crime

ಅವಿವಾಹಿತ ಯುವಕ ನೇಣುಬಿಗಿದು ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com  ಉಳ್ಳಾಲ, ಮಾ. 01. ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಪಲ ಸಮೀಪದ ಲಕ್ಷ್ಮಿ ಗುಡ್ಡೆ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೂಲತ: ಕುಂಪಲ ಆಶ್ರಯ ಕಾಲನಿ ನಿವಾಸಿ ಧನರಾಜ್ ಪಿಳ್ಳೆ ಪೂಜಾರಿ(32) ಎಂದು ಗುರುತಿಸಲಾಗಿದೆ. ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬ ಮನೆ ನವೀಕರಣ ಹಿನ್ನೆಲೆ ಸಮೀಪದ ಲಕ್ಷ್ಮೀಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅವಿವಾಹಿತನಾಗಿದ್ದ ಧನರಾಜ್ ದೇರಳಕಟ್ಟೆಯ ಯೆನೆಪೋಯ ರಿಕ್ಷಾ ಪಾರ್ಕ್ ನಲ್ಲಿ ಆಟೋ ರಿಕ್ಷಾ ಚಲಾಯಿಸುತ್ತಿದ್ದು, ನಿನ್ನೆ ಸಂಜೆ […]

ಅವಿವಾಹಿತ ಯುವಕ ನೇಣುಬಿಗಿದು ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮೊಬೈಲ್ ಕಳ್ಳತನದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com  ಮಂಗಳೂರು, ಮಾ. 01. ಉರ್ವ ದೇವರಾಜು ಅರಸು ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದ ಒಳಗೆ ಪ್ರವೇಶಿಸಿ ವಿದ್ಯಾರ್ಥಿನಿಯರ 3 ಮೊಬೈಲ್ ಫೋನ್ ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಹೇಶ್ ಪೈ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜಪಡಿಸಲಾಗಿದ್ದು, ಮಂಗಳೂರು ನ್ಯಾಯಾಲಯವು ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 5000 ದಂಡ ವಿಧಿಸಿ ಆದೇಶ ಹೊರಡಿಸಿದೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.

ಮೊಬೈಲ್ ಕಳ್ಳತನದ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತದಿಂದ ಪತ್ನಿ ಮೃತ್ಯು- ನೊಂದ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com  ಉಳ್ಳಾಲ, ಮಾ. 01. ಹೃದಯಾಘಾತದಿಂದಾಗಿ ಪತ್ನಿ ಮೃತಪಟ್ಟ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ನಡೆದಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಪಟ್ಟ ಮಹಿಳೆ ಗ್ರಾಮಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಹಾಗೂ ಪತಿ ಶೇಷಪ್ಪ ಪೂಜಾರಿ(63) ಎದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೀನಾಕ್ಷಿಯವರು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದು, ಮಂಗಳವಾರದಂದು ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಹೃದಯಾಘಾತದಿಂದ ಪತ್ನಿ ಮೃತ್ಯು- ನೊಂದ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ನಕಲಿ ಮ್ಯಾಟ್ರಿಮೋನಿಯಲ್ ಖಾತೆ ಮೂಲಕ 250ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ – ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 29. ನಕಲಿ ಮ್ಯಾಟ್ರಿಮೋನಿಯಲ್ ಖಾತೆ ಬಳಸಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೋರ್ವನನ್ನು ಬೆಂಗಳೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರಾಜಸ್ಥಾನ ಮೂಲದ ನರೇಶ್ ಪೂಜಾರಿ ಗೋಸ್ವಾಮಿ(45) ಎಂದು ಗುರುತಿಸಲಾಗಿದೆ. ಈತ ಮ್ಯಾಟ್ರಿಮೋನಿಯಲ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರೊಫೈಲ್ ಗಳನ್ನು ಸೃಷ್ಟಿಸಿ ಮಹಿಳೆಯರು ಹಾಗೂ ಅವರ ಪೋಷಕರಿಗೆ ಹಣ ನೀಡುವಂತೆ ಆಮಿಷವೊಡ್ಡುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನ ವಿರುದ್ಧ ಕೊಯಮತ್ತೂರಿನ

ನಕಲಿ ಮ್ಯಾಟ್ರಿಮೋನಿಯಲ್ ಖಾತೆ ಮೂಲಕ 250ಕ್ಕೂ ಅಧಿಕ ಮಹಿಳೆಯರಿಗೆ ವಂಚನೆ – ಓರ್ವನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೈಂಟಿಂಗ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದು ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಮನೆಯ ಕಟ್ಟಡದ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಕೊಡುತ್ತಿದ್ದ ಯುವಕ ಏಣಿಯ ಜೊತೆಯಲ್ಲೇ ಆಯತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಎಂದು ಗುರುತಿಸಲಾಗಿದೆ. ಮೋಹಿತ್ ಪೂಜಾರಿ ಅವರು ಮಂಗಳೂರಿನ ಮನೆಯೊಂದರಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದ ವೇಳೆ ಏಣಿ ಜಾರಿದ ಪರಿಣಾಮ ಮೋಹಿತ್ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ

ಪೈಂಟಿಂಗ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದು ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಪಿಕಪ್ ವ್ಯಾನ್‌‌ ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಾಟ – ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 26. ಪಿಕಪ್ ವ್ಯಾನ್‌‌ನಲ್ಲಿ ಸಾಗಿಸುತ್ತಿದ್ದ ಸುಮಾರು ಒಂದು ಕ್ವಿಂಟಾಲ್ ಗಾಂಜಾ ಸಹಿತ ಇಬ್ಬರನ್ನು ಅಬಕಾರಿ ದಳದ ವಿಶೇಷ ತಂಡ ವಶಪಡಿಸಿಕೊಂಡ ಘಟನೆ ಪೆರ್ಲದಿಂದ ವರದಿಯಾಗಿದೆ. ಬಂಧಿತ ಆರೋಪಿಗಳನ್ನು ಕುಂಬಳೆ ಶಾಂತಿಪಳ್ಳದ ಶಹೀನ್ ರಹೀಂ (36) ಮತ್ತು ಪೆರ್ಲ ಅಮ್ಮೆಕ್ಕಳದ ಶರೀಫ್ (32) ಎಂದು ಗುರುತಿಸಲಾಗಿದೆ. ಅಬಕಾರಿ ದಳದ ಸಿಬ್ಬಂದಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಪೆರ್ಲ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬಂದ ಪಿಕಪ್ ವ್ಯಾನ್ ನ್ನು ತಡೆದು ತಪಾಸಣೆ ನಡೆಸಿದಾಗ

ಪಿಕಪ್ ವ್ಯಾನ್‌‌ ನಲ್ಲಿ ಒಂದು ಕ್ವಿಂಟಾಲ್ ಗಾಂಜಾ ಸಾಗಾಟ – ಇಬ್ಬರ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಟೈರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ- ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಫೆ. 27. ಟೈರ್​ ಫ್ಯಾಕ್ಟರಿಯಲ್ಲಿ ಬಾಯ್ಲರ್​ ಸ್ಪೋಟ ಸಂಭವಿಸಿ ಇಬ್ಬರು ದಾರುಣವಾಗಿ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೈರ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ- ಇಬ್ಬರು ಮೃತ್ಯು Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತೇಜಸ್ವಿ ಯಾದವ್ ಬೆಂಗಾವಲು ವಾಹನ ಅಪಘಾತ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಪಾಟ್ನಾ, ಫೆ. 27. ಆರ್.ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಅಪಘಾತವು ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಬದಿಯ ಮತ್ತೊಂದು ಕಡೆಯಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ತೇಜಸ್ವಿ ಯಾದವ್ ಬೆಂಗಾವಲು ವಾಹನ ಅಪಘಾತ- ಓರ್ವ ಮೃತ್ಯು Read More »

ಕ್ರೈಮ್ ನ್ಯೂಸ್

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 27. ಮಾದಕ ದ್ರವ್ಯ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರ ತಂಡ ಕೇರಳದಲ್ಲಿ ಬಂಧಿಸಿದ ಘಟನೆ ವರದಿಯಾಗಿದೆ.   ಬಂಧಿತ ಆರೋಪಿಯನ್ನು ಟಿ.ಇ.ಜೋಸೆಫ್ ಎಂದು ಗುರುತಿಸಲಾಗಿದೆ. ಈತನ ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈತನು 16 ವರ್ಷಗಳಿಂದ ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು, ಈತನ ವಿರುದ್ದ ನ್ಯಾಯಾಲಯವು ದಸ್ತಗಿರಿ

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

‘49 ರೂಪಾಯಿಗೆ 48 ಮೊಟ್ಟೆ’; ಮೊಬೈಲ್ ಸಂದೇಶಕ್ಕೆ 49 ಸಾವಿರ ರೂ. ಕಳೆದುಕೊಂಡ ಮಹಿಳೆ

(ನ್ಯೂಸ್ ಕಡಬ) neskadaba.com ಬೆಂಗಳೂರು, ಫೆ. 26. ‘49 ರೂಪಾಯಿಗೆ 48 ಮೊಟ್ಟೆ ಸಿಗಲಿದೆ’ ಎಂದು ಎಂಬ ಮೊಬೈಲ್ ಸಂದೇಶದ ಲಿಂಕ್ ಒತ್ತಿ ಗ್ರಾಹಕರೊಬ್ಬರು 48,199 ರೂ. ಕಳೆದುಕೊಂಡಿರುವ ಘಟನೆ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ವಸಂತನಗರದ ನಿವಾಸಿ ಮಹಿಳೆಯೊಬ್ಬರಿಗೆ ಫೆ. 17ರಂದು ಇ-ಮೇಲ್‍ ಮೂಲಕ ಆನ್‍ ಲೈನ್ ಶಾಪಿಂಗ್ ಕಂಪೆನಿಯೊಂದರಿಂದ ಸಂದೇಶ ಬಂದಿತ್ತು. ಇದನ್ನು ನೋಡಿದ ಮಹಿಳೆ 48 ಮೊಟ್ಟೆಗಳಿಗೆ ಕೇವಲ 49 ರೂಪಾಯಿ ಆಫರ್ ಇರುವುದನ್ನು ಕಂಡು ಬುಕ್ ಮಾಡಲು

‘49 ರೂಪಾಯಿಗೆ 48 ಮೊಟ್ಟೆ’; ಮೊಬೈಲ್ ಸಂದೇಶಕ್ಕೆ 49 ಸಾವಿರ ರೂ. ಕಳೆದುಕೊಂಡ ಮಹಿಳೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top