Kadaba

ಕಡಬ: ಬೈಕ್ ಮತ್ತು ಮಾರುತಿ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com, ಕಡಬ, ಡಿ.11  ಬೈಕ್ ಮತ್ತು ಮಾರುತಿ ನಡುವೆ ಡಿಕ್ಕಿ ಸಂಭವಿಸಿ ವಾಹನಗಳು ಜಖಂಗೊಂಡು ಬೈಕ್ ಸವಾರನಿಗೆ ಗಾಯಗೊಂಡ ಘಟನೆ ಕಡಬ ತಾಲೂಕು ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ನಿನ್ನೆ ನಡೆದಿದೆ. ಮೋಟಾರ್ ಸೈಕಲ್ ಸವಾರ ಗಣೇಶ್ ಎಂಬವರಿಗೆ ಡಿಕ್ಕಿ ಉಂಟು ಮಾಡಿದ ಪರಿಣಾಮ ಸವಾರನು ರಸ್ತೆಗೆ ಎಸೆಯಲ್ಪಟ್ಟು ಬಲಕಾಲಿನ ಬೆರಳುಗಳಿಗೆ ಗಾಯವಾಗಿದೆ. ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ 108 ನೇ ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿರುತ್ತದೆ. ಈ ಬಗ್ಗೆ ಕಡಬ ಪೊಲೀಸ್ […]

ಕಡಬ: ಬೈಕ್ ಮತ್ತು ಮಾರುತಿ ನಡುವೆ ಅಪಘಾತ ➤ ಬೈಕ್ ಸವಾರನಿಗೆ ಗಾಯ Read More »

ಕರಾವಳಿ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ಷಾಚರಣೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.10   ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದರಿಂದ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಜಿಲ್ಲಾ ಸಮಿತಿಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಈ ರಾಜ್ಯದಲ್ಲಿ ಸುಭದ್ರ ಸರಕಾರ ನೀಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬ ಸಂದೇಶ ನೀಡಿ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಅಲ್ಪ ಸಂಖ್ಯಾತ ಮೊರ್ಛದ ಅಧ್ಯಕ್ಷ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ➤ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಹರ್ಷಾಚರಣೆ Read More »

ಕರಾವಳಿ

ಆಲಂಕಾರು: ಒಕ್ಕಲಿಗ ಗೌಡ ಸೇವಾ ಸಂಘದ “ಕ್ರೀಡಾ ಸಂಭ್ರಮ”

(ನ್ಯೂಸ್ ಕಡಬ) newskadaba.com, ಕಡಬ, ಡಿ.9   ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ “ಕ್ರೀಡಾ ಸಂಭ್ರಮ 2019” ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಹಿರಿಯರ ಸಮಿತಿ ಅಧ್ಯಕ್ಷ ನಾಗಪ್ಪ ಗೌಡ ಮರುವಂತಿಲ ಮಾತನಾಡಿ, ಮಾನಸಿಕ ಹಾಗೂ ದೇಹದ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಇಂತಹ ಕ್ರೀಡಾಕೂಟಗಳ ಮೂಲಕ ಸಮಾಜದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ಕೊಡುವ ಕೆಲಸ ಆಗಬೇಕು. ಕ್ರೀಡಾಪಟುಗಳು ಇದರ

ಆಲಂಕಾರು: ಒಕ್ಕಲಿಗ ಗೌಡ ಸೇವಾ ಸಂಘದ “ಕ್ರೀಡಾ ಸಂಭ್ರಮ” Read More »

ಕರಾವಳಿ

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸರಕಾರಿ, ಸರಕಾರೇತರ ನೌಕರರ ಸ್ನೇಹಕೂಟ-ಸಮಿತಿ ರಚನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.9  ಕಡಬ ಒಕ್ಕಲಿಗ ಗೌಡ ಸೇವಾ ಇದರ ವತಿಯಿಂದ ಗೌಡ ಸಮುದಾಯದ ಸರಕಾರಿ ಮತ್ತು ಸರಕಾರೇತರ ನೌಕರರ ಸ್ನೇಹಕೂಟ ಕಾರ್ಯಕ್ರಮ ಡಿ.8ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಅವರು ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಗೌಡ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ ಕೊಲಂತ್ತಾಡಿ,

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸರಕಾರಿ, ಸರಕಾರೇತರ ನೌಕರರ ಸ್ನೇಹಕೂಟ-ಸಮಿತಿ ರಚನೆ Read More »

ಕರಾವಳಿ

ತೆಂಗಿನ ಮರ ಬಿದ್ದು ಎರಡು ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com, ಕಡಬ, ಡಿ.6   ನೂಜಿಬಾಳ್ತಿಲ ಗ್ರಾಮದ ನೀರಾರಿ ಎಂಬಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿಗೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದ ಎರಡು ಮನೆಗಳಿಗೆ ಹಾನಿಯಾಗಿದೆ. ನೀರಾರಿ ಪೀರು ಸಾಹೇಬು ಅವರ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ ಮತ್ತು ಪಕ್ಕದ ದಾವೂದ್ ಸಾಹೇಬ್ ಅವರ ಮನೆಗೂ ಹಾನಿಯಾಗಿ ನಷ್ಟವುಂಟಾಗಿದೆ ಎಂದು ಮನೆ ಮಾಲಿಕರು ತಿಳಿಸಿದ್ದಾರೆ.

ತೆಂಗಿನ ಮರ ಬಿದ್ದು ಎರಡು ಮನೆಗಳಿಗೆ ಹಾನಿ Read More »

ಕರಾವಳಿ

ಕಾಜರೊಕ್ಕು- ಶ್ರೀ ರಾಮಕುಂಜೇಶ್ವರ ದೇವಸ್ಥಾನ ಕಾಂಕ್ರಿಟೀಕರಣ ಗುದ್ದಲಿಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.6   ಕಡಬ ತಾಲೂಕು ರಾಮಕುಂಜ ಗ್ರಾಮದ ಕಾಜರೊಕ್ಕು-ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಸ್ತೆ ಕಾಂಕ್ರಿಟಿಕರಣಕ್ಕೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಲಾಯಿತು. ಸುಳ್ಯ ಶಾಸಕ ಎಸ್ ಅಂಗಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಯೋಜನೆ ಸಮರ್ಪಕ ಅನುಷ್ಠಾನವಾಗಬೇಕಾದಲ್ಲಿ ಜನರ ಪಾತ್ರ ಮುಖ್ಯ. ಕಾಮಗಾರಿ ನಡೆಯುವ ಸಂದರ್ಭ ಜನರು ತ್ಯಾಗ ಮನೋಭಾವನೆ ತೋರ್ಪಡಿಸಿ ಅಭಿವೃದ್ದಿಗೆ ಕೈಜೋಡಿಸಬೇಕು. ಅಭಿವೃದ್ದಿ ಕಾಮಗಾರಿಗಳು ನಡೆಯುವಾಗ ಗುಣಮಟ್ಟ ಪರಿಶೀಲನೆ ನಡೆಸುವುದು ಆಯಾ ಭಾಗದ ಜನರ ಕರ್ತವ್ಯವಾಗಬೇಕು. ಈ ಹಿಂದೆ ನಮ್ಮನ್ನಾಳಿದ ಕಾಂಗ್ರೆಸ್ಸ್ ಸರಕಾರ

ಕಾಜರೊಕ್ಕು- ಶ್ರೀ ರಾಮಕುಂಜೇಶ್ವರ ದೇವಸ್ಥಾನ ಕಾಂಕ್ರಿಟೀಕರಣ ಗುದ್ದಲಿಪೂಜೆ Read More »

ಕರಾವಳಿ

ನೆಲ್ಯಾಡಿ ಕಾರು ಕಳ್ಳತನ

 (ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ , ನ.28.  ಮನೆಯ ಶೆಡ್ ನಲ್ಲಿದ್ದ ಕಾರು ಹಾಗೂ ಮನೆಯೊಳಗಿದ್ದ ಎರಡು ಮೊಬೈಲ್ ಫೋನ್ ಗಳನ್ನು ಕಳವುಗೈದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪದ್ದಡ್ಕ ನಿವಾಸಿ ಸುನಿತ ಎಂಬವರಿಗೆ ಬೆಳಗಿನ ಜಾವ 03.30 ಗಂಟೆಗೆ ಎಚ್ಚರವಾಗಿ ನೋಡಿದಾಗ,ಮೊಬೈಲ್ ಫೋನು ಕಾಣಿಸದೆ ಇದ್ದು, ಹಿಂಬಾಗಿಲು ತೆರೆದಿತ್ತು. ಹೊರಗೆ ಬಂದು ಕಾರು ಶೆಡ್ಡು ನೋಡಿದಾಗ ಶೆಡ್ನಲ್ಲಿ ಇರಿಸಿದ ಮಾರುತಿ ಅಲ್ಟೋ 800 ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು

ನೆಲ್ಯಾಡಿ ಕಾರು ಕಳ್ಳತನ Read More »

ಕರಾವಳಿ

ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com, ಕುಂತೂರು, ನ.28.  ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಪ್ರಶಿಕ್ಷಣಾರ್ಥಿಗಳಿಗೆ “ಸಮಯ ನಿರ್ವಹಣೆ” ಎಂಬ  ಶೀರ್ಷಿಕೆಯಡಿಯಲ್ಲಿ ಮಾಹಿತಿ ಕಾರ್ಯಗಾರ ನಡೆಸಲಾಯಿತು. ಕಾಲೇಜಿನ ಸಂಚಾಲಕರಾದ ರೆ/ಫಾ/ಡಾ/ಎಲ್ದೋ ಪುತ್ತನ್ ಕಂಡತ್ತಿಲ್ ಅವರು ಸಮಯ ನಿರ್ವಹಣೆಯ ಕುರಿತಂತೆ ಸವಿವರವಾದ ಮಹಿತಿಗಳೊಂದಿಗೆ ಕಾರ್ಯಗಾರ ನಡೆಸಿಕೊಟ್ಟರು. ಬಿ.ಎಡ್. ಪ್ರಶಿಕ್ಷಣಾರ್ಥಿ ಕುಮಾರಿ ಹರ್ಷಿತಾ ಸ್ವಾಗತಿಸಿ, ಉಪನ್ಯಾಸಕಿ ಕುಮಾರಿ ತೃಪ್ತಿ ಎಮ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಶ್ರಿಮತಿ ಉಷಾ ಎಮ್. ಎಲ್ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದು, ಕಾರ್ಯಗಾರದಲ್ಲಿ ಸಹಕರಿಸಿದರು.

ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಕಾರ್ಯಗಾರ Read More »

ಕರಾವಳಿ

ನಾಳೆ (ನ.28) ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಲಯದಲ್ಲಿ ವಸ್ತು ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ

(ನ್ಯೂಸ್ ಕಡಬ) newskadaba.com, ನೆಲ್ಯಾಡಿ. ನ.27.  ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ  ಜೀವನ ಕೌಶಲ್ಯಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಮೆಟ್ರಿಕ್ ಮೇಳವು ನಾಳೆ (ನ.28) ಪೂರ್ವಾಹ್ನ 9.30 ಕ್ಕೆ ನ್ಯೂ ಮಿಲೇನಿಯಂ ಹಾಲ್ ನಲ್ಲಿ ನಡೆಯಲಿದೆ. ವಿಜ್ಞಾನ ವಸ್ತು ಪ್ರದರ್ಶನವನ್ನು ನಿವೃತ್ತ ಮುಖ್ಯ ಗುರುಗಳಾದ ಆರ್.ವೆಂಕಟ್ರಮಣ ಹಾಗೂ ಮೆಟ್ರಿಕ್ ಮೇಳವನ್ನು ನೆಲ್ಯಾಡಿಯ ರಶ್ಮಿ ಡ್ರೆಸ್ ಸೆಂಟರ್ ನ ಮಾಲಕರಾದ ಗಣೇಶ್ ಕೆ.ರಶ‍್ಮಿ ಯವರು ಉದ್ಘಾಟಿಸಲಿದ್ದಾರೆ. ವಾರ್ಷಿಕ ಕ್ರೀಡಾಕೂಟವು ನವೆಂಬರ್ 30 ಶನಿವಾರದಂದು

ನಾಳೆ (ನ.28) ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಲಯದಲ್ಲಿ ವಸ್ತು ಪ್ರದರ್ಶನ ಹಾಗೂ ಮೆಟ್ರಿಕ್ ಮೇಳ Read More »

ಕರಾವಳಿ

ಕಡಬ : ಜಾಂಡೀಸ್ ಗೆ ತುತ್ತಾಗಿ ಯುವಕ ಮೃತ್ಯು

 (ನ್ಯೂಸ್ ಕಡಬ) newskadaba.com, ಕಡಬ, ನ.27.  ಬಲ್ಯ ಗ್ರಾಮದ ಕಲ್ಲೇರಿ ನಿವಾಸಿ ಆನಂದ ಗೌಡ ಎಂಬವರ ಪುತ್ರ, ಅಯ್ಯಪ್ಪ ಮಾಲಾಧಾರಿಯಾಗಿದ್ದ ಚಂದ್ರಶೇಖರ ಗೌಡ (27ವ.)  ಮಂಗಳವಾರದಂದು ಮೃತಪಟ್ಟಿದ್ದಾರೆ. ವೃತ್ತಿಯಲ್ಲಿ ಚಾಲಕನಾಗಿರುವ ಚಂದ್ರಶೇಖರವರು ನ.21 ರಂದು ದೇರಾಜೆ ಅಯ್ಯಪ್ಪ ಮಂದಿರದಲ್ಲಿ ಶಬರಿಮಲೆ ಯಾತ್ರೆ ಮಾಡಲು ಮಾಲೆ ಹಾಕಿದ್ದರು, ಇವರು ಜಾಂಡಿಸ್‍ನಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಂಗಳೂರಿನ ಕಣಚೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಂದ್ರಶೇಖರವರು ನ.25ರಿಂದ ಅಸೌಖ್ಯದಿಂದ ಬಳಲುತ್ತಿದ್ದು ನ.26ರಂದು ಮುಂಜಾನೆ ದೇರಾಜೆ ಅಯ್ಯಪ್ಪ ಮಂದಿರದಲ್ಲಿ ಇತರ ಅಯ್ಯಪ್ಪ ಮಾಲಾಧಾರಿಯವರೊಂದಿಗೆ

ಕಡಬ : ಜಾಂಡೀಸ್ ಗೆ ತುತ್ತಾಗಿ ಯುವಕ ಮೃತ್ಯು Read More »

ಕರಾವಳಿ
Scroll to Top