ನೆಲ್ಯಾಡಿ ಕಾರು ಕಳ್ಳತನ

 (ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ , ನ.28.  ಮನೆಯ ಶೆಡ್ ನಲ್ಲಿದ್ದ ಕಾರು ಹಾಗೂ ಮನೆಯೊಳಗಿದ್ದ ಎರಡು ಮೊಬೈಲ್ ಫೋನ್ ಗಳನ್ನು ಕಳವುಗೈದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪದ್ದಡ್ಕ ನಿವಾಸಿ ಸುನಿತ ಎಂಬವರಿಗೆ ಬೆಳಗಿನ ಜಾವ 03.30 ಗಂಟೆಗೆ ಎಚ್ಚರವಾಗಿ ನೋಡಿದಾಗ,ಮೊಬೈಲ್ ಫೋನು ಕಾಣಿಸದೆ ಇದ್ದು, ಹಿಂಬಾಗಿಲು ತೆರೆದಿತ್ತು. ಹೊರಗೆ ಬಂದು ಕಾರು ಶೆಡ್ಡು ನೋಡಿದಾಗ ಶೆಡ್ನಲ್ಲಿ ಇರಿಸಿದ ಮಾರುತಿ ಅಲ್ಟೋ 800 ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಗಮನಕ್ಕೆ ಬಂದಿದೆ. ಕಳವಾದ ಸ್ಯಾಮಸಂಗ್ ಕಂಪೆನಿಯ ಎರಡು ಫೋನಿನ ಅಂದಾಜು ಮೌಲ್ಯ 15,000/- ರೂ ಹಾಗೂ ಕಾರಿನ ಅಂದಾಜು ಮೌಲ್ಯ 2,75,000/- ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top