Kadaba

ಆರೇಲ್ತಡಿ ಶಾಲೆಯಲ್ಲಿ ► ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ

(ನ್ಯೂಸ್ ಕಡಬ) newskadaba.com ಪುತ್ತೂರು,ಅ.4. ಇಲ್ಲಿನ ಸವಣೂರು ಗ್ರಾಮದ ಆರೆಲ್ತಡಿ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಯಂತಿಯನ್ನು ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು. ಶಿಕ್ಷಣತಜ್ಞ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರು ದೀಪಬೆಳಗಿಸಿ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ದಿನ ದೇಶದಾದ್ಯಂತ ಇಂತಹ ಮಹಾತ್ಮರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದು ಸ್ವಚ್ಚಭಾರತ ದಿನವನ್ನಾಗಿಯೂ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ ಗಾಂಧೀಜಿಯ ಕನಸುಗಳನ್ನು ನನಸು ಮಾಡುವ ಪಣತೊಡೋಣ. ಮಹಾತ್ಮರ ಆದರ್ಶ, ಮೌಲ್ಯಗಳ ದಾರಿಯಲ್ಲಿ […]

ಆರೇಲ್ತಡಿ ಶಾಲೆಯಲ್ಲಿ ► ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ Read More »

ಕರಾವಳಿ

ಪುತ್ತೂರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀವು ಪಡೆಯಬೇಕೆ..??? ► ಹಾಗಿದ್ದರೆ ಇದನ್ನು ಪೂರ್ತಿಯಾಗಿ ಓದಿರಿ…

(ನ್ಯೂಸ್ ಕಡಬ) newskadaba.com ಪುತ್ತೂರು,ಅ.4. ವಿದ್ಯಾಮಾತಾ ಫೌಂಡೇಶನ್ ಇದರ ವತಿಯಿಂದ “ಪುತ್ತೂರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಗೆ ಮುಕ್ತ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂ ಮೊತ್ತ, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ ಎಂದು ವಿದ್ಯಾಮಾತಾ ಫೌಂಡೇಶನ್ ಅಧ್ಯಕ್ಷ ಭಾಗ್ಯೇಶ್ ರೈ ಹೇಳಿದರು. ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶಸ್ತಿಯು ಪುತ್ತೂರು ತಾಲೂಕಿನ ಸರಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಅನ್ವಯಯವಾಗುತ್ತದೆ. ಪ್ರಶಸ್ತಿಗೆ ಅರ್ಹ ಶಿಕ್ಷಕರನ್ನು ವಿದ್ಯಾರ್ಥಿಗಳು, ಸಾರ್ವಜನಿಕರು vidyamaatha app ನ್ನು play store

ಪುತ್ತೂರು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀವು ಪಡೆಯಬೇಕೆ..??? ► ಹಾಗಿದ್ದರೆ ಇದನ್ನು ಪೂರ್ತಿಯಾಗಿ ಓದಿರಿ… Read More »

ಕರಾವಳಿ

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರಿಂದ ► ಆಲಂಕಾರಿನಲ್ಲಿ ಶ್ರಮದಾನ..!!!

(ನ್ಯೂಸ್ ಕಡಬ) newskadaba.com ಕಡಬ,ಅ.4. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಲಂಕಾರು ಒಕ್ಕೂಟ ಮತ್ತು ಶರವೂರು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಆಲಂಕಾರು ಶ್ರೀದುರ್ಗಾಂಬ ಪದವಿ ಪೂರ್ವ ಕಾಲೇಜಿನ ವಠಾರ ಮತ್ತು ನೆಡುತೋಪು ಹಾಗು ಕ್ರೀಡಾಂಗಣದ ಕಳೆಕೀಳುವ ಮೂಲಕ ಒಂದು ದಿನದ ಶ್ರಮದಾನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯಂ.ದಯಾನಂದ ರೈ, ಪ್ರಾಂಶುಪಾಲ ನವೀನ್ ರೈ, ಮುಖ್ಯಗುರು ಸತ್ಯನಾರಾಯಣ ಭಟ್.ಯು, ಶಿಕ್ಷಕ ಶ್ರೀಪತಿ ರಾವ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಮರಾಜ ಸಿಂಧುಗುರಿ, ದಯಾನಂದ ಗೌಡ ಆಲಡ್ಕ,

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರಿಂದ ► ಆಲಂಕಾರಿನಲ್ಲಿ ಶ್ರಮದಾನ..!!! Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ► ಕ್ರೀಡೆಯಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ,ಅ.3. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ನಡೆದ ಕಡಬ ವಲಯಮಟ್ಟದ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕಿಯರ ತಂಡ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಭಾಗವಹಿಸಿದ ವಿವಿಧ ಸ್ಪರ್ಧಾಳುಗಳಿಗೆ ಬಹುಮಾನ ದೊರಕಿದೆ.

ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ ► ಕ್ರೀಡೆಯಲ್ಲಿ ತಂಡಕ್ಕೆ ಸಮಗ್ರ ಪ್ರಶಸ್ತಿ Read More »

ಕ್ರೀಡಾ ನ್ಯೂಸ್

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.4. ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಅಂಗವಾಗಿ, ಆಯುಧಪೂಜೆ, ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ವಿಧಿವಿಧಾನಗಳನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಶಶಿ ಗಿರಿವನ ನಾಲೂರು ನೆರವೇರಿಸಿದರು. ಅರ್ಚಕ ಕೃಷ್ಣ ಹೆಬ್ಬಾರ್ ಸಹಕರಿಸಿದರು. ನವರಾತ್ರಿ ಸಂದರ್ಭದಲ್ಲಿ ದೇವಳದಲ್ಲಿ ಆಯುಧಪೂಜೆ,  ಅಕ್ಷರಾಭ್ಯಾಸ ಹಾಗೂ ಹೊಸಅಕ್ಕಿ ನೈವೇದ್ಯ ಕಾರ್ಯಕ್ರಮವು ಜರುಗಿತು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಲೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ ► ನವರಾತ್ರಿ ಉತ್ಸವ, ಹೊಸಅಕ್ಕಿ ನೈವೇದ್ಯ Read More »

ಕರಾವಳಿ

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ► ನವರಾತ್ರಿ ವಿಶೇಷ ಪೂಜೆ

(ನ್ಯೂಸ್ ಕಡಬ) newskadaba.com ಕಡಬ,ಅ.4. ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ, ಆಯುಧ ಪೂಜೆಯು ವಿಜೃಂಭಣೆಯಿಂದ ನಡೆಯಿತು. ನವರಾತ್ರಿ ಅಂಗವಾಗಿ ಪ್ರತಿದಿನ ರಾತ್ರಿ ದೇವರ ಸನ್ನಿಧಿಯಲ್ಲಿ ಭಜನಾ ಕಾರ್ಯಕ್ರಮ, ಶ್ರೀದುರ್ಗಾಪೂಜೆ, ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಮತ್ತು ಅಲಂಕಾರ,ಅರ್ಚನೆ ಹೂವಿನ ಪೂಜೆ ವಿಶೇಷ ಸೇವೆಗಳು ನಡೆದು ದೇವರಿಗೆ ನೈವೇದ್ಯ ಸಮರ್ಪಣೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ನಡೆದವು. ವಿಶೇಷವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಸಲಾಯಿತು. ಆಯುಧ ಪೂಜೆ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಅಭ್ಯಾಂಕರ್

ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ ► ನವರಾತ್ರಿ ವಿಶೇಷ ಪೂಜೆ Read More »

ಕರಾವಳಿ

ಗಂಡಿಬಾಗಿಲು: ಎಸ್.ಕೆ.ಎಸ್.ಬಿ.ವಿ.ನೂತನ ಅಧ್ಯಕ್ಷರಾಗಿ ► ಮಹಮ್ಮದ್ ಫಝಲ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಅ.4, ಗಂಡಿಬಾಗಿಲು ಹಿಮಾಯತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಸಮಸ್ತ ಕೇರಳ ಸುನ್ನಿ ಬಾಲವೇದಿ (ಎಸ್.ಕೆ.ಎಸ್.ಬಿ.ವಿ.) ಇದರ 2017-18ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹಮ್ಮದ್ ಫಝಲ್, ಕಾರ್ಯದರ್ಶಿಯಾಗಿ ಅನ್ವರ್ ಹುಸೈನ್, ಆಯ್ಕೆಯಾಗಿದ್ದಾರೆ. ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಅನಸ್ ತಂಙಳ್ ಅಧ್ಯಕ್ಷತೆಯಲ್ಲಿ ಸದರ್ ಮುಅಲ್ಲಿಂ ಅಬ್ದುಲ್ ರಹಿಮಾನ್ ಅರ್ಶದಿ, ಮುಅಲ್ಲಿಂ ರಫೀಕ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ರಾಶಿದ್ . ಉಪಾಧ್ಯಕ್ಷರಾಗಿ ಅಹ್ಮದ್ ಅಫ್ಸಲ್, ಮಹಮ್ಮದ್ ಮುಸ್ತಫ

ಗಂಡಿಬಾಗಿಲು: ಎಸ್.ಕೆ.ಎಸ್.ಬಿ.ವಿ.ನೂತನ ಅಧ್ಯಕ್ಷರಾಗಿ ► ಮಹಮ್ಮದ್ ಫಝಲ್ ಆಯ್ಕೆ Read More »

ಕರಾವಳಿ

ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ► ನೂಜಿಬಾಳ್ತಿಲ ಬೆಥನಿ ಕಾಲೇಜಿನಲ್ಲಿ ವಾರ್ಷಿಕ ವಿಶೇಷ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ,ಅ.4. ದೇವರು ನಮ್ಮನ್ನು ಮನುಷ್ಯರನ್ನಾಗಿ ಈ ಲೋಕದಲ್ಲಿ ಸೃಷ್ಟಿಸಿದ್ದು ನಾವು ಉತ್ತಮ ಶಿಕ್ಷಣ ಪಡೆಯುವುದರೊಂದಿಗೆ ಸಾಮಾಜಿಕ ವಿಚಾರಧಾರೆಗಳನ್ನು ಅರಿತುಕೊಂಡು ಸಮಾಜದಲ್ಲಿ ಪ್ರೀತಿ, ವಿಶ್ವಾಸದಿಂದ ಶಾಂತಿ ಸೌಹಾರ್ದತೆಯಿಂದ ಬದುಕಬೇಕು ಎಂದು ಪುತ್ತೂರು ಧರ್ಮಪ್ರಾಂತ್ಯ ನೂತನ ಧರ್ಮಾಧ್ಯಕ್ಷ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಹೇಳಿದರು. ನೂಜಿಬಾಳ್ತಿಲ ಬೆಥನಿ ಸಂ.ಪ.ಪೂ.ಕಾಲೇಜಿನಲ್ಲಿ ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಒಂದು ವಾರಗಳ ನಡೆಯುವ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲರ ಒಳಿತನ್ನು ಬಯಸಿ ಜೀವನ ಮಾಡುವುದೆ ನಿಜವಾದ ಧರ್ಮ.

ಕಡಬ ಸ.ಪ.ಪೂ.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ► ನೂಜಿಬಾಳ್ತಿಲ ಬೆಥನಿ ಕಾಲೇಜಿನಲ್ಲಿ ವಾರ್ಷಿಕ ವಿಶೇಷ ಶಿಬಿರ Read More »

ಕರಾವಳಿ

ರಾಮಕುಂಜೇಶ್ವರ ಪ್ರೌಢ ಶಾಲೆಯಲ್ಲಿ ಗಾಂಧಿಜಯಂತಿ ►ಅಹಿಂಸೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ – ಎಂ. ಸತೀಶ್ ಭಟ್ 

(ನ್ಯೂಸ್ ಕಡಬ) newskadaba.com ಕಡಬ,ಅ.4. ಸತ್ಯ ಧರ್ಮ ನ್ಯಾಯ ನೀತಿಯ ಪರಿಪಾಲನೆ ಮಾಡಿದ ಮಹಾತ್ಮ ಗಾಂಧೀಜಿಯ ಜೀವನ ಶೈಲಿಯನ್ನು ನಾವೆಲ್ಲ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಸತೀಶ್ ಭಟ್  ತಿಳಿಸಿದರು. ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ  ಪ್ರಾಂಶುಪಾಲ ಎಂ. ಸತೀಶ್ ಭಟ್  ಅವರು ಅಹಿಂಸೆಯಿಂದಲೇ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ತೋರಿಸಿಕೊಟ್ಟ ಗಾಂಧೀಜಿ ನಮಗೆಲ್ಲ ಆದರ್ಶ ಎಂದರು.

ರಾಮಕುಂಜೇಶ್ವರ ಪ್ರೌಢ ಶಾಲೆಯಲ್ಲಿ ಗಾಂಧಿಜಯಂತಿ ►ಅಹಿಂಸೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ – ಎಂ. ಸತೀಶ್ ಭಟ್  Read More »

ಕರಾವಳಿ

► ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ, ಹೊಸ್ತಾರೋಹಣ, ಆಯುಧ ಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಅ.3. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ (ಹೊಸಅಕ್ಕಿ ನೈವೇದ್ಯ) ಕಾರ್ಯಕ್ರಮ ಆಯುಧ ಪೂಜೆ  ನಡೆಯಿತು. ದೇವಳದ ಪ್ರಧಾನ ಅರ್ಚಕ ಶ್ರೀಗೋಪಾಲಕೃಷ್ಣ ಕೆದಿಲಾಯ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದರು. ಸೆ 28ರಂದು ಮಧ್ಯಾಹ್ನ ಹೊಸಅಕ್ಕಿ ನೈವೇದ್ಯ, ಸಾರ್ವಜನಿಕ ಅನ್ನ ಸಂತರ್ಪಣೆ, ಸೆ 29ರಂದು ಬೆಳಗ್ಗೆ ಆಯುಧ ಪುಜೆಯು ನಡೆಯಿತು ಪ್ರತಿದಿನ ದೇವರಿಗೆ ನವರಾತ್ರಿ ವಿಶೇಷ ಪುಜೆ ಹಾಗೂ ಶ್ರೀದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ

► ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ನವರಾತ್ರಿ ಪೂಜೆ, ಹೊಸ್ತಾರೋಹಣ, ಆಯುಧ ಪೂಜೆ Read More »

ಕರಾವಳಿ
Scroll to Top