ಚಾಕೊಲೇಟ್ ಎಂದು ಇಲಿ ಪಾಷಾಣ ತಿಂದು ಮಗು ಮೃತ್ಯು..!



(ನ್ಯೂಸ್ ಕಡಬ) newskadaba.com  ಶಿವಮೊಗ್ಗ, ಜ.08. ಚಾಕೊಲೇಟ್ ರೀತಿ ಕಂಡ ಇಲಿ ಪಾಷಾಣವನ್ನು ತಿಂದು ಮಗು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೀರ್ಥಹಳ್ಳಿ ಯಲ್ಲಿ ವರದಿಯಾಗಿದೆ







ಅಂಗನವಾಡಿ ಶಾಲೆಗೆ ಹೋಗಿದ್ದ ಪುಟ ಬಾಲಕ ಮನೆಗೆ ಮರಳಿದ್ದಾನೆ. ಈ ವೇಳೆ ಇಲಿ ಸಾಯಿಸಲು ಇಟ್ಟಿದ್ದ ಪಾಷಾಣ ಕಣ್ಣಿಗೆ ಕಾಣಿಸಿದೆ. ನೋಡುವುದಕ್ಕೆ ಚಾಕೊಲೆಟ್ ರೀತಿ ಕಂಡಿದ್ದ ಪಾಷಾಣವನ್ನು ಮಗು ತಿಳಿಯದೇ ತಿಂದುಬಿಟ್ಟಿದೆ. ಪಾಷಾಣ ತಿಂದ ಬಳಿಕ ಮಗುವಿನ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿ ಮೃತಪಟ್ಟಿದೆ ಎನ್ನಲಾಗಿದೆ.






 

error: Content is protected !!
Scroll to Top