ಕಡಬ: ಗಾಂಧೀ ಜಯಂತಿ ಆಚರಣೆ ► ಪಂಚಾಯತ್ ವಠಾರದಲ್ಲಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಕಡಬ,ಅ.3. ಇಲ್ಲಿನ ಗ್ರಾ.ಪಂ. ವತಿಯಿಂದ ಗಾಂಧೀ ಜಯಂತಿ ಆಚರಣೆಯನ್ನು ಪಂಚಾಯತ್ ಸಭಾಭವನದಲ್ಲಿ ಸೋಮವಾರ ಆಚರಿಸಿದರು.

ಗ್ರಾ.ಪಂ. ಅಧ್ಯಕ್ಷರಾದ ಬಾಬು ಮುಗೇರರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಗ್ರಾಮ ಸಮೃದ್ಧಿ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮವಾಗಿ ಪಂಚಾಯತ್ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ತಾ.ಪಂ.ಸದಸ್ಯ ಪಝಲ್ ಕೋಡಿಂಬಾಳ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಗ್ರಾ.ಪಂ.ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಹಾಜಿ ಕೆ.ಎಂ. ಹನೀಫ್, ನಾರಾಯಣ ಪುಜಾರಿ, ಶೆರೀಫ್ ಎ.ಎಸ್., ಶಾಲಿನಿ ಸತೀಶ್ ನಾೖಕ್, ಹರ್ಷ ಕೋಡಿ, ಜಯಂತಿ, ಸರೋಜಿನಿ ಆಚಾರ್ಯ, ಕೃಷ್ಣ ನಾೖಕ, ಸುಶೀಲ, ಹಿರಿಯರಾದ ಅಹಮ್ಮದ್ ಕುಂಞ ಕಡಬ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Scroll to Top