ಮಲ್ಪೆ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು..! ➤ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ

(ನ್ಯೂಸ್ ಕಡಬ)newskadaba.com  ಮಲ್ಪೆ, ಜ.09. ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮೃತಪಟ್ಟವರನ್ನು ಸುಶೀಲ್ ರಘುರಾಮ್ ಶೆಟ್ಟಿ(42) ಎಂದು ಗುರುತಿಸಲಾಗಿದೆ. ಇವರು ಮುಂಬಯಿ ನಿವಾಸಿಯಾಗಿದ್ದು, ಮುಂಬಯಿಯಿಂದ  ಊರಿಗೆ ಬಂದ ಇವರು ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top