ಜಲ್ಲಿ ಮಿಕ್ಸರ್ – ಸ್ಕೂಟಿ ಡಿಕ್ಕಿ ►ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19 ಜಲ್ಲಿ ಮಿಕ್ಸರ್ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ವೆಂಕಟರಮಣಪ್ಪ(45) ಹಾಗು ವೆಂಕಟಪ್ಪ(43) ಮೃತ ದುರ್ದೈವಿಗಳಾಗಿದ್ದು, ಇವರು ರಾಮಸಾಗರ ನಿವಾಸಿಗಳು ಎಂಬುವುದಾಗಿ ತಿಳಿದುಬಂದಿದೆ.

ರೈಲ್ವೆ ಬ್ರಿಡ್ಜ್ ನಿಂದಾಗಿ ಕಿರಿದಾಗಿರುವ ರಾಷ್ಟ್ರೀಯ ಹೆದ್ದಾರಿ-7 ಸರ್ವಿಸ್ ರಸ್ತೆ ಇಲ್ಲದೆ ಇರುವುದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.

ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Scroll to Top