ಕಡಬ: ಬೈಕ್ ಗಳೆರಡರ ಮಧ್ಯೆ ಢಿಕ್ಕಿ ► ಕೆಸರಲ್ಲಿ ಹೂತುಹೋದ ಬೈಕ್, ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಸೆ.30. ಇಲ್ಲಿಗೆ ಸಮೀಪದ ಹಳೇ ಸ್ಟೇಷನ್ ಎಂಬಲ್ಲಿ ಬೈಕ್ ಗಳೆರಡರ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಅಪರಾಹ್ನ ನಡೆದಿದೆ.

ಕಡಬದಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿನಲ್ಲಿದ್ದ ಬ್ಯಾಗೊಂದು ಕೆಳಕ್ಕೆ ಬಿದ್ದಿದ್ದು, ಬ್ಯಾಗನ್ನು ತೆಗೆದು ಕೊಳ್ಳಲು ಹಿಂತಿರುಗಿದಾಗ ಕಲ್ಲುಗುಡ್ಡೆ ರಸ್ತೆಯಿಂದ ಬಂದ ಬೈಕ್ ನಡುವೆ ಢಿಕ್ಕಿ ಉಂಟಾಗಿದೆ. ಕಲ್ಲುಗುಡ್ಡೆ ಕಡೆಯಿಂದ ಬಂದ ಬೈಕ್ ಚರಂಡಿಗೆ ಬಿದ್ದು ಕೆಸರಲ್ಲಿ ಹೂತು ಹೋಗಿದೆ. ಘಟನೆಯಲ್ಲಿ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಓರ್ವನನ್ನು ಸುಂಕದಕಟ್ಟೆ ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Scroll to Top