crime

ಬೆಂಗಳೂರು: ಅಜ್ಜಿಯ ಭೀಕರ ಕೊಲೆ

ಅನೇಕಲ್: ಬೆಂಗಳೂರು ನಗರದ ಅನೇಕಲ್ ಸಮೀಪದ ನೆರಳೂರು ಬಳಿ ಮಹಿಳೆಯೊಬ್ಬಳು ಅಜ್ಜಿಯನ್ನು ಕೊಲೆ ಮಾಡಿ ತನ್ನ ಕಬರ್ೋಡ್ನಲ್ಲಿ ಮೃತದೇಹ ಸುತ್ತಿಟ್ಟು ಪರಾರಿಯಾದ ಘಟನೆ ಡಿ. 4 ರಂದು ನಡೆದಿದೆ. ಒಂದೇ ಕಟ್ಟಡದ ಅಕ್ಕ ಪಕ್ಕದ ಬಾಡಿಗೆ ಮನೆಯಲ್ಲಿ ಮಹಿಳೆ ಹಾಗೂ ಅಜ್ಜಿ ವಾಸವಿದ್ದರು. ಮಹಿಳೆ ತನ್ನ ಮನೆಗೆ ಅಜ್ಜಿಯನ್ನು ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ.   

ಬೆಂಗಳೂರು: ಅಜ್ಜಿಯ ಭೀಕರ ಕೊಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ!

ಬೆಂಗಳೂರು: ಕೆ ಪಿ ಅಗ್ರಹಾರ ಐದನೆ ಕ್ರಾಸ್ ಬಳಿ ಭೀಕರ ಹತ್ಯೆ ನಡೆದಿದ್ದು, ಕೊಲೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಬರೋಬ್ಬರಿ ಆರು ಮಂದಿ ಸೇರಿ ಅಪರಿಚಿತ ವ್ಯಕ್ತಿಯನ್ನು ಕೊಲೆ ಗೈದಿದ್ದಾರೆ. ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಭಾಗಿಯಾಗಿದ್ದು, ಈ ಕೊಲೆಯ ಭಯಾನಕತೆ ಎಷ್ಟರ ಮಟ್ಟಿಗೆ ಇತ್ತೆಂದರೆ ಸುಮಾರು ಇಪ್ಪತ್ತು ಭಾರಿ ಕಲ್ಲು ಎತ್ತಿಹಾಕಿ ಅಮಾನುಷವಾಗಿ ದುಷಕೃತ್ಯ ಮೆರೆದಿದ್ದಾರೆ. ಸದ್ಯ ಕೊಲೆ ಅರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳು ಕಾರ್ಯಚರಣೆ ನಡೆಸುತ್ತಿವೆ.

ಬೆಂಗಳೂರು: ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಎಟಿಎಂ ಹಣ ಸಾಗಟದ ವಾಹನ ಡಿಕ್ಕಿ ರಿಕ್ಷಾ ಚಾಲಕ ಸಾವು!

ಉಪ್ಪಿನಂಗಡಿ:  ಉಪ್ಪಿನಂಗಡಿಯ ನೆಕ್ಕಿಲಾಡಿಯಲ್ಲಿ ಅಟೋ ರಿಕ್ಷಾಕ್ಕೆ ಎಟಿಎಂ ಹಣ ಸಾಗಾಟದ ವಾಹನ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ವಾಸು ಪೂಜಾರಿ(52) ಸಾವನಪ್ಪಿರುವ ಘಟನೆ  ನ.29 ರಂದು ನಡೆದಿದೆ.

ಉಪ್ಪಿನಂಗಡಿ: ಎಟಿಎಂ ಹಣ ಸಾಗಟದ ವಾಹನ ಡಿಕ್ಕಿ ರಿಕ್ಷಾ ಚಾಲಕ ಸಾವು! Read More »

ಕ್ರೈಮ್ ನ್ಯೂಸ್

ಹಾಸನ: ಜಿಂಕೆ ಬೇಟೆ ರೆಸಾರ್ಟ್ ಮಾಲಿಕ ಅಂದರ್

ಹಾಸನ: ಜಿಂಕೆಯನ್ನು ಬೇಟೆಯಾಡಿದ್ದ ರೆಸಾರ್ಟ್ ಮಾಲಿಕ ಶಿಶಿರ್ ಎಂಬಾತನನ್ನು ಅರಣ್ಯ ಸಿಬ್ಬಂದಿಗಳು ಬಂಧಿಸಿರುವ ಘಟನೆ ಸಕಲೇಶಪುರದ ಅಚ್ಚನಹಳ್ಳಿಯಲ್ಲಿ ರೆಸಾರ್ಟ್ ನಲ್ಲಿ ನಡೆದಿದೆ. ರೆಸಾರ್ಟ್ ಮಾಲಿಕ ಶಿಶಿರ್ ಜಿಂಕೆಯನ್ನು ಬೇಟೆಯಾಡಿದ್ದರು. ಶಿಶಿರ್ ಗೆ ಜಿಂಕೆ ಬೇಟೆಯ ವೇಳೆ ಸಾಥ್ ನೀಡಿದ್ದ ಅವಿನಾಶ್, ಜೀವನ್, ಕೀರ್ತನ್ ಎಂಬ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಜಿಂಕೆ ಮಾಂಸ ರೆಸಾರ್ಟ್ ನಲ್ಲಿರಬೇಕಾದರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.  

ಹಾಸನ: ಜಿಂಕೆ ಬೇಟೆ ರೆಸಾರ್ಟ್ ಮಾಲಿಕ ಅಂದರ್ Read More »

ಕ್ರೈಮ್ ನ್ಯೂಸ್

ಕಡಿಮೆ ಬೆಲೆಗೆ ಐಫೋನ್, ಲ್ಯಾಪ್ ಟಾಪ್ ಕೊಡಿಸುವುದಾಗಿ ನಂಬಿಸಿ ಹಣ ದೋಚುತಿದ್ದ ಖತರ್ನಾಕ್ ದಂಪತಿ

ಬೆಂಗಳೂರು: ದೇವನಹಳ್ಳಿ ಏರ್ಪೋರ್ಟ್​ನಲ್ಲಿ​ಕೆಲಸ ಕೊಡಿಸುವುದಾಗಿ ಹಾಗೂ  ಕಡಿಮೆ ಬೆಲೆಗೆ ಚಿನ್ನ, ಐಫೋನ್​, ಲ್ಯಾಪ್​ ಟಾಪ್​ಗಳನ್ನು ಕೊಡಿಸುವುದಾಗಿ ನಂಬಿಸಿ ಹಣ ಪೀಕುತ್ತಿದ್ದ ಖತರ್ನಾಕ್ ದಂಪತಿಯನ್ನು ಪೋಲಿಸರು ಬಂಧಿಸಿದ್ದಾರೆ. ಮೋಹನ್​ ದಾಸ್​, ಪತ್ನಿ ಧನುಷ್ಯ ಅಲಿಯಾಸ್ ರಾಚೆಲ್ ಬಂಧಿತ ದಂಪತಿ.  ಈ ದಂಪತಿ ಕಡಿಮೆ ಬೆಲೆಗೆ ಚಿನ್ನ, ಐಫೋನ್​, ಲ್ಯಾಪ್​ ಟಾಪ್​ಗಳನ್ನು ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ದೋಚಿಕೊಂಡು ಹೋಗಿದ್ದು, ಈಗ ಪೋಲಿಸರ ಅತಿಥಿಯಾಗಿದ್ದಾರೆ.    

ಕಡಿಮೆ ಬೆಲೆಗೆ ಐಫೋನ್, ಲ್ಯಾಪ್ ಟಾಪ್ ಕೊಡಿಸುವುದಾಗಿ ನಂಬಿಸಿ ಹಣ ದೋಚುತಿದ್ದ ಖತರ್ನಾಕ್ ದಂಪತಿ Read More »

ಕ್ರೈಮ್ ನ್ಯೂಸ್

ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು

ಹುಬ್ಬಳ್ಳಿ: ಪಿಟ್​​ಬುಲ್ ಜಾತಿಯ ಸಾಕು ಶ್ವಾನ ಒಂದು  ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ  ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿ‌ಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ. ಪವನ್ ಅನಿಲ್‌ ದೊಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್​ಗೆ ಹೋಗುತ್ತಿದ್ದ ವೇಳೆ ನಾಯಿ ದಿಢೀರ್ ಅಟ್ಯಾಕ್ ಮಾಡಿದೆ. ಗುರುಸಿದ್ದಪ್ಪ‌ ಚನ್ನೋಜಿ ಎಂಬವರಿಗೆ ಸೇರಿದ ಪಿಟ್ ಬುಲ್ ಶ್ವಾನ ದಾಳಿ ಮಾಡಿದ್ದು, ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.

ವಿದ್ಯಾರ್ಥಿ ಮೇಲೆ ಪಿಟ್ಬುಲ್ ಡೆಡ್ಲಿ ಅಟ್ಯಾಕ್; ಕಿಮ್ಸ್ಗೆ ದಾಖಲು Read More »

ಕ್ರೈಮ್ ನ್ಯೂಸ್

ಚಿತ್ರದುರ್ಗ: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

ಚಿತ್ರದುರ್ಗ: ಟ್ಯಾಂಕರ್​​ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೈನಡು ಗ್ರಾಮದ ಬಳಿ ನಡೆದಿದೆ. ಒಂದೇ ಬೈಕಿನಲ್ಲಿ ತೆರಳುತ್ತಿದ್ದ ಒಂದೇ ಗ್ರಾಮದ ಮೂವರು ಮೃತಪಟ್ಟಿದ್ದಾರೆ. ಕೈನಡು ಗ್ರಾಮದ ನಿವಾಸಿಗಳಾದ ಉಜ್ಜೀರಪ್ಪ(38), ರವಿಕುಮಾರ್(29), ಗಿರೀಶ್(23) ಮೃತ ದುರ್ದೈವಿಗಳು. ಹೊಸದುರ್ಗದಿಂದ ಕೈನಡು ಗ್ರಾಮಕ್ಕೆ ತೆರಳುವ ವೇಳೆ ಅಪಘಾತ ಸಂಭವಿಸಿದ್ದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು Read More »

ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಮಿನಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ- ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 13. ಮಿನಿ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಾಯಗೊಂಡ ಘಟನೆ ಏನೆಕಲ್ಲು ಎಂಬಲ್ಲಿ ನಡೆದಿದೆ. ಗಾಯಗೊಂಡವರನ್ನು ವಿಟ್ಲ ನಿವಾಸಿ ವಿನಯ್ ನಾಯಕ್ ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕ್ ನಲ್ಲಿ ಸುಬ್ರಹ್ಮಣ್ಯದಿಂದ ವಿಟ್ಲದ ಕಡೆಗೆ ತೆರಳುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಮಿನಿ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್

ಸುಬ್ರಹ್ಮಣ್ಯ: ಮಿನಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ- ಸವಾರನಿಗೆ ಗಾಯ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಚೆಕ್ ಬೌನ್ಸ್ ಪ್ರಕರಣ ➤ ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ನಾಪತ್ತೆ…!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 12. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ಗ್ರಾ.ಪಂ. ಅಧ್ಯಕ್ಷೆಗೆ ಅರೆಸ್ಟ್ ವಾರಂಟ್ ಜಾರಿಗೊಳಿಸಿದ ಬೆನ್ನಲ್ಲೇ ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಚಂಚಲಾಕ್ಷಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಚಂಚಲಾಕ್ಷಿ ಅವರು ಮಮತಾ ಶೈನಿ ಡಿಸೋಜಾ ಎಂಬವರಿಗೆ ಮೂರು ಲಕ್ಷ ರೂ.ಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೊಪಿಯಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ 2020ರ ಜ. 06ರಂದು ಕೇಸು ದಾಖಲಾಗಿದ್ದು, ಆ ಬಳಿಕ ಒಂಬತ್ತು ಬಾರಿ ವಾದ ವಿವಾದಗಳು ನಡೆದಿದ್ದು, ಇದೀಗ

ಚೆಕ್ ಬೌನ್ಸ್ ಪ್ರಕರಣ ➤ ಕೊಣಾಜೆ ಗ್ರಾ.ಪಂ ಅಧ್ಯಕ್ಷೆ ನಾಪತ್ತೆ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಆಸಿಡ್ ಸೇವಿಸಿ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 12. ಆಸಿಡ್ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಬಡಗನ್ನೂರು ಗ್ರಾಮದ ಸಂಪಿಗೆಮಜಲು ವ್ಯಕ್ತಿಯೋರ್ವರು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದ ಘಟನೆ ವರದಿಯಾಗಿದೆ. ಮೃತರನ್ನು ಬಡಗನ್ನೂರು ಗ್ರಾಮದ ಸಂಪಿಗೆಮಜಲು ನಿವಾಸಿ ವೆಂಕಪ್ಪ ಗೌಡ ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಜ.10ರಂದು ರಬ್ಬರ್ ಹಾಲಿಗೆ ಮಿಕ್ಸ್ ಮಾಡಲೆಂದು ತಂದಿರಿಸಿದ್ದ ಆಸಿಡ್ ಅನ್ನು ಸೇವಿಸಿದ್ದು, ಇದನ್ನು ಗಮನಿಸಿದ ಪತ್ನಿ ಹೇಮಲತಾ ಮತ್ತು ಮನೆ ಮಂದಿ ತಕ್ಷಣವೇ ವೆಂಕಪ್ಪ ಗೌಡರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಬಳಿಕ

ಪುತ್ತೂರು: ಆಸಿಡ್ ಸೇವಿಸಿ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top