death

ವಿಟ್ಲ: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ➤ ಮುಂದುವರಿದ ತನಿಖೆ

(ನ್ಯೂಸ್ ಕಡಬ)newskadaba.com  ವಿಟ್ಲ, ಜ.09.  8 ನೇ ತರಗತಿಯ ವಿದ್ಯಾರ್ಥಿಯೋರ್ವ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಪುಣಚ ರವೀಂದ್ರ ಎಂಬವರ ಪುತ್ರ ಹೇಮಂತ್(14) ಎಂದು ಗುರುತಿಸಲಾಗಿದೆ. ಪುಣಚ ದೇವಿನಗರ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ಹೇಮಂತ್ 8ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ‌. ಮನೆ ಮಂದಿಯೆಲ್ಲಾ ಪುಣಚ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳು ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ವರದಿ […]

ವಿಟ್ಲ: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ➤ ಮುಂದುವರಿದ ತನಿಖೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಲ್ಪೆ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು..! ➤ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ

(ನ್ಯೂಸ್ ಕಡಬ)newskadaba.com  ಮಲ್ಪೆ, ಜ.09. ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರನ್ನು ಸುಶೀಲ್ ರಘುರಾಮ್ ಶೆಟ್ಟಿ(42) ಎಂದು ಗುರುತಿಸಲಾಗಿದೆ. ಇವರು ಮುಂಬಯಿ ನಿವಾಸಿಯಾಗಿದ್ದು, ಮುಂಬಯಿಯಿಂದ  ಊರಿಗೆ ಬಂದ ಇವರು ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಲ್ಪೆ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು..! ➤ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ ➤ 40 ಮಂದಿ ಮೃತ್ಯು, 85 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ದಕ್ಷಿಣ ಅಫ್ರಿಕಾ, ಜ.09.   ಸಾರ್ವಜನಿಕ ಬಸ್‌ವೊಂದರ ಟೈರ್ ಪಂಕ್ಚರ್ ಆಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟ ಹಾಗೂ 85 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ದಕ್ಷಿಣ ಅಫ್ರಿಕಾದ ಸೆನೆಗಲ್‌ ದೇಶದ ರಾಜಧಾನಿ ಡಾಕಾರ್‌ನಲ್ಲಿ ವರದಿಯಾಗಿದೆ.   85 ಮಂದಿ ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಮೃತ್ಯುವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾಫ್ರಿನ್

ಭೀಕರ ರಸ್ತೆ ಅಪಘಾತ ➤ 40 ಮಂದಿ ಮೃತ್ಯು, 85 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ದುರಂತ ➤ ಚಕ್ರ ಹರಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಜ. 09.  ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಪ್ರೇಕ್ಷಕನ ಮೇಲೆ ಗಾಡಿಯ ಚಕ್ರ ಹರಿದ ಪರಿಣಾಮ ಓರ್ವ ರೈತ ಮೃತಪಟ್ಟು, ಮತ್ತೋರ್ವ ಬಾಲಕ ತೀವ್ರವಾಗಿ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ಚಿಕ್ಕಮಂಡ್ಯ ಗ್ರಾಮದ ಬಳಿ ನಡೆದಿದೆ. ಮೃತಪಟ್ಟ ರೈತನನ್ನು ಕೀಲಾರ ಗ್ರಾಮದ ನಾಗರಾಜು (42) ಮತ್ತು ಗಾಯಗೊಂಡ ಬಾಲಕನನ್ನು ಹುಲಿವಾನ ಗ್ರಾಮದ ಋತ್ವಿಕ್ (10) ಎಂದು ಗುರುತಿಸಲಾಗಿದೆ. ಹಳ್ವಿಕೇಶ್ವರ ಬೋರೇಶ್ವರ ಹಾಗೂ ರೈತ ಮಿತ್ರ ಬಳಗದ ವತಿಯಿಂದ ಚಿಕ್ಕಮಂಡ್ಯ ಗ್ರಾಮದ ಬಳಿ

ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ದುರಂತ ➤ ಚಕ್ರ ಹರಿದು ರೈತ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೃದಯಾಘಾತದಿಂದ 12 ವರ್ಷದ ಬಾಲಕ‌ ಮೃತ್ಯು..!!

(ನ್ಯೂಸ್ ಕಡಬ) newskadaba.com ಕೊಡಗು, ಜ.08.  ಬಾಲಕ‌ನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಡಿಕೇರಿ ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ ಬಳಿ ವರದಿಯಾಗಿದೆ. ಮೃತಬಾಲಕನನ್ನು ಕೀರ್ತನ್ (12) ಎಂದು ಗುರುತಿಸಲಾಗಿದೆ. ಈತ ಕೊಪ್ಪ ಭಾರತ ಮಾತಾ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದನು ಎನ್ನಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಈತ ರವಿವಾರದಂದು ಆಸ್ಪತ್ರೆ ಕರೆದೊಯ್ಯವ ವೇಳೆ ದಾರಿ‌ಮಧ್ಯೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಹೃದಯಾಘಾತದಿಂದ 12 ವರ್ಷದ ಬಾಲಕ‌ ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಿಂತಿದ್ದ ಲಾರಿಗೆ ಕಾರು ಢಿಕ್ಕಿ ➤ ಯುವಕ ಸ್ಥಳದಲ್ಲೇ ಮೃತ್ಯು ಹಾಗೂ ಮೂವರಿಗೆ ಗಾಯ

ನ್ಯೂಸ್ ಕಡಬ) newskadaba.com ಕಾಸಗೋಡು, ಜ.08. ರಸ್ತೆ ಬದಿ ನಿಂತಿದ್ದ ಲಾರಿಯ ಹಿಂಬದಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು, ,ಮೂವರು ಗಾಯಗೊಂಡ ಘಟನೆ ಕಾಸರಗೋಡು ನಗರದಲ್ಲಿ ವರದಿಯಾಗಿದೆ. ಮೃತ ಯುವಕನನ್ನು ಚೆಂಗಳ ನಿವಾಸಿ ಸಂಶುದ್ದೀನ್ ಎಂಬುವರ ಪುತ್ರ ಮೊಹಮ್ಮದ್ ಸಾಹಿಲ್ (21) ಎಂದು ಗುರುತಿಸಲಾಗಿದೆ. ಸಾಹಿಲ್ ಅಣಂಗೂರು ಕಡೆಯಿಂದ ಮೂವರು ಸ್ನೇಹಿತರ ಜೊತೆ ಕಾರಿನಲ್ಲಿ ಬರುತ್ತಿದ್ದಾಗ ನಿಂತಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಸಾಹಿಲ್ ಸ್ಥಳದಲ್ಲೇ ಮೃತಪಟ್ಟಿರೆ ಗಂಭೀರವಾಗಿ

ನಿಂತಿದ್ದ ಲಾರಿಗೆ ಕಾರು ಢಿಕ್ಕಿ ➤ ಯುವಕ ಸ್ಥಳದಲ್ಲೇ ಮೃತ್ಯು ಹಾಗೂ ಮೂವರಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚಾಕೊಲೇಟ್ ಎಂದು ಇಲಿ ಪಾಷಾಣ ತಿಂದು ಮಗು ಮೃತ್ಯು..!

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.08. ಚಾಕೊಲೇಟ್ ರೀತಿ ಕಂಡ ಇಲಿ ಪಾಷಾಣವನ್ನು ತಿಂದು ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೀರ್ಥಹಳ್ಳಿ ಯಲ್ಲಿ ವರದಿಯಾಗಿದೆ ಅಂಗನವಾಡಿ ಶಾಲೆಗೆ ಹೋಗಿದ್ದ ಪುಟ ಬಾಲಕ ಮನೆಗೆ ಮರಳಿದ್ದಾನೆ. ಈ ವೇಳೆ ಇಲಿ ಸಾಯಿಸಲು ಇಟ್ಟಿದ್ದ ಪಾಷಾಣ ಕಣ್ಣಿಗೆ ಕಾಣಿಸಿದೆ. ನೋಡುವುದಕ್ಕೆ ಚಾಕೊಲೆಟ್ ರೀತಿ ಕಂಡಿದ್ದ ಪಾಷಾಣವನ್ನು ಮಗು ತಿಳಿಯದೇ ತಿಂದುಬಿಟ್ಟಿದೆ. ಪಾಷಾಣ ತಿಂದ ಬಳಿಕ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿ ಮೃತಪಟ್ಟಿದೆ ಎನ್ನಲಾಗಿದೆ.  

ಚಾಕೊಲೇಟ್ ಎಂದು ಇಲಿ ಪಾಷಾಣ ತಿಂದು ಮಗು ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಹಸುಗಳು ಮೃತ್ಯು..!!

(ನ್ಯೂಸ್ ಕಡಬ) newskadaba.com ಹನೂರು, ಜ.08.  ಬೆಳೆಗಳಿಗೆ ಹಾಕುವ ಯೂರಿಯಾ ಗೊಬ್ಬರ ಮಿಶ್ರಣವಾಗಿರುವ ನೀರನ್ನು ಕುಡಿದು ನಾಟಿ ಹಸುಗಳು ಧಾರುಣವಾಗಿ ಮೃತಪಟ್ಟ ಘಟನೆ ಹನೂರಿನ ಮುತ್ತು ಶೆಟ್ಟಿಯೂರು ಗ್ರಾಮದಲ್ಲಿ ವರದಿಯಾಗಿದೆ. ತಾಲೂಕಿನ ರಾಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತು ಶೆಟ್ಟಿಯೂರು ನಿವಾಸಿಗಳಾದ ಮುದಲೈಮುತ್ತು ತೇರೆಸ್ಸಾಮೇರಿ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಮೃತಪಟ್ಟಿದೆ. ಮುದಲೈ ಮುತ್ತು ಅವರಿಗೆ ಸೇರಿದ ಹಸುಗಳು ಎಂದಿನಂತೆ ಕಾಡಿನಿಂದ ಮನೆಗಳಿಗೆ ಹಿಂತುರುಗಿ ಬರುವಾಗ ಸಂಜೆ ಸಮಯದಲ್ಲಿ ಪಕ್ಕದ ಜಮೀನಿನ ತೋಟದವರು ಬೆಳೆಗಳಿಗೆ ಹಾಕುವ ಯೂರಿಯಾವನ್ನು

ಯೂರಿಯಾ ಮಿಶ್ರಿತ ನೀರು ಕುಡಿದು ನಾಲ್ಕು ಹಸುಗಳು ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಗ್ನಿ ಅವಘಡ..!! ➤ ಖ್ಯಾತ ಉದ್ಯಮಿ ಉಸಿರುಗಟ್ಟಿ ಮೃತ್ಯು

(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.08. ಶಿವಮೊಗ್ಗದಲ್ಲಿ ಅಗ್ನಿ ಅವಘಡದಿಂದ ಮನೆಯೊಳಗೆ ಉಸಿರುಗಟ್ಟಿ ಯುವ ಉದ್ಯಮಿ ಹಾಗೂ ಖ್ಯಾತ ಉದ್ಯಮಿ ದಾನಿ ಮೃತರಾಗಿದ್ದು ಶಿವಮೊಗ್ಗ ಜನರಿಗೆ ಶಾಕ್ ನೀಡಿದೆ‌ ಎನ್ನಲಾಗಿದೆ. ಮೃತಪಟ್ಟವರನ್ನು ಖ್ಯಾತ ಉದ್ಯಮಿ ಭೂಪಾಳಂ ಎಸ್. ಶರತ್(39) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಕುವೆಂಪು ರಸ್ತೆಯಲ್ಲಿ ಜಿ.ಪಂ ಕಚೇರಿ ಎದುರು ಭೂಪಾಳಂ ಕುಟುಂಬದವರ ಮನೆ‌ ಇದೆ. ಇಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.  

ಅಗ್ನಿ ಅವಘಡ..!! ➤ ಖ್ಯಾತ ಉದ್ಯಮಿ ಉಸಿರುಗಟ್ಟಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಹನವೊಂದು ಢಿಕ್ಕಿ ಹೊಡೆದು ಚಿರತೆ ಮೃತ್ಯು..!!

 (ನ್ಯೂಸ್ ಕಡಬ) newskadaba.com ಮೈಸೂರು, ಜ.08.  ಅಪರಿಚಿತ ವಾಹನ ಢಿಕ್ಕಿ ಹೊಡೆದು ಚಿರತೆಯೊಂದು ಮೃತಪಟ್ಟ ಘಟನೆ ಮೈಸೂರು ನಗರದ ರಿಂಗ್ ರಸ್ತೆಯ ಉತ್ತನಹಳ್ಳಿ ಕ್ರಾಸ್ ಬಳಿ ವರದಿಯಾಗಿದೆ. ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆ ರಸ್ತೆ ದಾಟುವ ವೇಳೆ ವಾಹನವೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಚಿರತೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಚಾಮುಂಡಿ ಬೆಟ್ಟದ ಭಾಗದಲ್ಲಿರುವ

ವಾಹನವೊಂದು ಢಿಕ್ಕಿ ಹೊಡೆದು ಚಿರತೆ ಮೃತ್ಯು..!! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top