crime

ಕೊಳದಲ್ಲಿ ಈಜುತ್ತಿದ್ದ 41 ವರ್ಷದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 22.  ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ಟ್ ಕ್ಲಬ್‌ನಲ್ಲಿ ಸೋಮವಾರ ಸಂಜೆ ಕೊಳದಲ್ಲಿ ಈಜುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಗೊಟ್ಟಿಗೆರೆಯ ಅಪಾರ್ಟ್‌ಮೆಂಟ್ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ದಯಾನಂದ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ದಯಾನಂದ ಅದೇ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ಸ್ನೇಹಿತರೊಂದಿಗೆ ಈಜಲು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 10 ನಿಮಿಷ ಈಜಿದ ಬಳಿಕ ಕೊಳದಲ್ಲಿ ಪ್ರಜ್ಞೆ ತಪ್ಪಿದ್ದು, ಸ್ನೇಹಿತರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ […]

ಕೊಳದಲ್ಲಿ ಈಜುತ್ತಿದ್ದ 41 ವರ್ಷದ ವ್ಯಕ್ತಿ ಮೃತ್ಯು Read More »

ಕ್ರೈಮ್ ನ್ಯೂಸ್

ಪುತ್ತೂರು: ವಿದ್ಯಾರ್ಥಿನಿಯ ಮೇಲೆ ಚಾಕು ಇರಿತ ಪ್ರಕರಣ..!      ಕಟ್ಟುಕಥೆ ಶಂಕೆ- ಆರೋಪಿಗಾಗಿ ಶೋಧ..!             

(ನ್ಯೂಸ್ ಕಡಬ) newskadaba.c0m ಪುತ್ತೂರು, ಆ. 22.  ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯ ಸಮುದಾಯದ ಹುಡುಗನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಕಟ್ಟುಕಥೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದೀಗ ಘಟನೆಗೆ ಪ್ರಚೋದನೆ ನೀಡಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆಗಸ್ಟ್ 20 ರಂದು ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯಿಂದ ಬೆಳಿಗ್ಗೆ 8:45 ರ ಸುಮಾರಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬೇರೆ

ಪುತ್ತೂರು: ವಿದ್ಯಾರ್ಥಿನಿಯ ಮೇಲೆ ಚಾಕು ಇರಿತ ಪ್ರಕರಣ..!      ಕಟ್ಟುಕಥೆ ಶಂಕೆ- ಆರೋಪಿಗಾಗಿ ಶೋಧ..!              Read More »

ಕರಾವಳಿ, ಕ್ರೈಮ್ ನ್ಯೂಸ್

ನವಜಾತ ಶಿಶುವಿನ ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯ ‘ಲೇಡಿ ಗೋಶೆನ್’ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲೆ

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 22.  ನವಜಾತ ಶಿಶುವಿನ ಹೆರಿಗೆ ಸಂದರ್ಭದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಲೇಡಿ ಗೊಸ್ಚೆನ್ ಆಸ್ಪತ್ರೆಯ ವಿರುದ್ಧ ಆರೋಗ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪೋಷಕರು ದೂರು ಸಲ್ಲಿಸಿದ್ದಾರೆ. ಮಗುವಿನ ತಾಯಿಯ ಚಿಕ್ಕಪ್ಪ ನೀಡಿದ ದೂರಿನ ಪ್ರಕಾರ, ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಅವರ ತಂಗಿಯನ್ನು ಆಗಸ್ಟ್ 17 ರಂದು ರಾತ್ರಿ ಲೇಡಿ ಗೊಸ್ಚೆನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅವರು ಆಗಸ್ಟ್ 18 ರಂದು ಬೆಳಿಗ್ಗೆ 10:30 ಕ್ಕೆ

ನವಜಾತ ಶಿಶುವಿನ ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯ ‘ಲೇಡಿ ಗೋಶೆನ್’ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಸ್ ಅಪಘಾತ    35 ಪ್ರಯಾಣಿಕರು ಮೃತ್ಯು      

(ನ್ಯೂಸ್ ಕಡಬ) newskadaba.c0m ಇಸ್ಲಮಾಬಾದ್, ಆ. 22.  ಪಾಕಿಸ್ತಾನದಿಂದ ಇರಾಕ್‌ ಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಇರಾನ್‌ ನ ಯಾಜ್ದ್ ಪ್ರಾಂತ್ಯದಲ್ಲಿ ಮಂಗಳವಾರ ಪಲ್ಟಿಯಾಗಿದ್ದು, ಪರಿಣಾಮ 35 ಪ್ರಯಾಣಿಕರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿ 52 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರು. ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.    

ಬಸ್ ಅಪಘಾತ    35 ಪ್ರಯಾಣಿಕರು ಮೃತ್ಯು       Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯಕ್ಷಗಾನ ಸಂಘಟಕ ಕಲಾಪೋಷಕ ಹೃದಯಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 22.  ಯಕ್ಷಗಾನ ದಿಗ್ಗಜ ಕುರಿಯ ವಿಠಲ ಶಾಸ್ತ್ರೀ ಮನೆತನದವರಾಗಿದ್ದ ಯಕ್ಷಗಾನ ಸಂಘಟಕ ಕಲಾಪೋಷಕ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ( 65) ಅಗಸ್ಟ್ 21ರಂದು ಹೃದಯಾಘಾತದಿಂದ ನಿಧನರಾದರು. ಕುರಿಯ ಹವ್ಯಕ ಘಟಕದ ಗುರಿಕ್ಕಾರರಾಗಿ, ಸ್ವರ್ಣ ಭಿಕ್ಷಾ ಉತ್ಸವದ ಗೌರವಾಧ್ಯಕ್ಷರಾಗಿ,‌ ಕೋಳ್ಯೂರ ಹವ್ಯಕ ವಲಯ ಅಧ್ಯಕ್ಷರಾಗಿ ಹತ್ತು ಹಲವು ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು.  

ಯಕ್ಷಗಾನ ಸಂಘಟಕ ಕಲಾಪೋಷಕ ಹೃದಯಘಾತದಿಂದ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

 ಮನೆ ದರೋಡೆಗೆ ಯತ್ನ ಪ್ರಕರಣ..!       ಇಬ್ಬರು ಆರೋಪಿಗಳು ಆರೆಸ್ಟ್..!          

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 22.  ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ತಾಲೂಕಿನ ಕೋಟದ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಬಳಿಯ ಕವಿತಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ವಿಫ್ಟ್ ಮತ್ತು ಇನ್ನೋರ್ವ ಕಾರುಗಳಲ್ಲಿ ಆಗಮಿಸಿದ ಸುಮಾರು 6-8 ಅಪರಿಚಿತ ವ್ಯಕ್ತಿಗಳ ಗುಂಪು, ಮನೆ ಗೇಟ್ ಹಾರಿ, ಅಕ್ರಮವಾಗಿ ಆವರಣಕ್ಕೆ ನುಗ್ಗಿ, ಮನೆ ಬಾಗಿಲು ತೆರೆಯಲು ವಿಫಲ ಯತ್ನ ನಡೆಸಿದೆ ಎನ್ನಲಾಗಿದೆ.

 ಮನೆ ದರೋಡೆಗೆ ಯತ್ನ ಪ್ರಕರಣ..!       ಇಬ್ಬರು ಆರೋಪಿಗಳು ಆರೆಸ್ಟ್..!           Read More »

ಕರಾವಳಿ, ಕ್ರೈಮ್ ನ್ಯೂಸ್

32 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಆರೆಸ್ಟ್..!

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 22.  32 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟಿನ ಆರೋಪಿಯನ್ನು ಪತ್ತೆ ಮಾಡಿದ್ದು, ಮಣಿಪಾಲ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 1992 ರಲ್ಲಿ, ಶಿವರಾಮ ಎಂಬವರು ಮಣಿಪಾಲ ಠಾಣೆಯಲ್ಲಿ ಪ್ರಕರಣ 12 ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಗಣೇಶ್‌ ಪ್ರಭು (54), ಬಡಗಬೆಟ್ಟು, ಮಣಿಪಾಲ, ಉಡುಪಿ, ಅವರು 2001 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ, ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.  

32 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಆರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಬಸ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 22.  ಆ.12ರಂದು ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಮೃತಪಟ್ಟಿದ್ದಾರೆ. ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ಬೈಕ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಮೃತಪಟ್ಟವರನ್ನು ಮುಜ್ಜಾಂಬಿಲ್ ಎಂದು ಗುರುತಿಸಲಾಗಿದೆ.  

ಬಸ್ ಅಪಘಾತದಲ್ಲಿ ಗಾಯಗೊಂಡ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಐಷಾರಾಮಿ ಪ್ರದೇಶಗಳನ್ನು ಗುರಿಯಾಗಿಸಿ ಖತರ್ನಾಕ್ ಗ್ಯಾಂಗ್ ದರೋಡೆ..!     ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ನಗರದ ಐಷಾರಾಮಿ ಪ್ರದೇಶಗಳಲ್ಲಿನ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಇಂದಿರಾನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳನ್ನು ಮುರಳಿ (38), ಸೆಂಥಿಲ್ (50), ಮೂರ್ತಿ (49) ಮತ್ತು ಜಾನ್ (35) ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯವರಾಗಿದ್ದು, ಕಳ್ಳತನ ಮಾಡಲು ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ.                                                       

ಐಷಾರಾಮಿ ಪ್ರದೇಶಗಳನ್ನು ಗುರಿಯಾಗಿಸಿ ಖತರ್ನಾಕ್ ಗ್ಯಾಂಗ್ ದರೋಡೆ..!     ಆರೋಪಿಗಳು ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಿಹಾರದಲ್ಲಿ ಆರ್ ಜೆಡಿ ನಾಯಕನ ಮೇಲೆ ಗುಂಡಿನ ದಾಳಿ..!

(ನ್ಯೂಸ್ ಕಡಬ) newskadaba.c0m ಪಾಟ್ನಾ, ಆ. 21.  ಬೈಕ್‌ ನಲ್ಲಿ ಬಂದ ಗುಂಪೊಂದು ಮೊದಲ ಬಾರಿಗೆ ಚುನಾಯಿತರಾಗಿದ್ದ ಕೌನ್ಸಿಲರ್‌, ಆರ್‌ ಜೆಡಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರ್‌ ನಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸ್ಥಳೀಯ ಕೌನ್ಸಿಲರ್ ಪಂಕಜ್ ರೈ ಎಂದು ಗುರುತಿಸಲಾಗಿದೆ. ಪಂಕಜ್ ರೈ ಅವರು ಸಂಜೆ ತಮ್ಮ ನಿವಾಸದ ಬಳಿಯ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಮೂವರು, ಪಂಕಜ್ ರೈ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

ಬಿಹಾರದಲ್ಲಿ ಆರ್ ಜೆಡಿ ನಾಯಕನ ಮೇಲೆ ಗುಂಡಿನ ದಾಳಿ..! Read More »

ಕ್ರೈಮ್ ನ್ಯೂಸ್
Scroll to Top