ಮಂಗಳೂರು

ಸವಣೂರು: ಓಮ್ನಿಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ➤ ಓಮ್ನಿ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸವಣೂರು, ಅ. 27. ಅ.25ರಂದು ಪುತ್ತೂರು- ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಇಂದು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಬೆಳ್ಳಾರೆ ಸಮೀಪದ ಪಡ್ಪಿನಂಗಡಿಯ ಅಬ್ದುಲ್ ರಹಿಮಾನ್ ಎಂದು ಗುರುತಿಸಲಾಗಿದೆ.     ಪುತ್ತೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಓಮ್ನಿ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಓಮ್ನಿ ಮತ್ತು ಸ್ವಿಫ್ಟ್ ಎರಡೂ ಕಾರು  ಜಖಂಗೊಂಡಿದ್ದು, ಢಿಕ್ಕಿಯ […]

ಸವಣೂರು: ಓಮ್ನಿಮತ್ತು ಸ್ವಿಫ್ಟ್ ಕಾರುಗಳ ಮಧ್ಯೆ ಅಪಘಾತ ➤ ಓಮ್ನಿ ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಡ್ಯ: ರಾಷ್ಟ್ರ ಪಕ್ಷಿ ನವಿಲು ಸಾವು ➤ ಗಂಟೆಗಳು ಕಳೆದರೂ ಸ್ಥಳಕ್ಕಾಗಮಿಸದ ಅರಣ್ಯ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಮಂಡ್ಯ, ಅ. 27. ಜಿಲ್ಲೆಯ ಮದ್ದೂರು ತಾಲೂಕಿನ ಕೆರಮೇಲದೊಡ್ಡಿ ಗ್ರಾಮದಲ್ಲಿ ಇಂದು ನವಿಲು ಅನುಮಾನಾಸ್ಪದವಾಗಿ ಮೃತಪಟ್ಟಿದೆ.  ಅದರಂತೆ ಮಳವಳ್ಳಿ ತಾಲೂಕು ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಕರಡಿ ಗುಂಡಿಗೆ ಬಿದ್ದು ಸಾವನ್ನಪ್ಪಿದೆ.     ಆದರೆ ಈ ಎರಡು ಪ್ರಕರಣದಲ್ಲಿ ಮಾಹಿತಿ ನೀಡಿದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತಕ್ಷಣ ಆಗಮಿಸದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವಿಲು ಅನಾರೋಗ್ಯದಿಂದ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ಇತ್ತ ಕರಡಿಗೆ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ 12 ಅಡಿ ಆಳದ

ಮಂಡ್ಯ: ರಾಷ್ಟ್ರ ಪಕ್ಷಿ ನವಿಲು ಸಾವು ➤ ಗಂಟೆಗಳು ಕಳೆದರೂ ಸ್ಥಳಕ್ಕಾಗಮಿಸದ ಅರಣ್ಯ ಅಧಿಕಾರಿಗಳು Read More »

ಕರ್ನಾಟಕ

ಬೆಂಗಳೂರು: ಮಾಜಿ ಕಾರ್ಪೊರೇಟರ್ ಪತ್ನಿ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 27. ಕೆ.ಆರ್. ಪುರಂನ ಬಸವನಪುರದ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ತಮ್ಮದೇ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿನೋದಾ(35 ವ.) ಎಂದು ಗುರುತಿಸಲಾಗಿದೆ.     ವಿನೋದಾ ಇತ್ತೀಚೆಗೆ ಅಪೆಂಡಿಕ್ಸ್ ಆಪರೇಷನ್ ಗೆ ಒಳಗಾಗಿದ್ದರು ಎನ್ನಲಾಗಿದೆ. ವಿನೋದಾ ಹಾಗೂ ಜಯಪ್ರಕಾಶ್ ಗೆ ಮೂರು ವರ್ಷದ ಮಗು ಕೂಡ ಇದೆ. ಆದರೆ ಇದೀಗ ಮನೆಯಲ್ಲಿಯೇ ಫ್ಯಾನ್ ಗೆ ನೇಣು ಬಿಗಿದುಕೊಂಡು ವಿನೋದಾ ಆತ್ಮಹತ್ಯೆ

ಬೆಂಗಳೂರು: ಮಾಜಿ ಕಾರ್ಪೊರೇಟರ್ ಪತ್ನಿ ಆತ್ಮಹತ್ಯೆಗೆ ಶರಣು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ಅ. 27:  ಅಳದಂಗಡಿ ಬಳಿಯ ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಬೀಗವನ್ನು ಮುರಿದು ಒಳ ನುಗಿದ ಕಳ್ಳರು ದಾಖಲೆ ಪತ್ರಗಳನ್ನು ಸುಟ್ಟು ಹಾಕಿ ಹಣಕ್ಕಾಗಿ ಹುಡುಕಾಡಿದ ಘಟನೆ (ಅ, 26) ಕಳೆದ ದಿನ ರಾತ್ರಿ ನಡೆದಿದೆ.   ಶಾಲೆಯ ಮುಂಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಗೋದ್ರೇಜಿನ ಬೀಗವನ್ನು ಒಡೆದು, ಅದರಲ್ಲಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ವಿವಿಧ ದಾಖಲೆ ಪತ್ರಗಳನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಜತೆಗೆ ಶಾಲೆಗೆ ಅಳವಡಿಸಲಾಗಿದ್ದ

ಬೆಳ್ತಂಗಡಿ :ಶಾಲೆಗೆ ನುಗ್ಗಿ ದರೋಡೆ ➤ ದಾಖಲೆಪತ್ರಗಳನ್ನು ಸುಟ್ಟ ಕಳ್ಳರು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ: ವ್ಯಕ್ತಿಯೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಅ. 27. ಬೆಳ್ಳಾರೆ ಮುಖ್ಯ ರಸ್ತೆಯ ಕಾಮಧೇನು ಟವರ್‌ ಸಮೀಪ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ಜಾಲ್ಸೂರು ಗ್ರಾಮದ ಬೈದರ ಕೊಳಂಜಿ ಮನೆ ಅಣ್ಣು (58 ವ.) ಎಂದು ಗುರುತಿಸಲಾಗಿದೆ.     ಮೃತ ದೇಹವನ್ನು ನೋಡಿದ ಸಾರ್ವಜನಿಕರು ಪೊಲೀಸ್‌ ಠಾಣೆಗೆ ತಿಳಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪತ್ತೆಹಚ್ಚಿದ ಬಳಿಕ ಮನೆಯವರಿಗೆ ವಿಷಯ ತಿಳಿಸಲಾಯಿತು. ಮನೆಯವರು ಬಂದ ಬಳಿಕ ಮಹಜರು

ಬೆಳ್ಳಾರೆ: ವ್ಯಕ್ತಿಯೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ದೃಢ

(ನ್ಯೂಸ್ ಕಡಬ) newskadaba.com ಕಡಬ, ಅ. 27. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 12 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.     ಕಡಬ ತಾಲೂಕಿನ ಕಾಮನ ನಿವಾಸಿ 28 ವರ್ಷದ ಯುವತಿ, ಹಳೆನೇರಂಗಿ ನಿವಾಸಿ 26 ವರ್ಷದ ಯುವತಿ, ಮರ್ದಾಳ ನಿವಾಸಿ 78 ವರ್ಷದ ವ್ಯಕ್ತಿ, ಚಾರ್ವಕ ನಿವಾಸಿ 46 ವರ್ಷದ ವ್ಯಕ್ತಿ, ನೆಲ್ಯಾಡಿ ನಿವಾಸಿ 31 ರ ಮಹಿಳೆಗೆ ಕೊರೋನಾ ಸೋಂಕು ಪತ್ತೆಯಾಗಿದೆ.‌  

ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ದೃಢ Read More »

ಕರಾವಳಿ

23 ದಿನದ ಕೂಸನ್ನು ಸುಟ್ಟು ಹಾಕಿದ ಕ್ರೂರಿ ತಾಯಿ

(ನ್ಯೂಸ್ ಕಡಬ) newskadaba.com ಕಡೂರು ಅ. 27: ಹೆತ್ತ ತಾಯಿಯೇ ತನ್ನ ಮಗುವನ್ನು ನೀರೊಲೆಯಲ್ಲಿ ಹಾಕಿ ಸುಟ್ಟ ಘಟನೆ ಕಡೂರು ತಾಲೂಕಿನ ದೊಡ್ಡಹಟ್ಟಿ ಗ್ರಾಮದಲ್ಲಿ ನಡೆದಿದೆ‌. ಮಗುವನ್ನು ಸುಟ್ಟು ಕೊಂದ ಆ ಮಹಾತಾಯಿ ಅದೇ ಗ್ರಾಮದ ಸಂಗೀತಾಎಂಬಾಕೆ. ಕೇವಲ 23 ದಿನದ ಹಸುಗೂಸು ಇದಾಗಿದ್ದು ಮಗುವಿನ ದೇಹ ಸುಟ್ಟ ವಾಸನೆ ನೆರೆಹೊರೆಯವರಿಗೆ ತಿಳಿದಾಗ ಘಟನೆ ಬೆಳಕಿಗೆ ಬಂದಿದೆ‌.   26 ವರ್ಷ ವಯಸ್ಸಿನ ಸಂಗೀತಾ 2 ವರ್ಷಗಳ ಹಿಂದೆ ಉತ್ತರ ಪ್ರದೇಶ ಮೂಲದ ಅಮಿತ್ ಎಂಬ ಯುವಕನನ್ನು ಪ್ರೇಮಿಸಿ

23 ದಿನದ ಕೂಸನ್ನು ಸುಟ್ಟು ಹಾಕಿದ ಕ್ರೂರಿ ತಾಯಿ Read More »

ಕ್ರೈಮ್ ನ್ಯೂಸ್

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.!

(ನ್ಯೂಸ್ ಕಡಬ) newskadaba.com ಭಟ್ಕಳ ಅ. 27:  ತಾಲೂಕಿನಾದ್ಯಂತ ಕಳ್ಳರ ಹಾವಳಿ ಹೆಚ್ಚಾಗಿದೆ. ಕಿದ್ವಾಯಿ ರೋಡ್, ಫಿರ್ದೋಸ್ ನಗರ, ಹೆಬಳೆ ರೋಡ್ ಸೇರಿದಂತೆ ವಿವಿದೆಡೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಭಟ್ಕಳ ಗ್ರಾಮೀಣ ಮತ್ತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಿದ್ವಾಯಿ ರಸ್ತೆಯ ಮಸೀದಿ ಸಮೀಪ ಅಲ್ಹಿಜಾಜ್ ಅವರ ಅದ್ವಾನ್ ರುಕ್ಕುದ್ದೀನ ಮನೆಯ ಬಚ್ಚಲು ಮನೆಯ ಕಿಟಕಿ ಮುರಿದು ಒಳ ಪ್ರವೇಶಿಸಿದ ಕಳ್ಳರು 1 ಲಕ್ಷ ರೂ ನಗದು ಹಣವನ್ನು ಕದ್ದೊಯ್ದಿದ್ದಾರೆ.     ಮನೆಯಲ್ಲಿ

ಭಟ್ಕಳ ತಾಲೂಕಿನ ವಿವಿದೆಡೆ ಕಳ್ಳತನ.! Read More »

ಕರಾವಳಿ, ಕ್ರೈಮ್ ನ್ಯೂಸ್

ಕೊಕ್ಕಡ : ಭಿಕ್ಷುಕನ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮರೆದ ಜನತೆ

(ನ್ಯೂಸ್ ಕಡಬ) newskadaba.com ಕೊಕ್ಕಡ ಅ. 27: ದಕ್ಷಿಣಕನ್ನಡ ಜಿಲ್ಲೆಯ ನೆಲ್ಯಾಡಿ ,ಕೊಕ್ಕಡ ಪರಿಸರದಲ್ಲಿ ಭಿಕ್ಷೆ  ಬೇಡಿ ಅಲೆಮಾರಿಯಂತೆ ತಿರುಗುತ್ತಿದ್ದ ಭಿಕ್ಷುಕರೋರ್ವರು ಕಳೆದ ದಿನ ನಿಧನರಾಗಿದ್ದಾರೆ. ಸೆಲೆಬ್ರಿಟಿಗೆ ಗಳಿಗೆ ಸಲ್ಲುವಂತಹ ಗೌರವವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ ಇಪ್ಪತೈದು ವರ್ಷಗಳ ಹಿಂದೆ ನೆಲ್ಯಾಡಿ ಹಾಗೂ ಕೊಕ್ಕಡ ಪರಿಸರದಲ್ಲಿ ದಿಢೀರನೆ ಪ್ರತ್ಯಕ್ಷನಾಗಿದ್ದ ಇವರಿಗೆ ಮೊದ ಮೊದಲು ಯಾವುದೋ ಪ್ರಕರಣ ಛೇಧಿಸಲು ಬಂದಿರುವ ಸಿ.ಐ.ಡಿ ಯೇ ಇರಬೇಕೆಂದು ಊಹಿಸಿದ್ದರು. ಯಾರಲ್ಲೂ ಮಾತನಾಡದೆ, ತನ್ನ ಪಾಡಿಗೆ ತಾನು ಇರುತ್ತಿದ್ದ ಈತನನ್ನು ನೆಲ್ಯಾಡಿ ಭಾಗದ ಜನ

ಕೊಕ್ಕಡ : ಭಿಕ್ಷುಕನ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮರೆದ ಜನತೆ Read More »

ಕರಾವಳಿ

ಬಿಜೆಪಿ ಸೇರಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅರೆಸ್ಟ್.!

(ನ್ಯೂಸ್ ಕಡಬ) newskadaba.com ಚೆನ್ನೈ  ಅ. 27 :ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಖ್ಯಾತ ನಟಿ ಖುಷ್ಬೂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯೊಂದಕ್ಕೆ ತೆರಳಿದ್ದ ಖುಷ್ಬೂ ಮತ್ತು ಕೆಲವು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ. ಮಹಿಳೆಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಥೋಲ್ ತಿರುಮಾವಾಲವನ್ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಖುಷ್ಬೂ ಚಿದಂಬರಂಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚೆನ್ನೈ ಹೊರವಲಯದಲ್ಲಿರುವ ಮುತ್ತಕಾಡು ಎಂಬಲ್ಲಿ ಅವರನ್ನು ತಡೆದ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಸೇರಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅರೆಸ್ಟ್.! Read More »

ರಾಷ್ಟ್ರೀಯ ನ್ಯೂಸ್
Scroll to Top