Accident

ನೆಲ್ಯಾಡಿ: ಬೈಕ್ – ಲಾರಿ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, 15. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಬೆದ್ರೋಡಿ ಎಂಬಲ್ಲಿ ಈಚರ್ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ಸವಾರನನ್ನು ಕೊಕ್ಕಡ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರ ಪೂವಪ್ಪ ಗೌಡ(44) ಎಂದು ಗುರುತಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಈಚರ್ ಲಾರಿಯು ಢಿಕ್ಕಿ ಹೊಡೆದಿದ್ದು, ರಸ್ತೆಗೆ ಎಸೆಯಲ್ಪಟ್ಟ […]

ನೆಲ್ಯಾಡಿ: ಬೈಕ್ – ಲಾರಿ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

► ಕಡಬ: ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ

(ನ್ಯೂಸ್ ಕಡಬ) newskadaba.com ಕಡಬ, ಅ.13. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಳಾರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಹ್ಯುಂಡೈ ಐ20 ಕಾರೊಂದು ಚರಂಡಿಗಿಳಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಉಪ್ಪಿನಂಗಡಿಯಿಂದ ಕಡಬ ಕಡೆಗೆ ತೆರಳುತ್ತಿದ್ದ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಘಟನೆಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಕಾರು ಜಖಂಗೊಂಡಿದೆ‌.

► ಕಡಬ: ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ Read More »

ಕರಾವಳಿ

ಲಾರಿ ಹರಿದು ಯುವಕ ದಾರುಣ ಮೃತ್ಯು ► ಮೃತನ ವಾಹನದಲ್ಲಿ ಗಾಂಜ ಪತ್ತೆ..!!!

(ನ್ಯೂಸ್ ಕಡಬ) newskadaba.com ಉಳ್ಳಾಲ ,ಅ.12. ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ಸವಾರ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ತೊಕ್ಕಟಿನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತ ಯುವಕನ್ನು ಬೆಳ್ತಂಗಡಿ ಮೂಲದ ಸಲೀಂ(30) ಕೇ.ಸಿ.ರೋಡ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದ ಸ್ಟಾಂಡ್ ಹಾಕಿ ವಾಹನ ಚಲಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗ್ತಿದೆ. ಮೃತನ ದ್ವಿಚಕ್ರ ವಾಹನದಲ್ಲಿ ಎರಡು ಪ್ಯಾಕೆಟ್ ಗಾಂಜ ಪತ್ತೆಯಾಗಿದ್ದು ಈತ ಗಾಂಜ ಸೇವಿಸಿ ವಾಹನ ಚಲಾಯಿಸಿದ್ದಾನೆಯೇ ಎಂಬುದು ಇನ್ನು ನಿಖರವಾಗಿ ತಿಳಿದು ಬಂದಿಲ್ಲ.

ಲಾರಿ ಹರಿದು ಯುವಕ ದಾರುಣ ಮೃತ್ಯು ► ಮೃತನ ವಾಹನದಲ್ಲಿ ಗಾಂಜ ಪತ್ತೆ..!!! Read More »

ಕರಾವಳಿ

► ಉಡುಪಿ: ಮರಳು ಲಾರಿಗೆ ಬಾಲಕ ಬಲಿ

(ನ್ಯೂಸ್ ಕಡಬ) newskadaba.com ಉಡುಪಿ, ಅ.04. ಮರಳು ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ಎಸ್ಎಂಎಸ್ ಶಾಲೆ ಬಳಿ ಮಂಗಳವಾರದಂದು ನಡೆದಿದೆ. ಮೃತ ಬಾಲಕನನ್ನು ಬಾರ್ಕೂರು ನಿವಾಸಿ ಅನೀಶ್(15) ಎಂದು ಗುರುತಿಸಲಾಗಿದೆ. ಈತ ಟ್ಯೂಷನ್ ಗೆಂದು ತೆರಳಿದ್ದು, ಬಸ್ಸಿನಿಂದಿಳಿದು ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆ ತೆರಳುತ್ತಿದ್ದ ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದು ಬಾಲಕನನ್ನು 50 ಮೀಟರ್‍ ವರೆಗೆ ಎಳೆದೊಯ್ದಿದೆ. ಘಟನೆಯಲ್ಲಿ ಅನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ

► ಉಡುಪಿ: ಮರಳು ಲಾರಿಗೆ ಬಾಲಕ ಬಲಿ Read More »

ಕರ್ನಾಟಕ

ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿ ►ಪ್ರಯಾಣಿಕರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಹೊಸನಗರ,ಅ.02, ಎರಡು ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಗಾಯಗಳು ಆಗಿರುವ ಘಟನೆ ತಾಲೂಕಿನ ಹನಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಕುಂದಾಪುರದಿಂದ ಶಿವಮೊಗ್ಗ ದತ್ತ ಸಾಗುತ್ತಿದ್ದ ಹನುಮಾನ್ ಕಂಪನಿಯ ಬಸ್ ಹಾಗೂ ಹೊಸನಗರ ಕಡೆಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಬಸ್ಸುಗಳ ಮುಂಬಾಗ ನಜ್ಜುಗುಜ್ಜಾಗಿದೆ. ಬಸ್ ಗಳ ಚಾಲಕರಿಗೆ ಹಾಗೂ 5 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. 20 ಪ್ರಯಾಣಿಕರು

ಖಾಸಗಿ ಬಸ್ ಗಳು ಮುಖಾಮುಖಿ ಡಿಕ್ಕಿ ►ಪ್ರಯಾಣಿಕರಿಗೆ ಗಂಭೀರ ಗಾಯ Read More »

ಕರ್ನಾಟಕ

ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಅ.01. ಇಲ್ಲಿನ ಮುಖ್ಯರಸ್ತೆಯ ಗಾಂಧಿನಗರದಲ್ಲಿರುವ ಜೆ.ಜೆ. ಕಾಂಪ್ಲೆಕ್ಸ್‌ನ ಮಹಡಿಯಿಂದ ಯುವಕನೊಬ್ಬ ಕೆಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರದಂದು ನಡೆದಿದೆ. ಮೃತ ಯುವಕನನ್ನು ಕೋಲ್ಚಾರಿನ ಯತೀಶ್ ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಈ ಕಟ್ಟಡದಲ್ಲಿ ಬಾಡಿಗೆ ಕೊಟ್ಟಡಿಯಲ್ಲಿದ್ದು, ಘಟನೆಯ ಸಂದರ್ಭದಲ್ಲಿ ಪಾನಮತ್ತನಾಗಿದ್ದ ಎನ್ನಲಾಗಿದೆ. ಇದರಿಂದಾಗಿ ಆಯತಪ್ಪಿ ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸುಳ್ಯ: ಕಟ್ಟಡದಿಂದ ಬಿದ್ದು ಯುವಕ ಮೃತ್ಯು Read More »

ಕರಾವಳಿ

ಕಡಬ: ಬೈಕ್ ಗಳೆರಡರ ಮಧ್ಯೆ ಢಿಕ್ಕಿ ► ಕೆಸರಲ್ಲಿ ಹೂತುಹೋದ ಬೈಕ್, ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಇಲ್ಲಿಗೆ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ಬೈಕ್ ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಅಪರಾಹ್ನ ನಡೆದಿದೆ. ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿನಲ್ಲಿದ್ದ ಬ್ಯಾಗೊಂದು ಕೆಳಕ್ಕೆ ಬಿದ್ದಿದ್ದು, ಬ್ಯಾಗನ್ನು ತೆಗೆದು ಕೊಳ್ಳಲು ಹಿಂತಿರುಗಿದಾಗ ಕಲ್ಲುಗುಡ್ಡೆ ರಸ್ತೆಯಿಂದ ಬಂದ ಬೈಕ್ ನಡುವೆ ಢಿಕ್ಕಿ ಉಂಟಾಗಿದೆ. ಕಲ್ಲುಗುಡ್ಡೆ ಕಡೆಯಿಂದ ಬಂದ ಬೈಕ್ ಚರಂಡಿಗೆ ಬಿದ್ದು ಕೆಸರಲ್ಲಿ ಹೂತು ಹೋಗಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಓರ್ವನನ್ನು

ಕಡಬ: ಬೈಕ್ ಗಳೆರಡರ ಮಧ್ಯೆ ಢಿಕ್ಕಿ ► ಕೆಸರಲ್ಲಿ ಹೂತುಹೋದ ಬೈಕ್, ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಮಣಿಪಾಲದ ಯುವತಿಗೆ ಹೊಸ ತೋಳಿನ ಜೋಡಣೆ ► ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ಸಾಧನೆ

(ನ್ಯೂಸ್ ಕಡಬ) newskadaba.com ಕೊಚ್ಚಿ,ಸೆ.29. ರಸ್ತೆ ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡ ಯುವತಿಗೆ ಯುವಕನ ತೋಳನ್ನು ಕಸಿ ಮಾಡಿ ಜೋಡಿಸಿದ ಅಪರೂಪದ ಸಾಧನೆಯನ್ನು ಕೇರಳದ ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ವೈಧ್ಯರಿಂದ ನಡೆದಿದೆ. ಮಣಿಪಾಲದ 19 ವರ್ಷದ ಎಂಜಿನಿಯರ್ ವಿದ್ಯಾರ್ಥಿನಿ ಕಳೆದ ವರ್ಷ ರಸ್ತೆ ಅಪಘಾತವೊಂದರಲ್ಲಿ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದಳು. ಪ್ಲಾಸ್ಟಿಕ್ ಮತ್ತು ಪುನಃ ನಿರ್ಮಾಣದ ಸರ್ಜರಿ ಇಲಾಖೆಯ ಮುಖ್ಯಸ್ಥರಾದ ಡಾ. ಸುಬ್ರಹ್ಮಣ್ಯ ಅಯ್ಯರ್ ನೇತೃತ್ವದಲ್ಲಿ ಸುಮಾರು 20 ವೈದ್ಯರು ಮತ್ತು 16 ಅರವಳಿಕೆ ತಜ್ಞರು ಸೇರಿ

ಮಣಿಪಾಲದ ಯುವತಿಗೆ ಹೊಸ ತೋಳಿನ ಜೋಡಣೆ ► ಕೊಚ್ಚಿಯ ಅಮೃತಾ ವೈದ್ಯ ವಿಜ್ಞಾನ ಸಂಸ್ಥೆಯ ಸಾಧನೆ Read More »

ರಾಷ್ಟ್ರೀಯ ನ್ಯೂಸ್

ಮುಂಬೈ: ಕಾಲ್ತುಳಿತಕ್ಕೆ 22 ಮಂದಿ ಮೃತ್ಯು ► 30 ಜನರಿಗೆ ಗಂಭೀರ

(ನ್ಯೂಸ್ ಕಡಬ) newskadaba.com ಮುಂಬೈ,ಸೆ.29. ಇಲ್ಲಿನ ಎಲ್ಫಿನ್‍ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಉಂಟಾದ ಕಾಲ್ತುಳಿತದಿಂದಾಗಿ 22 ಮಂದಿ ಸಾವಿಗೀಡಾದ ದುರಂತ ಘಟನೆ ಶುಕ್ರವಾರ ಸಂಭವಿಸಿದೆ. ಭಾರಿ ಮಳೆಯಿಂದಾಗಿ ನಂತರ ಮುಂಬೈ ರೈಲು ನಿಲ್ದಾಣದಲ್ಲಿ ರೈಲು ಪ್ರಯಾಣಿಗರ ಸಂಖ್ಯೆ ಜಾಸ್ತಿಯಾಗಿತ್ತು. ಈ ವೇಳೆ ಪರೇಲ್ ಮತ್ತು  ಎಲ್ಫಿನ್‍ಸ್ಟೋನ್ ರೋಡ್ ಸ್ಟೇಷನ್ ನಡುವೆಯಿರುವ ಪಾದಚಾರಿಗಳ ಸಂಚಾರ ಮಾರ್ಗ ಸೇತುವೆ ಮೇಲೆ ನೂಕು ನುಗ್ಗಲು ಉಂಟಾಗಿ ಸಂಭವಿಸಿದೆ. ಈ ದುರಂತದಲ್ಲಿ 22 ಮಂದಿ ಸಾವುಗೀಡಾಗಿದ್ದು ಸುಮಾರು 30ಕ್ಕಿಂತಲೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ನಾಲ್ಕು ರೈಲುಗಳು

ಮುಂಬೈ: ಕಾಲ್ತುಳಿತಕ್ಕೆ 22 ಮಂದಿ ಮೃತ್ಯು ► 30 ಜನರಿಗೆ ಗಂಭೀರ Read More »

ಕರ್ನಾಟಕ

ಬಿ.ಸಿ.ರೋಡ್: ನಿಲ್ಲಿಸಿದ್ದ ಬಸ್‌ಗಳಿಗೆ ಢಿಕ್ಕಿ ಹೊಡೆದ ಟಿಪ್ಪರ್ ► ನಾಲ್ಕು ಬಸ್ಸುಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.24. ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ಬಸ್ಸುಗಳಿಗೆ ಮರಳು ತುಂಬಿದ್ದ ಡಿಪ್ಪರೊಂದು ಢಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಬಿ.ಸಿ.ರೋಡಿನಲ್ಲಿ ನಡೆದಿದೆ. ರಾತ್ರಿ ಹೊತ್ತು ಪೆಟ್ರೋಲ್ ಬಂಕ್ ಪಕ್ಕದಲ್ಲಿ ಬಸ್‌ಗಳನ್ನು ನಿಲ್ಲಿಸಲಾಗಿದ್ದು, ಭಾನುವಾರ ಬೆಳಿಗ್ಗೆ ವೇಗವಾಗಿ ಬಂದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಬಸ್ಸುಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟಿಪ್ಪರ್ ಚಾಲಕನಿಗೆ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಟಿಪ್ಪರ್ ನಲ್ಲಿ ಮರಳು ತುಂಬಲಾಗಿದ್ದು, ಅಪಘಾತದಿಂದಾಗಿ ರಸ್ತೆಯಲ್ಲೆಲ್ಲಾ ಮರಳು ಚೆಲ್ಲಿತ್ತು. ಘಟನೆಯಿಂದಾಗಿ ಕೆಲ

ಬಿ.ಸಿ.ರೋಡ್: ನಿಲ್ಲಿಸಿದ್ದ ಬಸ್‌ಗಳಿಗೆ ಢಿಕ್ಕಿ ಹೊಡೆದ ಟಿಪ್ಪರ್ ► ನಾಲ್ಕು ಬಸ್ಸುಗಳಿಗೆ ಹಾನಿ Read More »

ಕರಾವಳಿ
Scroll to Top