crime

ಆಗುಂಬೆ ಘಾಟ್ ತಿರುವಿನಲ್ಲಿ ಲಾರಿ ಟಯರ್ ಸ್ಫೋಟ ➤ ಕೆಲಕಾಲ ಸಂಚಾರ ವ್ಯತ್ಯಯ

(ನ್ಯೂಸ್ ಕಡಬ) newskadaba.com ಆಗುಂಬೆ, ಡಿ. 08. ಲಾರಿಯ ಹಿಂಬದಿ ಟೈರ್ ಸ್ಪೋಟಗೊಂಡ ಪರಿಣಾಮ ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಆಗುಂಬೆ ಘಾಟಿಯ 8ನೇ ತಿರುವಿನಲ್ಲಿ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ಬದಿಗೆ ಸರಿಸಿ ಇತರ ವಾಹನ ಸುಗಮವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಟ್ಟರು. ಲಾರಿಯು ತಿರುವಿನಲ್ಲಿ ನಿಂತಿದ್ದರಿಂದ ಹಿಂಬದಿಯಲ್ಲಿ ಕಿ.ಮೀ. ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಆಗುಂಬೆ ಘಾಟ್ ತಿರುವಿನಲ್ಲಿ ಲಾರಿ ಟಯರ್ ಸ್ಫೋಟ ➤ ಕೆಲಕಾಲ ಸಂಚಾರ ವ್ಯತ್ಯಯ Read More »

ಕರ್ನಾಟಕ

ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ ) newskadaba. com ಬೆಂಗಳೂರು .ಡಿ.08. ಸಿಟಿ ಮಾರ್ಕೆಟ್  ಪೊಲೀಸರು ಭರ್ಜರಿ  ಕಾರ್ಯಚರಣೆ ನಡೆಸಿ .  ಬೆಂಗಳೂರಿನ ಸಿಟಿ ಮಾರ್ಕೆಟ್  ನಲ್ಲಿ ಮೊಬೈಲ್ ಕಳವು ಮಾಡ್ತಿದ್ದ ಕಳ್ಳರ ಗುಂಪನ್ನು ಪತ್ತೆ ಮಾಡಿದ್ದಾರೆ. ಈ ಗುಂಪು ಬೆಂಗಳೂರು ನಗರದಾದ್ಯಂತ ಮೊಬೈಲ್ ಕಳ್ಳತನ ಹೆಚ್ಚಾಗಿ  ಮಾಡುತ್ತಿರುವುದಾಗಿ, ಇವರ ಮೇಲೆ ದೂರು  ಕೂಡಾ ದಾಖಲಾಗಿತ್ತು. ಈ ಪ್ರಕರಣದ ಬೆನ್ನುಹತ್ತಿದ ಪೊಲೀಸರು  ಮುಖ್ಯ 4 ಆರೋಪಿಗಳಾದ ರಾಘವೇಂದ್ರ, ಕಿರಣ್, ಶೌಕತ್, ಬಲರಾಮ  ಇವರನ್ನು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ  ಕಂಪನಿಯ ಒಟ್ಟು

ಮೊಬೈಲ್ ಕಳ್ಳತನ ಮಾಡುತ್ತಿದ್ದ ಗುಂಪು ಪೊಲೀಸರ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೃತ್ಯುವಿನಿಂದ ಪಾರಾದ ತಾಯಿ-ಮಗ

(ನ್ಯೂಸ್ ಕಡಬ ) newskadaba. com ಕಲಬುರ್ಗಿ. ಡಿ.08. ಕ್ಷಣಮಾತ್ರದಲ್ಲೇ ಗೂಡ್ಸ್ ರೈಲಿನಿಂದ ಪಾರಾದ ತಾಯಿ ಮಗ ಕಳೆದ ರಾತ್ರಿ ಕಲಬುರ್ಗಿ ಸಂಭವಿಸಿದೆ. ಮಹಿಳೆಯೋರ್ವರು ರಾತ್ರಿ ಸಮಯದಲ್ಲಿ ರೈಲುಹಳಿಗಳನ್ನು ದಾಟಲು ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಗೂಡ್ಸರೈಲುಬಂದಿರುವುದನ್ನು ಗಮನಿಸಿದ ಮಗ ತಾಯಿಯನ್ನು ರಕ್ಷಿಸಲು ಮುಂದಾಗಿದ್ದು ತಕ್ಷಣದಲ್ಲಿ, ಇಬ್ಬರು ಕೂಡ ಪಕ್ಕದ ಹಳಿಯಲ್ಲಿದ್ದ ಸ್ವಲ್ಪ ಜಾಗದಲ್ಲಿ ಬಚಾವ್ ಆಗಿದ್ದಾರೆ.    

ಮೃತ್ಯುವಿನಿಂದ ಪಾರಾದ ತಾಯಿ-ಮಗ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಯುವಕನೋರ್ವನಿಂದ ಮಹಿಳೆಗೆ ಲೈಂಗಿಕ ಕಿರುಕುಳ ➤ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ ಡಿ.08. ಯುವಕನೋರ್ವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರದಂದು ರಾತ್ರಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಓರ್ವ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತ ಆರೋಪಿ  ಅಡ್ಯಾರ್ ಪದವು ನಿವಾಸಿ ಮುನೀರ್ (27) ಎಂದು ಗುರುತಿಸಲಾಗಿದೆ.  ಮುನೀರ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಇವರು ಪರಸ್ಪರ ಪ್ರೀತಿಸುತ್ತಿದ್ದು ಬುಧವಾರ ರಾತ್ರಿ ಮುನೀರ್ ಮಹಿಳೆಯನ್ನು ಭೇಟಿಯಾಗಿದ್ದ ವೇಳೆ ಹಿಂದೂ ಸಂಘಟನೆಗಳ

ಯುವಕನೋರ್ವನಿಂದ ಮಹಿಳೆಗೆ ಲೈಂಗಿಕ ಕಿರುಕುಳ ➤ಆರೋಪಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಅಂತರಾಜ್ಯ ಬೈಕ್ ಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಮಂಡ್ಯ, ಡಿ. 08. ಅಂತರಾಜ್ಯ ಬೈಕ್ ಕಳ್ಳನೋರ್ವನನ್ನು ಮದ್ದೂರು ಠಾಣಾ ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಆ ಬಂಧಿತ ಆರೋಪಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಈತ ಜೂಜು ಹಾಗೂ ಹುಡುಗಿಯರ ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ತೆರಳುತ್ತಿದ್ದ ಈತನನ್ನು ಪೊಲೀಸರು ತಡೆದು ವಿವರ ಕೇಳಿದಾಗ ಯಾವುದೇ ಡಾಕ್ಯುಮಂಟ್ ತೋರಿಸದೆ ಅನುಮಾನಸ್ಪದವಾಗಿ ವರ್ತಿಸಿದ್ದಾನೆ. ನಂತರ ಈತ ಕಳ್ಳತನ ನಡೆಸಿರುವುದು

ಅಂತರಾಜ್ಯ ಬೈಕ್ ಕಳ್ಳನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಡು ಹಂದಿಗೆ ಹಾರಿಸಿದ ಗುಂಡು ತಗುಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಡಿ.07  ಕಾಡು ಹಂದಿಗೆ  ಹಾರಿಸಿದ ಗುಂಡು ವ್ಯಕ್ತಿಯೋರ್ವರಿಗೆ ತಗುಲಿ ಮೃತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ಸಂಭವಿಸಿದೆ.   ಮೃತಪಟ್ಟ ವ್ಯಕ್ತಿಯನ್ನು ಸುರೇಶ್ (44) ಎಂದು ಗುರುತಿಸಲಾಗಿದೆ. ಚಿಕ್ಕೂರು ತಾಂಡ್ಯದ ಗಂಗನಾಯ್ಕ ಹಾಗೂ ನಂದೀಶ್ ಎಂಬವರು ಕಾಡು ಹಂದಿಯ ಬೇಟೆಗೆ ತೆರಳಿದ್ದ ವೇಳೆ ಹೊಡೆದ ಗುಂಡು ಮಿಸ್ ಫೈರ್ ಆಗಿ ಸುರೇಶ್ ಎಂಬವರಿಗೆ ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಗಂಡನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು

ಕಾಡು ಹಂದಿಗೆ ಹಾರಿಸಿದ ಗುಂಡು ತಗುಲಿ ವ್ಯಕ್ತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು*

(ನ್ಯೂಸ್ ಕಡಬ) news kadaba.com ಉಪ್ಪಿನಂಗಡಿ, ಡಿ.7. ಉಪ್ಪಿನಂಗಡಿ:  ಜೀಪು ಚಲಾಯಿಸಿಕೊಂಡು ಅಸ್ಪತ್ರೆಗೆಂದು ಬಂದ ವ್ಯಕ್ತಿಯೊರ್ವರು  ಜೀಪು ನಿಲ್ಲಿಸುವ ವೇಳೆ ಹೃದಯಸ್ತಂಭನಕ್ಕೆ ಒಳಗಾದ ಘಟನೆ ಡಿ.7 ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ. ಕೊಯಿಲ ಗ್ರಾಮದ ವಿಶ್ವನಾಥ (50) ಎಂಬವರು ಹೃದಯಸ್ತಂಭನಕ್ಕೆ ಒಳಗಾಗಿ ಸಾವನಪ್ಪಿರುವ  ವ್ಯಕ್ತಿಯಾಗಿದ್ದಾರೆ.  ಇವರು ಪತ್ನಿ,  ಇಬ್ಬರು ಹೆಣ್ಣು ಮಕ್ಕಳನ್ನು ಅಗಳಿದ್ದಾರೆ.

➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು* Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ತಾಯಿ ➤ ಓರ್ವ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕೋಲಾರ, ಡಿ. 07. ಪೆಟ್ರೋಲ್ ಸುರಿದು ಇಬ್ಬರು ಮಕ್ಕಳಿಗೆ ಸ್ವತಃ ತಾಯಿಯೇ ಬೆಂಕಿ ಹಚ್ಚಿದ ಪರಿಣಾಮ ಒಂದು ಮಗು ಮೃತಪಟ್ಟು, ಇನ್ನೋರ್ವ ಮಗು ಗಂಭೀರ ಗಾಯಗೊಂಡ ಘಟನೆ ಬುಧವಾರದಂದು ಕೋಲಾರ ಜಿಲ್ಲೆಯ ಮುಳಬಾಗಿಲು ಎಂಬಲ್ಲಿ ಸಂಭವಿಸಿದೆ. ಕೃತ್ಯ ಎಸಗಿರುವ ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ  ಗಾಯಾಳು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.  ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.  

ಮಕ್ಕಳಿಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ ತಾಯಿ ➤ ಓರ್ವ ಮಗು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ತೆಂಗಿನ ಮರ ಬಿದ್ದು ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com  ಸುಳ್ಳ, ಡಿ. 07.  ಮಹಿಳೆಯ ಮೇಲೆ   ತೆಂಗಿನ ಮರ ಬಿದ್ದ   ಪರಿಣಾಮ ಮಹಿಳೆಯೋರ್ವರು  ಗಾಯಗೊಂಡ  ಘಟನೆ  ಬುಧವಾರದಂದು ಸುಳ್ಳದ  ಅರಂತೋಡಿನಲ್ಲಿ ಸಂಭವಿಸಿದೆ.   ಗಾಯಗೊಂಡವರನ್ನು  ಬಾಲಣ್ಣರವರ ಪತ್ನಿ ಕಮಲ  ಎಂದು ಗುರುತಿಸಲಾಗಿದೆ. ಇವರು  ಮೇದಪ್ಪಗೌಡ  ಎಂಬವರ  ತೋಟದಲ್ಲಿ  ಅಡಿಕೆ ಹೆಕ್ಕುತ್ತಿದ್ದ ವೇಳೆ  ಈ ದುರ್ಘಟನೆ  ನಡೆದಿದ್ದು. ತೀವ್ರ ಗಾಯಗೊಂಡ  ಇವರನ್ನು ಸುಳ್ಳದ  ಖಾಸಗಿ  ಅಸ್ಪತ್ರೆಗೆ  ದಾಖಲಿಸಲಾಗಿದೆ.    

ತೆಂಗಿನ ಮರ ಬಿದ್ದು ಮಹಿಳೆ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಬಣಕಲ್: ನೀರಿನ ಟ್ರ್ಯಾಕ್ಟರ್ ಪಲ್ಟಿ ಒರ್ವ ಸಾವು ಮತ್ತೊಬ್ಬ ಗಂಭೀರ

(ನ್ಯೂಸ್ ಕಡಬ) newskadaba.com ಬಣಕಲ್, ಡಿ. 06. ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡ  ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದೆ.   ಮರತಪಟ್ಟವರನ್ನು ಜಾರ್ಖಂಡ್ ಮೂಲದ ಶಂಕರ್ ನಾಯಕ್(22) ಎಂದು ಗುರುತಿಸಲಾಗಿದೆ. ಇವರು ಚಾರ್ಮಾಡಿ ಘಾಟ್ನಲ್ಲಿ ಕಾಮಗಾರಿ ಕೆಲಸಕ್ಕೆ ಬೇಕಾದ ನೀರು ಒದಗಿಸುವ ಕಾರ್ಯನಿರ್ವಹಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟಣೆ ಸಂಭವಿಸಿದೆನ್ನಲಾಗಿದೆ.    

ಬಣಕಲ್: ನೀರಿನ ಟ್ರ್ಯಾಕ್ಟರ್ ಪಲ್ಟಿ ಒರ್ವ ಸಾವು ಮತ್ತೊಬ್ಬ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top