Accident

ಚಿರತೆಗೆ ಕಾರು ಡಿಕ್ಕಿ, ಚಾಲಕ ಪರಾರಿ ► ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿರತೆ

(ನ್ಯೂಸ್ ಕಡಬ) newskadaba.com ಹಾಸನ,ಸೆ.22. ಕಾರು ಡಿಕ್ಕಿ ಹೊಡೆದ ಪರಿಣಾಮ ಚಿರತೆಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿನ ಬಾಣಾವರ ಕೆರೆ ಬಳಿ ನಡೆದಿದೆ. ಕೆರೆ ಏರಿ ಮೇಲೆ ಬಂದ ಚಿರತೆಗೆ ಎದುರಿನಿಂದ ವೇಗವಾಗಿ ಬಂದ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಘಟನೆ ಬಳಿಕ ಕಾರಿನ ಚಾಲಕ ಪರಾರಿಯಾಗಿದ್ದಾನೆ. ಢಿಕ್ಕಿ ಹೊಡೆದ ಪರಿಣಾಮ ಚಿರತೆಯ ಮುಖಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿದೆ. ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಚಿರತೆಯನ್ನು ತಮ್ಮ ವಶಕ್ಕೆ ಪಡೆದು ಅರಸೀಕೆರೆ ಆಸ್ಪತ್ರೆಗೆ […]

ಚಿರತೆಗೆ ಕಾರು ಡಿಕ್ಕಿ, ಚಾಲಕ ಪರಾರಿ ► ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿರತೆ Read More »

ಕರಾವಳಿ

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19 ಜಲ್ಲಿ ಮಿಕ್ಸರ್ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ವೆಂಕಟರಮಣಪ್ಪ(45) ಹಾಗು ವೆಂಕಟಪ್ಪ(43) ಮೃತ ದುರ್ದೈವಿಗಳಾಗಿದ್ದು, ಇವರು ರಾಮಸಾಗರ ನಿವಾಸಿಗಳು ಎಂಬುವುದಾಗಿ ತಿಳಿದುಬಂದಿದೆ. ರೈಲ್ವೆ ಬ್ರಿಡ್ಜ್ ನಿಂದಾಗಿ ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ-7 ಸರ್ವಿಸ್ ರಸ್ತೆ ಇಲ್ಲದೆ ಇರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು Read More »

ಕರ್ನಾಟಕ

► Tv9, ಸಮಯ ಟಿವಿಗಳ ವರದಿಗಾರ ನೀರಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾರವಾರ, ಸೆ.19. ಖಾಸಗಿ ಸುದ್ದಿ ವಾಹಿನಿಯ ವರದಿಗಾರರೋರ್ವರು ಹೊನ್ನಾವರ ಬಂದರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟ ಖೇದಕರ ಘಟನೆ ಹೊನ್ನಾವರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹೊನ್ನಾವರ ಮೂಲದ ಮಂಜು ಹೊನ್ನಾವರ್ (34) ಸಾವನ್ನಪ್ಪಿದ ದುರ್ದೈವಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿನಲ್ಲಿ ಈ ಘಟನೆ ನಡೆದಿದೆ. ಟಿ.ವಿ.9 ಹಾಗೂ ಸಮಯ ಟಿ.ವಿ ಯಲ್ಲಿ ಮಂಜು ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

► Tv9, ಸಮಯ ಟಿವಿಗಳ ವರದಿಗಾರ ನೀರಿಗೆ ಬಿದ್ದು ಮೃತ್ಯು Read More »

ಕರ್ನಾಟಕ

ಬೈಕ್ – ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಜೇಶ್ವರ, ಸೆ.18. ರಾಷ್ಟ್ರೀಯ ಹೆದ್ದಾರಿ 66 ರ ಹೊಸಂಗಡಿ ಸಮೀಪದ ಚೆಕ್ ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಅಪಾಚಿ ಬೈಕೊಂದು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟು ಜೊತೆಗಿದ್ದ ಸಂಬಂಧಿಕನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಮೃತ ಯುವಕನನ್ನು ಬಂದ್ಯೋಡು ಸಮೀಪದ ಅಡ್ಕ ಭಗವತೀ ಕ್ಷೇತ್ರ ನಿವಾಸಿ ನಿತಿನ್ ಕುಮಾರ್(22) ಎಂದು ಗುರುತಿಸಲಾಗಿದೆ. ಈತನ

ಬೈಕ್ – ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ Read More »

ರಾಷ್ಟ್ರೀಯ ನ್ಯೂಸ್

ಬಡಗನ್ನೂರಿನ ಅಪಘಾತದ ಗಾಯಾಳು ವಿಧಿವಶ ► ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಹನುಮಂತಪ್ಪ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.18. ಅಪಘಾತದಲ್ಲಿ ಗಾಯಗೊಂಡಿದ್ದ ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. 2008ರಲ್ಲಿ ಡಿಎಆರ್ ಗೆ ಸೇರಿ ತದನಂತರ ನಾಗರಿಕ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ಹನುಮಂತಪ್ಪ ಇತ್ತೀಚೆಗೆ ಬಡಗನ್ನೂರಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ನಿಧನರಾದರು.

ಬಡಗನ್ನೂರಿನ ಅಪಘಾತದ ಗಾಯಾಳು ವಿಧಿವಶ ► ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಹನುಮಂತಪ್ಪ ಮೃತ್ಯು Read More »

ಕರಾವಳಿ

ಸುಬ್ರಹ್ಮಣ್ಯ: ಜೀಪು – ಬಸ್ ಢಿಕ್ಕಿ ► ಓರ್ವ ಮೃತ್ಯು – ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ.14. ಸಮೀಪದ ಗುತ್ತಿಗಾರು ತಾಳೂರು ಎಂಬಲ್ಲಿ ಜೀಪ್ ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಓರ್ವ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಕೆಎಸ್ಸಾರ್ಟಿಸಿ ಬಸ್ ಹಾಗೂ ಖಾಸಗಿ ಜೀಪ್‌ನಡುವೆ ಸಂಭವಿಸಿದ ಅಪಘಾತದಲ್ಲಿ ಜೀಪಿನಲ್ಲಿದ್ದ ಸುಳ್ಯ ತಾಲೂಕಿನ ಹಳೇಮಜಲು ನಿವಾಸಿ ಶಶಿ ಎಂಬವರು ಹೊರಕ್ಕೆಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಬ್ರಹ್ಮಣ್ಯ: ಜೀಪು – ಬಸ್ ಢಿಕ್ಕಿ ► ಓರ್ವ ಮೃತ್ಯು – ಮೂವರು ಗಂಭೀರ Read More »

ಕರಾವಳಿ

ಖಾಸಗಿ ಬಸ್- ಲಾರಿ ಢಿಕ್ಕಿ ► ಇಬ್ಬರ ಮೃತ್ಯು

(ನ್ಯೂಸ್ ಕಡಬ) newskadaba.com. ಚಿತ್ರದುರ್ಗ, ಸೆ.14, ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ನಿಂತಿದ್ದ ಲಾ ರಿಗೆ ಡಿಕ್ಕಿಯಾಗಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಹಿರಿಯೂರು ತಾಲೂಕಿನ ಐಮಂಗಲ ಬಳಿ ಗುರುವಾರ ಮುಂಜಾನೆ ನಡೆದಿದೆ. ಸೂರತ್ ಮೂಲದ 30 ವರ್ಷದ ಅರುಣ್ ಹಾಗೂ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಣೇಕಲ್ ಗ್ರಾಮದ ನಿವಾಸಿ 30 ವರ್ಷದ ಪ್ರಶಾಂತ ಮೃತಪಟ್ಟ ದುರ್ದೈವಿಗಳು. ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಸಮೀಪ

ಖಾಸಗಿ ಬಸ್- ಲಾರಿ ಢಿಕ್ಕಿ ► ಇಬ್ಬರ ಮೃತ್ಯು Read More »

ಕರ್ನಾಟಕ

ಮೀನಿನ ಲಾರಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ► ಓರ್ವ ಮೃತ್ಯು, 15 ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಾರವಾರ,ಸೆ.13, ಮೀನಿನ ಲಾರಿ ಹಾಗೂ ಗಣೇಶ್ ಖಾಸಗಿ ಬಸ್ಸು ಮುಖಾಮುಖಿ ಡಿಕ್ಕಿಯಾಗಿ, ನಂತರ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಬಸ್ ಗಣೇಶ್ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸೋಡಿಗದ್ದೆ ಕ್ರಾಸ್ ಬಳಿ ಬುಧವಾರ ನಡೆದಿದೆ. ಭೀಕರ ಅಪಘಾತದಲ್ಲಿ ಲಾರಿ ಚಾಲಕ ಅಬ್ದುಲ್ಲಾ (25 ವರ್ಷ) ಸ್ಥಳದಲ್ಲೇ ಸಾವನ್ನಪ್ಪಿದ್ದು, ಬಸ್‍ನಲ್ಲಿದ್ದ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೋವಾದಿಂದ ಕೇರಳ ಕಡೆಗೆ

ಮೀನಿನ ಲಾರಿ-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ► ಓರ್ವ ಮೃತ್ಯು, 15 ಮಂದಿಗೆ ಗಂಭೀರ ಗಾಯ Read More »

ಕರ್ನಾಟಕ

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.09. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ಎಂಬಲ್ಲಿ ಕಂಟೈನರ್ ಲಾರಿ ಮತ್ತು ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಅಶೋಕ್ ಲೇಲ್ಯಾಂಡ್ ದೋಸ್ತ್ ಚಾಲಕ ಮೆಲ್ಕಾರ್ ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ನವಾಝ್ ಬೇಕರಿ ತಿಂಡಿ ಲೈನ್ ಸೇಲ್ ಮಾಡುತ್ತಿದ್ದರು. ಮೃತದೇಹವನ್ನು ಪುತ್ತೂರು ಆಸ್ಪತ್ರೆಯಲ್ಲಿ ಇಡಲಾಗಿದೆ.

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು Read More »

ಕರಾವಳಿ

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಎಂಬಲ್ಲಿ ಪಿಕಪ್‌ ವಾಹನವೊಂದು ಮಗುವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗು ಆಸ್ಪತ್ರೆಗೆ ಸಾಗಿಸುವ ಹಾದಿ‌ ಮಧ್ಯೆ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಮಗುವನ್ನು ನೆಕ್ಕರೆ ನಿವಾಸಿ ಆ ಸಮಯದಲ್ಲಿ ಮಗುವಿಗೆ ಮಹಮ್ಮದ್ ಹನೀಫ್ ಎಂಬವರ ಪುತ್ರಿ ಶೈಮಾ(6) ಎಂದು ಗುರುತಿಸಲಾಗಿದೆ. ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ತನ್ನ ರಸ್ತೆ ಬದಿಯ ಮನೆಯಿಂದ ಹಠಾತ್ ರಸ್ತೆಗೆ ಬಂದ ಮಗುವಿಗೆ ಕುಂತೂರು

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು Read More »

ಕರಾವಳಿ
Scroll to Top