ಮನೆ ದರೋಡೆಗೆ ಯತ್ನ ಪ್ರಕರಣ..!       ಇಬ್ಬರು ಆರೋಪಿಗಳು ಆರೆಸ್ಟ್..!          

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 22.  ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ತಾಲೂಕಿನ ಕೋಟದ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಬಳಿಯ ಕವಿತಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸ್ವಿಫ್ಟ್ ಮತ್ತು ಇನ್ನೋರ್ವ ಕಾರುಗಳಲ್ಲಿ ಆಗಮಿಸಿದ ಸುಮಾರು 6-8 ಅಪರಿಚಿತ ವ್ಯಕ್ತಿಗಳ ಗುಂಪು, ಮನೆ ಗೇಟ್ ಹಾರಿ, ಅಕ್ರಮವಾಗಿ ಆವರಣಕ್ಕೆ ನುಗ್ಗಿ, ಮನೆ ಬಾಗಿಲು ತೆರೆಯಲು ವಿಫಲ ಯತ್ನ ನಡೆಸಿದೆ ಎನ್ನಲಾಗಿದೆ.

Scroll to Top