More »

ಕರಾವಳಿ

ಕಡಬ: ಗಾಂಧೀ ಜಯಂತಿ ಆಚರಣೆ ► ಪಂಚಾಯತ್ ವಠಾರದಲ್ಲಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ಗ್ರಾ.ಪಂ. ವತಿಯಿಂದ ಗಾಂಧೀ ಜಯಂತಿ ಆಚರಣೆಯನ್ನು ಪಂಚಾಯತ್ ಸಭಾಭವನದಲ್ಲಿ ಸೋಮವಾರ ಆಚರಿಸಿದರು. ಗ್ರಾ.ಪಂ. ಅಧ್ಯಕ್ಷರಾದ ಬಾಬು ಮುಗೇರರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಗ್ರಾಮ ಸಮೃದ್ಧಿ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮವಾಗಿ ಪಂಚಾಯತ್ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ತಾ.ಪಂ.ಸದಸ್ಯ ಪಝಲ್ ಕೋಡಿಂಬಾಳ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಕೆ.ಎಂ. ಹನೀಫ್, ನಾರಾಯಣ ಪುಜಾರಿ, ಶೆರೀಫ್ ಎ.ಎಸ್., ಶಾಲಿನಿ ಸತೀಶ್ ನಾೖಕ್, ಹರ್ಷ ಕೋಡಿ, ಜಯಂತಿ, ಸರೋಜಿನಿ

ಕಡಬ: ಗಾಂಧೀ ಜಯಂತಿ ಆಚರಣೆ ► ಪಂಚಾಯತ್ ವಠಾರದಲ್ಲಿ ಸ್ವಚ್ಛತೆ Read More »

ಕರಾವಳಿ

ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಅ.03. ತಮ್ಮ ತೋಟದಲ್ಲಿನ ಕೆರೆಗೆ ಶಾಲಾ ಬಾಲಕನೋರ್ವ ಕಾಲು ಜಾರಿ ಮೃತಪಟ್ಟ ಘಟನೆ ಕೊಂಬಾರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಇಲ್ಲಿನ ಕೊಂಬಾರು ಗ್ರಾಮದ ಕೊಡೆಂಕೀರಿ ನಿವಾಸಿ ನಾಗೇಶ್ ಎಂಬವರ ಪುತ್ರ ರಕ್ಷಿತ್(8) ಮೃತಪಟ್ಟ ದುರ್ದೈವಿ. ತಮ್ಮ ಮಗನನ್ನು ಮನೆಯಲ್ಲಿ ಬಿಟ್ಟು ತಂದೆ ತಾಯಿ ಪೇಟೆ ಕಡೆ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಾಗ ರಕ್ಷಿತ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಪಕ್ಕದಲ್ಲೆಲ್ಲಾ ಹುಡುಕಾಡಿದಾಗ ರಕ್ಷಿತ್ ನ ಮೃತದೇಹ ಕೆರೆಯಲ್ಲಿ ಕಂಡುಬಂದಿದೆ. ಸ್ಥಳಕ್ಕೆ ಕಡಬ

ಕೊಂಬಾರು: ಬಾವಿಗೆ ಬಿದ್ದು ಬಾಲಕ ಮೃತ್ಯು Read More »

ಕರಾವಳಿ

ಕಡಬ: ಮಾತೃಪೂರ್ಣ ಯೋಜನೆಗೆ ಚಾಲನೆ ► ತಲೆಗೆ ಹೂ ಮುಡಿಸಿ, ಕೈಗೆ ಬಳೆತೊಡಿಸಿ, ಹಣೆಗೆ ಕುಂಕುಮ ಇಟ್ಟು ಗರ್ಭಿಣಿ- ಭಾಣಂತಿಯರಿಗೆ ಗೌರವ

(ನ್ಯೂಸ್ ಕಡಬ) newskadaba.com ಕಡಬ,ಅ.3. ಕರ್ನಾಟಕ ಸರ್ಕಾರವು ಜಾರಿಗೆ ತಂದ ಮಾತೃಪೂರ್ಣ ಯೋಜನೆಯ ಉದ್ಘಾಟನೆಯು ಸೋಮವಾರ ಕಡಬ ಚರ್ಚು ಅಂಗನವಾಡಿಯಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಾತೃಪೂರ್ಣ ಯೋಜನೆಯು ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ರೂಪಿಸಿರುವ ಉತ್ತಮ ಯೋಜನೆಯಾಗಿದೆ ಈ ಯೋಜನೆ ನಮ್ಮ ದ.ಕ.ಹಾಗೂ ಉಡುಪಿ ಜಿಲ್ಲೆಗೆ ಔಚಿತ್ಯವಾಲ್ಲವಾದರೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೌಷ್ಠಿಕ ಆಹಾರ ಸರಿಯಾಗಿ ದೊರಕುವುದಿಲ್ಲ ಇದನ್ನು ಗಮನದಲ್ಲಿಟ್ಟು ಸರ್ಕಾರ ಯೋಜನೆ ರೂಪಿಸಿದೆ. ಇಂತಹ

ಕಡಬ: ಮಾತೃಪೂರ್ಣ ಯೋಜನೆಗೆ ಚಾಲನೆ ► ತಲೆಗೆ ಹೂ ಮುಡಿಸಿ, ಕೈಗೆ ಬಳೆತೊಡಿಸಿ, ಹಣೆಗೆ ಕುಂಕುಮ ಇಟ್ಟು ಗರ್ಭಿಣಿ- ಭಾಣಂತಿಯರಿಗೆ ಗೌರವ Read More »

ಕರಾವಳಿ

ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಗಾಂಧಿಜಯಂತಿ ದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವನ್ನು ಸೋಮವಾರ ನಡೆಸಲಾಯಿತು. ಜಿ.ಪಂ.ಸದಸ್ಯರಾದ ಪಿ.ಪಿ ವರ್ಗೀಸ್ರವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವುದರೊಂದಿಗೆ ದೇಶಾದ್ಯಂತ ಗಾಂಧಿ ಜಯಂತಿಯನ್ನು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನಮ್ಮ ಕಡಬ ತಾಲೂಕಿನಾದ್ಯಂತ ಎಲ್ಲಾ ಗ್ರಾ.ಪಂ.ನಲ್ಲಿ ಸಂಘಸಂಸ್ಥೆಗಳಲ್ಲಿ, ಶಾಲಾ ಕಾಲೇಜುಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪರಿಸರದಲ್ಲಿ ಸಂಪೂರ್ಣ ಸ್ವಚ್ಚತೆಯನ್ನು

ನೂಜಿಬಾಳ್ತಿಲ: ಗಾಂಧಿಜಯಂತಿ ದಿನಾಚರಣೆ ► ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾರವಾರ,ಅ.03. ಸಮುದ್ರಕ್ಕೆ ಆಟವಾಡಲು ತೆರಳಿದ್ದ ಬಾಲಕರಿಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರ್ಡೇಶ್ವರದ ಸಣ್ಣಬಾವಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ. ಗಣೇಶ ನಾಯ್ಕ(10) ಮತ್ತು ವಿನಾಯಕ ನಾಯ್ಕ(09) ಮೃತ ದುರ್ದೈವಿಗಳು. ಸೋಮವಾರ ಸಂಜೆ ನೀರಲ್ಲಿ ಆಟವಾಡುತ್ತಿದ್ದ ವೇಳೆ ಇಬ್ಬರು ಬಾಲಕರು ಸಮುದ್ರದ ಅಲೆಗಳಿಗೆ ಸಿಳುಕಿ ಕೊಚ್ಚಿ ಹೋಗಿದ್ದರು. ತಡರಾತ್ರಿ ಹುಡುಕಾಟ ನಡೆಸಿದರೂ ಇಬ್ಬರು ಬಾಲಕರ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಿಗ್ಗೆ ಗ್ರಾಮದ ಕಡಲತೀರದಲ್ಲಿ ಬಾಲಕರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು

ಸಮುದ್ರದ ಅಲೆಗೆ ಸಿಳುಕಿ ► ಇಬ್ಬರು ಬಾಲಕರು ನೀರುಪಾಲು Read More »

ಕರಾವಳಿ

ಅ.05: ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಬೃಹತ್ ಸಮರ್ಥನಾ ಸಮಾವೇಶ ► ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಅ.03. ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಅಕ್ಟೋಬರ್ 05 ರಂದು ಆಲಂಕಾರು ರೈತ ಭವನದಲ್ಲಿ ನಡೆಯಲಿರುವ ಬೃಹತ್ ಸಮರ್ಥನಾ ಸಮಾವೇಶದ ಪೂರ್ವ ಭಾವಿ ಸಭೆಯು ಮರ್ಧಾಳ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀಕೃಷ್ಣ ಶೆಟ್ಟಿ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಸುಳ್ಯ ಮಂಡಲದ ಉಪಾಧ್ಯಕ್ಷರಾದ ಪುಲಸ್ತ್ಯಾ ರೈ, ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಾದ ವಾಡ್ಯಪ್ಪ ಗೌಡ

ಅ.05: ಬಿಜೆಪಿ ಎಸ್ಸಿ ಮೋರ್ಛಾ ವತಿಯಿಂದ ಬೃಹತ್ ಸಮರ್ಥನಾ ಸಮಾವೇಶ ► ಮರ್ಧಾಳ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ Read More »

ಕರಾವಳಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ► ಇಂದು ಮಂಗಳೂರಿಗೆ ಭೇಟಿ

 (ನ್ಯೂಸ್ ಕಡಬ) newskadaba.com  ಮಂಗಳೂರು,ಅ.02. ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹೀಗಾಗಿ ಈ ಕ್ಷೇತ್ರಗಳನ್ನು ಹೊಡೆದುರುಳಿಸಲು ಬಿಜೆಪಿ ಚಾಣಾಕ್ಷ ಅಮಿತ್ ಶಾ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರಕೋಟೆ ಮಾತ್ರವಲ್ಲ, ಆರ್‍ಎಸ್‍ಎಸ್, ಹಿಂದೂ ಸಂಘಟನೆಗಳಿಂದ ಬಲಶಾಲಿಯಾಗಿದೆ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯು ಅತೀ ಹೆಚ್ಚು ಶಾಸಕ ಸ್ಥಾನಗಳನ್ನು ಪಡೆಯಬೇಕೆಂದು ಬಿಜೆಪಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ► ಇಂದು ಮಂಗಳೂರಿಗೆ ಭೇಟಿ Read More »

ಕರಾವಳಿ
Scroll to Top