crime

ಕಾರು ಪಲ್ಟಿ- ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಸುಳ್ಯ, ಆ. 23. ಮಗನನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುತ್ತಿದ್ದ ವೇಳೆ ಕಾರು ಪಲ್ಟಿಯಾದ ಪರಿಣಾಮ ತಂದೆ ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ದೊಡ್ಡಡ್ಕ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ವಿರಾಜಪೇಟೆಯ ಗಣೇಶ್(64) ಎಂದು ಗುರುತಿಸಲಾಗಿದೆ. ಇವರು ತಮ್ಮ ಮಗನನ್ನು ಮಂಗಳೂರಿನ ಏರ್‌ಪೋರ್ಟ್‌ಗೆ ಬಿಟ್ಟು ಬರುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ತಿಳಿದು ಬಂದಿದೆ.

ಕಾರು ಪಲ್ಟಿ- ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ವಕೀಲೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.c0m ರಾಮನಗರ, ಆ. 23.  ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಕೀಲೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾಗಡಿ ಪಟ್ಟಣದ ತಿರುಮಲೆ ಶ್ರೀರಂಗ ಬಡಾವಣೆಯಲ್ಲಿ ನಡೆದಿದೆ. ಮೃತಪಟ್ಟ ವಕೀಲೆಯನ್ನು ವಾಸುಕಿ(25) ಎಂದು ಗುರುತಿಸಲಾಗಿದ್ದು, ಮಾಗಡಿಯ ನಿವಾಸದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.    

ವಕೀಲೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆನ್‌ಲೈನ್‌ ಟ್ರೇಡಿಂಗ್‌ ಮೋಸ..!  4 ಆರೋಪಿಗಳು ಅರೆಸ್ಟ್..!     

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 23.  ಆನ್‌ಲೈನ್‌ ಟ್ರೇಡಿಂಗ್‌ ಮೋಸದ ಕುರಿತು ಸೆನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಜನ ಆರೋಪಿಗಳನ್ನು ಬಂಧಿಸಿ, ರೂ. 13,00,000/- ನಗದು ವಶಪಡಿಸಿಕೊಳ್ಳಲಾಗಿದೆ. ಉಪೇಂದ್ರಭಟ್ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ಅವರನ್ನು ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್‌ಮೆಂಟ್ ಗ್ರೂಪ್‌ ಗೆ ಸೇರಿಸಿದ್ದಾರೆ ಎಂದು ನಂಬಿಸಿ, WhatsApp ಮೂಲಕ ಲಾಭಾಂಶಗಳ ಬಗ್ಗೆ ಮಾಹಿತಿ ನೀಡಿ‌ ಅವರಿಗೆ VIP-203-845 ಎಂಬ ಅಕೌಂಟ್ ನಂಬರನ್ನು ನೀಡಿದ್ದಾರೆ. ಹೆಚ್ಚಿನ ಲಾಭಾಂಶದ ಆಸೆ ತೋರಿಸಿ,

ಆನ್‌ಲೈನ್‌ ಟ್ರೇಡಿಂಗ್‌ ಮೋಸ..!  4 ಆರೋಪಿಗಳು ಅರೆಸ್ಟ್..!      Read More »

ಕರಾವಳಿ, ಕ್ರೈಮ್ ನ್ಯೂಸ್

ಗೆಳೆಯರೊಂದಿಗೆ ವಿಹಾರಕ್ಕೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು..!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಆ. 23. ಸ್ನೇಹಿತರ ಜೊತೆ ಪಿಕ್ ನಿಕ್ ಗೆಂದು ಬಂದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಮಹಂತಿನ ಮಠದ ಚಂಪಕ ಸರಸುವಿನಲ್ಲಿ ಶುಕ್ರವಾರದಂದು ಬೆಳಗ್ಗೆ ನಡೆದಿದೆ. ಮೃತ ಯುವಕನನ್ನು ಬೆಂಗಳೂರು ಮೂಲದ ಕುಶಾಲ್ (22) ಎಂದು ಗುರುತಿಸಲಾಗಿದೆ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಟ್ರಿಪ್ ಗೆಂದು ತೆರಳಿದ್ದು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು

ಗೆಳೆಯರೊಂದಿಗೆ ವಿಹಾರಕ್ಕೆ ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
crime, arrest, suspected

ತಂದೆಯಿಂದಲೇ ಅತ್ಯಾಚಾರ- ಅಪ್ರಾಪ್ತೆ ಗರ್ಭಿಣಿ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಆ. 23. ಅಪ್ರಾಪ್ತ ಮಗಳ ಮೇಲೆ ಸ್ವತಃ ತಂದೆಯೇ ಅತ್ಯಾಚಾರ ಎಸಗಿ‌ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪಕ್ಕೆ ಸಂಬಂಧಿಸಿ ಮೇರೆಗೆ ಕಾಮುಕ ತಂದೆಯನ್ನು ಮೂಡಬಿದಿರೆ ಪೋಲಿಸರು ಬಂಧಿಸಿದ ಘಟನೆ ನಡೆದಿದೆ. ಆರೋಪಿ ತಂದೆಯನ್ನು ಬಂಧಿಸಲಾಗಿದ್ದು, ಈತ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಗಳ ಮೇಲೆ ಆರು ತಿಂಗಳ ಹಿಂದೆ ಮನೆಯಲ್ಲೇ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಗಳು 6

ತಂದೆಯಿಂದಲೇ ಅತ್ಯಾಚಾರ- ಅಪ್ರಾಪ್ತೆ ಗರ್ಭಿಣಿ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಶವಾಗಾರದಲ್ಲಿ ಯುವಕನ ಕಾಮಕೇಳಿ; ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನೋಯ್ಡಾ, ಆ. 23. ಶವಾಗಾರದಲ್ಲಿ ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ನೋಯ್ಡಾದಿಂದ ವರದಿಯಾಗಿದೆ. ವಿಡಿಯೋ ಸದ್ಯ ವೈರಲ್ ಆಗಿದೆ.   ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಕಾಮಕೇಳಿಯಲ್ಲಿ ತೊಡಗಿದ್ದರೆ, ಈ ವೇಳೆ ಆತನ ಸ್ನೇಹಿತ ವಿಡಿಯೋ ಮಾಡುತ್ತಲೇ ಇದ್ದು, ಪಕ್ಕದಲ್ಲಿಯೇ ಸ್ಟ್ರೆಚರ್‌ನಲ್ಲಿ ಶವವೊಂದು ಬಿದ್ದುಕೊಂಡಿರುವುದೂ ಕಂಡುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದ

ಶವಾಗಾರದಲ್ಲಿ ಯುವಕನ ಕಾಮಕೇಳಿ; ವೀಡಿಯೋ ವೈರಲ್ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಸಂಚು    14 ಆರೋಪಿಗಳು ಅರೆಸ್ಟ್       

(ನ್ಯೂಸ್ ಕಡಬ) newskadaba.c0m ನವದೆಹಲಿ, ಆ. 23.  ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಉದ್ದೇಶ ಹೊಂದಿದ್ದ 14 ಜನರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ ಖೈದಾ ಪ್ರೇರಿತ ಭಯೋತ್ಪಾದನಾ ಘಟಕವನ್ನು ಭೇದಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.   ಗುಪ್ತಚರ ಮಾಹಿತಿ ಪಡೆದ ನಂತರ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಭೇದಿಸಲಾದ ಮಾಡ್ಯೂಲ್‌ಗೆ ಜಾರ್ಖಂಡ್‌ನ ರಾಂಚಿಯ ಡಾ। ಇಶ್ತಿಯಾಕ್ ಎಂಬಾತ ನೇತೃತ್ವ ವಹಿಸಿದ್ದು, ಇದು ‘ಖಿಲಾಫತ್’ ಅಂದರೆ ಬಂಡಾಯ ಸಾರಿ ಭಾರತದಲ್ಲೇ ಪ್ರತ್ಯೇಕ ಮುಸ್ಲಿಂ

ಪ್ರತ್ಯೇಕ ಮುಸ್ಲಿಂ ರಾಜ್ಯ ಸ್ಥಾಪನೆ ಸಂಚು    14 ಆರೋಪಿಗಳು ಅರೆಸ್ಟ್        Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್ ಮತ್ತು ಕಾರು ಡಿಕ್ಕಿ..!    ಯುವಕ ಮೃತ್ಯು..!               

(ನ್ಯೂಸ್ ಕಡಬ) newskadaba.c0m ಕಾಸರಗೋಡು, ಆ. 23.  ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು ಯುವಕನೋರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ಚೆರ್ಕಳ ಕೆ .ಕೆ ಪುರದಲ್ಲಿ ನಡೆದಿದೆ. ಮೃತಪಟ್ಟವರನ್ನು ಕುಂಬಳೆ ಮೊಗ್ರಾಲ್ ಖುತುಬಿ ನಗರದ ಅಹಮ್ಮದ್ ಕಬೀರ್ ( 30) ಎಂದು ಗುರುತಿಸಲಾಗಿದೆ. ಸಂಬಂಧಿಕರೊಬ್ಬರ ವಿವಾಹ ಆಮಂತ್ರಣಕ್ಕೆ ತೆರಳಿ ಮರಳುತ್ತಿದ್ದಾಗ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡ ಕಬೀರ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ತಲಪಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ

ಬೈಕ್ ಮತ್ತು ಕಾರು ಡಿಕ್ಕಿ..!    ಯುವಕ ಮೃತ್ಯು..!                Read More »

ಕರಾವಳಿ, ಕ್ರೈಮ್ ನ್ಯೂಸ್

ಅಕ್ರಮ ಸಂಬಂಧ ಹಿನ್ನೆಲೆ ಪ್ರಕರಣ..!   ಆಟೋ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 22.  ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನ ಮೇಲೆ ಮೂವರು ಚಾಕುವಿನಿಂದ ಇರಿದ ಘಟನೆ ನಡೆದಿದೆ. ಮಹಿಳೆಯೊಂದಿಗೆ ಅಕ್ರಮ ಸಂಬಂಧದ ಹೊಂದಿದ್ದ ಆರೋಪದ ಮೇಲೆ 25 ವರ್ಷದ ಆಟೋ ಚಾಲಕನಿಗೆ ಮೂವರು ವ್ಯಕ್ತಿಗಳು ಚಾಕುವಿನಿಂದ ಇರಿದಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಯಂಡಹಳ್ಳಿ ಸ್ಲಂ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. ಹಲ್ಲೆಗೊಳಗಾದವನನ್ನು ಕಾರ್ತಿಕ್ ಎಂದು ಗುರುತಿಸಲಾಗಿದ್ದು, ಆರೋಪಿಗಳಾದ ಸೂರ್ಯ, ವಿನೋದ್ ಮತ್ತು ಸತೀಶಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.    

ಅಕ್ರಮ ಸಂಬಂಧ ಹಿನ್ನೆಲೆ ಪ್ರಕರಣ..!   ಆಟೋ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಹನ ಅಪಘಾತ..!            ಪಾದಾಚಾರಿ ಮೃತ್ಯು..!      

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 22.  ಪರ್ಕಳ ಇಲ್ಲಿನ ರಾಷ್ಟ್ರೀಯ ಹೆದ್ದಾರಿ /(169 ಎ) ಪರ್ಕಳದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವಿನ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಪಾದಾಚಾರಿಯ ಮೇಲೆ ರಿಕ್ಷಾ ಎರೆಗಿದ್ದು ಪಾದಾಚಾರಿ ಅಶೋಕ್ ಶೆಟ್ಟಿಗಾರ್ ತೀವ್ರ ತಲೆಗೆ ಏಟಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಅಶೋಕ್ ಶೆಟ್ಟಿಗಾರ್ ರವರು‌ ನಡೆದುಕೊಂಡು ಹೋಗುತ್ತಿದ್ದಾಗ ರಿಕ್ಷಾವೊಂದು ಅವರ ಮೇಲೆ ಮಗುಚಿ ಬಿದ್ದಿತ್ತು, ಚಿಕಿತ್ಸೆ ಫಲಕಾರಿಯಾಗದೇ ಇದೀಗ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಎಂಐಟಿ ಉದ್ಯೋಗಿಯಾಗಿದ್ದು,

ವಾಹನ ಅಪಘಾತ..!            ಪಾದಾಚಾರಿ ಮೃತ್ಯು..!       Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top