ಶವಾಗಾರದಲ್ಲಿ ಯುವಕನ ಕಾಮಕೇಳಿ; ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ನೋಯ್ಡಾ, ಆ. 23. ಶವಾಗಾರದಲ್ಲಿ ಉದ್ಯೋಗಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆಘಾತಕಾರಿ ಘಟನೆ ನೋಯ್ಡಾದಿಂದ ವರದಿಯಾಗಿದೆ. ವಿಡಿಯೋ ಸದ್ಯ ವೈರಲ್ ಆಗಿದೆ.

 

ಶವಾಗಾರದಲ್ಲಿ ಉದ್ಯೋಗಿ ಮತ್ತು ಮಹಿಳೆ ಕಾಮಕೇಳಿಯಲ್ಲಿ ತೊಡಗಿದ್ದರೆ, ಈ ವೇಳೆ ಆತನ ಸ್ನೇಹಿತ ವಿಡಿಯೋ ಮಾಡುತ್ತಲೇ ಇದ್ದು, ಪಕ್ಕದಲ್ಲಿಯೇ ಸ್ಟ್ರೆಚರ್‌ನಲ್ಲಿ ಶವವೊಂದು ಬಿದ್ದುಕೊಂಡಿರುವುದೂ ಕಂಡುಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆಯೊಂದಿಗೆ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿಗೆ  ಡಂಕೌರ್‌ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯ ಶವಾಗಾರದಲ್ಲಿ ಕ್ಲೀನರ್‌ ಆಗಿ ಕೆಲಸ ನೀಡಲಾಗಿತ್ತು. ಶವಾಗಾರದಲ್ಲಿ ಯಾವುದೇ ಮಹಿಳಾ ಸಿಬ್ಬಂದಿ ಕೆಲಸ ಮಾಡದ ಕಾರಣ ವಿಡಿಯೋದಲ್ಲಿ ಕಂಡುಬಂದ ಮಹಿಳೆ ಹೊರಗಿನವಳು ಎಂಬುದು ತಿಳಿದುಬಂದಿದೆ.

Scroll to Top