ಕಾಡು ಹಂದಿಗೆ ಹಾರಿಸಿದ ಗುಂಡು ತಗುಲಿ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಹಾಸನ, ಡಿ.07  ಕಾಡು ಹಂದಿಗೆ  ಹಾರಿಸಿದ ಗುಂಡು ವ್ಯಕ್ತಿಯೋರ್ವರಿಗೆ ತಗುಲಿ ಮೃತಪಟ್ಟ ಘಟನೆ ಅರಸೀಕೆರೆ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ಸಂಭವಿಸಿದೆ.

 

ಮೃತಪಟ್ಟ ವ್ಯಕ್ತಿಯನ್ನು ಸುರೇಶ್ (44) ಎಂದು ಗುರುತಿಸಲಾಗಿದೆ. ಚಿಕ್ಕೂರು ತಾಂಡ್ಯದ ಗಂಗನಾಯ್ಕ ಹಾಗೂ ನಂದೀಶ್ ಎಂಬವರು ಕಾಡು ಹಂದಿಯ ಬೇಟೆಗೆ ತೆರಳಿದ್ದ ವೇಳೆ ಹೊಡೆದ ಗುಂಡು ಮಿಸ್ ಫೈರ್ ಆಗಿ ಸುರೇಶ್ ಎಂಬವರಿಗೆ ತಗುಲಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಕುರಿತು ಗಂಡನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಸುರೇಶ್ ಪತ್ನಿ ಬಾಣಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Scroll to Top