ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರಿಂದ ► ಆಲಂಕಾರಿನಲ್ಲಿ ಶ್ರಮದಾನ..!!!

(ನ್ಯೂಸ್ ಕಡಬ) newskadaba.com ಕಡಬ,ಅ.4. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಲಂಕಾರು ಒಕ್ಕೂಟ ಮತ್ತು ಶರವೂರು ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಆಲಂಕಾರು ಶ್ರೀದುರ್ಗಾಂಬ ಪದವಿ ಪೂರ್ವ ಕಾಲೇಜಿನ ವಠಾರ ಮತ್ತು ನೆಡುತೋಪು ಹಾಗು ಕ್ರೀಡಾಂಗಣದ ಕಳೆಕೀಳುವ ಮೂಲಕ ಒಂದು ದಿನದ ಶ್ರಮದಾನವನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಯಂ.ದಯಾನಂದ ರೈ, ಪ್ರಾಂಶುಪಾಲ ನವೀನ್ ರೈ, ಮುಖ್ಯಗುರು ಸತ್ಯನಾರಾಯಣ ಭಟ್.ಯು, ಶಿಕ್ಷಕ ಶ್ರೀಪತಿ ರಾವ್, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ರಾಮರಾಜ ಸಿಂಧುಗುರಿ, ದಯಾನಂದ ಗೌಡ ಆಲಡ್ಕ, ಆಲಂಕಾರು ಒಕ್ಕೂಟದ ಅಧ್ಯಕ್ಷ ದಯಾನಂದ ಗೌಡ ಬಡ್ಡಮೆ, ಶರವೂರು ಒಕ್ಕೂಟದ ಅಧ್ಯಕ್ಷ ಶೀನಪ್ಪ ಕುಂಬಾರ, ಸೇವಾಪ್ರತಿನಿದಿಗಳಾದ ಪ್ರೇಮ, ಉಷಾ, ಶಾರದಾ, ಜನಜಾಗೃತಿ ವೇದಿಕೆ ಆಲಂಕಾರು ಗ್ರಾಮ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ, ಮೊದಲಾದವರು ಉಪಸ್ಥಿತರಿದ್ದರು.

Scroll to Top